ಕಾರು ಅಚ್ಚರಿಗಳತ್ತ ಒಂದು ಇಣುಕು ನೋಟ!

By Nagaraja

ಆಟೋಮೊಬೈಲ್ ಎಂಬ ವಿಷಯವನ್ನು ತೆರೆದು ನೋಡಿದಾಗ ಹಲವಾರು ವಿಷಯಗಳು ಗಮನಕ್ಕೆ ಬರುತ್ತವೆ. ಆದರೆ ಒಂದೇ ನೋಟದಲ್ಲಿ ನಮ್ಮನ್ನು ಸೆಳೆಯುವ ವಿಷಯವೆಂದರೆ ಅದುವೇ 'ಕಾರು'.

ಇವನ್ನೂ ಓದಿ: ವಾಹನ ಜಗತ್ತಿಗೆ ಸಂಬಂಧಿಸಿದ ಕುತೂಹಲಕಾರಿ ಅಂಶಗಳು

ಹೌದು, ಇದೇ ಕಾರಣಕ್ಕಾಗಿ ವಾಹನೋದ್ಯಮದಲ್ಲಿ ಕಾರಿಗೆ ಅತಿ ಹೆಚ್ಚಿನ ಮಹತ್ವ ಕೊಡಲಾಗುತ್ತದೆ. ಇಲ್ಲಿ ನೀವು ಕೇಳರಿಯದ ಕೆಲವು ಅಚ್ಚರಿಗಳ ವಿಷಯಗಳಿವೆ. ಇವುಗಳಲ್ಲಿ ಕೆಲವನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಬಯಸುತ್ತಿದ್ದೇವೆ. ಇದು ನಿಮ್ಮ ಸಾಮಾನ್ಯ ಜ್ಞಾನ ಹೆಚ್ಚಿಸುವ ಭರವಸೆ ನಮ್ಮದ್ದು.

1. ಒಂದು ಬಿಲಿಯನ್ ಕಾರು

1. ಒಂದು ಬಿಲಿಯನ್ ಕಾರು

2010ರ ಗಣತಿಯ ಪ್ರಕಾರ ಭೂಮಂಡಲದಲ್ಲಿ ಒಂದು ಬಿಲಿಯನ್ ವಾಹನಗಳಿವೆ. ಅಲ್ಲದೆ ವರ್ಷಂಪ್ರತಿ ಇದರ ಸಂಖ್ಯೆಯಲ್ಲಿ ವರ್ಧನೆಯಾಗುತ್ತಲೇ ಇದೆ.

2. ದಿನವೊಂದರಲ್ಲಿ ಎಷ್ಟು ಕಾರುಗಳ ನಿರ್ಮಾಣ?

2. ದಿನವೊಂದರಲ್ಲಿ ಎಷ್ಟು ಕಾರುಗಳ ನಿರ್ಮಾಣ?

ಇನ್ನೊಂದು ಮಾಹಿತಿಯ ಪ್ರಕಾರ ದಿನವೊಂದರಲ್ಲಿ 1.65 ಲಕ್ಷ ಕಾರುಗಳು ತಯಾರಾಗುತ್ತಿದೆ. ಹಾಗಿದ್ದರೆ ಈ ಪ್ರಮಾಣ ವರ್ಷಕ್ಕೆ ಎಷ್ಟಾಗಿರಬಹುದು? ನೀವೇ ಊಹಿಸಿ ನೋಡಿ.

3. ಕಾರಿಗೆ ಎಷ್ಟು ಭಾಗಗಳು?

3. ಕಾರಿಗೆ ಎಷ್ಟು ಭಾಗಗಳು?

ನೀವು ಸುಂದರವಾದ ಕಾರನ್ನು ನೋಡಿರುವೀರಾ. ಅದರಲ್ಲಿ ಪಯಣದ ಸುಖ ಕೂಡಾ ಅನುಭವಿಸಿರುತ್ತೀರಾ. ಅಷ್ಟಕ್ಕೂ ಒಂದು ಸರಾಸರಿ ಕಾರು ಎಷ್ಟು ಭಾಗಗಳನ್ನು ಹೊಂದಿದೆ ಎಂಬುದು ನಿಮಗೆ ಗೊತ್ತೇ? ಹೌದು ಬರೋಬ್ಬರಿ 30,000 ಭಾಗಗಳನ್ನು ಹೊಂದಿರುತ್ತದೆ.

4. ಬ್ರೆಜಿಲ್ ಕಾರಿನ ವಿಶಿಷ್ಟತೆ

4. ಬ್ರೆಜಿಲ್ ಕಾರಿನ ವಿಶಿಷ್ಟತೆ

ಬ್ರೆಜಿಲ್‌ನಲ್ಲಿ ಮಾರಾಟವಾಗುವ ಶೇಕಡಾ 92ರಷ್ಟು ಹೊಸ ಕಾರುಗಳು ಎಥಾನಲ್ ಇಂಧನದಿಂದ ಓಡಾಡುತ್ತಿದೆ. ಅಷ್ಟಕ್ಕೂ ಇದನ್ನು ಯಾವುದರಿಂದ ತಯಾರಿಸಲಾಗುತ್ತಿದೆ ಎಂಬುದು ನಿಮಗೆ ಗೊತ್ತಿದೆಯೇ? ಹೌದು ಕಬ್ಬಿನ್ನು ಎಥೆನಾಲ್ ಇಂಧನವಾಗಿ ಪರಿವರ್ತಿಸಲಾಗುತ್ತಿದೆ.

