ಪೆಟ್ರೋಲ್, ಡೀಸೆಲ್ ಬೇಡ; ಬರಿ ಗಾಳಿಯಿಂದಲೇ ಓಡುವ ಗಾಡಿ!

By Nagaraja

ಇಂಧನ ಚಾಲಿತ ವಾಹನಗಳಿಗೆ ಪರ್ಯಾಯ ವ್ಯವಸ್ಥೆ ಹುಡುಕುವ ಪ್ರಯತ್ನ ನಿರಂತರ ಜಾರಿಯಲ್ಲಿದೆ. ಹಾಗಿರುವಾಗ ಹೊಸ ಕನಸನ್ನು ಕಟ್ಟಿಕೊಂಡು ಎಂಜಿನಿಯರಿಂಗ್ ಪದವಿಯನ್ನು ಓದುತ್ತಿರುವ ವಿದ್ಯಾರ್ಥಿಗಳ ತಂಡವೊಂದು ತಮ್ಮ ಕೊಡುಗೆಯನ್ನು ಸಲ್ಲಿಸಿದೆ.

ಗುಜರಾತ್‌ನ ರಾಜಕೋಟ್ ಎಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡವು ಪೆಟ್ರೋಲ್, ಡೀಸೆಲ್ ಗಳಂತಹ ಇಂಧನ ಚಾಲಿತ ವಾಹನಗಳಿಗೆ ಬದಲಿಯಾಗಿ ಬರಿ ಗಾಳಿಯಿಂದಲೇ ಓಡುವ ವಾಹನವೊಂದನ್ನು ನಿರ್ಮಿಸಿದೆ.

ಪೆಟ್ರೋಲ್, ಡೀಸೆಲ್ ಬೇಡ; ಬರಿ ಗಾಳಿಯಿಂದಲೇ ಓಡುವ ಗಾಡಿ!

ಏರ್ ಕಂಪ್ರೆಸರ್ ನಿಂದ ಓಡುವ ಈ ಗಾಡಿಯನ್ನು ನಾಲ್ವರ ವಿದ್ಯಾರ್ಥಿಗಳ ತಂಡವು ಕಳೆದೊಂದು ವರ್ಷದ ಸತತ ಪ್ರಯತ್ನದ ಬಳಿಕ ಅಭಿವೃದ್ಧಿಪಡಿಸಿದೆ.

ಪೆಟ್ರೋಲ್, ಡೀಸೆಲ್ ಬೇಡ; ಬರಿ ಗಾಳಿಯಿಂದಲೇ ಓಡುವ ಗಾಡಿ!

ಇಲ್ಲಿ ಇಂಧನ ಟ್ಯಾಂಕ್ ಬದಲಿಯಾಗಿ ಗಾಳಿಯನ್ನು ತುಂಬಿಡಲಾದ ಏರ್ ಕಂಪ್ರೆಸರ್ ಟ್ಯಾಂಕ್ ಬಳಕೆ ಮಾಡಲಾಗಿದೆ.

ಪೆಟ್ರೋಲ್, ಡೀಸೆಲ್ ಬೇಡ; ಬರಿ ಗಾಳಿಯಿಂದಲೇ ಓಡುವ ಗಾಡಿ!

ಇನ್ನು ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ಹಳೆಯ ಕಾರುಗಳ ಬಿಡಿಭಾಗ, ಚಕ್ರ ಇತ್ಯಾದಿ ಉಪಕರಣಗಳನ್ನು ಬಳಕೆ ಮಾಡಲಾಗಿದೆ.

ಪೆಟ್ರೋಲ್, ಡೀಸೆಲ್ ಬೇಡ; ಬರಿ ಗಾಳಿಯಿಂದಲೇ ಓಡುವ ಗಾಡಿ!

