33,000 ಕೆ.ಜಿ ಇರುವ ವಿಮಾನವನ್ನು ಸಲೀಸಾಗಿ ಎಳೆಯಿತು ಈ ಟಾಟಾ ಹೆಕ್ಸಾ ಕಾರು : ವಿಡಿಯೋ ನೋಡಿ

Written By:

ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಕಾರು ಎಂಬ ಖ್ಯಾತಿಗೆ ಕಾರಣವಾಗಿರುವ ಈ ಟಾಟಾ ಕಂಪನಿಯ ಹೆಕ್ಸಾ ಕಾರು ಬೋಯಿಂಗ್ 737-300 ವಿಮಾನವನ್ನು ಎಳೆಯುತ್ತಿರುವ ವಿಡಿಯೋ ತುಣುಕೊಂದು ವೈರಲ್ ಆಗಿದೆ.

ಕಳೆದ ತಿಂಗಳಷ್ಟೇ ಬಿಡುಗಡೆಗೊಂಡಿರುವ ಈ ಹೆಕ್ಸಾ ಈಗಾಗಲೇ 1500 ಕಾರುಗಳು ಬಿಕಾರಿಯಾಗಿದ್ದು, ತನ್ನ ಜನಪ್ರಿಯತೆ ಏನೆಂಬುದನ್ನು ತೋರಿಸಿಕೊಟ್ಟಿದೆ, ಈಗ ಮತ್ತೊಂದು ಹೆಜ್ಜೆ ಮುಂದೆಹೋಗಿರುವ ಹೆಕ್ಸಾ ದೈತ ವಿಮಾನ ಎಳೆದಿದೆ.

2.2-ಲೀಟರ್ ವರಿಕಾರ್ ಡೀಸೆಲ್ ಎಂಜಿನ್ ಹೊಂದಿರುವ ಬಲಿಷ್ಠ ವಾಹನವಾಗಿದ್ದು, 4 ಸಿಲಿಂಡರ್-ಗಳಿಂದ 400 ಎನ್ಎಂ ತಿರುಗುಬಲದ 154 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಕೆಳಹಂತದ ಅಶ್ವಶಕ್ತಿ ಉತ್ಪಾದಕ ಹೊಂದಿರುವ ಈ ಕಾರು ಅತ್ಯದ್ಭುತ ಕಾರ್ಯಗಳನ್ನು ಮಾಡಬಲ್ಲದು, ಅದಕ್ಕೆ ಸಾಕ್ಷಿ ಎಂಬಂತಿದೆ ಇದೆ ಈ ಕೆಳಗಿನ ವಿಡಿಯೋ.

ಈ ವಿಡಿಯೋದಲ್ಲಿ ನೀವು ನೋಡುತ್ತಿರುವುದು ಬೋಯಿಂಗ್ 737-300 ವಿಮಾನವಾಗಿದ್ದು, ಸಾಮಾನ್ಯವಾಗಿ ವಿಶ್ವದಾದ್ಯಂತ ಖಾಸಗಿ ವಿಮಾನಯಾನ ಸಂಸ್ಥೆಗಳು ಬಳಸುವ ವಿಮಾನ ಇದಾಗಿದೆ.

ನಿಮಗೆ ಗೊತ್ತೇ, ಪ್ರಯಾಣಿಕರು ಇಲ್ಲದೆಯೇ ಈ ವಿಮಾನದ ತೂಕ ಬರೋಬ್ಬರಿ 33,000 ಕೆ.ಜಿ. ಹೌದು, ಇಷ್ಟು ತೂಕದ ವಿಮಾನ ಅಂದ್ರೆ ತಮಾಷೆ ಮಾತಲ್ಲ.

ಈ ಹೆಕ್ಸಾ ಕಾರು ವಿಮಾನವನ್ನು ಎಳೆದಿದ್ದೂ ಅಲ್ಲದೆ, ಹೆಚ್ಚಿನ ದೂರ ಕ್ರಮಿಸಿರುವುದು ಕೂಡ ಒಂದು ಧಾಖಲೆಯೇ ಸರಿ.

