ಸಾಗರ ಯಾನದ ರಾಜ - ಇದು ಬರಿ ಹಡಗಲ್ಲ ರಿ, ಮತ್ತೆ ಇನ್ನೇನಿದು?

By Nagaraja

ವಿಹಾರ ನೌಕೆಗಳ ಬಗ್ಗೆ ನಾವು ಈ ಹಿಂದೆ ಹಲವು ಲೇಖನಗಳನ್ನು ಬರೆದಿರುತ್ತೇವೆ. ನಿಮ್ಮ ಮಾಹಿತಿಗಾಗಿ, ಜಗತ್ತಿನ ಎರಡು ಅತಿ ದೊಡ್ಡ ವಿಹಾರ ನೌಕೆಗಳಾದ 'ಎಂಎಸ್ ಓಯಸೀಸ್ ಆಫ್ ದಿ ಸೀಸ್' ಮತ್ತು 'ಎಂಎಸ್ ಅಲ್ಯೂರ್ ಆಫ್ ದಿ ಸೀಸ್' ಮಾಲಿಕತ್ವವನ್ನು ಬಹಮಾಸ್‌ನ ರಾಯಲ್ ಕೆರೆಬಿಯನ್ ಇಂಟರ್‌ನ್ಯಾಷನಲ್ ಹೊಂದಿದೆ.

ಇವನ್ನೂ ಓದಿ: ಜಗತ್ತಿನ 25 ಅತಿದೊಡ್ಡ ವಿಹಾರ ನೌಕೆಗಳು

ಎಲ್ಲ ರೀತಿ ವಿಲಾಸಿ ಸೌಕರ್ಯಗಳನ್ನು ಒಳಗೊಂಡಿರುವುದು ಈ ಹಡಗುಗಳ ವಿಶೇಷಯಾಗಿದೆ. ಈ ಪೈಕಿ ಓಯಸೀಸ್ ಕ್ಲಾಸ್ ವಿಹಾರ ನೌಕೆಯಾಗಿರುವ ಓಯಸೀಸ್ ಆಫ್ ದಿ ಸೀಸ್, 2009ನೇ ಇಸವಿಯಲ್ಲಿ ರಾಯಲ್ ಕೆರೆಬಿಯನ್ ಇಂಟರ್‌ನ್ಯಾಷನಲ್ ತೆಕ್ಕೆಗೆ ಸೇರಿಕೊಂಡಿತ್ತು. ಇದು ಪೋರ್ಟ್ ಎವರ್‌ಗ್ಲೇಡ್ಸ್‌ನಿಂದ ಫ್ಲೋರಿಡಾದ ಪೋರ್ಟ್ ಲೌಡರ್‌ಲೇಡ್ ವರೆಗೆ ಪಯಣ ಹಮ್ಮಿಕೊಳ್ಳುತ್ತಿದೆ.

ಸಾಗರ ಯಾನದ ರಾಜ - ಓಯಸೀಸ್ ಆಫ್ ದಿ ಸೀಸ್

ಏಕಕಾಲಕ್ಕೆ ದಾಖಲೆ ಸಂಖ್ಯೆಯ 6,000ದಷ್ಟು ಪ್ರಯಾಣಿಕರನ್ನು ಹೊತ್ತೊಯ್ಯುವ ಮೂಲಕ ವಿಹಾರ ನೌಕಾ ಇತಿಹಾಸದಲ್ಲಿ ಹೊಸ ಸಾಧನೆ ಬರೆದ ಓಯಸೀಸ್ ಆಫ್ ದಿ ಸೀಸ್ ಇಡೀ ಜಗತ್ತಿನ ಸಮುದ್ರ ಯಾನದಲ್ಲಿ ತಲ್ಲಣ ಮೂಡಿಸಿತ್ತು.

ಸಾಗರ ಯಾನದ ರಾಜ - ಓಯಸೀಸ್ ಆಫ್ ದಿ ಸೀಸ್

ತನ್ನ ಸೋದರಿ ಅಲ್ಯೂರ್ ಆಫ್ ದಿ ಸೀಸ್ ಪ್ರವೇಶದ ವರೆಗೂ ಜಗತ್ತಿನ ಅತಿದೊಡ್ಡ ವಿಹಾರ ನೌಕೆಯೆಂಬ ಖ್ಯಾತಿಗೆ ಪಾತ್ರವಾಗಿದ್ದ ಓಯಸೀಸ್ ಆಫ್ ದಿ ಸೀಸ್ 361.6 ಮೀಟರ್ ಉದ್ದ, 72 ಮೀಟರ್ ಎತ್ತರ ಮತ್ತು 22.55 ಮೀಟರ್ ಆಳವನ್ನು ಹೊಂದಿದೆ.

