ಸಿಂಗಾಪುರದಲ್ಲಿ ಡ್ರೈವರ್ ಲೆಸ್ ಪೊಡ್; ಭಾರತಕ್ಕೆ ಯಾವಾಗ?

By Nagaraja

ಕಳೆದ ಕೆಲವು ಸಮಯಗಳಿಂದ ಚಾಲಕರಹಿತ ವಾಹನಗಳ ಬಗೆಗಿನ ಚರ್ಚೆಗಳು ಜೋರಾಗಿ ನಡೆಯುತ್ತಿದೆ. ಇದಕ್ಕೊಂದು ಹೊಸ ಸೇರ್ಪಡೆಯೆಂಬಂತೆ ವಿಶ್ವದ ಅತ್ಯಂತ ಶುಚಿಯಾದ ಮತ್ತು ಸುಂದರವಾದ ನಗರಗಳಲ್ಲಿ ಒಂದಾಗಿರುವ ಸಿಂಗಾಪುರದಲ್ಲಿ ಡ್ರೈವರ್ ಲೆಸ್ ಪೊಡ್ ಸಂಚಾರ ವ್ಯವಸ್ಥೆಯು ಸದ್ಯದಲ್ಲೇ ನನಸಾಗಲಿದೆ.

ಮೆಟ್ರೋಗಿಂತಲೂ ಅಗ್ಗ; ಭಾರತಕ್ಕೆ ನಾಸಾ ಸ್ಕೈ ಟ್ರಾನ್ - ಮುಂದಕ್ಕೆ ಓದಿ

ಈ ಸಂಬಂಧ ಸಿಂಗಾಪುರ ರೈಲು ಮತ್ತು ಬಸ್ ಜಾಲದ ಆಯೋಜಕರಾದ ಎಸ್‌ಎಂಆರ್‌ಟಿ, ಹಾಲೆಂಡ್ ನ ಪ್ರತಿಷ್ಠಿತ ಸಂಸ್ಥೆಯಾದ ಟು ಗೆಟ್ ದೇರ್ ಏಷ್ಯಾ ಮಹತ್ತರ ಯೋಜನೆಗೆ ಸಹಿ ಹಾಕಿದೆ.

ಸಿಂಗಾಪುರದಲ್ಲಿ ನನಸಾಗಲಿದೆ ಡ್ರೈವರ್ ಲೆಸ್ ಪೊಡ್

ಸಂಪೂರ್ಣವಾಗಿಯೂ ಸ್ವಯಂಚಾಲಿತವಾಗಿ ಚಲಿಸುವ ಈ 'ಗ್ರೂಪ್ ರಾಪಿಡ್ ಟ್ರಾನ್ಸಿಸ್ಟ್' ಪೊಡ್ ಗಳು 24 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರಲಿದೆ.

ಸಿಂಗಾಪುರದಲ್ಲಿ ನನಸಾಗಲಿದೆ ಡ್ರೈವರ್ ಲೆಸ್ ಪೊಡ್

ಕಡಿಮೆ ವೆಚ್ಚದ ಈ ಪೊಡ್ ಗಳು ಪ್ರತಿ ತಾಸಿನಲ್ಲಿ ಒಂದೇ ದಿಶೆಯತ್ 8000ದಷ್ಟು ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿರಲಿದೆ.

ಸಿಂಗಾಪುರದಲ್ಲಿ ನನಸಾಗಲಿದೆ ಡ್ರೈವರ್ ಲೆಸ್ ಪೊಡ್

ಇದರೊಂದಿಗೆ ದಕ್ಷಿಣ ಪೂರ್ವ ಏಷ್ಯಾ ದ್ವೀಪ ರಾಷ್ಟ್ರವು ನೂತನ ಸಂಚಾರ ವ್ಯವಸ್ಥೆಯನ್ನು ಬರಮಾಡಿಕೊಳ್ಳಲಿದೆ. ಇದು ವರ್ಷಾಂತ್ಯದೊಳಗೆ ಸೇವೆಗೆ ತೆರೆದುಕೊಳ್ಳಲಿದೆ.

ಸಿಂಗಾಪುರದಲ್ಲಿ ನನಸಾಗಲಿದೆ ಡ್ರೈವರ್ ಲೆಸ್ ಪೊಡ್

ಸ್ವಯಂಚಾಲಿತ ಪೊಡ್ ಗಳು ವಿದ್ಯುತ್ ಬಲದಿಂದ ಮುಂದಕ್ಕೆ ಸಾಗಲಿದೆ. ಇದು ನಗರದ ವಾಹನ ದಟ್ಟಣೆಯನ್ನು ನಿಭಾಯಿಸಲು ನೆರವಾಗಲಿದೆ.

ಸಿಂಗಾಪುರದಲ್ಲಿ ನನಸಾಗಲಿದೆ ಡ್ರೈವರ್ ಲೆಸ್ ಪೊಡ್

ಸ್ವಯಂಚಾಲಿತ ಪೊಡ್ ಗಳು ವಿದ್ಯುತ್ ಬಲದಿಂದ ಮುಂದಕ್ಕೆ ಸಾಗಲಿದೆ. ಇದು ನಗರದ ವಾಹನ ದಟ್ಟಣೆಯನ್ನು ನಿಭಾಯಿಸಲು ನೆರವಾಗಲಿದೆ.

ಸಿಂಗಾಪುರದಲ್ಲಿ ನನಸಾಗಲಿದೆ ಡ್ರೈವರ್ ಲೆಸ್ ಪೊಡ್

ಮಿನಿಬಸ್ಸಿಗೆ ಸಮಾನವಾದ ಗ್ರೂಪ್ ರಾಪಿಡ್ ಟ್ರಾನ್ಸಿಸ್ಟ್ ವಾಹನಗಳು ಗಂಟೆಗೆ 40 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಸಿಂಗಾಪುರದಲ್ಲಿ ನನಸಾಗಲಿದೆ ಡ್ರೈವರ್ ಲೆಸ್ ಪೊಡ್

ಇವೆಲ್ಲದಕ್ಕೂ ಮಿಗಿಲಾಗಿ ಹೆಚ್ಚು ಪರಿಸರ ಸ್ನೇಹಿ ಎನಿಸಿಕೊಂಡಿರುವುದರಿಂದ ಭವಿಷ್ಯದ ಪರ್ಯಾಯ ಸಂಚಾರ ವ್ಯವಸ್ಥೆಯಾಗಿ ಮೂಡಿಬರಲಿದೆ.

ಸಿಂಗಾಪುರದಲ್ಲಿ ನನಸಾಗಲಿದೆ ಡ್ರೈವರ್ ಲೆಸ್ ಪೊಡ್

ಭಾರತದಲ್ಲೂ ಪೊಡ್ ವ್ಯವಸ್ಥೆಯನ್ನು ಜಾರಿಗೆ ತರುವ ಇರಾದೆಯಲ್ಲಿರುವಂತೆಯೇ ಈ ಡ್ರೈವರ್ ಲೆಸ್ ಪೊಡ್ ಗಳು ದೇಶದ ಮೆಟ್ರೋ ನಗರಗಳನ್ನು ತಲುಪಿದ್ದಲ್ಲಿ ಹೇಗಿರಬಹುದು?

Most Read Articles

Kannada
English summary
Driverless Pods To Take On Singapore Roads By 2016-end
Story first published: Friday, April 29, 2016, 17:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X