ಸಾಮಾನ್ಯವಾಗಿ ವಿಮಾನವನ್ನು ಎಳೆಯುವುದಕ್ಕೋಸ್ಕರ ಇರುವ ವಾಹನಗಳೂ ಕೂಡ ಹೆಕ್ಸಾ ಅಷ್ಟೇ ಸಾಮರ್ಥ್ಯ ಇರುತ್ತವೆ, ಆದರೆ ಯಾವುದೇ ರೀತಿಯ ಪೂರ್ವ ನಿಯೋಜನೆ ಇಲ್ಲದೆ ಈ ರೀತಿಯ ಪ್ರಯಾಣಕ್ಕೆ ಬಳಸುವ ಕಾರನ್ನು ವಿಮಾನ ಎಳೆಯುವುದಕ್ಕೆ ಬಳಸಿದ್ದು ಹೆಕ್ಸಾ ಗೆ ಸಲ್ಲುವ ಗೌರವವಾಗಿದೆ.

ಇದೆಲ್ಲದರಿಂದ ನಮಗೆಲ್ಲರಿಗೂ ತಿಳಿಯುವ ಒಂದು ವಿಚಾರವೆಂದರೆ ಹೆಕ್ಸಾ ಅತಿ ಹೆಚ್ಚು ಶಕ್ತಿ ಹೊಂದಿರುವ ಎಂಜಿನ್ ಹೊಂದಿದ್ದು, ಅತ್ಯದ್ಭುತ ಹಿಡಿತ ಹೊಂದಿರುವ ಕಾರು ಎಂಬುದು.

ಹಾಗಾದ್ರೆ ಬೇರೆ ಕಾರುಗಳು ಈ ರೀತಿಯ ಸಾಹಸ ಮಾಡಬಹುದೇ ? ಎಂಬ ಪ್ರೆಶ್ನೆ ನೀವು ಕೇಳಬಹುದು, ನಿಜ ಹೇಳಬೇಕು ಎಂದರೆ ಈ ರೀತಿಯ ಸಾಹಸ ಇಷ್ಟೇ ಸಾಮರ್ಥ್ಯದ ಕಾರುಗಳು ಕೂಡ ಮಾಡಬಹುದು, ಆದರೆ ಅದಕೆಲ್ಲಾ ಹೆಚ್ಚು ಪರಿಣಿತಿ ಹೊಂದಿದ ಚಾಲಕ, ಸರಿಯಾದ ಸಮಯದಲ್ಲಿ ಗೇರ್ ಉಪಯೋಗ, ಹೀಗೆ ಹಲವಾರು ಅಂಶಗಳು ಪರಿಗಣನೆಗೆ ಬರುತ್ತವೆ.

ವಿಡಿಯೋ ನೋಡಿ :

ರೆನಾಲ್ಟ್ ಕಂಪನಿಯು ಕಪ್ಟೂರ್ 2017 ಕಾರನ್ನು ಬಿಡುಗಡೆಗೊಳಿಸಲು ಮುಂದಾಗಿದ್ದು, ಹೊಸ ರೆನಾಲ್ಟ್ ಕಪ್ಟೂರ್ ಫೋಟೋ ಗ್ಯಾಲರಿ ವೀಕ್ಷಿಸಲು ಕ್ಲಿಕ್ ಮಾಡಿ.

Click to compare, buy, and renew Car Insurance online

Buy InsuranceBuy Now

Read more on ಟಾಟಾ tata
English summary
Tata Hexa was launched only a month back, and the vehicle has already received very good response from the market. the Hexa pulled Boeing made 737-300 aircraft, one of the most common aircraft used by many private airlines around the world.
Please Wait while comments are loading...

Latest Photos