ಕರೆಯದೆ ಮನೆಗೆ ಬಂದ ಅತ್ಯಂತ ಕೆಟ್ಟ ಅತಿಥಿ ಈತ !!

ಕ್ರೀಡಾ ಬಳಕೆಯ ಕಾರೊಂದು ರಸ್ತೆ ಬಿಟ್ಟು, ಮನೆಯ ಮೇಲ್ಛಾವಣಿ ಮೇಲೆ ಇಳಿದ ಘಟನೆ ಚೈನಾ ದೇಶದಲ್ಲಿ ನೆಡೆದಿದೆ.

Written By:

ಹೋಂಡಾ ಕಂಪನಿಗೆ ಸೇರಿದ ಕ್ರೀಡಾ ಬಳಕೆಯ ಕಾರು ಪಾದಚಾರಿಗಳನ್ನು ಮತ್ತು ಮೂರು ಚಕ್ರದ ವಾಹನಕ್ಕೆ ಹೊಡೆಯುವುದನ್ನು ತಪ್ಪಿಸಲು ಪಕ್ಕದಲ್ಲೇ ಇದ್ದ ಮನೆಯ ಮೇಲ್ಛಾವಣಿ ಮೇಲೆ ಹಾರಿ ಹೋಗಿ ನಿಲುಗಡೆಯಾಗಿರುವ ಕಹಿ ಘಟನೆ ಚೈನಾ ದೇಶದ ಜಿಯಾಂಗ್ಸು ಪ್ರಾಂತ್ಯದಲ್ಲಿ ನೆಡೆದಿದೆ.

ಈ ಘಟನೆಯ ನಂತರ ಕಾರಿನ ಸಮೇತ ಕಾರು ಚಾಲಕ 30ಕ್ಕೂ ಹೆಚ್ಚು ನಿಮಿಷಗಳ ಕಾಲ ಮನೆಯ ಮೇಲ್ಛಾವಣಿ ಮೇಲೆ ಕಾಲ ಕಳೆದಿದ್ದು, ನಂತರ ಬಂದ ಪೊಲೀಸ್ ಆತನನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ.

ಆತನೇ ಹೇಳುವ ಪ್ರಕಾರ ಪಾದಚಾರಿಗಳಿಗೆ ಆಗುವ ಅನಾಹುತವನ್ನು ತಪ್ಪಿಸಲು ಹೋಗಿ, ತಿಳಿಯದೆ ಬ್ರೇಕ್ ಬದಲು ಆಕ್ಸಿಲರೇಟರ್ ಒತ್ತಿದ್ದ ಕಾರಣ ಈ ರೀತಿಯ ಘಟನೆ ನೆಡೆದಿದೆ.

ಸಿಸಿ ಕ್ಯಾಮೆರಾದಲ್ಲಿ ಈ ಸನ್ನಿವೇಶ ಧಾಖಲಾಗಿದ್ದು, ಅತಿ ವೇಗವೇ ಈ ರೀತಿಯ ಅವಘಡಕ್ಕೆ ಕಾರಣ ಎನ್ನಲಾಗಿದೆ.

ಸದ್ಯ ಯಾರಿಗೂ ಏನು ಆಗದೆ ಇರುವುದು ಖುಷಿಯ ಸಂಗತಿ. ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ವೀಕ್ಷಿಸಿದ್ದು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

ಘಟನೆಗೆ ಸಂಬಂಧಿಸಿದ ಈ ವಿಡಿಯೋ ನೋಡಿರಿ...

ಇದೇ ರೀತಿಯ ಮತ್ತೊಂದು ಘಟನೆ ನೆಡೆದಿತ್ತು :

ಹೌದು, ಇತ್ತೀಚೆಗಿ ಪೊಲೀಸರಿಂದ ತಪ್ಪಿಸಿಕೊಳ್ಳು ಹೋಗಿ ರೆಸ್ಟೋರೆಂಟಿನ ಮೇಲೆ ಟ್ರಕ್ ಹತ್ತಿಸಿದ ಕೈದಿಯನ್ನು ಪೊಲೀಸರು ಮತ್ತೆ ಬಂಧಿಸಿ ಜೈಲಿಗೆ ತಳ್ಳಿರುವ ಘಟನೆ ಲೂಯಿಸಿಯಾನದಲ್ಲಿ ನೆಡೆದಿತ್ತು.

ಕೈದಿಯೊಬ್ಬ ಜೈಲಿನಿಂದ ತಪ್ಪಿಸಿಕೊಂಡು ಬಂದು ತಾನು ಕದ್ದ ಟೊಯೋಟಾ ಟಕಾಮೋ ಟ್ರಕ್ ನಲ್ಲಿ ತೆರಳುವ ವೇಳೆ ಈ ಘಟನೆ ನೆಡೆದಿತ್ತು, ದೇವರ ದಯೆಯಿಂದ ಆ ಘಟನೆಯಲ್ಲಿಯೂ ಕೂಡ ಯಾವುದೇ ಪ್ರಾಣಾಪಾಯವಾಗಿರಲಿಲ್ಲ.

ಕೈದಿ ತಾನು ಕದ್ದ ಟೊಯೋಟಾ ಟಕಾಮೋ ಟ್ರಕ್ಕಿನಲ್ಲಿ ಸರಿಸುಮಾರು 185 ಕಿ.ಮೀ ವೇಗದಲ್ಲಿ ಹೋಗುತ್ತಿರುವ ವೇಳೆಯಲ್ಲಿ ಟ್ರಕ್ ನಿಯಂತ್ರಣ ತಪ್ಪಿ ಚರಂಡಿ ಹೊಡೆದು ಹಾರಿ ಹೋಗಿ ರಸ್ತೆಯ ಪಕ್ಕದಲ್ಲೇ ಇರುವ ರೆಸ್ಟೋರೆಂಟ್ ಮೇಲೆ ಬಿದ್ದಿತ್ತು.

ಈ ಕೃತ್ಯ ಮಾಡಿದ್ದ ಕೈದಿಯು ಕೇವಲ 18 ವರ್ಷದ ಯುವಕ ಎಂಬುದು ತನಿಖೆಯ ನಂತರ ಗೊತ್ತಾಗಿತ್ತು.

ಕದ್ದ ಟ್ರಕ್ ಚರಂಡಿಗೆ ಹೊಡೆದು ಹಾರಿ ಹೋಗಿ ರೆಸ್ಟೋರೆಂಟಿನಲ್ಲಿ ಚಹ ಹೀರುತ್ತಿದ್ದ ಮಹಿಳೆಯ ಮುಂದೆ ನಿಂತಿತ್ತು. ಅದೃಷ್ಟವಶಾತ್ ಆಕೆಗೆ ಯಾವುದೇ ರೀತಿಯ ತೊಂದರೆಯಾಗಿರಲಿಲ್ಲ.

Click to compare, buy, and renew Car Insurance online

Buy InsuranceBuy Now

Read more on ಚೀನಾ china
Story first published: Monday, March 13, 2017, 13:33 [IST]
English summary
It is said that the driver pressed the accelerator pedal, changing directions and skidding off the road and landing on the roof.
Please Wait while comments are loading...

Latest Photos