ಕಿಡಿಗೇಡಿಗಳ ಅಟ್ಟಹಾಸ -ತೇಜಸ್ ರೈಲಿನ ಸ್ಥಿತಿ ಕಂಡ ಅಧಿಕಾರಿಗಳಿಗೆ ಆಗಿತ್ತು ಶಾಕ್..!!

ಕಳೆದ 2 ದಿನಗಳ ಹಿಂದೆ ಗೋವಾದಿಂದ ಮುಂಬೈಗೆ ಮರಳಿದ್ದ ತೇಜಸ್ ರೈಲಿನ ಸ್ಥಿತಿ ಕಂಡ ಅಧಿಕಾರಿಗಳಿಗೆ ಶಾಕ್ ಕಾದಿತ್ತು.

By Praveen

ಭಾರತೀಯ ರೈಲ್ವೇ ಇತಿಹಾಸದಲ್ಲೇ ಮೊದಲ ಬಾರಿಗೆ ಐಷಾರಾಮಿ ರೈಲು ತೇಜಸ್ ತನ್ನ ಸೇವೆ ಆರಂಭಿಸಿದ್ದು, ಕಿಡಿಗೇಡಿ ಕೃತ್ಯದಿಂದ ಮೂಲ ಅಂದವನ್ನೇ ಕಳೆದುಕೊಂಡಿದೆ.

ಕಿಡಿಗೇಡಿಗಳ ಅಟ್ಟಹಾಸ -ತೇಜಸ್ ರೈಲಿನ ಸ್ಥಿತಿ ಕಂಡ ಅಧಿಕಾರಿಗಳಿಗೆ ಆಗಿತ್ತು ಶಾಕ್..!!

ಕಿಡಿಗೇಡಿಗಳ ಅಟ್ಟಹಾಸ

ಐಷಾರಾಮಿ ತೇಜಸ್ ರೈಲಿನಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದು, ಪ್ರಯಾಣಕ್ಕೆ ಅನುಕೂಲವಾಗಲೆಂದು ನೀಡಲಾಗಿದ್ದ ಹೆಡ್‍ಫೋನ್‍ಗಳನ್ನೇ ಕಳ್ಳತನ ಮಾಡಿದ್ದಾರೆ.

ಕಿಡಿಗೇಡಿಗಳ ಅಟ್ಟಹಾಸ -ತೇಜಸ್ ರೈಲಿನ ಸ್ಥಿತಿ ಕಂಡ ಅಧಿಕಾರಿಗಳಿಗೆ ಆಗಿತ್ತು ಶಾಕ್..!!

ಒಟ್ಟು 12 ಹೈ ಕ್ವಾಲಿಟಿ ಹೆಡ್‌ಫೋನ್ ಕಳ್ಳತನ ಮಾಡಿರುವ ಕಿಡಿಗೇಡಿಗಳು ಕೆಲವು ಕಡೆ ಇನ್ಫೋಟೈನ್‌ಮೆಂಟ್ ಸಿಸ್ಟಂಗಳನ್ನೇ ಯಾಮಾರಿಸಿದ್ದಾರೆ.

ಕಿಡಿಗೇಡಿಗಳ ಅಟ್ಟಹಾಸ -ತೇಜಸ್ ರೈಲಿನ ಸ್ಥಿತಿ ಕಂಡ ಅಧಿಕಾರಿಗಳಿಗೆ ಆಗಿತ್ತು ಶಾಕ್..!!

ಇದಷ್ಟೇ ಅಲ್ಲದೇ ಕೆಲವು ಕಡೆ ಸ್ಕ್ರೀನ್‍ಗಳು ಜಖಂಗೊಂಡಿದ್ದು, ಕಿಡಿಗೇಡಿಗಳ ಕೃತ್ಯ ಕಂಡು ರೈಲ್ವೇ ಅಧಿಕಾರಿಗಳೇ ಶಾಕ್ ಆಗಿದ್ದಾರೆ.

ಕಿಡಿಗೇಡಿಗಳ ಅಟ್ಟಹಾಸ -ತೇಜಸ್ ರೈಲಿನ ಸ್ಥಿತಿ ಕಂಡ ಅಧಿಕಾರಿಗಳಿಗೆ ಆಗಿತ್ತು ಶಾಕ್..!!

ಸೋಮವಾರವಷ್ಟೇ ಸಚಿವ ಸುರೇಶ್ ಪ್ರಭು ಮುಂಬೈಯ ಛತ್ರಪತಿ ಶಿವಾಜಿ ಟರ್ಮಿನಲ್ ನಿಂದ ತೇಜಸ್ ರೈಲಿಗೆ ಹಸಿರು ನಿಶಾನೆ ತೋರಿದ್ದರು.

ಕಿಡಿಗೇಡಿಗಳ ಅಟ್ಟಹಾಸ -ತೇಜಸ್ ರೈಲಿನ ಸ್ಥಿತಿ ಕಂಡ ಅಧಿಕಾರಿಗಳಿಗೆ ಆಗಿತ್ತು ಶಾಕ್..!!

