ಬುಕ್ಕಿಗಳಿಂದ ಧೋನಿ-ಭಜ್ಜಿಗೆ ದುಬಾರಿ 'ಹಮ್ಮರ್' ಗಿಫ್ಟ್?

ಪ್ರಸಕ್ತ ಸಾಗುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್ ಆರನೇ ಆವೃತ್ತಿ ವೇಳೆ ಸ್ಪಾಟ್ ಫಿಕ್ಸಿಂಗ್ ಸಂಬಂಧ ದೆಹಲಿ ಪೊಲೀಸರ ಬಂಧನಕ್ಕೊಳಗಾಗಿ ಪ್ರಸ್ತುತ ವಿಚಾರಣೆ ಎದುರಿಸುತ್ತಿರುವ ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಶಾಂತಕುಮಾರನ್ ಶ್ರೀಶಾಂತ್, ಇದೀಗ ಮೋಸದಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಚ್ಚಿ ಬೀಳಿಸುವ ಸಂಗತಿಗಳನ್ನು ಹೊರಹಾಕಿರುವುದು ಇನ್ನಷ್ಟು ಕುತೂಹಲ ಕೆರಳಿಸಿದೆ.

ಮೋಸದಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಭಾರತೀಯ ಕ್ರಿಕೆಟ್ ಆಟಗಾರರು 'ಹಮ್ಮರ್'ಗಳಂತಹ ದುಬಾರಿ ಕಾರುಗಳನ್ನು ಉಡುಗೊರೆಯಾಗಿ ಪಡೆದುಕೊಂಡಿದ್ದಾರೆ ಎಂಬ ಶ್ರೀಶಾಂತ್ ಹೇಳಿಕೆಯು ವಿವಾದಕ್ಕೆ ಕಾರಣವಾಗುತ್ತಿದೆ. ಶ್ರೀಶಾಂತ್ ಹೇಳಿಕೆಯು ಪರೋಕ್ಷವಾಗಿ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಅವರನ್ನು ಬೊಟ್ಟು ಮಾಡಿ ತೋರಿಸಿದಂತಿದೆ.

ಪ್ರಸ್ತುತ ಭಾರತೀಯ ಕ್ರಿಕೆಟಿಗರ ಪೈಕಿ ಧೋನಿ ಹಾಗೂ ಹರಭಜನ್ ಬಳಿ ಮಾತ್ರ 'ಹಮ್ಮರ್' ಕಾರಿದೆ. ಅಂತೆಯೇ ಬುಕ್ಕಿಗಳು ಹೈ ಎಂಡ್ ಐಷಾರಾಮಿ ಕಾರು, ದುಬಾರಿ ಕೈಗಡಿಯಾರಗಳು ಹಾಗೂ ಪಾರ್ಟಿಗಳಲ್ಲಿ ಹುಡುಗಿಯರನ್ನು ಒದಗಿಸುವುದಾಗಿ ಆಮಿಷ ಒಡ್ಡಿರುವುದಾಗಿ ಶ್ರೀಶಾಂತ್ ತಿಳಿಸಿದ್ದಾರೆ.

ಈ ನಡುವೆ ಪ್ರಕರಣದ ಹಾದಿ ತಪ್ಪಿಸಲು ಶ್ರೀಶಾಂತ್ ಅವರಿಂದ ಇಂತಹದೊಂದು ಪ್ರಯತ್ನ ನಡೆಯುತ್ತಿದೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ. ಸ್ಪಾಟ್ ಫಿಕ್ಸಿಂಗ್ ಸಂಬಂಧ ಕೆಲವು ದಿನಗಳ ಹಿಂದೆಯಷ್ಟೇ ಶ್ರೀಶಾಂತ್ ಸೇರಿದಂತೆ ಮೂವರು ಕ್ರಿಕೆಟಿಗರನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ಆಟಗಾರರು ತಪ್ಪೊಪ್ಪಿಕೊಂಡಿರುವ ಬಗ್ಗೆಯೂ ಮಾಹಿತಿಯಿದೆ. ಈ ಹಿಂದೆ ಶ್ರೀಶಾಂತ್ ತಂಗಿರುವ ಹೋಟೆಲ್‌ಗೆ ಧಾಳಿ ನಡೆಸಿದ್ದ ಪೊಲೀಸರು ಲ್ಯಾಪ್‌ಟಾಪ್, ಐಪ್ಯಾಡ್, ಹಣ ಹಾಗೂ ಇತರ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದರು.

ಶ್ರೀಶಾಂತ್ ಬಂಧನದ ಸಂದರ್ಭದಲ್ಲಿ ಪಾನಮತ್ತರಾಗಿದ್ದರು ಎಂದು ಮೂಲಗಳು ತಿಳಿಸಿರುವುದಲ್ಲದೆ ಎಸ್‌ಯುವಿ ಕಾರಿನಲ್ಲಿ 'ಕಾಲ್ ಗರ್ಲ್' ಇದ್ದಿದ್ದರೆಂಬ ಮಾಹಿತಿ ಹೊರಬಂದಿದೆ. ಒಟ್ಟಿನಲ್ಲಿ ಪ್ರಕರಣದ ತನಿಖೆ ಮುಂದುವರಿಯುವಂತೆಯೇ ಮೋಸದಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಚ್ಚಿ ಬೀಳಿಸುವ ವಿಷಯಗಳು ಹೊರಬೀಳುತ್ತಿವೆ.

