ವಾಹನ ಜಗತ್ತಿಗೆ ಸಂಬಂಧಿಸಿದ ಕುತೂಹಲಕಾರಿ ಅಂಶಗಳು

ಈ ಹಿಂದೆಯೂ ವಾಹನೋದ್ಯಮಕ್ಕೆ ಸಂಬಂಧಿಸಿದ ರೋಚಕ ಸತ್ಯಾಸತ್ಯತೆಗಳ ಬಗ್ಗೆ ಲೇಖನಗಳನ್ನು ಬರೆದಿದ್ದೆವು. ಇದರ ಮುಂದುವರಿದ ಭಾಗವೆಂಬಂತೆ ನೀವು ಕೇಳಿರದ ವಾಹನ ಜಗತ್ತಿನ ಆಸಕ್ತಿದಾಯಕ ಅಂಶಗಳ ಬಗ್ಗೆ ಮಾಹಿತಿಯನ್ನು ಕೊಡಲಿದ್ದೇವೆ.

ಆಟೋ ಜಗತ್ತಿನ ಸ್ವಾರಸ್ಯಕರ ಅಂಶ

ಪ್ರಾಣಿ ಪಕ್ಷಿಗಳ, ಐತಿಹಾಸಿಕ ಪ್ರದೇಶ ಅಥವಾ ತಂತ್ರಗಾರಿಕೆಗಳ ಬಗೆಗಿನ ಆಸಕ್ತಿದಾಯಕ ವಿಚಾರಗಳನ್ನು ನೀವು ಓದಿರಬಹುದು. ಆದರೆ ವಾಹನಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಗಿಟ್ಟಿಸಿಕೊಳ್ಳುವುದು ಸ್ವಲ್ಪ ಕಷ್ಟಕರ. ಇಲ್ಲಿದೆ ನೋಡಿ ಕಾರು ಉತ್ಸಾಹಿಗಳಿಗಾಗಿ ವಿಶೇಷ ಲೇಖನ.

ಯೇಸು ಕ್ರಿಸ್ತನ ಹೆಸರಲ್ಲಿ ಡ್ರೈವಿಂಗ್ ಲೈಸನ್ಸ್

ಯೇಸು ಕ್ರಿಸ್ತನ ಹೆಸರಲ್ಲಿ ಡ್ರೈವಿಂಗ್ ಲೈಸನ್ಸ್

ಇದು ನಿಮಗೆ ತಿಳಿದಿದೆಯೋ ಗೊತ್ತಿಲ್ಲ ಆಟೋ ಮೂಲಗಳ ಪ್ರಕಾರ, ಯೇಸು ಕ್ರಿಸ್ತನ (Jesus Christ) ಹೆಸರಲ್ಲಿ ಕನಿಷ್ಠ ಆರು ಮಂದಿ ಚಾಲನಾ ಪರವಾನಗಿ ಹೊಂದಿದ್ದಾರೆ.

ಫೆರಾರಿ ಕಮಾಲ್

ಫೆರಾರಿ ಕಮಾಲ್

ಜಗತ್ತಿನ ಅತಿ ದುಬಾರಿ ಸೂಪರ್ ಸ್ಪೋರ್ಟ್ಸ್ ಕಾರುಗಳಲ್ಲಿ ಫೆರಾರಿ ಅಗ್ರಗಣ್ಯವಾಗಿದೆ. ದಿನವೊಂದರಲ್ಲಿ ಇಂತಹ 14 ಕಾರುಗಳು ನಿರ್ಮಾಣವಾಗುತ್ತಿದೆ.

ದುಬಾರಿ ಕಾರು

ದುಬಾರಿ ಕಾರು

ಇದುವರೆಗೆ ಮಾರಾಟವಾಗಿರುವ ಕಾರುಗಳ ಪೈಕಿ ಅತಿ ದುಬಾರಿ ಕಾರೆಂಬ ಪಟ್ಟವನ್ನು 1931ರ ಬುಗಾಟಿ ರಾಯಲ್ ಕೆಲ್ನೆರ್ ಕೂಪೆ (Bugatti Royale Kellner Coupe) ಪಡೆದುಕೊಂಡಿದೆ. ಇದು ಬರೋಬ್ಬರಿ 52 ಕೋಟಿ ರು.ಗಳಿಗೆ ($8,700,000) ಗೆ ಮಾರಾಟವಾಗಿತ್ತು.

ಲಿಮೊಸಿನ್ - ಇದು ಕಾರೇ ಅಥವಾ ರೈಲು?

ಲಿಮೊಸಿನ್ - ಇದು ಕಾರೇ ಅಥವಾ ರೈಲು?

ಜಗತ್ತಿನ ಅತ್ಯಂತ ಭಾರದ ಲಿಮೊಸಿನ್ ಕಾರೆಂದು ಗುರುತಿಸಿಕೊಂಡಿರುವ 'ಮಿಡ್‌ನೈಟ್ ರೈಡರ್' 25 ಟನ್ (50,560) ಎಲ್‌ಬಿಸಿ ತೂಕ ಹೊಂದಿದೆ. ಇದರಲ್ಲಿ 40 ಪ್ರಯಾಣಿಕರಗೆ ಸಂಚರಿಸಬಹುದಾಗಿದೆ. ಅಲ್ಲದೆ ರೈಲು ರೀತಿಯಲ್ಲಿ ಮೂರು ಘಟಕಗಳನ್ನು ಹೊಂದಿದೆ.

ಭೂಮಿಯಿಂದ ಸೂರ್ಯನತ್ತ?