ಟ್ಯಾಂಕ್ ನಲ್ಲಿ 12 ಬಾರಿ ಗಾಳಿಯನ್ನು ತುಂಬಿದರೆ ಒಂದರಿಂದ ಎರಡು ಕೀ.ಮೀ. ವರೆಗೆ ಸಾಗಬಹುದಾಗಿದೆ. ಅದೇ ಹೊತ್ತಿಗೆ 15 ಬಾರಿ ತುಂಬಿಸಿದರೆ ಮೂರು ಕೀ.ಮೀ. ವರೆಗೂ ಸಂಚರಿಸಬಹುದಾಗಿದೆ.

ಪೆಟ್ರೋಲ್, ಡೀಸೆಲ್ ಬೇಡ; ಬರಿ ಗಾಳಿಯಿಂದಲೇ ಓಡುವ ಗಾಡಿ!

ಗಾಳಿಯಿಂದ ಶಕ್ತಿಯನ್ನು ಉತ್ಪಾದಿಸುವ ಸಲುವಾಗಿ 110 ಸಿಸಿ ಎಂಜಿನ್ ಬಳಕೆ ಮಾಡಲಾಗಿದೆ. ಇಲ್ಲಿ ಪೆಟ್ರೋಲ್ ಫೋರ್ ಸ್ಟ್ರೋಕ್ ಎಂಜಿನ್ ಟು ಸ್ಟ್ರೋಕ್ ಆಗಿ ಮಾರ್ಪಾಡುಗೊಂಡಿದೆ.

ಪೆಟ್ರೋಲ್, ಡೀಸೆಲ್ ಬೇಡ; ಬರಿ ಗಾಳಿಯಿಂದಲೇ ಓಡುವ ಗಾಡಿ!

ಸದ್ಯ ಪ್ರಾಥಮಿಕ ಹಂತದಲ್ಲಿರುವ ಯೋಜನೆಗೆ ಹಲವಾರು ಸವಾಲುಗಳು ಎದುರಾಗಿದೆ. ಇವುಗಳಲ್ಲಿ ಹೆಚ್ಚು ದೂರ ಸಾಗಲು ಕಂಪ್ರೇಸರ್ ಸಾಮರ್ಥ್ಯ ಹೆಚ್ಚಿಸುವುದು ಅತ್ಯಗತ್ಯವಾಗಿದೆ.

ಪೆಟ್ರೋಲ್, ಡೀಸೆಲ್ ಬೇಡ; ಬರಿ ಗಾಳಿಯಿಂದಲೇ ಓಡುವ ಗಾಡಿ!

ಅಲ್ಲದೆ ಕಂಪ್ರೆಸರ್ ನಿಂದ ಹೊರಬರುತ್ತಿರುವ ಶಬ್ದವನ್ನು ಕಡಿಮೆ ಮಾಡಬೇಕಿದೆ. ಅಂತೆಯೇ ಹೆಚ್ಚು ಭಾರ ಹೊರಲು ಸಾಧ್ಯವೇ ಎಂಬುದು ಸಹ ಸವಾಲೆನಿಸಿದೆ.

ಪೆಟ್ರೋಲ್, ಡೀಸೆಲ್ ಬೇಡ; ಬರಿ ಗಾಳಿಯಿಂದಲೇ ಓಡುವ ಗಾಡಿ!

ಒಟ್ಟಿನಲ್ಲಿ ಮಾಲಿನ್ಯ ರಹಿತ ಪರಿಸರ ಸ್ನೇಹಿ ಗಾಳಿಯಿಂದ ಓಡುವ ವಾಹನವು ಪ್ರಾಯೋಗಿಕವಾಗಿ ಎಷ್ಟರ ಮಟ್ಟಿಗೆ ಯಶ ಸಾಧಿಸಲಿದೆ ಎಂಬದುನ್ನು ಕಾದು ನೋಡಬೇಕಿದೆ.

Most Read Articles

Kannada
English summary
College Students Develop Car That Runs On Air
Story first published: Wednesday, June 29, 2016, 11:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X