ಬೇಸಿಗೆಯಲ್ಲಿ ಕಾರಿನ ಪ್ರಯಾಣ ಮಾಡುವ ಮುನ್ನ ಈ 9 ವಿಚಾರಗಳು ನಿಮ್ಮ ಗಮನದಲ್ಲಿ ಇರಲಿ

ಹಲವು ಮಂದಿ ಬೇಸಿಗೆ ಕಾಲದಲ್ಲಿ ಹೆಚ್ಚು ಪ್ರವಾಸ ಮಾಡುವುದನ್ನು ರೂಢಿಸಿಕೊಂಡಿರುತ್ತಾರೆ, ಅಂತಹ ಜನರಿಗೆ ಕಾರಿನಲ್ಲಿ ಇರಬೇಕಾದ ವಸ್ತುಗಳ ಬಗ್ಗೆ ಹೆಚ್ಚು ತಿಳುವಳಿಕೆ ಇಲ್ಲದೆ ಇರಬಹುದು. ಈ ಲೇಖನ ಅಂತಹ ಜನಕ್ಕೆ ಉಪಯೋಗವಾಗುವುದಂತೂ ಖಂಡಿತ.

By Girish

ಹೆಚ್ಚಿನ ಜನಕ್ಕೆ ಕಾರಿನ ಮೇಲೆ ಅತಿಯಾದ ವ್ಯಾಮೋಹ ಇರುತ್ತೆ, ಬಹುತೇಕ ಜನರು ಬೇಸಿಗೆ ಬಂದರೆ ತಮಗಿಂತ ಹೆಚ್ಚಾಗಿ ಕಾರಿನ ಬಗ್ಗೆ ಚಿಂತಿಸಿ ಹೆಚ್ಚು ಕಡಿಮೆ ಕಣ್ಣೀರು ಬರುವುದೊಂದು ಬಾಕಿ, ಅಷ್ಟರ ಮಟ್ಟಿಗೆ ಬೇಸರ ವ್ಯಕ್ತಪಡಿಸುತ್ತಿರುತ್ತಾರೆ.

ಈ ಕೆಳಗಿನ ವಿಷಯಗಳನ್ನು ನೀವು ಆದಷ್ಟು ಗಮನದಲ್ಲಿ ಇಟ್ಟುಕೊಂಡರೆ ಖಂಡಿತ ನಿಮ್ಮ ಕಾರು ಹೆಚ್ಚು ಸುರಕ್ಷಿತವಾಗಿರುತ್ತದೆ. ಬೇಸಿಗೆ ಕಾಲದಲ್ಲಿ ಕಾರಿನ ಸುರಕ್ಷತೆ ಬಗ್ಗೆ ಹೆಚ್ಚಿನ ಜನಕ್ಕೆ ತಿಳುವಳಿಕೆ ನೀಡುವ ಲೇಖನ ಇದಾಗಿದೆ.

ಸನ್ ಗ್ಲಾಸ್ ಹೋಲ್ಡರ್ :

ಸನ್ ಗ್ಲಾಸ್ ಹೋಲ್ಡರ್ :

ಹೆಚ್ಚಿನ ಜನ ಕಾರಿನಲ್ಲಿ ಕನ್ನಡಕ ಧರಿಸಿದರೆ ಅಪಹಾಸ್ಯಕ್ಕೆ ಒಳಗಾಗಬೇಕಾಗುತ್ತದೆ ಎಂದು ಬಾವಿಸಿರುತ್ತಾರೆ, ಆದ್ರೆ ಬೇಸಿಗೆ ಸಮಯದಲ್ಲಿ ಖಂಡಿತವಾಗಿಯೂ ಕಾರಿನಲ್ಲಿ ನೀವು ಸನ್ ಗ್ಲಾಸ್ ಉಪಯೋಗಿಸುವುದು ಒಳಿತು. ಕಾರಿನಲ್ಲಿ ಪ್ರಯಾಣಿಸುವ ವೇಳೆ ಹೆಚ್ಚಿನ ಮಟ್ಟದ ಬಿಸಿ ತಟ್ಟುವ ಸಂಭವವಿರುವುದರಿಂದ ಸನ್ ಗ್ಲಾಸ್ ಧರಿಸಿಕೊಂಡು ಕಾರು ಓಡಿಸಬೇಕಾಗುತ್ತದೆ, ಸನ್ ಗ್ಲಾಸ್ ಇರಿಸಲು ಸನ್ ಗ್ಲಾಸ್ ಹೋಲ್ಡರ್ ಬೇಕಲ್ಲವೇ ? ಆದ ಕಾರಣ ಇದರ ಬಗ್ಗೆ ಗಮನವಿರಲಿ.

