ದೆಹಲಿಯಿಂದ ಬೆಂಗಳೂರಿಗೆ ತಲುಪಲು ಬರಿ 74 ರುಪಾಯಿ ಇದ್ದರೆ ಸಾಕು!

By Nagaraja

ದೆಹಲಿಯಿಂದ ಬೆಂಗಳೂರಿಗೆ ತಲುಪಲು ಬರಿ 74 ರುಪಾಯಿ ಇದ್ದರೆ ಸಾಕು ಅಂದರೆ ನಂಬಲಾರ್ಹವೇ? ಕನಸಲ್ಲೂ ಸಾಧ್ಯವೇ ಇಲ್ಲ ಅಂತೀರಾ? ಆದರೆ ಇಂತಹದೊಂದು ಪರಿಕಲ್ಪನೆ ನನಸಾಗುವ ಕಾಲ ಬಹಳ ದೂರವಿಲ್ಲ.

ಪರ್ಯಾಯ ಸಂಚಾರ ವಾಹಕ ಹುಡುಕಾಟದಲ್ಲಿರುವ ವಿದ್ಯಾರ್ಥಿಗಳ ತಂಡವೊಂದು ಪ್ರತಿ ಲೀಟರ್ ಗೆ ಬರೋಬ್ಬರಿ 1099 ಕೀ.ಮೀ. ಮೈಲೇಜ್ ನೀಡುವ ವಾಹನವೊಂದನ್ನು ಅಭಿವೃದ್ಧಿಪಡಿಸಿದೆ. ಅಂದರೆ ಬೆಂಗಳೂರು ಮತ್ತು ದೆಹಲಿ ನಡುವಣ 2,121 ಕೀ.ಮೀ. ದೂರದ ಅಂತರವನ್ನು ಬರಿ 74 ರುಪಾಯಿಗಳಲ್ಲಿ ತಲುಪಬಹುದಾಗಿದೆ.

ಪ್ರತಿ ಲೀಟರ್ ಗೆ 1099 ಕೀ.ಮೀ. ಮೈಲೇಜ್ ನೀಡುವ ವಾಹನ

ಅಮೆರಿಕದಲ್ಲಿ ಡೆಟ್ರಾಯ್ಟ್ ನಲ್ಲಿ ನಡೆದ 10ನೇ ಶೇಲ್ ಇಕೊ ಮ್ಯಾರಥನ್ ನಲ್ಲಿ ಕೆನಡಾದ ಕ್ಯೂಬೆಕ್ ಸಿಟಿಯಲ್ಲಿರುವ ಯುನಿವರ್ಸಿಟಿ ಲವಲ್‌ನ ಅಲೆರಿಯನ್ ಸೂಪರ್ ಮೈಲೇಜ್ ತಂಡವು ಮೊದಲ ಮಾದರಿಯನ್ನು ಪ್ರದರ್ಶಿಸಿದೆ.

ಪ್ರತಿ ಲೀಟರ್ ಗೆ 1099 ಕೀ.ಮೀ. ಮೈಲೇಜ್ ನೀಡುವ ವಾಹನ

'ಸಿಟಿ 2.0' ಎಂದು ಅರಿಲಯಲ್ಪಡುವ ಈ ಮೈಲೇಜ್ ರಾಜ, ಪ್ರತಿ ಲೀಟರ್ ಗೆ 1099 ಕೀ.ಮೀ. ಮೈಲೇಜ್ ನೀಡುವಷ್ಟು ಸಮರ್ಥವಾಗಿದೆ. ಈ ಮೂಲಕ ತನ್ನೆಲ್ಲ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿದೆ.

ಪ್ರತಿ ಲೀಟರ್ ಗೆ 1099 ಕೀ.ಮೀ. ಮೈಲೇಜ್ ನೀಡುವ ವಾಹನ

ಅಮೆರಿಕ, ಬ್ರೆಜಿಲ್, ಕೆನಡಾ, ಇಕ್ವಾಡೋರ್, ಗ್ವಾಂಟಿಮಾಲಾ, ಮೆಕ್ಸಿಕೊ ಸೇರಿದಂತೆ 123ರಷ್ಟು ತಂಡಗಳು ಶೆಲ್ ಇಕೊ ಮ್ಯಾರಥನ್ ನಲ್ಲಿ ಭಾಗವಹಿಸಿದ್ದವು. ಈಗ ಇವೆಲ್ಲವನ್ನೂ ಹಿಂದಿಕ್ಕುವಲ್ಲಿ ಅಲೆರಿಯನ್ ಸೂಪರ್ ಮೈಲೇಜ್ ತಂಡವು ಯಶ ಕಂಡಿದೆ.

ಪ್ರತಿ ಲೀಟರ್ ಗೆ 1099 ಕೀ.ಮೀ. ಮೈಲೇಜ್ ನೀಡುವ ವಾಹನ

ಸುಸ್ಥಿರ ಭವಿಷ್ಯವನ್ನು ಕಾಪಾಡುವ ನಿಟ್ಟಿನಲ್ಲಿ ವರ್ಷಂಪ್ರತಿ ಶೆಲ್ ಇಕೊ ಮ್ಯಾರಥನ್ ನಲ್ಲಿ ಪರಿಸರ ಸ್ನೇಹಿ ವಾಹನಗಳ ಪರಿಕಲ್ಪನೆಯನ್ನು ಪ್ರದರ್ಶಿಸಲಾಗುತ್ತಿದೆ.

ಪ್ರತಿ ಲೀಟರ್ ಗೆ 1099 ಕೀ.ಮೀ. ಮೈಲೇಜ್ ನೀಡುವ ವಾಹನ

ಹಗುರ ಭಾರದ ಏರೋಡೈನಾಮಿಕ್ ವಿನ್ಯಾಸ ಮತ್ತು 2 ಅಶ್ವಶಕ್ತಿ ಉತ್ಪಾದಿಸುವ ಎಂಜಿನ್ ಇದರಲ್ಲಿ ಬಳಕೆ ಮಾಡಲಾಗಿದೆ.

ಪ್ರತಿ ಲೀಟರ್ ಗೆ 1099 ಕೀ.ಮೀ. ಮೈಲೇಜ್ ನೀಡುವ ವಾಹನ

ಹಾಗಿದ್ದರೂ 2013ರಲ್ಲಿ ಟೊರಂಟೊ ವಿಶ್ವವಿದ್ಯಾಲಯದ ತಂಡವು ಸ್ಥಾಪಿಸಿರುವ ಪ್ರತಿ ಲೀಟರ್ ಗೆ 1354 ಕೀ.ಮೀ. ಕಾರಿನ ದಾಖಲೆಯನ್ನು ಮುರಿಯುವಲ್ಲಿ ಸಿಟಿ 2.0 ವಿಫಲವಾಗಿದೆ.

Most Read Articles

Kannada
English summary
Car Gives A Mileage Of 1099km/l — Find Out How
Story first published: Friday, April 29, 2016, 12:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X