ವಿಮಾನದ ಬಗ್ಗೆ ಈ 10 ರಹಸ್ಯಗಳು ನಿಮಗೆ ಖಂಡಿತ ಗೊತ್ತಿರೋದಿಲ್ಲ !!

ಮಾನ ಎಂದರೆ ಈಗಲೂ ಸಹ ಹೆಚ್ಚು ಮಂದಿಗೆ ಕೈಗೆಟುಕದ ಪ್ರಯಾಣ ಎನ್ನುವ ಭಾವನೆ, ಆಧುನಿಕ ಪ್ರಪಂಚದಲ್ಲಿ ವಿಮಾನ ಸಂಚಾರಕ್ಕೆ ಹೆಚ್ಚಿನ ಪ್ರಾಶಸ್ತ್ಯ ದೊರಕುತ್ತಿದ್ದು, ಇತ್ತೀಚಿನ ಜನತೆ ವಿಮಾನದ ಬಗ್ಗೆ ಹೆಚ್ಚು ತಿಳುವಳಿಕೆ ಹೊಂದಿರುವವರಾಗಿದ್ದಾರೆ.

By Girish

ಲಕ್ಷಾಂತರ ಮಂದಿ ಸಾಗುವ ಈ ವಿಮಾನ ದಿನ ಕಳೆದಂತೆ ಅತ್ಯಾದುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಹೆಚ್ಚು ಹೆಚ್ಚು ಹೊಸತನಗಳೊಂದಿಗೆ ಜನತೆಯ ಸೇವೆಗೆ ಸಿದ್ದಗೊಳ್ಳುತ್ತಿದೆ. ಸಾಮಾನ್ಯವಾಗಿ ವಿಮಾನದಲ್ಲಿ ಪ್ರಯಾಣಿಸುವ ಮಂದಿಗೆ ವಿಮಾನದ ಬಗ್ಗೆ ಹೆಚ್ಚು ಕಡಿಮೆ ಎಲ್ಲಾ ತಿಳಿದಿರುತ್ತದೆ. ಆದರೆ ನಾವು ಈಗ ಹೇಳ ಹೊರಟಿರುವುದು ನಿಮಗೆ ಕಂಡಿತ ಅಚ್ಚರಿ ಉಂಟು ಮಾಡುವುದಂತೂ ಕಂಡಿತ.

1. ಸಿಡಿಲ ಹೊಡೆತಕ್ಕೆ ಜಾಗಲ್ಲ...

1. ಸಿಡಿಲ ಹೊಡೆತಕ್ಕೆ ಜಾಗಲ್ಲ...

ಹೌದು, ನೀವು ಪ್ರಯಾಣಿಸುವ ವಿಮಾನ ಯಾವುದೇ ಕಾರಣಕ್ಕೂ ಸಿಡಿಲ ಹೊಡೆತಕ್ಕೆ ಸಿಲುಕದ ರೀತಿಯಲ್ಲಿ ತಂತ್ರಜ್ಞಾನ ಅಳವಡಿಸಿಲಾಗಿದೆ. ಪ್ರತಿ 1,000 ಗಂಟೆಗಳಿಗೊಮ್ಮೆ ಅಥವ ಪ್ರತಿ ವರ್ಷಕ್ಕೆ ಒಂದು ಬಾರಿ ಎಲ್ಲಾ ವಿಮಾನಗಳು ಸಿಡಿಲ ಹೊಡೆತಕ್ಕೆ ಸಿಕ್ಕಿಕೊಳ್ಳುತ್ತವೆ ಎನ್ನಲಾಗಿದ್ದು, ಬಲಿಷ್ಟ ಹೊಡೆತಕ್ಕೆ ಸಿಲುಕಿದರು ಸಹ ವಿಮಾನಕ್ಕೆ ಕೊಂಚವೂ ಹಾನಿಯಾಗದ ರೀತಿಯಲ್ಲಿ ತಂತ್ರಜ್ಞಾನ ಅಬಿವೃದ್ದಿಪಡಿಸಲಾಗಿದೆ. ನಿಮಗೆ ಗೊತ್ತೇ ? 1963ರಿಂದ ಇಲ್ಲಿಯವರೆಗೂ ಒಮ್ಮೆಯೂ ಕೂಡ ವಿಮಾನ ಸಿಡಿಲಿಗೆ ಸಿಕ್ಕ ಉದಾಹರಣೆಗಳು ನಮ್ಮ ಮುಂದೆ ಇಲ್ಲ.

2. ವಿಮಾನದಲ್ಲಿ ಯಾವ ಸೀಟ್ ಕೂಡ ಸುರಕ್ಷತೆ ಹೊಂದಿಲ್ಲ.