ಭೂಮಿಯಿಂದ ಸೂರ್ಯನತ್ತ?

ಭಾರತದಿಂದ ಉಡಾವಣೆಯಾಗಿರುವ ಮಂಗಳಯಾನ ಪಯಣ ಅರ್ಧ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಹಾಗಿರುವಾಗ ಭೂಮಿಯಿಂದ ಸೂರ್ಯನತ್ತ ಕಾರಿನಲ್ಲಿ ಸಂಚರಿಸಲು 150 ವರ್ಷಗಳೇ ತಗುಲಲಿದೆ.

ಕಾರನ್ನು ವಾಶ್ ಮಾಡುತ್ತೀರಾ?

ಕಾರನ್ನು ವಾಶ್ ಮಾಡುತ್ತೀರಾ?

ವರದಿಗಳ ಪ್ರಕಾರ ಶೇಕಡಾ 53ರಷ್ಟು ಕಾರು ಮಾಲಿಕರು ತಮ್ಮ ಕಾರನ್ನು ತಿಂಗಳಿಗೆ ಒಂದು ಸಲ ಮಾತ್ರ ವಾಶ್ ಮಾಡುತ್ತಾರಂತೆ. ಆದರೆ ಇನ್ನುಳಿದ ಶೇ 16ರಷ್ಟು ಮಂದಿ ಎಂದೂ ಕಾರನ್ನು ತೊಳೆದಿಲ್ಲವಂತೆ.

ಕೆಂಪು ಕಾರಿಗೆ ನಿಷೇಧ?

ಕೆಂಪು ಕಾರಿಗೆ ನಿಷೇಧ?

ನಿಮಗಿದು ತಿಳಿದಿದೆಯೋ ಗೊತ್ತಿಲ್ಲ ಚೀನಾದ ಶಾಂಘೈನಲ್ಲಿ ಕೆಂಪು ಕಾರುಗಳಿಗೆ ನಿಷೇಧ ಹೇರಲಾಗಿದೆ.

ಬೇಟೆಗಾರರಿಗಿಂತಲೂ ಮಾರಕ

ಬೇಟೆಗಾರರಿಗಿಂತಲೂ ಮಾರಕ

ಬೇಟೆಗಾರರಿಗಿಂತಲೂ ವಾಹನ ಚಾಲಕರರೇ ಜಿಂಕೆಗಳನ್ನು ಹೆಚ್ಚು ಕೊಲ್ಲುತ್ತಾರಂತೆ.

ಪ್ರತಿಯೊಬ್ಬರಲ್ಲೂ ಕಾರು

ಪ್ರತಿಯೊಬ್ಬರಲ್ಲೂ ಕಾರು

ಅಮೆರಿಕದಲ್ಲಿ ಮಕ್ಕಳು ಸೇರಿದಂತೆ ಪ್ರತಿಯೊಬ್ಬರಲ್ಲೂ ಒಂದು ಕಾರು ಇದೆಯಂತೆ.

ಅಮಿತ ವೇಗ - ದಂಡ

ಅಮಿತ ವೇಗ - ದಂಡ

ಸ್ವಿಜರ್ಲೆಂಡ್‌ನಲ್ಲಿ ಅಮಿತ ವೇಗಕ್ಕಿರುವ ಅತಿ ಹೆಚ್ಚು ದಂಡ ವಿಧಿಸಲಾಗಿತ್ತು. ಗಂಟೆಗೆ 180 ಮೈಲ್ ವೇಗದಲ್ಲಿ ಚಲಿಸಿದ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ ಆರು ಕೋಟಿ ರುಪಾಯಿ ($1,000,000) ದಂಡ ವಿಧಿಸಲಾಗಿತ್ತು. ಇಲ್ಲಿ ಆಸಕ್ತಿದಾಯಕ ವಿಚಾರವೆಂದರೆ ಕಾರಿನ ವೇಗ ಹಾಗೂ ಚಾಲಕನ ಕೆಲಸದ ಸಂಬಳದ ಆಧಾರದಲ್ಲಿ ದಂಡ ಹೇರಲಾಗಿತ್ತು.

ರೆಡ್ ಲೈಟ್

ರೆಡ್ ಲೈಟ್

ಪ್ರತಿಯೊಬ್ಬ ಅಮೆರಿಕ ಪ್ರಜೆಯು ತಮ್ಮ ಜೀವಮಾನದ ಎರಡು ವಾರಗಳಷ್ಟು ಕಾಲವನ್ನು ಟ್ರಾಫಿಕ್‌ನ ಕೆಂಪು ದೀಪಗಳಡಿಯಲ್ಲೇ ಕಳೆಯುತ್ತಾರಂತೆ.

ಪ್ರಪ್ರಥಮ ಆಟೋಮೊಬೈಲ್ ರೇಸ್

ಪ್ರಪ್ರಥಮ ಆಟೋಮೊಬೈಲ್ ರೇಸ್

ಜಗತ್ತಿನ ಪ್ರಪ್ರಥಮ ಆಟೋಮೊಬೈಲ್ ರೇಸ್ 1895ನೇ ಇಸವಿಯಲ್ಲಿ ಚಿಕಾಗೊದಲ್ಲಿ ನಡೆದಿತ್ತು. ಅಂದು ಗಂಟೆಗೆ 71.5 ಮೈಲ್ ವೇಗದಲ್ಲಿ ಚಲಿಸಿದ್ದ ಫ್ರಾಂಕ್ ಡುರೈ (Frank Duryea) ವಿಜಯಶಾಲಿಯಾಗಿದ್ದರು.

Most Read Articles

Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X