ಮೋಕ್ಷಕ್ಕಾಗಿ ಪರಿತಪಿಸುತ್ತಿರುವ ದೈವ್ವ ಬಾಧಿತ ಹಡಗುಗಳು

By Nagaraja

ಶತಮಾನಕ್ಕಿಂತಲೂ ಹೆಚ್ಚು ಇತಿಹಾಸ ಹೊಂದಿರುವ ಸಮುದ್ರಯಾನ ಹಲವಾರು ಕಟ್ಟುಕಥೆಗಳನ್ನು ಸೃಷ್ಟಿ ಮಾಡಿವೆ. ಗಾಳ ಹಾಕಿ ಮೀನು ಹಿಡಿಯಲು ತೆರಳುವ ನಾವಿಕರು, ವ್ಯಾಪಾರದ ಅವಶ್ಯಕತೆಗಾಗಿ ಹೊಸ ದ್ವೀಪ ಅನ್ವೇಷಣೆಗಾಗಿ ತೆರಳುವ ವ್ಯಾಪಾರಿಗಳು, ಹೀಗೆ ಒಂದಲ್ಲ ಎರಡಲ್ಲ ಅನೇಕ ಉದ್ದೇಶಕ್ಕಾಗಿ ಸಮುದ್ರ ಮಾರ್ಗ ಹಿಡಿದವರಿಗೆ ಅನೇಕ ದುರಂತ ಘಟನೆಗಳು ಘಟಿಸಿ ಹೋಗಿವೆ. ಇವುಗಳ ಪೈಕಿ ಕೆಲವು ಹಡುಗುಗಳ ನಾಮಾವಶೇಷವಾದ್ದಲ್ಲಿ ಇನ್ನು ಕೆಲವು ನೂರಾರು ವರ್ಷಗಳ ಬಳಿಕ ಸಾಗರದಾಳದಲ್ಲಿ ಪತ್ತೆಯಾಗುತ್ತಿದೆ.

ಸಾಗರದಲ್ಲಿ ಉದ್ಭವಿಸುವ ಭೀಕರ ಚಂಡಮಾರುತ, ಸುಳಿ, ಮಳೆ, ಗಾಳಿಗೆ ಸಿಲುಕಿ ಅಥವಾ ಇನ್ನು ಕೆಲವು ಬಾರಿ ಕಡಲ್ಗಳ್ಳರ ದಾಳಿಯಲ್ಲಿ ಅನೇಕ ಹಡಗುಗಳು ಕಣ್ಮರೆಯಾಗಿವೆ. ಹೀಗೆ ಗುರುತಿಸಲು ಸಾಧ್ಯವಾಗದ ಅಥವಾ ಅಸ್ತಿತ್ವದಲ್ಲಿರುವಂತೆ ಭಾಸವಾಗುವ ಮೋಕ್ಷಕ್ಕಾಗಿ ಪರಿತಪಿಸುತ್ತಿರುವ ದೈವ್ವ ಬಾಧಿತ ಹಡಗುಗಳನ್ನು ಇಲ್ಲಿ ಪರಿಚಯಿಸಲಿದ್ದೇವೆ.

10. ಕ್ಯಾಲಿಯೊಕೆ

10. ಕ್ಯಾಲಿಯೊಕೆ

ದಕ್ಷಿಣ ಚಿಲಿಯ ಚಿಲೊಟಾ ಪೌರಾಣಿಕ ಕಥೆಯಲ್ಲಿ ಉಲ್ಲೇಖಿಸಿರುವಂತೆ ದೈವ್ವ ಬಲವಿರುವ ಹಡಗು ಚಿಲೊ ದ್ವೀಪ ರಾಷ್ಟ್ರವನ್ನು ಪ್ರತಿ ರಾತ್ರಿಯೂ ಸಂದರ್ಶಿಸುತ್ತದೆ. ಇಲ್ಲಿನ ಐತಿಹ್ಯ ನಂಬಿಕೆಯ ಪ್ರಕಾರ ಸಮುದ್ರದಲ್ಲಿ ಮುಳುಗಿ ಹೋಗಿರುವ ಎಲ್ಲ ಜನರ ಸಂದೇಶವವನ್ನು ಈ ಹಡಗು ಸಾರುತ್ತದೆ. ಅಲ್ಲದೆ ದ್ವೀಪದ ಹತ್ತಿರ ಸಮೀಪಿಸುವಾಗ ಗೋಚರಿಸುವ ಈ ಹಡಗು ಕ್ಷಣ ಮಾತ್ರದಲ್ಲಿ ಅದೃಶ್ಯವಾಗುತ್ತದೆ.

