ರೋಡ್ ಟ್ಯಾಕ್ಸ್ ಕಟ್ಟದ ಬಾಲಿವುಡ್ ಸೆಲೆಬ್ರೆಟಿ- ಸಿಕ್ಕಿಬಿದ್ದಾಗ ತೆತ್ತಿದ್ದು ಎಷ್ಟು ಗೊತ್ತಾ?

Written By:

ಅವರನ್ನು ಬಾಲಿವುಡ್‌ನ ಪ್ರತಿಷ್ಠಿತ ವ್ಯಕ್ತಿ ಎಂದರೇ ತಪ್ಪಾಗಲಾರದು. ಆದ್ರೆ ಖರೀದಿ ಮಾಡಿದ್ದ ಐಷಾರಾಮಿ ಮರ್ಸಿಡಿಸ್ ಮೇಬ್ಯಾಚ್ ಎಸ್-500 ಕಾರಿನ ರೋಡ್ ಟ್ಯಾಕ್ಸ್ ಕಟ್ಟದ ಹಿನ್ನೆಲೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಸುಮಾರು 60 ಲಕ್ಷ ರೂಪಾಯಿ ದಂಡ ತೆತ್ತಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ನಿಮಗೆಲ್ಲಾ ಟಿ-ಸಿರೀಸ್ ಆಡಿಯೋ ಕಂಪನಿ ಗೊತ್ತಿರಬೇಕಲ್ಲಾ. ಇದು ದೇಶದ ಪ್ರತಿಷ್ಠಿತ ಆಡಿಯೋ ಕಂಪನಿ ಕೂಡಾ ಹೌದು. ಇದರ ಮಾಲೀಕ ಭೂಷಣ ಕುಮಾರ್ ಕೆಲ ತಿಂಗಳ ಹಿಂದಷ್ಟೇ ಅತಿ ದುಬಾರಿ ಕಾರು ಮರ್ಸಿಡಿಸ್ ಮೇಬ್ಯಾಚ್ ಎಸ್-500 ಖರೀದಿ ಮಾಡಿದ್ದರು. ಆದ್ರೆ ಅಷ್ಟು ದುಬಾರಿ ಕಾರು ಖರೀದಿ ಮಾಡಿ ಪುಡಿಗಾಸಿನ ಟ್ಯಾಕ್ಸ್ ಕಟ್ಟದೇ ಇದೀಗ ಸಿಕ್ಕಿಬಿದ್ದಿದ್ದಾರೆ.

ಪುದುಚೇರಿ ನೋಂದಣಿ ಹೊಂದಿರುವ ಮರ್ಸಿಡಿಸ್ ಮೇಬ್ಯಾಚ್ ಎಸ್-500 ಕಾರು (PY 05 A 4040) ಸೀಜ್ ಮಾಡಿರುವ ಪೊಲೀಸರು, ಮಹಾರಾಷ್ಟ್ರ ರಾಜ್ಯ ರಸ್ತೆ ನಿಯಮದ ಪ್ರಕಾರ ದಂಡ ಹಾಕಿದ್ದಾರೆ. ಹೀಗಾಗಿ ಕಾರಿನ ಬೆಲೆಯ ಶೇ.20ರಷ್ಟು ದಂಡ ವಸೂಲಿ ಮಾಡಿದ್ದಾರೆ ಎನ್ನಲಾಗಿದೆ.