2. ವಿಮಾನದಲ್ಲಿ ಯಾವ ಸೀಟ್ ಕೂಡ ಸುರಕ್ಷತೆ ಹೊಂದಿಲ್ಲ.

ಕೆಲವು ವರದಿಗಳು ಹೇಳುವ ಪ್ರಕಾರ ಹಿಂಬದಿಯ ಮೂರು ಆಸನಗಳೂ ಸುರಕ್ಷತೆ ಹೊಂದಿವೆ ಎಂದು ಹೇಳಿದ್ದರೂ ಸಹ, ಇಲ್ಲಿಯವರೆಗೂ ಯಾವುದೇ ರೀತಿಯ ವರದಿ ಖಚಿತ ಮಾಹಿತಿ ಬಿಡುಗಡೆಗೊಳಿಸಿಲ್ಲ. ಟೈಮ್ಸ್ ವರದಿಯ ಪ್ರಕಾರ ಬೇರೆ ಆಸನಗಳಿಗೆ ಹೋಲಿಸಿದರೆ ಹಿಂದಿನ ಭಾಗದ ಅಸನ ವಿಮಾನ ಅಪಘಾತವಾದ ಸಂದರ್ಭದಲ್ಲಿ ಶೇಕಡ 32 ರಷ್ಟು ಅಪಘಾತದ ತೀವ್ರತೆ ಕಡಿಮೆ ಹೊಂದಿರಲಿದೆ.

3. ಸೀಕ್ರೆಟ್ ಮಲಗುವ ಕೋಣೆ ಇರುತ್ತೆ

3. ಸೀಕ್ರೆಟ್ ಮಲಗುವ ಕೋಣೆ ಇರುತ್ತೆ

ಸಿಬ್ಬಂದಿ ವಿರಮಿಸಲು ಕೆಲವು ವಿಮಾನಗಳಲ್ಲಿ ಮಲಗುವ ಕೋಣೆ ನೀಡಲಾಗಿರುತ್ತದೆ. ಹೌದು, ಹೆಚ್ಚು ದಿನ ಪ್ರಯಾಣ ಮಾಡುವ ವಿಮಾನಗಳಲ್ಲಿ ಸಿಬ್ಬಂದಿ ಶಿಫ್ಟ್ ಲೆಕ್ಕದಲ್ಲಿ ಕೆಲಸ ಮಾಡಲಿದ್ದಾರೆ. ಬೋಯಿಂಗ್ 777 ಮತ್ತು 787 ಎ ಸೌಲಭ್ಯ ಒಳಗೊಂಡಿರುವ ವಿಮಾನವಾಗಿದೆ. ಈ ವಿಮಾನದ ಸಿಬ್ಬಂದಿ ಕೆಲವು ಬಾರಿ 16ಕ್ಕೂ ಹೆಚ್ಚು ಗಂಟೆಗಳ ಕಾಲ ವಿಮಾನದಲ್ಲೇ ಕಾಲ ಕಳೆಯಬೇಕಾದ ಪರಿಸ್ಥಿತಿ ಕೆಲವೊಮ್ಮೆ ಬರಲಿದ್ದು, ಈ ನಿಟ್ಟಿನಲ್ಲಿ ಚಿಕ್ಕ ಮೆಟ್ಟಿಲು ಹೊಂದಿರುವ ಮಲಗುವ ಕೋಣೆ, ಮತ್ತು ಸ್ನಾನ ಕೋಣೆ ನೀಡಲಾಗುತ್ತದೆ.

4. ವಿಮಾನದ ಟೈಯರ್ ಎಂಬ ಅಚ್ಚರಿ.

4. ವಿಮಾನದ ಟೈಯರ್ ಎಂಬ ಅಚ್ಚರಿ.

ನಿಮಗೆ ಗೊತ್ತೇ ? ವಿಮಾನಕ್ಕೆ ಅಳವಡಿಸಿರುವ ಟೈರುಗಳು ಹೆಚ್ಚು ಕಡಿಮೆ 38 ಟನ್ ನಷ್ಟು ಭಾರ ಹೊರಬಲ್ಲ ಶಕ್ತಿ ಹೊಂದಿರುತ್ತವೆ. 500 ಕ್ಕೂ ಹೆಚ್ಚು ಬಾರಿ 170 ಕಿ .ಮೀ ವೇಗದಲ್ಲಿ ನೆಲಕ್ಕೆ ಅಪ್ಪಳಿಸಿದರೂ ಸಹ ಟೈರು ಸುಸ್ತಿತಿಯಲ್ಲಿ ಇರುತ್ತದೆ. ಸಾಮಾನ್ಯ ಕಾರಿನ ಟೈರಿಗಿಂತ 6 ಪಟ್ಟು ಹೆಚ್ಚು ಬಲಿಷ್ಟವಾಗಿರುವ ವಿಮಾನದ ಟೈಯರ್ ಬದಲಾಯಿಸಲು ಸಾಮಾನ್ಯ ಕಾರಿನ ಚಕ್ರ ಬದಲಾಯಿಸಲು ಅನುಸರಿಸುವ ಕ್ರಮವನ್ನೇ ಅನುಸರಿಸಲಾಗುತ್ತದೆ.