ಆದ್ರೆ ಸೇವೆ ಪ್ರಾರಂಭ ಮಾಡಿದ 2 ದಿನಗಳಲ್ಲೇ ಇಷ್ಟೊಂದು ಹಾನಿಯಾಗಿದ್ದು, ಕಿಡಿಗೇಡಿ ಪ್ರಯಾಣಿಕರ ಕೃತ್ಯಕ್ಕೆ ಹೊಸ ರೈಲು ಕಳೆಗುಂದಿದೆ.

ಕಿಡಿಗೇಡಿಗಳ ಅಟ್ಟಹಾಸ -ತೇಜಸ್ ರೈಲಿನ ಸ್ಥಿತಿ ಕಂಡ ಅಧಿಕಾರಿಗಳಿಗೆ ಆಗಿತ್ತು ಶಾಕ್..!!

ಇದಲ್ಲದೇ ಹೊಸ ರೈಲಿನಲ್ಲಿ ಪ್ರಯಾಣಿಕರಿಗೆ ಎಲ್ಲಾ ರೀತಿಯಲ್ಲೂ ಅನುಕೂಲಗಳಿದ್ದರು, ಎಲ್ಲೆಂದಲ್ಲೇ ತಿಂಡಿ ಪೊಟ್ಟಣಗಳನ್ನು ಬಿಸಾಕಿದ್ದು ಹೊಸ ರೈಲು ಗಬ್ಬು ನಾರುವಂತಾಗಿದೆ.

ಕಿಡಿಗೇಡಿಗಳ ಅಟ್ಟಹಾಸ -ತೇಜಸ್ ರೈಲಿನ ಸ್ಥಿತಿ ಕಂಡ ಅಧಿಕಾರಿಗಳಿಗೆ ಆಗಿತ್ತು ಶಾಕ್..!!

ಐಷಾರಾಮಿ ಪ್ರಯಾಣಕ್ಕೆ ತೇಜಸ್ ಸೇವೆ ಆರಂಭಿಸಲಾಗಿದ್ದು, ಕಿಡಿಗೇಡಿ ಪ್ರಯಾಣಿಕರಿಂದ ಆದ ದುರುಪಯೋಗ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ಕಿಡಿಗೇಡಿಗಳ ಅಟ್ಟಹಾಸ -ತೇಜಸ್ ರೈಲಿನ ಸ್ಥಿತಿ ಕಂಡ ಅಧಿಕಾರಿಗಳಿಗೆ ಆಗಿತ್ತು ಶಾಕ್..!!

ಇನ್ನು ಕಳೆದ ಸೋಮವಾರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಹೊಸ ರೈಲನ್ನು ಮುಂಬೈ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ಆದ್ರೆ ಭಾನುವಾರದಂದೇ ದುಷ್ಕರ್ಮಿಗಳು ಹೊಸ ರೈಲಿಗೆ ಕಲ್ಲು ತೂರಿ ಕಿಟಕಿ ಗಾಜನ್ನು ಜಖಂಗೊಳಿದ್ದರು.

ಕಿಡಿಗೇಡಿಗಳ ಅಟ್ಟಹಾಸ -ತೇಜಸ್ ರೈಲಿನ ಸ್ಥಿತಿ ಕಂಡ ಅಧಿಕಾರಿಗಳಿಗೆ ಆಗಿತ್ತು ಶಾಕ್..!!

ಘಟನೆ ಹಿನ್ನೆಲೆ ಪ್ರಯಾಣಿಕರಿಗೆ ಮನವಿ ಮಾಡುತ್ತಿರುವ ರೈಲ್ವೇ ಅಧಿಕಾರಿಗಳು ರೈಲಿನಲ್ಲಿ ಸ್ವಚ್ಛತೆ ಒತ್ತು ನೀಡುವಂತೆ ಮತ್ತು ಯಾವುದೇ ಹಾನಿ ಮಾಡದಂತೆ ಮನವಿ ಮಾಡುತ್ತಿದ್ದಾರೆ.

ಕಿಡಿಗೇಡಿಗಳ ಅಟ್ಟಹಾಸ -ತೇಜಸ್ ರೈಲಿನ ಸ್ಥಿತಿ ಕಂಡ ಅಧಿಕಾರಿಗಳಿಗೆ ಆಗಿತ್ತು ಶಾಕ್..!!

ಜನಶತಾಬ್ದಿ ಎಕ್ಸ್‌ಪ್ರೆಸ್‌ಗಿಂತಲೂ ಅಧಿಕ ವೇಗದಲ್ಲಿ ಚಲಿಸುವ ತೇಜಸ್, ಸದ್ಯ ಭಾರತೀಯ ರೈಲ್ವೇ ಇಲಾಖೆ ಇತಿಹಾಸದಲ್ಲೇ ಅತ್ಯಂತ ದುಬಾರಿ ಮತ್ತು ಐಷಾರಾಮಿ ಸೇವೆ ನೀಡುತ್ತಿದೆ.

Most Read Articles

Kannada
Read more on ರೈಲು train
English summary
Read in Kannada about lot of damages in new tejas express.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X