ಈ ಕಾರಿನ ಮೊತ್ತ ಕೇಳಿದ್ರೆ ನಿಮಗೆ ಶಾಕ್ ಆಗದೇ ಇರಲಾರದು. ಭಾರತೀಯ ಮಾರುಕಟ್ಟೆಯಲ್ಲಿ ಇದರ ಸದ್ಯದ ಬೆಲೆ 3 ಕೋಟಿ ರೂಪಾಯಿಗೂ ಅಧಿಕ ಎಂದರೇ ನೀವು ನಂಬಲೇಬೇಕು. ಹೀಗಾಗಿ ಶೇ.20 ದಂಡ ಪಾವತಿ ಅಂದರೇ ಕನಿಷ್ಠ 60 ಲಕ್ಷಕ್ಕೂ ಅಧಿಕ ದಂಡ ತೆತ್ತೆದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅಂದೇರಿ ಪ್ರಾದೇಶಿಕ ಸಾರಿಗೆ ಆಯುಕ್ತರು, ಮಹಾರಾಷ್ಟ್ರ ರಾಜ್ಯ ರಸ್ತೆ ನಿಯಮಗಳ ಪ್ರಕಾರ ದಂಡ ವಸೂಲಿ ಮಾಡಲಾಗಿದೆ ಎಂದಿದ್ದಾರೆ. ಅಲ್ಲದೇ ಕೆಲ ದಿನಗಳ ಹಿಂದಿಯೇ ಕಾರು ಖರೀದಿ ಮಾಡಿದ್ದರು. ತೆರಿಗೆ ಪಾವತಿ ಮಾಡದಿರುವುದಕ್ಕೆ ದಂಡ ಹಾಕಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನು ಟಿ-ಸೀರಿಸ್ ಆಡಿಯೋ ಕಂಪನಿಯ ಮಾಲೀಕ ಭೂಷಣ್ ಕುಮಾರ್ ಕೆಲ ದಿನಗಳ ಹಿಂದೆಯೇ ದೆಹಲಿಯಲ್ಲಿ ಈ ಕಾರನ್ನು ಖರೀದಿ ಮಾಡಿದ್ದರು. ಜೊತೆಗೆ ಪುದುಚೇರಿಯಲ್ಲಿ ನೋಂದಣಿ ಮಾಡಿಸಿ ಮುಂಬೈನಲ್ಲಿ ಕಾರು ಬಳಕೆ ಮಾಡುತ್ತಿದ್ದರು. ಆದ್ರೆ ಸರಿಯಾದ ಸಮಯಕ್ಕೆ ರಸ್ತೆ ತೆರಿಗೆ ಕಟ್ಟದೇ ಇದೀಗ ಸಿಕ್ಕಿಬಿದ್ದು ಭಾರೀ ಸುದ್ಧಿಯಾಗಿದೆ.

ಆದ್ರೆ ಭಾರೀ ಪ್ರಮಾಣ ದಂಡ ಕಟ್ಟಿದ್ದರ ಬಗೆಗಿನ ವರದಿಗಳನ್ನು ತಳ್ಳಿಹಾಕಿರುವ ಭೂಷಣ್ ಕಮಾರ್, ನಾನು ಯಾವುದೇ ರೀತಿಯ ದಂಡ ಪಾವತಿ ಮಾಡಿಲ್ಲ. ಬದಲಾಗಿ ಮುಂಬೈನಲ್ಲಿದ್ದ ನಮ್ಮ ತಾಯಿ ನೋಡಲು ಬಂದಿದ್ದೆ. ಆಗ ಪೊಲೀಸರು ನಮ್ಮ ಕಾರು ಸೀಜ್ ಮಾಡಿದ್ದು ನಿಜ. ಹೀಗಾಗಿ ದೆಹಲಿಯಲ್ಲಿದ್ದ ಎಲ್ಲ ಅಗತ್ಯ ದಾಖಲೆಗಳನ್ನು ಒದಗಿಸಿದ್ದಾಗಿ ಹೇಳಿದ್ದಾರೆ.

ಆದ್ರೆ ಪೊಲೀಸ್ ಮಾಹಿತಿ ಪ್ರಕಾರ ಭೂಷಣ್ ಕುಮಾರ್ ದಂಡ ತೆತ್ತಿರುವುದು ಖಚಿತವಾಗಿದ್ದು, ತಪ್ಪು ಮಾಡಿದವರಿಗೆ ಪೊಲೀಸರು ಸರಿಯಾಗಿ ಬುದ್ಧಿಕಲಿಸಿದ್ದಾರೆ. ಜೊತೆಗೆ ಕಟ್ಟಬೇಕಿರುವ ತೆರಿಗೆ ಕಟ್ಟದೇ ಶೋಕಿಮಾಡುವರಿಗೆ ಪೊಲೀಸರ ದಿಟ್ಟ ಕ್ರಮ ಶಾಕ್ ನೀಡಿದೆ.

ಬಿಡುಗಡೆಗೊಂಡಿರುವ 2017ರ ಮರ್ಸಿಡಿಸ್-ಬೆಂಝ್ ಇ-ಕ್ಲಾಸ್ ವಿನೂತನ ಕಾರಿನ ಚಿತ್ರಗಳನ್ನು ವೀಕ್ಷಿಸಿಸಲು ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Story first published: Thursday, March 23, 2017, 17:33 [IST]
English summary
The Mercedes-Maybach was reportedly seized for non-payment of road and registration tax in Maharashtra.
Please Wait while comments are loading...

Latest Photos