5 ವಿಮಾನ ಇಳಿಯುವ ಸಂದರ್ಭದಲ್ಲಿ ಬೆಳಕು ಕಮ್ಮಿ ಮಾಡ್ತಾರೆ.

5 ವಿಮಾನ ಇಳಿಯುವ ಸಂದರ್ಭದಲ್ಲಿ ಬೆಳಕು ಕಮ್ಮಿ ಮಾಡ್ತಾರೆ.

ಕೆಲವೊಮ್ಮೆ ರಾತ್ರಿಯ ವೇಳೆ ವಿಮಾನ ಇಳಿಸುವ ಸಂದರ್ಭದಲ್ಲಿ ತೊಂದರೆ ಕಾಣಿಸಿದ್ದಲ್ಲಿ, ವಿಮಾನದ ಒಳಗಿನ ದೀಪಗಳನ್ನು ಮಬ್ಬು ಮಾಡುವ ಪರಿಪಾಟ ನೆಡೆಸಿಕೊಂಡು ಬರಲಾಗಿದೆ. ಪ್ರಯಾಣಿಕರು ಭೂಮಿಯ ಮೇಲಿನ ಕತ್ತಲೆಗೆ ಹೊಂದಿಕೊಂಡು ಆದಷ್ಟು ಬೇಗೆ ತಮ್ಮ ತಮ್ಮ ಆಸನಗಳಿಂದ ಹೊರಬಂದು ವಿಮಾನದಿಂದ ಹೊರ ಬರಲಿ ಎಂಬ ಕಾರಣಕ್ಕೆ ಈ ರೀತಿ ಮಾಡಲಾಗುತ್ತದೆ.

6 ವಿಮಾನಕ್ಕೆ ಎರಡು ಎಂಜಿನ್ನುಗಳ ಅವಶ್ಯಕತೆ ಇಲ್ಲ.

6 ವಿಮಾನಕ್ಕೆ ಎರಡು ಎಂಜಿನ್ನುಗಳ ಅವಶ್ಯಕತೆ ಇಲ್ಲ.

ಎಲ್ಲಾ ವ್ಯಾಪಾರೀ ಬಳಕೆಯ ವಾಹನ ಕೇವಲ ಒಂದು ಎಂಜಿನ್ ನಲ್ಲಿ ಸುರಕ್ಷಿತ ಪ್ರಯಾಣ ಮಾಡುವ ಎಲ್ಲಾ ಲಕ್ಷಣ ಹೊಂದಿದ್ದು ಮತ್ತು ಎಂಜಿನ್ ನಿಂದ ಬಿಡುಗಡೆಯಾಗುವ ಅರ್ಧದಷ್ಟು ಶಕ್ತಿಯನ್ನು ಮಾತ್ರ ಉಪಯೋಗಿಸಿಕೊಂಡು ಹೆಚ್ಚು ದೂರ ಕ್ರಮಿಸಬಲ್ಲ ಶಕ್ತಿ ಹೊಂದಿದ್ದು, ಇದರಿಂದಾಗಿ ಹೆಚ್ಚು ಇಂಧನ ಉಳಿತಾಯ ಆಗಲಿದೆ. ತಜ್ಞರ ಪ್ರಕಾರ ಹೆಚ್ಚು ದೂರ ಕ್ರಮಿಸುವ ಎಲ್ಲಾ ವಿಮಾನಗಳು ತಮ್ಮ ಒಂದು ಎಂಜಿನ್ ಸಹಾಯದಿಂದ ಎಷ್ಟು ದೂರ ಕ್ರಮಿಸುತ್ತವೆ ಎಂಬ ಬಗ್ಗೆ ಎಫ್ಎಎ ಸಂಸ್ಥೆಯಿಂದ ಪ್ರಮಾಣ ಪಾತ್ರ ಪಡೆಯಬೇಕಾಗಿದೆ. ಬಲ್ಲ ಮೂಲಗಳ ಪ್ರಕಾರ ಬೋಯಿಂಗ್ ವಿಮಾನ ತನ್ನ ಒಂದೇ ಎಂಜಿನ್ ಬಳಸಿಕೊಂಡು ಹೆಚ್ಚು ಕಡಿಮೆ 330 ನಿಮಿಷಗಳಷ್ಟು ದೂರ ಕ್ರಮಿಸುತ್ತದೆಯಂತೆ.

