ಪ್ರವಾಸೋದ್ಯಮಕ್ಕೆ ಉತ್ತೇಜನ; ಪಂಜಾಬ್‌‍ನಲ್ಲಿ ವಾಟರ್ ಬಸ್ ಬಿಡುಗಡೆ

ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪಂಜಾಬ್ ನಲ್ಲಿ ವಾಟರ್ ಬಸ್ ಸೇವೆಯನ್ನು ತೆರೆಯಲಾಗಿದೆ.

By Nagaraja

ರಾಜ್ಯದ ಪ್ರವಾಸೋದ್ಯಮಕ್ಕೆ ಯಾವೆಲ್ಲ ರೀತಿಯಲ್ಲಿ ಉತ್ತೇಜನ ನೀಡಬೇಕೆಂಬುದನ್ನು ಪಂಜಾಬ್ ನೋಡಿ ಕಲಿಯಬೇಕು. ಇದಕ್ಕೆ ಪೂರಕವಾದ ಬೆಳವಣಿಯೊಂದರಲ್ಲಿ ಪಂಜಾಬ್ ಉಪ ಮುಖ್ಯಮಂತ್ರಿ ಸುಖ್ ಭೀರ್ ಸಿಂಗ್ ಬಾದಲ್ ಅವರು ಫಿರೋಜ್ ಪುರದಲ್ಲಿರುವ ಹರಿಕ್ ಪ್ಯಾಟನ್ ಸರೋವರದಲ್ಲಿ ನೆಲದಲ್ಲೂ, ನೀರಲ್ಲೂ ಸಂಚರಿಬಹುದಾದ ವಾಟರ್ ಬಸ್ ಬಿಡುಗಡೆ ಮಾಡಿದ್ದಾರೆ.

ಪ್ರವಾಸೋದ್ಯಮಕ್ಕೆ ಉತ್ತೇಜನ; ಪಂಜಾಬ್‌‍ನಲ್ಲಿ ವಾಟರ್ ಬಸ್ ಬಿಡುಗಡೆ

ಪಂಜಾಬ್ ಪಾಲಿಗಿದು ದೀರ್ಘಕಾಲದ ಸ್ವಪ್ನವಾಗಿದ್ದು, ಜಲ ಬಸ್ ಯೋಜನೆ ಕೊನೆಗೂ ನನಸಾಗಿದೆ. ಇದು ಪಂಜಾಬ್ ಪ್ರವಾಸ ಕೇಂದ್ರದ ಆಯ್ದ ಮಾರ್ಗಗಳಲ್ಲಿ ಸಂಚರಿಸಲಿದೆ.

ಪ್ರವಾಸೋದ್ಯಮಕ್ಕೆ ಉತ್ತೇಜನ; ಪಂಜಾಬ್‌‍ನಲ್ಲಿ ವಾಟರ್ ಬಸ್ ಬಿಡುಗಡೆ

ಐದು ನದಿಗಳ ಬೀಡಾಗಿರುವ ಪಂಜಾಬ್ ನಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಸಾಧ್ಯತೆಯನ್ನು ಮನಗಾಣಲಾಗಿದೆ.

ಪ್ರವಾಸೋದ್ಯಮಕ್ಕೆ ಉತ್ತೇಜನ; ಪಂಜಾಬ್‌‍ನಲ್ಲಿ ವಾಟರ್ ಬಸ್ ಬಿಡುಗಡೆ

ಪಂಜಾಬ್ ಪರಂಪರೆ ಮತ್ತು ಪ್ರವಾಸೋದ್ಯಮ ಪ್ರಚಾರ ಇಲಾಖೆಯು ವಾಟರ್ ಬಸ್ ಯೋಜನೆಗಾಗಿ 10 ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡಿದೆ. ಇದು ವಾಟರ್ ಬಸ್ ಗೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಲಿದೆ.

ಪ್ರವಾಸೋದ್ಯಮಕ್ಕೆ ಉತ್ತೇಜನ; ಪಂಜಾಬ್‌‍ನಲ್ಲಿ ವಾಟರ್ ಬಸ್ ಬಿಡುಗಡೆ

ಪಂಜಾಬ್ ಜಲ ಬಸ್ಸಿನ ಪ್ರಯೋಗಿಕ ಸಂಚಾರ ಪರೀಕ್ಷೆಯನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ. ಇನ್ನು ಪ್ರವಾಸಿಗರಿಗೆ ಮರೆಯಲಾರದ ಅನುಭವವನ್ನು ಸನ್ಮಾನಿಸಲಿದೆ.