09. ಎಸ್ ಎಸ್ ವೆಲೆನ್ಸಿಯಾ

09. ಎಸ್ ಎಸ್ ವೆಲೆನ್ಸಿಯಾ

ಇತಿಹಾಸ ತಜ್ಞರ ಪ್ರಕಾರ, 1906ರಲ್ಲಿ ಬ್ರಿಟಿಷ್ ಕೊಲಂಬಿಯಾದ ವ್ಯಾಂಕೋವರ್ ತೀರಾ ಪ್ರದೇಶದಲ್ಲಿ ಎಸ್ ಎಸ್ ವೆಲೆನ್ಸಿಯಾ ಮುಳುಗಡೆಯಾಗಿತ್ತು. ಸಮುದ್ರಯಾನದ ವೇಳೆ ಕೆಟ್ಟ ಹವಾಮಾನದಿಂದಾಗಿ ಅವಘಡ ಸಂಭವಿಸಿದ್ದು, ಒಟ್ಟು 108 ಮಂದಿಯ ಪೈಕಿ 37 ಮಂದಿ ತಮ್ಮ ಜೀವ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು. ತದಾ ಬಳಿಕ ದಶಕದ ಬಳಿಕವೂ ಈ ನಿರ್ದಿಷ್ಟ ಪ್ರದೇಶದಲ್ಲಿ ಮೀನುಗಾರಿಕೆಗೆ ತೆರಳುವಾಗ ಹಡಗಿನ ಅಸ್ಥಿಪಂಜರದ ದರ್ಶನವಾಗುತ್ತದೆ ಎಂಬ ಬಗ್ಗೆ ಮಾಹಿತಿಗಳಿವೆ.

08. ಔರಂಗ್ ಮೆಡನ್

08. ಔರಂಗ್ ಮೆಡನ್

1947ರಲ್ಲಿ ಸ್ಟ್ರೇಟ್ ಮಲಕ್ಕದಲ್ಲಿ ಅಮೆರಿಕದ ಎರಡು ಹಡಗುಗಳು ಅವಘಡಕ್ಕೀಡಾಗಿದ್ದವು. ಹಡಗಿನಲ್ಲಿ ಸಂಚರಿಸುತ್ತಿದ್ದ ನಾವಿಕರು ಸೇರಿದಂತೆ ಸಾಕುಪ್ರಾಣಿಗಳು ಸಾವಿಗೆ ಶರಣಾಗಿದ್ದವು. ಬಳಿಕ ಹಡಗು ಸಂಪೂರ್ಣ ಅಗ್ನಿಗೆ ಆಹುತಿಯಾಗಿತ್ತು. ಇವೆಲ್ಲವೂ ಭಾರಿ ಊಹಪೋಹಗಳನ್ನು ಸೃಷ್ಟಿ ಮಾಡಿದೆ.