7. ಶೌಚಾಲಯದಲ್ಲಿ ಹ್ಯಾಶ್ ಟ್ರೇ(ಬೂದಿಯನ್ನು ಉದುರಿಸುವ ತಟ್ಟೆ) ಇಟ್ಟಿರ್ತಾರೆ

7. ಶೌಚಾಲಯದಲ್ಲಿ ಹ್ಯಾಶ್ ಟ್ರೇ(ಬೂದಿಯನ್ನು ಉದುರಿಸುವ ತಟ್ಟೆ) ಇಟ್ಟಿರ್ತಾರೆ

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೆಲವು ವರ್ಷಗಳಿಂದ ವಿಮಾನದಲ್ಲಿ ಧೂಮಪಾನ ನಿಷೇಧಿಸಲಾಗಿದೆ. ಆದ್ರೆ ನೀವೇನಾದರೂ ಒಮ್ಮೆ ಶೌಚಾಲಯದಲ್ಲಿ ಗಮನಿಸಿದರೆ ನಿಮಗೆ ಹ್ಯಾಶ್ ಟ್ರೇ ಕಾಣಿಸುತ್ತದೆ, ಯಾಕಪ್ಪ ಹೀಗೆ ಅಂತ ಅನ್ಕೊಂಡ್ರಾ !? ವಿಮಾನ ತಯಾರು ಮಾಡುವಾಗ ಎಲ್ಲಾ ದೃಷ್ಟಿಯಲ್ಲಿ ಇಟ್ಟುಕೊಂಡು ಮಾಡಲಾಗಿರುತ್ತದೆ. ನಿಮಗೆ ತಿಳಿದಿರುವ ಹಾಗೆ, ನಮ್ಮ ಜನಕ್ಕೆ ಏನು ಮಾಡಬಾರದು ಎಂದು ಹೇಳುತ್ತೇವೆಯೋ ಅದನ್ನೇ ಮಾಡಿ ಅಭ್ಯಾಸ. ಅದೇ ರೀತಿ ಧೂಮಪಾನ ಮಾಡಬಾರದು ಎಂದು ನಿಯಮವಿದ್ದರೂ ಕೆಲವೊಬ್ಬರು ಇಂತಹ ನಿಯಮ ಉಲ್ಲಂಘನೆ ಮಾಡುತ್ತಾರೆ, ಇಂತ ಜನರಿಂದ ವಿಮಾನಕ್ಕೆ ಯಾವುದೇ ರೀತಿಯ ಹಾನಿಯಾಗಬಾರದು ಎಂಬ ದೃಷ್ಟಿ ಇಂದ ಈ ರೀತಿ ಕ್ರಮ ಅನುಸರಿಸಲಾಗುತ್ತದೆ.

8. ಕಿಟಕಿಯಲ್ಲಿರುವ ಚಿಕ್ಕ ರಂದ್ರದ ಏಕೆ ಇರುತ್ತೆ ಗೊತ್ತಾ..?

8. ಕಿಟಕಿಯಲ್ಲಿರುವ ಚಿಕ್ಕ ರಂದ್ರದ ಏಕೆ ಇರುತ್ತೆ ಗೊತ್ತಾ..?

ಹೆಚ್ಚಿನ ವಿಮಾನಗಳ ಕಿಟಕಿಗಳು ಮೂರು ಪದರ ಗಾಜು ಹೊಂದಿರುತ್ತವೆ. ಕೆಲವೊಮ್ಮೆ ಹೊರಭಾಗದ ಪದರ ಕೈಕೊಟ್ಟರೆ ಕ್ಯಾಬಿನ್ ಒತ್ತಡ ನಿರ್ವಹಿಸುವ ದೃಷ್ಟಿಯಿಂದ ಈ ರಂದ್ರ ನೀಡಲಾಗಿರುತ್ತದೆ. ಒಳಭಾಗದಲ್ಲಿ ಗಾಳಿ ತೀವ್ರತೆಯನ್ನು ಈ ರಂದ್ರ ಸಮತೋಲನಗೊಳಿಸುತ್ತದೆ.