ಪ್ರವಾಸೋದ್ಯಮಕ್ಕೆ ಉತ್ತೇಜನ; ಪಂಜಾಬ್‌‍ನಲ್ಲಿ ವಾಟರ್ ಬಸ್ ಬಿಡುಗಡೆ

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾದಲ್, ವಾಟರ್ ಬಸ್ ಯೋಜನೆಯೊಂದಿಗೆ ತಮ್ಮ ಕನಸು ನನಸಾಗಿದೆ ಎಂದಿದ್ದಾರೆ.

ಪ್ರವಾಸೋದ್ಯಮಕ್ಕೆ ಉತ್ತೇಜನ; ಪಂಜಾಬ್‌‍ನಲ್ಲಿ ವಾಟರ್ ಬಸ್ ಬಿಡುಗಡೆ

ಪ್ರಸ್ತುತ ಜಲ ಬಸ್ಸಿನಲ್ಲಿ ಏಕಕಾಲಕ್ಕೆ ಚಾಲಕ ಸೇರಿದಂತೆ 34 ಮಂದಿಗೆ ಕುಳಿತುಕೊಳ್ಳುವ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.

ಪ್ರವಾಸೋದ್ಯಮಕ್ಕೆ ಉತ್ತೇಜನ; ಪಂಜಾಬ್‌‍ನಲ್ಲಿ ವಾಟರ್ ಬಸ್ ಬಿಡುಗಡೆ

ಸುರಕ್ಷತೆಗೂ ಗರಿಷ್ಠ ಆದ್ಯತೆಯನ್ನು ಕೊಡಲಾಗಿದ್ದು, ನೀರಲ್ಲಿ ಸಂಚರಿಸುವಾಗ ಜೀವ ರಕ್ಷಕ ಜಾಕೆಟ್ ಗಳನ್ನು ಧರಿಸುವುದು ಕಡ್ಡಾಯವಾಗಿರುತ್ತದೆ.

ಪ್ರವಾಸೋದ್ಯಮಕ್ಕೆ ಉತ್ತೇಜನ; ಪಂಜಾಬ್‌‍ನಲ್ಲಿ ವಾಟರ್ ಬಸ್ ಬಿಡುಗಡೆ

ಸದ್ಯ ಅಮೃತಸರದಿಂದ ಹರಿಕ್ ವೆಟ್ ಲ್ಯಾಂಡ್ ವರೆಗಿನ 13 ಕೀ.ಮೀ. ದೂರದ ಮಾರ್ಗದಲ್ಲಿ ವಾಟರ್ ಬಸ್ ಸಂಚರಿಸಲಿದೆ. ಈ ದೂರವನ್ನು 45 ನಿಮಿಷಗಳಲ್ಲಿ ಕ್ರಮಿಸಲಿದೆ.

ಪ್ರವಾಸೋದ್ಯಮಕ್ಕೆ ಉತ್ತೇಜನ; ಪಂಜಾಬ್‌‍ನಲ್ಲಿ ವಾಟರ್ ಬಸ್ ಬಿಡುಗಡೆ

ಬಳಿಕ ನಾಲ್ಕು ಕೀ.ಮೀ. ದೂರ ನೀರಲ್ಲಿ ಸಂಚರಿಸಲಿದೆ. ಪ್ರತಿ ಪ್ರವಾಸಕ್ಕೂ 2000 ರುಪಾಯಿ ನಿಗದಿಪಡಿಸಲಾಗಿದೆ. ಹರಿಕ್ ವೆಟ್ ಲ್ಯಾಂಡ್ ವರೆಗೆ ಮಾತ್ರ ಪ್ರಯಾಣಿಸುವವರು 800 ರುಪಾಯಿ ಮಾತ್ರ ಪಾವತಿಸಿದರಾಯಿತು.

Most Read Articles

Kannada
English summary
Sukhbir Singh Badal Llaunches Punjab's First Amphibious Bus
Story first published: Tuesday, December 13, 2016, 11:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X