ಎಸಿ ಕಪ್ ಹೋಲ್ಡರ್ :

ಎಸಿ ಕಪ್ ಹೋಲ್ಡರ್ :

ಎಸಿ ಕಪ್ ಹೋಲ್ಡರ್ ಅತಿ ಅವಶ್ಯಕ ಸಾಧನ ಎಂಬುದರಲ್ಲಿ ಎರಡು ಮಾತಿಲ್ಲ, ನೀವು ಸೇವಿಸುವ ದ್ರವ ಆಹಾರವನ್ನು ತಣ್ಣಗೆ ಇಡುತ್ತದೆ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ, ಬೇಸಿಗೆ ಕಾಲದಲ್ಲಿ ನಿಮ್ಮ ದೇಹಕ್ಕೆ ಊಟ ತಿಂಡಿಗಿಂತ ಹೆಚ್ಚಾಗಿ ದ್ರವ ಆಹಾರ ಅತಿ ಅವಶ್ಯಕ ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.

ಸ್ವಯಂಚಾಲಿತ ಹವಾಮಾನ ನಿಯಂತ್ರಣ ಸಾಧನ :

ಸ್ವಯಂಚಾಲಿತ ಹವಾಮಾನ ನಿಯಂತ್ರಣ ಸಾಧನ :

ಕ್ರಿಶ್ ಟೆಕ್ ಎಂಬ ಕಂಪನಿ ಈ ಸಾಧನ ಕಂಡುಹಿಡಿದಿದ್ದು, ಸಾಧನವನ್ನು ಕಾರಿಗೆ ಅಳವಡಿಸಿದರೆ ಮುಗಿಯಿತು, ನಿಮ್ಮ ಕಾರಿನ ಹವಾಮಾನ ಪ್ರತಿಯೊಂದನ್ನು ತಿಳಿಸಲಿದೆ. ನಿಮ್ಮ ಕಾರಿನಲ್ಲಿ ಈ ಸಾಧನ ಇರದಿದ್ದರೆ ಚಿಂತೆ ಬೇಡ, ಆನ್ಲೈನ್ ಕಂಪೆನಿಗಳಲ್ಲಿ ನೀವು ಬುಕ್ ಮಾಡಬಹುದು.

ಏರ್ ಫ್ರೆಶ್ನರ್ :

ಏರ್ ಫ್ರೆಶ್ನರ್ :

ಮೊದ್ಲೇ ಬಿಸಿಲಿನ ತಾಪಕ್ಕೆ ಬೆಂಡಾಗಿರುತ್ತೇವೆ, ಅದಕ್ಕೆ ಸರಿಯಾಗಿ ದೂಳು ಸೇರಿಕೊಂಡರೆ ನಮ್ಮನ್ನು ದೇವರೇ ಕಾಪಾಡಬೇಕು. ದೂಳು ತುಂಬಿದ ರಸ್ತೆಗಳಲ್ಲಿ ನಿಮ್ಮ ಜೊತೆ ಏರ್ ಫ್ರೆಶ್ನೆರ್ ಇದ್ದಾರೆ ಖಂಡಿತ ನಿಮಗೆ ಹೆಚ್ಚು ಆರಾಮದಾಯಕವಾಗಿರುತ್ತದೆ.

ಡ್ಯಾಶ್ ಬೋರ್ಡ್ ಕವರ್ :

ಡ್ಯಾಶ್ ಬೋರ್ಡ್ ಕವರ್ :

ಪ್ರತಿ ಬಾರಿ ನಿಮಗೆ ಮರಗಳ ಕೆಳಗೆ ಅಥವಾ ಪಾರ್ಕಿಂಗ್ ಸ್ಥಳಗಳಲ್ಲಿ ಕಾರು ನಿಲ್ಲಿಸಲು ಸ್ಥಳಾವಕಾಶ ದೊರೆಯುತ್ತದೆ ಎಂದು ಅಪೇಕ್ಷಿಸುವುದಕ್ಕೆ ಖಂಡಿತ ಆಗುವುದಿಲ್ಲ, ಎಗರಿಂದಾಗಿ ಹೆಚ್ಚು ಪ್ರಖರತೆ ಇರುವ ಸೂರ್ಯನ ಕಿರಣಗಳು ನೆರೆ ನಿಮ್ಮ ಕಾರಿನ ಡ್ಯಾಶ್ ಬೋರ್ಡ್ ಮೇಲೆ ಬಿದ್ದು, ಡ್ಯಾಶ್ ಬೋರ್ಡ್ ಕಳೆಗುಂದಬಹುದು, ಇನ್ನು ಕೆಲವೊಮ್ಮೆ ಬಿರುಕು ಬಿಡಬಹುದು. ಇದನ್ನು ತಡೆಯಲು ಒಂದೇ ಮಾರ್ಗ ಡ್ಯಾಶ್ ಬೋರ್ಡ್ ಕವರ್ ಅಳವಡಿಸುವುದು.