ಸಾಗರ ಯಾನದ ರಾಜ - ಓಯಸೀಸ್ ಆಫ್ ದಿ ಸೀಸ್

'ಪ್ರೊಜೆಕ್ಟ್ ಜೆನಿಸಿಸ್' ಯೋಜನೆಯಡಿ ನಿರ್ಮಾಣವಾಗಿರುವ ಓಯಸೀಸ್ ಆಫ್ ದಿ ಸೀಸ್, ಸರಿ ಸುಮಾರು ಒಂದು ಲಕ್ಷ ಮೆಟ್ರಿಕ್ ಟನ್ ಭಾರವನ್ನು ಹೊಂದಿದೆ.

ಸೌಲಭ್ಯಗಳು

ಸೌಲಭ್ಯಗಳು

ಓಯಸೀಸ್ ಆಫ್ ದಿ ಸೀಸ್ ಮೇಲಂತಸ್ತು ಕೊಠಡಿಗಳನ್ನು ಹೊಂದಿದ್ದು, ಬಾಲ್ಕನಿಯಲ್ಲಿ ಕುಳಿತುಕೊಂಡು ವಿಶಾಲವಾದ ಸಮುದ್ರದ ವಿಹಾರ ಅನುಭವ ಪಡೆದುಕೊಳ್ಳಬಹುದಾಗಿದೆ.

ಸೌಲಭ್ಯಗಳು

ಸೌಲಭ್ಯಗಳು

ಪ್ರಸ್ತುತ ಹಡಗಿನಲ್ಲಿ ಸಾಹಸ ಮಾಡಲಿಚ್ಛಿಸುವವರಿಗಾಗಿ ಜಿಪ್ ಲೈನ್ ವ್ಯವಸ್ಥೆಯಿದೆ. ಅದೇ ರೀತಿ ಕ್ಯಾಸಿನೋ, ಗಾಲ್ಫ್ ಮೈದಾನ, ಅನೇಕ ರಾತ್ರಿ ಕ್ಲಬ್‌ಗಳು, ಹಲವಾರು ಬಾರ್‌ಗಳು, ಕರೋಕೆ ಕ್ಲಬ್, ಕಾಮೆಡಿ ಕ್ಲಬ್, ಐದು ಈಜುಕೊಳ, ವಾಲಿಬಾಲ್ ಮತ್ತು ಬಾಸ್ಕೆಟ್ ಬಾಲ್ ಅಂಗಣಗಳಿವೆ.

ಮಕ್ಕಳಿಗಾಗಿ...

ಮಕ್ಕಳಿಗಾಗಿ...

ಇನ್ನು ಮಕ್ಕಳ ಮನರಂಜನೆಗಾಗಿ ಥೀಮ್ ಪಾರ್ಕ್‌ಗಳ ವ್ಯವಸ್ಥೆಯಿದೆ. ಅಷ್ಟೇ ಅಲ್ಲದೆ ವಿಶಾಲವಾದ ಹಡಗಿನ ಆಲಂಕಾರವನ್ನು ಪ್ರಸಿದ್ಧ ಕ್ಲಾರಿಸ್ಸಾ ಪ್ಯಾರಿಶ್ ಮಾಡಿದೆ.

ಸಾಗರ ಯಾನದ ರಾಜ - ಓಯಸೀಸ್ ಆಫ್ ದಿ ಸೀಸ್

ನೇಬರ್‌ವುಡ್ ಎಂದು ಅರಿಯಲ್ಪಡುವ ಏಳು ಥೀಮ್ ಪ್ರದೇಶಗಳಲ್ಲಿ ಅಥ್ಲೆಟಿಕ್ ಮತ್ತು ಮನರಂಜನಾ ಚಟುವಟಿಕೆಗಳು ನಡೆಯುತ್ತದೆ.

7 ನೇಬರ್‌ವುಡ್ ಇಂತಿದೆ

7 ನೇಬರ್‌ವುಡ್ ಇಂತಿದೆ

1. ಸೆಂಟ್ರಲ್ ಪಾರ್ಕ್‌ - ಬೂಟಿಕ್, ರೆಸ್ಟೋರೆಂಟ್, ಬಾರ್,

2. ಪೂಲ್ ಮತ್ತು ಸ್ಪೋರ್ಟ್ಸ್ - ಬೀಚ್ ಪೂಲ್ ಮುಂತಾದವುಗಳು.

3. ಸೀ ಸ್ಪಾ - ಹದಿಹರೆಯದವರಿಗೆ ಸ್ಪಾ, ಜಿಮ್ ಇನ್ನಿತರ ಸೌಲಭ್ಯ.

4. ಬೋರ್ಡ್‌ವಾಕ್ - ರೆಸ್ಟೋರಂಟ್, ಬಾರ್, ಶಾಪ್, ರಾಕ್ ಕ್ಲೈಂಬಿಂಗ್ ವಾಲ್, ಟ್ಯಾಟೂ ಪಾರ್ಲರ್, ಅಕ್ವಾ ಥಿಯೇಟರ್, ತಾಜಾ ನೀರು ಕೊಳ.

5. ರಾಯಲ್ ವಾಯುವಿಹಾರ - ರೆಸ್ಟೋರೆಂಟ್, ಶಾಪ್

6. ಯೂತ್ ಜೋನ್ - ವಿಜ್ಞಾನ ಲ್ಯಾಬ್, ಕಂಪ್ಯೂಟರ್ ಗೇಮಿಂಗ್.

