ಸುನಾಮಿ ಬಂದ್ರು ಡೋಂಟ್ ಕೇರ್, ರಕ್ಷಣೆಗಾಗಿ ದೈತ್ಯ 'ಕ್ಯಾಪ್ಸುಲ್'

By Nagaraja

ಸುನಾಮಿ, ಭೂಕಂಪ ಅಥವಾ ಚಂಡಮಾರುತದಂತಹ ನೈಸರ್ಗಿಕ ವಿಕೋಪ ಎದುರಾದಾಗ ಭೂಮಿ ಮಾತೆಗೆ ತಲೆಬಾಗಿ ಶರಣಾಗದೇ ಹೊರತು ಅನ್ಯ ದಾರಿಯಿರುವುದಿಲ್ಲ. ಭೂ ಮಾತೆ ಮುನಿಸಿಕೊಂಡಾಗ ಆಕೆಯ ಕೋಪವನ್ನು ತಡೆಯುವುದು ಕಷ್ಟ ಸಾಧ್ಯ.

ಆದರೆ ಸುನಾಮಿಯಂತಹ ನೈಸರ್ಗಿಕ ವಿಕೋಪವನ್ನು ಸಮರ್ಥವಾಗಿ ಎದುರಿಸಬಲ್ಲ ದೈತ್ಯಕಾರಾದ ಸರ್ವೈವಲ್ ಕ್ಯಾಪ್ಸುಲ್ ನಿರ್ಮಿಸಲಾಗಿದೆ. ನೋಡಲು ದೈತ್ಯಕಾರಾದ ಸ್ನೂಕರ್ ಚೆಂಡಿನಂತಿರುವ ಈ ದೈತ್ಯ ಗುಳಿಗೆಯು ಅಪಾಯದ ಸನ್ನಿವೇಶದಲ್ಲಿ ಪ್ರಾಣವನ್ನು ರಕ್ಷಿಸಲಿದೆ.

ನೈಸರ್ಗಿಕ ವಿಕೋಪದಿಂದ ರಕ್ಷಣೆಗೆ ಸರ್ವೈವಲ್ ಕ್ಯಾಪ್ಸುಲ್

ವಿವಿಧ ಆಕಾರದಲ್ಲಿ ಲಭ್ಯವಿರುವ ಇಂತಹ ಸರ್ವೈವಲ್ ಕ್ಯಾಪ್ಸುಲ್ ಗಳು ಎರಡರಿಂದ ಗರಿಷ್ಠ 10 ಮಂದಿಗೆ ತನ್ನ ಕವಚದಲ್ಲಿ ರಕ್ಷಣೆಯನ್ನು ಒದಗಿಸುತ್ತದೆ.

ನೈಸರ್ಗಿಕ ವಿಕೋಪದಿಂದ ರಕ್ಷಣೆಗೆ ಸರ್ವೈವಲ್ ಕ್ಯಾಪ್ಸುಲ್

ಸರ್ವೈವಲ್ ಕ್ಯಾಪ್ಸುಲ್ ಸುನಾಮಿ, ಚಂಡ ಮಾರುತ, ಭೂಕಂಪ ಇತ್ಯಾದಿ ನೈಸರ್ಗಿಕ ವಿಪತ್ತುಗಳನ್ನು ಎದುರಿಸಲು ನಿರ್ಮಿಸರುವ ವೈಯಕ್ತಿಕ ಸುರಕ್ಷತಾ ವ್ಯವಸ್ಥೆಯಾಗಿದೆ.

ನೈಸರ್ಗಿಕ ವಿಕೋಪದಿಂದ ರಕ್ಷಣೆಗೆ ಸರ್ವೈವಲ್ ಕ್ಯಾಪ್ಸುಲ್

ಸರ್ವೈವಲ್ ಕ್ಯಾಪ್ಸುಲ್ ಇತ್ತ ಕಡೆಗಳಲ್ಲೂ ಎರಡು ಸಣ್ಣದಾದ ವಿಂಡೋಗಳನ್ನು ರಚಿಸಲಾಗಿದ್ದು, ದುರಂತದ ವೇಳೆ ತಮ್ಮ ಸುತ್ತು ಮುತ್ತಲೂ ಏನೇನು ನಡೆಯುತ್ತಿದೆ ಎಂಬುದನ್ನು ಕಣ್ಣಾರೆ ವೀಕ್ಷಿಸಬಹುದಾಗಿದೆ.

ನೈಸರ್ಗಿಕ ವಿಕೋಪದಿಂದ ರಕ್ಷಣೆಗೆ ಸರ್ವೈವಲ್ ಕ್ಯಾಪ್ಸುಲ್

ಐದರಿಂದ 10 ಮಂದಿಗೆ ಏಕಕಾಲದಲ್ಲಿ ರಕ್ಷಣಾ ವ್ಯವಸ್ಥೆ ಹೊಂದಿರುವುದರಿಂದ ಒಂದು ಕುಟುಂಬದ ವ್ಯಕ್ತಿಗಳಿಗೆ ಏಕಕಾಲದಲ್ಲಿ ಪಾರಾಗಬಹುದಾಗಿದೆ.

ನೈಸರ್ಗಿಕ ವಿಕೋಪದಿಂದ ರಕ್ಷಣೆಗೆ ಸರ್ವೈವಲ್ ಕ್ಯಾಪ್ಸುಲ್

ದೃಢವಾದ ನಿರ್ಮಾಣ ಗುಣಮಟ್ಟವನ್ನು ಹೊಂದಿರುವ ಸರ್ವೈವಲ್ ಕ್ಯಾಪ್ಸುಲ್ ಗಳನ್ನು ಹಗಲು ಮತ್ತು ರಾತ್ರಿಗಳಲ್ಲಿ ಸುಲಭವಾಗಿ ನಿರ್ವಹಿಸಬಹುದಾಗಿದೆ.