07. ಕ್ಯಾರೊಲ್ ಎ ಡೀರಿಂಗ್

07. ಕ್ಯಾರೊಲ್ ಎ ಡೀರಿಂಗ್

1921ರಲ್ಲಿ ಉತ್ತರ ಕರೊಲಿನಾದ ಕೇಪ್ ಹ್ಯಾಟರಾಸ್ ಬಳಿ ಕುಖ್ಯಾತ ಡೈಮಂಡ್ ಶೋಲ್ಸ್ ಬಳಿ ಸಂಚರಿಸುತ್ತಿದ್ದ ಹಡಗು ದುರಂತಕ್ಕೀಡಾಗಿತ್ತು. ಇದೇ ಸಮಯದಲ್ಲಿ ಇನ್ನಿತರ ಅನೇಕ ಹಡಗುಗಳು ಸಂಶಯತ್ಮಾಕ ರೀತಿಯಲ್ಲಿ ಕಣ್ಮರೆಯಾಗಿರುವುದರ ರಹಸ್ಯ ಭೇದಿಸಲು ಇಂದಿಗೂ ಸಾಧ್ಯವಾಗಲಿಲ್ಲ.

06. ಬೇಚಿಮೊ

06. ಬೇಚಿಮೊ

1920ರ ದಶಕದಲ್ಲಿ ನಿರ್ಮಿತ ಬೇಚಿಮೊ ಹಡಗು 1931ರಲ್ಲಿ ಅಲಸ್ಕಾ ಮಂಜುಗಡ್ಡೆಯಿಂದ ಆವೃತ್ತವಾದ ಸಾಗರದಲ್ಲಿ ಅವಘಡಕ್ಕೀಡಾಗಿತ್ತು. ಮುಂದಿನ ಹಲವಾರು ವರ್ಷಗಳ ಕಾಲ ಇದೇ ಪ್ರದೇಶದಲ್ಲಿ ಹಡಗು ಅಲೆದಾಡುತ್ತಿದ್ದವು ಎಂಬುದಕ್ಕೆ ಉಲ್ಲೇಖಗಳಿವೆ.

05. ಒಕ್ಟವಿಯಸ್

05. ಒಕ್ಟವಿಯಸ್

1775ರ ಲೆಜೆಂಡ್ ಹಡಗು ಒಕ್ಟವಿಯಸ್ ಗ್ರೀನ್ ಲ್ಯಾಂಡ್ ನ ಅತ್ಯಂತ ಶೀತ ವಲಯದಲ್ಲಿ ದುರಂತಕ್ಕೀಡಾಗಿತ್ತು ಎಂದು ಮೂಲಗಳು ತಿಳಿಸುತ್ತದೆ. 13 ವರ್ಷಗಳ ಕಾಲ ನಿರಂತರ ಸಮುದ್ರಯಾನದಲ್ಲಿ ತೊಡಗಿದ್ದ ಈ ಹಡಗು ನಾಪತ್ತೆಯಾಗಿರುವ ಹಡಗುಗಳ ಸಾಲಿನಲ್ಲಿ ಸೇರಿಕೊಂಡಿದೆ.

04. ಜೊಯಿಟಾ

04. ಜೊಯಿಟಾ

1955ರಲ್ಲಿ ದಕ್ಷಿಣ ಫೆಸಿಫಿಕ್ ನಲ್ಲಿ ನಾಪತ್ತೆಯಾದ ಹಡಗೊಂದು ಪತ್ತೆಯಾಗಿತ್ತು. ಆದರೆ ಇದರ ಬಗೆಗಿನ ನೈಜ ವರದಿಗಳು ಅಲಭ್ಯ. ಹಡಗಿನಿಂದ ಹಲವಾರು ವಸ್ತುಗಳನ್ನು ಪಡೆಯಲು ಸಾಧ್ಯವಾದರೂ ಯಾರೆಲ್ಲ ಸಂಚರಿಸಿದ್ದರು ಎಂಬುದು ಕಟ್ಟುಕಥೆಯಾಗಿಯೇ ಉಳಿದಿದೆ.