7. ಮನರಂಜನಾ ಪ್ರದೇಶ.

ವಿಶ್ರಾಂತಿ

ವಿಶ್ರಾಂತಿ

ಸ್ಪಾ, ಫಿಟ್‌ನೆಸ್ ಸೆಂಟರ್, ಯೋಗ, ಗಾರ್ಡನ್, ಗ್ಯಾಲರಿ

ಸಾಹಸ

ಸಾಹಸ

ರಾಕ್ ಕ್ಲೈಂಬಿಂಗ್ ವಾಲ್, ಜಿಪ್ ಲೈನ್, ಬಾಸ್ಕೆಟ್ ಬಾಲ್, ಮಿನಿ ಗಾಲ್ಫ್ ಕೋರ್ಸ್

ಭೋಜನಾಲಯ

ಭೋಜನಾಲಯ

ಬ್ರೇಕ್‌ಫಾಸ್ಟ್, ಲಂಚ್ ಮತ್ತು ರಾತ್ರಿಯೂಟ, ಪಾರ್ಕ್ ಕೆಫೆ, ಸ್ನ್ಯಾಕ್ಸ್ ಜೊತೆಗೆ ಬಗೆ ಬಗೆಯ ಸ್ವಾದ್ವಿಷ್ಟ ಭೋಜನಗಳ ವ್ಯವೆಸ್ಥೆ

ವಿಶಿಷ್ಟತೆ

ವಿಶಿಷ್ಟತೆ

ಹಡಗಿನ ದೈನಂದಿನ ಅಗತ್ಯಗಳಿಗಾಗಿ 50 ಟನ್ ಐಸ್ ತುಂಡುಗಳ ಬಳಕೆ

ವಿಶಿಷ್ಟತೆ

ವಿಶಿಷ್ಟತೆ

ಇದರಲ್ಲಿರುವ ಅಕ್ವಾ ಥಿಯೇಟರ್ 5.4 ಮೀಟರ್ ಆಳವನ್ನು ಹೊಂದಿದ್ದು, ಸಮುದ್ರದಲ್ಲಿರುವ ಅತಿ ದೊಡ್ಡ ಈಜುಕೊಳ ಎನಿಸಿಕೊಂಡಿದೆ.

ವಿಶಿಷ್ಟತೆ

ವಿಶಿಷ್ಟತೆ

6000 ಪ್ರಯಾಣಿಕರನ್ನು ಹೊತ್ತೊಯ್ದಿದ್ದ ಓಯಸೀಸ್ ಆಫ್ ದಿ ಸೀಸ್ ಜಾಗತಿಕ ಸಾಗರ ಯಾನದಲ್ಲಿ ಹೊಸ ದಾಖಲೆ ಸ್ಥಾಪಿಸಿತ್ತು.

ವಿಶಿಷ್ಟತೆ

ವಿಶಿಷ್ಟತೆ

ಇದೇ ಮೊದಲ ಬಾರಿಗೆ ಸಮುದ್ರ ಯಾನದಲ್ಲಿ ಕಾರೋಸಲ್ (carousel) ಅಮ್ಯೂಸ್‌ಮೆಂಟ್ ರೈಡ್ ಆಳವಡಿಸಲಾಗಿದೆ.

ವಿಶಿಷ್ಟತೆ

ವಿಶಿಷ್ಟತೆ

ಈ ಕಾರೋಸಲ್‌ನಲ್ಲಿ ಆಳವಡಿಸಲಾಗಿರುವ ಮರಗಳಲ್ಲಿ 18 ಪ್ರಾಣಿಗಳ ರೂಪವನ್ನು ಕೆತ್ತೆನೆ ಮಾಡಲು ಆರು ವಾರ ಸಮಯ ತಗಲಿತ್ತು. ಇದರಲ್ಲಿ ಸಿಂಹ, ಜಿಬ್ರಾ ಮತ್ತು ಜಿರಾಫೆ ಮರದ ಕೆತ್ತನೆ ಮಾಡಲಾಗಿದೆ.

ವಿಶಿಷ್ಟತೆ

ವಿಶಿಷ್ಟತೆ

ಅಂತಿಮವಾಗಿ ಓಯಸೀಸ್ ಆಫ್ ದಿ ಸೀಸ್ ಐಕಾನಿಕ್ ಟೈಟಾನಿಕ್ ಹಡಗಿಗಿಂತಲೂ ಐದು ಪಟ್ಟು ದೊಡ್ಡದಾಗಿದೆ. ಒಟ್ಟಿನಲ್ಲಿ ತಮ್ಮ ರಜೆ ಕಾಲ ಕಳೆಯಲು ಇಚ್ಚಿಸುವವರಿಗೆ ಪರಿಪೂರ್ಣ ಜಾಗವೆನಿಸಿಕೊಂಡಿದೆ.

Most Read Articles

Kannada
Story first published: Saturday, June 28, 2014, 11:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X