9. ಸಾಮಾನ್ಯವಾಗಿ ವಿಮಾನದಲ್ಲಿ ನೀಡುವ ಆಹಾರ ಚನ್ನಾಗಿರೋದಿಲ್ಲ !!

9. ಸಾಮಾನ್ಯವಾಗಿ ವಿಮಾನದಲ್ಲಿ ನೀಡುವ ಆಹಾರ ಚನ್ನಾಗಿರೋದಿಲ್ಲ !!

ನೀವೇನಾದರೂ ವಿಮಾನದಲ್ಲಿ ನೀಡುವ ಆಹಾರದ ಬಗ್ಗೆ ಕೆಟ್ಟ ಅನುಭವ ಹೊಂದಿದ್ದಾರೆ ಅದಕ್ಕೆ ಹೊಣೆ ಆಹಾರ ತಯಾರಕರಲ್ಲ ಎಂಬುದು ನಿಮ್ಮ ಗಮನದಲ್ಲಿ ಇರಲಿ. ಏಕೆ ಗೊತ್ತೇ, ನಿಜವಾಗಿ ಇಲ್ಲಿ ಧೂಷಿಸಬೇಕಾಗಿರುವುದು ವಿಮಾನದ ವಾತಾವರಣವನ್ನು. ಹೌದು, ಪ್ರತಿಷ್ಠಿತ ಸಂಸ್ಥೆಯ ವರದಿ ಪ್ರಕಾರ ವಿಮಾನದ ಒಳಗೆ ಇರುವ ವಾತಾವರಣ ನೀವು ಸೇವಿಸುವ ಸಿಹಿಯನ್ನು ಶೇಕಡ 30 ರಷ್ಟು ಕಡಿಮೆ ಮಾಡಿಬಿಡುತ್ತದೆ, ಉಪ್ಪಿನ ಪ್ರಮಾಣ ಹೆಚ್ಚಿಸುತ್ತದೆ. ನಂಬಲ್ಲ ಅಂದ್ರೆ ಒಮ್ಮೆ ಪರೀಕ್ಷೆ ಮಾಡಿ.

10. ತುರ್ತು ಸಂದರ್ಭದಲ್ಲಿ ನೀಡುವ ಮಾಸ್ಕ್ ಬಗ್ಗೆ...

10. ತುರ್ತು ಸಂದರ್ಭದಲ್ಲಿ ನೀಡುವ ಮಾಸ್ಕ್ ಬಗ್ಗೆ...

ಕೆಲವೊಮ್ಮೆ ತುರ್ತು ಪರಿಸ್ಥಿತಿಯಲ್ಲಿ ಅತಿ ಮುಖ್ಯವಾದ 'ಕ್ಯಾಬಿನ್ ಒತ್ತಡ' ಕಮ್ಮಿಯಾಗುವ ಲಕ್ಷಣ ಕಂಡು ಬಂದಲ್ಲಿ ಎಲ್ಲರಿಗೂ ನೀಡಲಾಗುವ ಆಕ್ಸಿಜನ್ ಮುಸುಕು ಹೆಚ್ಚು ಪ್ರಯೋಜನ ಬರಲಿದೆ ಎಂಬುದು ನಿಮ್ಮಲ್ಲಿ ಕೆಲವರಿಗೆ ತಿಳಿದಿರಬಹುದು. ಆದರೆ ಈ ಮಾಸ್ಕ್ ಧರಿಸಿದ 15 ನಿಮಿಷಗಳು ಮಾತ್ರ ಕಾರ್ಯ ನಿರ್ವಹಿಸಲಿದೆ ಎಂಬ ವಿಚಾರವನ್ನು ವಿಮಾನ ಸಿಬ್ಬಂದಿ ಬಿಟ್ಟುಕೊಡುವುದಿಲ್ಲ, ಏಕೆ ಗೊತ್ತೇ ? ಇದರಿಂದಾಗಿ ಪ್ರಯಾಣಿಕ ಗಾಬರಿಗೊಳಗಾಗುವ ಸಂಭವವಿರುತ್ತದೆ ಎನ್ನುವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ವಿಮಾನ ತನ್ನ ಯತಾಸ್ಥಿತಿಗೆ ಮರಳಲಿದೆ.

ವಿಮಾನ ಕೈಗೆಟುಕದ ಪ್ರಯಾಣ ಎನ್ನುವವರು ಈ ಕೆಳಗಿನ ಕಾರಿನ ಚಿತ್ರಗಳನ್ನು ವೀಕ್ಷಿಸಿ.

Most Read Articles

Kannada
Read more on ವಿಮಾನ plane
English summary
ten facts that you dont know about planes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X