03. ಲೇಡಿ ಲಾವಿಬಾಂಡ್

03. ಲೇಡಿ ಲಾವಿಬಾಂಡ್

ಪ್ರೇಮ, ಅಸೂಯೆ, ಕ್ರೋಧ ಸೇರಿದ ತ್ರಿಕೋನ ಪ್ರೇಮ ಕಥೆಯ ಮಿಶ್ರಣವಾಗಿ ಲೇಡಿ ಲಾವಿಬಾಂಡ್ ಗುರುತಿಸಿಕೊಂಡಿದೆ. 1748ರಲ್ಲಿ ವ್ಯಾಲೆಂಟಿನ್ಸ್ ಡೇ ಒಂದು ದಿನ ಮುಂಚಿತವಾಗಿ ಹಡಗಿನ ಕ್ಯಾಪ್ಟನ್ ವಿವಾಹ ನಿಶ್ಚಿಯಿಸಲಾಗಿತ್ತು. ಆದರೆ ಆಕೆಯನ್ನು ಪ್ರೀತಿಸುತ್ತಿದ್ದ ಕ್ಯಾಪ್ಟನ್‌ನ ಸ್ನೇಹಿತ ಹಡಗನ್ನೇ ಎತ್ತಂಗಡಿ ಮಾಡುವ ಪ್ರಯತ್ನ ಮಾಡಿದ್ದನು. ಕೊನೆಗೆ ಎಲ್ಲರೂ ಹಡಗು ದುರಂತಕ್ಕೆ ಶರಣಾಗಿದ್ದರು.

02. ಮೇರಿ ಸೆಲೆಸ್ಟ್

02. ಮೇರಿ ಸೆಲೆಸ್ಟ್

1872ನೇ ಇಸವಿಯಲ್ಲಿ ಅಟ್ಲಾಂಟಿಕಾ ಸಾಗರದಲ್ಲಿ ಪತ್ತೆಯಾದ ಹಡಗಿಗೆ ಯಾವುದೇ ಹಾನಿ ಸಂಭವಿಸದಿರುವುದು ಅಚ್ಚರಿ ಮೂಡಿಸಿತ್ತು. ಇದರಲ್ಲಿ 1500ರಷ್ಟು ಮದ್ಯ ಬಾಟಲಿಗಳು ಪತ್ತೆಯಾಗಿದ್ದವು. ಆದರೆ ಇದರಲ್ಲಿರುವ ಲೈಫ್ ಬೋಟ್ ಮತ್ತು ಸಿಬ್ಬಂದಿ ವರ್ಗದವರು ನಾಪತ್ತೆಯಾಗಿದ್ದರು. ಹಾಗಾಗಿ ಕಡಲ್ಗಳ್ಳರ ದಾಳಿಗೆ ಒಳಗಾಗಿರಬಹುದೆಂದು ಅಂದಾಜಿಸಲಾಗಿದೆ.

01. ಫ್ಲೈಯಿಂಗ್ ಡಚ್ ಮ್ಯಾನ್

01. ಫ್ಲೈಯಿಂಗ್ ಡಚ್ ಮ್ಯಾನ್

ಪೂರ್ವ ವಿಂಡೀಸ್ ನಲ್ಲಿ ಫ್ಲೈಯಿಂಗ್ ಡಚ್ ಮ್ಯಾನ್ ಕ್ಯಾಪ್ಟನ್ ಹವಾಮಾನ ವೈಪರೀತ್ಯದ ನಡುವೆಯೂ ಸಂಚರಿಸಲು ಯತ್ನಿಸಿದರೂ ಕೇಪ್ ಆಪ್ ಗುಡ್ ಹಾಪ್ ತಲುಪಿದಾಗ ಕೊನೆಗೂ ಸಾವಿಗೂ ಶರಣಾಗಲೇ ಬೇಕಾಯಿತು. ಇಲ್ಲಿ ಸಾಹಸ ಈಜಾಟಕ್ಕೆ ಹಾಗೂ ಮೀನುಗಾರಿಕೆಗೆ ತರಳುವರ ಪ್ರಕಾರ ಇಂದಿಗೂ ಈ ಹಡಗಿನ ದರ್ಶನವಾಗುತ್ತಿದೆ.

Most Read Articles

Kannada
English summary
Ten Mysterious Ghost Ships around the world
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X