ರಸ್ತೆಯಲ್ಲಿ ಸಂಚರಿಸುತ್ತೇ, ರೈಲು ಹಳಿಯಲ್ಲೂ ಓಡಾಡುತ್ತೇ; ನಾನ್ಯಾರು?

By Nagaraja

ಒಗ್ಗಟ್ಟುಗಳು ನಮ್ಮ ಬುದ್ಧಿಶಕ್ತಿಯನ್ನು ಹೆಚ್ಚಿಸಲು ಸಹಕಾರಿ. ಇದೇ ಕಾರಣಕ್ಕಾಗಿ ಚಿಕ್ಕ ವಯಸ್ಸಿನಿಂದಲೇ ಶಾಲೆಯಲ್ಲಿ ಒಗ್ಗಟ್ಟುಗಳ ಪ್ರಯೋಗವನ್ನು ಹೆಚ್ಚಾಗಿ ಮಾಡಲಾಗುತ್ತದೆ. ಹಾಗಿದ್ದರೆ ನಿಮಗೊಂದು ಒಗ್ಗಟ್ಟಿನ ಪರೀಕ್ಷೆಯನ್ನು ನಾವಿಂದು ಮಾಡಲಿದ್ದೇವೆ. ನಿಮ್ಮಿಂದ ಸಾಧ್ಯವಾದ್ದಲ್ಲಿ ಈ ಒಗ್ಗಟ್ಟನ್ನು ಬಿಡಿಸಿ ಹೇಳಲು ಪ್ರಯತ್ನಿಸಿ.

ರಸ್ತೆಯಲ್ಲಿ ಸಂಚರಿಸುತ್ತೇ, ರೈಲು ಹಳಿಯಲ್ಲೂ ಓಡಾಡುತ್ತೇ; ನಾನ್ಯಾರು? ಹೌದು, ಇಂತಹದೊಂದು ಪ್ರಶ್ನೆ ಕೇಳಿದರೆ ನಿಮ್ಮಿಂದ ಉತ್ತರಿಸಲು ಕಷ್ಟಸಾಧ್ಯ ಅಲ್ಲವೇ?. ಯಾಕೆಂದರೆ ರೈಲುಗಳು ರೈಲು ಹಳಿಯಲ್ಲಿ ಮಾತ್ರ ಸಂಚರಿಸುತ್ತದೆ. ಇನ್ನು ರಸ್ತೆಯಲ್ಲಿ ಸಂಚರಿಸುವ ವಾಹನಗಳು ರೈಲು ಹಳಿಯಲ್ಲಿ ಸಂಚರಿಸಲು ಸಾಧ್ಯವೇ? ಉತ್ತರಕ್ಕಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಸಿರಿ.

ರೈಲು ಹಳಿಯಲ್ಲೂ ಸಂಚರಿಸುವ ಕಾರು

ನಿಮ್ಮ ಮುಂದಿಟ್ಟಿರುವ ಪ್ರಶ್ನೆಗಿರುವ ಉತ್ತರವೇ 'ಸ್ಮಾರ್ಟ್ ಫಾರ್ ರೈಲ್'Smart ForRail. ಈ ವಿಶಿಷ್ಟ ವಿನ್ಯಾಸಿತ ಕಾರು ರೈಲು ಹಳಿಯಲ್ಲೂ ಸರಾಗವಾಗಿ ಸಾಗಬಲ್ಲದ್ದು.

ರೈಲು ಹಳಿಯಲ್ಲೂ ಸಂಚರಿಸುವ ಕಾರು

ಬಹುಶ: ಜಗತ್ತಿನ ಅತಿ ಚಿಕ್ಕ ರೈಲು ಎಂದು ಇದನ್ನು ಗುರುತಿಸಬಹುದು. ಆದರೆ ರಸ್ತೆಗಿಂತಲೂ ಮಿಗಿಲಾಗಿ ರೈಲು ಹಳಿಯಲಿ ಸಂಚರಿಸುವುದರಲ್ಲಿ ನಿಸ್ಸೀಮವೆನಿಸಿದೆ.

ರೈಲು ಹಳಿಯಲ್ಲೂ ಸಂಚರಿಸುವ ಕಾರು

ಈ ಸ್ಮಾರ್ಟ್ ಫಾರ್ ರೈಲ್ ಕಾರಿಗೆ ವಿಶಿಷ್ಟವಾದ 80 ಕೆ.ಜಿ ಭಾರದ 22 ಇಂಚುಗಳ ಸ್ಟೀಲ್ ಚಕ್ರಗಳನ್ನು ಜೋಡಣೆ ಮಾಡಲಾಗಿದೆ. ಅಲ್ಲದೆ ರೈಲು ಹಳಿಯಲ್ಲಿ ಸಂಚರಿಸುವುದಕ್ಕೆ ಯೋಗ್ಯವಾದ ರೀತಿಯಲ್ಲಿ ರಚಿಸಲಾಗಿದೆ.

ರೈಲು ಹಳಿಯಲ್ಲೂ ಸಂಚರಿಸುವ ಕಾರು

ಬ್ರಿಟನ್ ನ ರೈಲು ಎಂಜಿನಿಯರ್ ಗಳು ಇದನ್ನು ಅಭಿವೃದ್ಧಿಪಡಿಸಿದ್ದಾರೆ. ಅಲ್ಲದೆ ಮೊದಲ ಮಾದರಿಯನ್ನು ಯಶಸ್ವಿ ಪರೀಕ್ಷೆ ಮಾಡುವಲ್ಲಿ ಜಯಶಾಲಿಯಾಗಿದ್ದಾರೆ.

ರೈಲು ಹಳಿಯಲ್ಲೂ ಸಂಚರಿಸುವ ಕಾರು

ಇಂತಹದೊಂದು ಅದ್ಭುತ ಕನಸು ನನಸಾಗುವಲ್ಲಿ ಆರು ತಿಂಗಳಷ್ಟು ಸಮಯ ಬೇಕಾಯಿತು.

ರೈಲು ಹಳಿಯಲ್ಲೂ ಸಂಚರಿಸುವ ಕಾರು

ಇನ್ನಿತರ ಪ್ರಮುಖ ಬದಲಾವಣೆಯೆಂದರೆ ರೈಲು ಹಳಿಯಲ್ಲಿ ಸಂಚರಿಸುವ ಸಲುವಾಗಿ ಸ್ಟೀರಿಂಗ್ ವೀಲ್ ಲಾಕ್ ಮಾಡಲಾಗಿದೆ.

ರೈಲು ಹಳಿಯಲ್ಲೂ ಸಂಚರಿಸುವ ಕಾರು

ಏನೇ ಆದರೂ ಇದರ ಹಿಂದಿರುವ ಉದ್ದೇಶ ಮಾತ್ರ ಇನ್ನೂ ನಿಗೂಢ.

ರೈಲು ಹಳಿಯಲ್ಲೂ ಸಂಚರಿಸುವ ಕಾರು

ಒಟ್ಟಿನಲ್ಲಿ ಈ ವಿಶಿಷ್ಟ ಕಾರನ್ನು ಓಡಿಸಲು ವಿಶೇಷ ಪರಿಣಿತ ಚಾಲಕರೇ ಬೇಕು ಎಂಬುದು ಸಹ ಅಷ್ಟೇ ಗಮನಾರ್ಹ.

ವೀಡಿಯೋ ವೀಕ್ಷಿಸಿ

Most Read Articles

Kannada
Read more on ಕಾರು car
English summary
Smart ForRail is the World's Smallest 'Train'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X