ಸನ್ ಶೇಡ್ಸ್ :

ಸನ್ ಶೇಡ್ಸ್ :

ಬೆಳಕಿನ ನೇರ ಕಿರಣಗಳು ಸಾಮಾನ್ಯವಾಗಿ ಕಿಟಕಿಯ ಗಾಜಿನ ಮುಕಾಂತರ ಕಾರಿನ ಒಳ ಪ್ರವೇಶಿಸುತ್ತವೆ, ಇಂತಹ ಕಿರಣಗಳಿಂದ ನಿಮ್ಮ ತ್ವಜೆ ಕಾಂತಿಹೀನವಾಗುವ ಸಂಭವವಿರುತ್ತದೆ. ಇದನ್ನು ತಡೆಗಟ್ಟಲು ನೀವು 'ಸನ್ ಶೇಡ್ಸ್' ಉಪಯೋಗಿಸುವುದು ಒಳಿತು.

ಕೂಲರ್ :

ಕೂಲರ್ :

ಕಾರಿನಲ್ಲಿ ನೀರು ತಣ್ಣಗೆ ಇಡಬಹುದಾದಂತಹ ಸುಲಭ ವಿಧಾನವೆಂದರೆ 'ಕೂಲರ್'. ಹೌದು ರೂ. 4,500 ವ್ಯಹಿಸಿದರೆ ನಿಮಗೆ ಹೆಚ್ಚು ಗುಣಮಟ್ಟದ ಕೂಲರ್ ಗಳು ಸಿಗುತ್ತವೆ, 12 ವೋಲ್ಟ್ ಸಾಕೆಟ್ ಹೊಂದಿದ್ದಾರೆ ಸಾಕು, 8 ಲೀಟರಿನಷ್ಟು ನೀರನ್ನು ಸುಲಭ ರೀತಿಯಲ್ಲಿ ತಣ್ಣಗೆ ಶೇಖರಿಸಿಡಬಹುದು.

ಕಾರಿನ ಕವರ್ :

ಕಾರಿನ ಕವರ್ :

ಕೇವಲ ಕಾರು ಸ್ವಚ್ಛವಾಗಿಡಲು ಮಾತ್ರ ಕಾರ್ ಕವರ್ ಉಪಯೋಗಕ್ಕೆ ಬರುತ್ತದೆ ಎಂದು ನೀವು ತಿಳಿದುಕೊಂಡಿದ್ದಾರೆ ಅದು ಖಂಡಿತ ತಪ್ಪು. ಕಾರಿನ ಕವರ್, ಸೂರ್ಯನ ಅತಿ ಸೂಕ್ಷ್ಮ ಕಿರಣಗಳನ್ನು ತಡೆಗಟ್ಟಿ ಕಾರಿನ ಬಣ್ಣ ಹಾಳಾಗದಂತೆ ತಡೆಯುತ್ತದೆ.

ಸೀಟ್ ಕವರ್ :

ಸೀಟ್ ಕವರ್ :

ಸೀಟ್ ಕವರ್ ವಿಚಾರಕ್ಕೆ ಬಂದರೆ, ನೀವು ಅತಿ ಹೆಚ್ಚು ಜಾಗೃತವಾಗಿರಬೇಕಾದ ಅಂಶ ಲೆದರ್ ಸೀಟ್ ಬಗ್ಗೆ. ಹೌದು, ಸಾಮಾನ್ಯ ಸೀಟ್ ಕವರುಗಳಿಗಿಂತ ಈ ಲೆದರ್ ಸೀಟುಗಳು ಅತಿ ಹೆಚ್ಚು ಶಾಖವನ್ನು ಹೀರಿಕೊಳ್ಳುವ ಸಂಭವ ಹೆಚ್ಚು, ಅದರಲ್ಲಿಯೂ ಕಪ್ಪು ಬಣ್ಣದ ಸೀಟ್ ಕವರ್ ಇದ್ದರಂತೂ ಧರ್ಮ ಸಂಕಟ ಕಟ್ಟಿಟ್ಟ ಬುತ್ತಿ.

ಬೇಸಿಗೆಯಲ್ಲಿ ಕಾರಿನ ಪ್ರಯಾಣ ಮಾಡುವ ಮುನ್ನ ಈ 9 ವಿಚಾರಗಳು ನಿಮ್ಮ ಗಮನದಲ್ಲಿ ಇರಲಿ

ಪ್ರಯಾಣದ ಸಮಯದಲ್ಲಿ ಆದಷ್ಟು ಮೇಲಿನ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದು ಒಳಿತು,

McLaren ಪಿ1 ಜಿಟಿಆರ್ ಕಾರಿನ ಚಿತ್ರಗಳು...

Most Read Articles

Kannada
Read more on ಬೇಸಿಗೆ summer
English summary
There are now a whole lot of accessories available for your car that can help provide some relief from the heat. Stay cool with this list of summer extras for your four wheels.
Story first published: Saturday, March 11, 2017, 14:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X