5. ಉಚಿತ ಪೆಟ್ರೋಲ್

5. ಉಚಿತ ಪೆಟ್ರೋಲ್

ನೀವು ಕಾರು ಚಲಿಸುವುದಾದ್ದಲ್ಲಿ ತುರ್ಕಮೆನಿಸ್ತಾನದಲ್ಲಿ ಚಲಾಯಿಸಿ. ಯಾಕೆಂದರೆ ಅಲ್ಲಿ ಕಾರು ಚಾಲಕರಿಗೆ ಪ್ರತಿ ತಿಂಗಳು 120 ಲೀಟರ್ ಉಚಿತ ಪೆಟ್ರೋಲ್ ನೀಡಲಾಗುತ್ತಿದೆಯಂತೆ.

6. ಲಾಸ್ ಏಂಜಲೀಸ್ ದುರ್ಗತಿ

6. ಲಾಸ್ ಏಂಜಲೀಸ್ ದುರ್ಗತಿ

ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಅಲ್ಲಿನ ಜನಸಂಖ್ಯೆಗಿಂತಲೂ ವಾಹನಗಳ ಸಂಖ್ಯೆ ಮೀರಿದೆಯಂತೆ. ಇದು ಒಟ್ಟು ಪ್ರದೇಶದ ಶೇಕಡಾ 24ರಷ್ಟು ಪ್ರದೇಶವನ್ನು ಆವರಿಸಿದೆ.

7. ಕ್ರೂಸ್ ಕಂಟ್ರೋಲ್ ಜನಕ

7. ಕ್ರೂಸ್ ಕಂಟ್ರೋಲ್ ಜನಕ

ಕಾರಿನ ವೇಗ ನಿಯಂತ್ರಣ ಘಟಕವಾಗಿರುವ ಕ್ರೂಸ್ ಕಂಟ್ರೋಲ್ ಅಥವಾ ಸ್ಪೀಡ್ ಕಂಟ್ರೋಲ್ ಅನ್ನು 1948ನೇ ಇಸವಿಯಲ್ಲಿ ರಾಲ್ಫ್ ಟೀಟರ್ ( Ralph Teetor) ಕಂಡು ಹುಡುಕಿದ್ದಾರೆ. ಇಲ್ಲಿ ವಿಸ್ಮಯಕಾರಿ ಸಂಗತಿ ಏನೆಂದರೆ ರಾಲ್ಫ್ ಓರ್ವ ದೃಷ್ಟಿಹೀನ ವ್ಯಕ್ತಿಯಾಗಿದ್ದಾರೆ.

8. ಹೊಸ ಕಾರು

8. ಹೊಸ ಕಾರು

ಹೊಸತಾಗಿ ಖರೀದಿಸಿದ ಕಾರೊಂದು ವಿಶಿಷ್ಟ ವಾಸನೆ ಹೊಂದಿರುವುದು ನಿಮ್ಮ ಅನುಭವಕ್ಕೆ ಬಂದಿರಬಹುದು. ಇದು 50ರಷ್ಟು ಕ್ಷಣಿಕ ಜೈವಿಕ ಸಂಯುಕ್ತಗಳ ಮಿಶ್ರಣವಾಗಿದೆ. ಅದೃಷ್ಟವಶಾತ್ ಇದರಿಂದ ಮಾನವ ದೇಹಕ್ಕೆ ಯಾವುದೇ ಹಾನಿಯುಂಟಾಗುವುದಿಲ್ಲ.

9. ಮೇಡ್ ಇನ್ ಚೀನಾ

9. ಮೇಡ್ ಇನ್ ಚೀನಾ

ನಿಮಗಿದು ಗೊತ್ತೇ? ವಿಶ್ವದಲ್ಲಿ ಉತ್ಪಾದನೆಯಾಗುತ್ತಿರುವ ನಾಲ್ಕು ಕಾರುಗಳಲ್ಲಿ ಒಂದು ಚೀನಾ ದೇಶಕ್ಕೆ ಸೇರಿದ್ದಾಗಿವೆ.

 10. ವಾಹನ ಅಪರಾಧ

10. ವಾಹನ ಅಪರಾಧ

ಮೊದಲ ವಾಹನ ಅಪರಾಧ 1895ನೇ ಇಸವಿಯಲ್ಲಿ ಬ್ರಿಟನ್‌ನಲ್ಲಿ ದಾಖಲಾಗಿತ್ತು. ಕಾಕತಾಳೀಯವೆನೆಂದರೆ ಬ್ರಿಟನ್‌ನ ಮೊಟ್ಟ ಮೊದಲ ಪೆಟ್ರೋಲ್ ಚಾಲಿತ ವಾಹನ ಕಂಡುಹುಡುಕಿದ ಜಾನ್ ಹೆನ್ರಿ ನೈಟ್ ವಿರುದ್ಧವೇ ಚಾಲನಾ ಪರವಾನಗಿ ಇಲ್ಲದ ಕಾರಣಕ್ಕಾಗಿ ಇಂತಹದೊಂದು ಅಪರಾಧ ಪ್ರಕರಣ ದಾಖಲಿಸಲಾಗಿತ್ತು.

Most Read Articles

Kannada
English summary
Did you know there are 1 billion cars on earth or the inventor of cruise control was blind? Here is a list of ten cool car facts you must know.
Story first published: Thursday, November 27, 2014, 17:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X