ನೈಸರ್ಗಿಕ ವಿಕೋಪದಿಂದ ರಕ್ಷಣೆಗೆ ಸರ್ವೈವಲ್ ಕ್ಯಾಪ್ಸುಲ್

ವಿವಿಧ ರೀತಿಯ ವಿಪತ್ತುಗಳನ್ನು ತಡೆಯುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಉದಾಹರಣೆಗಾಗಿ ಸುನಾಮಿಯಂತಹ ಸಂದರ್ಭದಲ್ಲಿ ನೀರಿನ ಮಟ್ಟ ಏರಿಕೆಯಾದಾಗ ತೇಲಾಡಲಿದೆ.

ನೈಸರ್ಗಿಕ ವಿಕೋಪದಿಂದ ರಕ್ಷಣೆಗೆ ಸರ್ವೈವಲ್ ಕ್ಯಾಪ್ಸುಲ್

ಇನ್ನು ತಲೆ ಕೆಳಗಾಗಿ ಉರುಳುವುದನ್ನು ತಡೆಯುವ ನಿಟ್ಟಿನಲ್ಲಿ ಸ್ವಸ್ಥಿತಿಗೆ ಬರಲು ಕೆಳಗಡೆ ವಾಟರ್ ಬ್ಲೇಡ್ ಗಳನ್ನು ಆಳವಡಿಸಲಾಗಿದೆ. ಅಲ್ಲದೆ ನೀರಲ್ಲಿ ಕೊಚ್ಚಿ ಹೋಗುವುದನ್ನು ತಡೆಯಲಿದೆ.

ನೈಸರ್ಗಿಕ ವಿಕೋಪದಿಂದ ರಕ್ಷಣೆಗೆ ಸರ್ವೈವಲ್ ಕ್ಯಾಪ್ಸುಲ್

ಅಲ್ಯೂಮಿನಿಯಂ ಶೆಲ್ ಮತ್ತು ಫ್ರೇಮ್ ನಿಂದ ನಿರ್ಮಿತ ಸರ್ವೈವಲ್ ಕ್ಯಾಪ್ಸುಲ್ ಗಳು ಆರಂಭಿಕ ರಕ್ಷಣೆಯನ್ನು ನೀಡಲಿದ್ದು, ಬಳಿಕ ರಕ್ಷಣಾ ತಂಡದವರಿಗೆ ಸುಲಭವಾಗಿ ಕಾರ್ಯಾಚರಣೆ ಮಾಡಬಹುದಾಗಿದೆ.

ನೈಸರ್ಗಿಕ ವಿಕೋಪದಿಂದ ರಕ್ಷಣೆಗೆ ಸರ್ವೈವಲ್ ಕ್ಯಾಪ್ಸುಲ್

ಸರ್ವೈವಲ್ ಕ್ಯಾಪ್ಸುಲ್ ಗಳನ್ನು ಅಂತರಿಕ್ಷಯಾನ ಎಂಜಿನಿಯರ್ ಗಳು ವಿನ್ಯಾಸಗೊಳಿಸಿದ್ದು, ಬಲಿಷ್ಠ ಹಾಗೂ ದೀರ್ಘ ಬಾಳ್ವಿಕೆ ಬರಲಿದೆ.

ನೈಸರ್ಗಿಕ ವಿಕೋಪದಿಂದ ರಕ್ಷಣೆಗೆ ಸರ್ವೈವಲ್ ಕ್ಯಾಪ್ಸುಲ್

ಅಷ್ಟೇ ಅಲ್ಲದೆ ಅಪತ್ಕಾಲ ಪರಿಸ್ಥಿತಿಯಲ್ಲಿ ಐದು ದಿನಗಳಷ್ಟು ಬೇಕಾಗುವಷ್ಟು ಆಹಾರ, ನೀರು ಮತ್ತು ಬೆಳಕಿನ ವ್ಯವಸ್ಥೆಯನ್ನು ಒದಗಿಸುತ್ತಿದೆ.

ನೈಸರ್ಗಿಕ ವಿಕೋಪದಿಂದ ರಕ್ಷಣೆಗೆ ಸರ್ವೈವಲ್ ಕ್ಯಾಪ್ಸುಲ್

ಇವೆಲ್ಲದಕ್ಕೂ ಮಿಗಿಲಾಗಿ ಸುರಕ್ಷಿತ ಜಾಗವನ್ನು ತಲುಪುವ ನಿಟ್ಟಿನಲ್ಲಿ ಜಿಪಿಎಸ್ ದಿಕ್ಸೂಚಿ ವ್ಯವಸ್ಥೆಯನ್ನು ಆಳವಡಿಸಲಾಗಿದೆ.

ನೈಸರ್ಗಿಕ ವಿಕೋಪದಿಂದ ರಕ್ಷಣೆಗೆ ಸರ್ವೈವಲ್ ಕ್ಯಾಪ್ಸುಲ್

ಇನ್ನು ಇದನ್ನು ಖರೀದಿಸುವ ಗ್ರಾಹಕರಿಗೆ ತಮ್ಮ ಬಯಕೆಗಳಂತೆ ವಿಶೇಷವಾಗಿ ಮಾರ್ಪಾಡುಗೊಳಿಸುವ ವ್ಯವಸ್ಥೆಯಿದ್ದು, ಶೌಚಾಲಯ ಮತ್ತು ಮ್ಯೂಸಿಕ್ ಸಿಸ್ಟಂಗಳನ್ನು ಆಳವಡಿಸಬಹುದಾಗಿದೆ.

Most Read Articles

Kannada
English summary
Survival Capsule offers safety from the natural disasters
Story first published: Wednesday, May 25, 2016, 15:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X