ಬುಕ್ಕಿಗಳಿಂದ ಧೋನಿ-ಭಜ್ಜಿಗೆ ದುಬಾರಿ ಹಮ್ಮರ್ ಗಿಫ್ಟ್?

ಅಂದ ಹಾಗೆ ಧೋನಿ ಬಳಿ ದುಬಾರಿ ಹಮ್ಮರ್ ಎಚ್ 2 ಕಾರಿಗೆ. ಈ ಕಾರಿಗೆ ಸುಮಾರು ಒಂದು ಕೋಟಿ ರುಪಾಯಿ ಅಂದಾಜಿಸಲಾಗಿದೆ.

ಬುಕ್ಕಿಗಳಿಂದ ಧೋನಿ-ಭಜ್ಜಿಗೆ ದುಬಾರಿ ಹಮ್ಮರ್ ಗಿಫ್ಟ್?

ಇನ್ನು ಹರ್ಭಜನ್ ಸಿಂಗ್ ಬಳಿ ಡಿ ಪ್ಲಸ್ ಸೆಗ್ಮೆಂಟ್ ಹಮ್ಮರ್ ಕಾರಿದೆ. ಇದು ಸೆಲೆಬ್ರಿಟಿಗಳ ನೆಚ್ಚಿನ ಕಾರು. ಹಮ್ಮರ್ ಎಚ್3 3.7 ಲೀಟರಿನ ಡೀಸೆಲ್ ಎಂಜಿನ್ ಹೊಂದಿದೆ. ಇದು 4 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿದ್ದು, ಆಕರ್ಷಕ ಕಾರ್ಯಕ್ಷಮತೆಯ ವಾಹನವಾಗಿದೆ.

ಬುಕ್ಕಿಗಳಿಂದ ಧೋನಿ-ಭಜ್ಜಿಗೆ ದುಬಾರಿ ಹಮ್ಮರ್ ಗಿಫ್ಟ್?

ಹಮ್ಮರ್ ಅಂದ್ರೆ ಟ್ರಕ್ ನಂತಹ ಕಾರು. ಆರಂಭದಲ್ಲಿ ಈ ಬ್ರಾಂಡ್ ಹೊಂದಿದ್ದು ಎಎಂ ಜನರಲ್ ಮೋಟರ್ಸ್. ನಂತರ ಇದನ್ನು ಡಿಟ್ರೈಟ್ ಮೂಲದ ಜನರಲ್ ಮೋಟರ್ಸ್ ಸ್ವಾಧೀನಪಡಿಸಿಕೊಂಡಿತ್ತು. ಜನರಲ್ ಮೋಟರ್ಸ್ ಹಮ್ಮರ್ ಬ್ರಾಂಡಿನಲ್ಲಿ ಮೂರು ಆವೃತ್ತಿಗಳನ್ನು ಹೊರತಂದಿದೆ. ಅದರ ಹೆಸರು ಹಮ್ಮರ್ ಎಚ್3, ಹಮ್ಮರ್ ಎಚ್2 ಮತ್ತು ಹಮ್ಮರ್ ಎಚ್1.

ಬುಕ್ಕಿಗಳಿಂದ ಧೋನಿ-ಭಜ್ಜಿಗೆ ದುಬಾರಿ ಹಮ್ಮರ್ ಗಿಫ್ಟ್?

ಒಟ್ಟಿನಲ್ಲಿ ಶ್ರೀಶಾಂತ್ ಹೇಳಿಕೆಯು ಸ್ಪಾಟ್ ಫಿಕ್ಸ್ಂಗ್ ಪ್ರಕರಣಕ್ಕೆ ಹೊಸ ತಿರುವು ನೀಡುತ್ತದೆಯೇ ಎಂಬುದು ತನಿಖೆ ಪೂರ್ಣಗೊಂಡಾಗ ಬಯಲಾಗಲಿದೆ.

ಬುಕ್ಕಿಗಳಿಂದ ಧೋನಿ-ಭಜ್ಜಿಗೆ ದುಬಾರಿ ಹಮ್ಮರ್ ಗಿಫ್ಟ್?

ಈ ಹಿಂದೆ ಶ್ರೀಶಾಂತ್ ಅವನ್ನು ಧೋನಿ ಹಾಗೂ ಹರಭಜನ್ ಮೋಸದಾಟದಲ್ಲಿ ಸಿಲುಕಿಸಿದ್ದಾರೆ ಎಂದು ಅವರ ತಂದೆ ಆರೋಪ ಮಾಡಿದ್ದರು. ಆದರೆ ಆ ಬಳಿಕ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದರಲ್ಲದೆ ಕ್ಷಮೆಯಾಚನೆ ನಡೆಸಿದ್ದರು.

Most Read Articles

Kannada
English summary
During the course of police investigations of the spot-fixing episode, it has emerged that S Sreesanth revealed the names of prominent India players who were reportedly lured by bookies through expensive gifts. Sreesanth alleged that the bookies had gifted these players a Hummer and other high end cars, expensive watches and women at parties
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X