ತರ್ಕಕ್ಕೆ ನಿಲುಕದ್ದು: ಹಳೆಯ ಕಾರುಗಳ 10 ಆಘಾತಕಾರಿ ಸತ್ಯಗಳು!

By Nagaraja

ಹೊಸ ಕಾರುಗಳನ್ನು ನಾವು ಬಹಳ ಸಂತೋಷದಾಯಕವಾಗಿಯೇ ಬರಮಾಡಿಕೊಳ್ಳುತ್ತೇವೆ. ಹೊಸ ಹೊಸ ತಂತ್ರಜ್ಞಾನಗಳು ಅವಿಷ್ಕಾರವಾದಂತೆ ಹಳೆಯ ಕಾರುಗಳು ಬದಿಗೆ ಸರಿಸಲ್ಪಟ್ಟಿವೆ.

Also Read : ವಾಹನ ಲೋಕದ 25 ಸತ್ಯಾಸತ್ಯತೆಗಳ ಬಗ್ಗೆ ಅರಿಯಿರಿ

ಆದರೂ ಇಂದಿಗೂ ಹಳೆಯ ಕಾರುಗಳಲ್ಲಿ ಮಾತ್ರ ಕಂಡುಬರುವ ಕೆಲವು ಆಘಾತಕಾರಿ ತಂತ್ರಜ್ಞಾನಗಳನ್ನು ನಾವು ಒಪ್ಪಿಕೊಳ್ಳಲೇಬೇಕಾಗುತ್ತದೆ. ಇಂದಿನ ಈ ಲೇಖನದಲ್ಲಿ ತರ್ಕಕ್ಕೆ ನಿಲುಕದ ಹಳೆಯ ಕಾರುಗಳಲ್ಲಿ ಮಾತ್ರ ಕಂಡುಬರುವ 10 ಅತಿ ವಿಶಿಷ್ಟ ತಂತ್ರಜ್ಞಾನಗಳ ಬಗ್ಗೆ ಹೇಳಿಕೊಡುವ ಪ್ರಯತ್ನ ಮಾಡಲಾಗುವುದು. ವಿಶಿಷ್ಟತೆಗೆ ಕಾರಣವಾಗಿರುವ ಇಂತಹ ತಂತ್ರಜ್ಞಾನಗಳ ಬಗ್ಗೆ ನಿಮಗೂ ತಿಳಿದಿದ್ದಲ್ಲಿ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಉಲ್ಲೇಖಿಸಲು ಮರೆಯದಿರಿ.

10. ನಾಯಿಗಾಗಿ ಗೋಣಿಚೀಲ

10. ನಾಯಿಗಾಗಿ ಗೋಣಿಚೀಲ

ಆಧುನಿಕ ಕಾರುಗಳಲ್ಲಿ ಶ್ವಾನ ಪಯಣ ಶ್ರೀಮಂತ ಜೀವನಶೈಲಿಯ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಆದರೆ 1935ರಲ್ಲೇ ನಾಯಿಗಳ ಪಯಣಕ್ಕಾಗಿ ನಾವೀನ್ಯ ತಂತ್ರಜ್ಞಾನ ಹೊರತರುವ ಪ್ರಯತ್ನ ಮಾಡಲಾಗಿತ್ತು. ಆದರೆ ಎಲ್ಲೂ ಯಶಸ್ಸು ಸಿಗಲಿಲ್ಲ. ಕಾರಿನ ಡೋರ್‌ನ ಹೊರಗಡೆ ಲಗ್ಗತ್ತಿಸಲಾಗುವ ಗೋಣಿಚೀಲದಲ್ಲಿ (ಚಿತ್ರದಲ್ಲಿ ತೋರಿಸಿರುವಂತೆಯೇ) ನಿಮ್ಮ ಶ್ವಾನವನ್ನು ಕೂರಿಸಿಕೊಳ್ಳಬಹುದಾಗಿದೆ. ಇದರಿಂದ ಕಾರಿಗೆ ಕೊಳಕಾಗಲಿದೆ ಅಥವಾ ಇನ್ಯಾವುದೇ ಸಮಸ್ಯೆ ಸೃಷ್ಟಿಯಾಗಲಿದೆಯೆಂಬ ಭೀತಿಯಿರುವುದಿಲ್ಲ.

09. ಕಾರಲ್ಲೇ ಮಿನಿಬಾರ್

09. ಕಾರಲ್ಲೇ ಮಿನಿಬಾರ್

ಈಗೆಲ್ಲ ಮದ್ಯ ಸೇವಿಸಿ ಕಾರು ಚಾಲನೆ ಮಾಡುವುದು ಅಪರಾಧವಾಗಿರಬಹುದು. ಇದರ ಶಿಕ್ಷೆ ಬೇರೆಯೇ ಇರಬಹುದು. ಆದರೆ ಅಂತಹದೊಂದು ಕಾಲವಿತ್ತು. 1957ರ ಹೊರಬಂದ ಕ್ಯಾಡಿಲಿಕ್ ಎಲ್ಡೊರಾಡೊ ಬ್ರೌಹ್ಮಂ ಗಾಡಿಯಲ್ಲಿ ಮಿನಿ ಬಾರ್ ನಂತಹ ಸೌಲಭ್ಯಗಳಿದ್ದವು. ಕಾರಿನ ಗ್ಲೋವ್ ಬಾಕ್ಸ್ ಜಾಗದಲ್ಲಿ ಇಂತಹದೊಂದು ಸೇವೆ ನೀಡಲಾಗಿತ್ತು. ಇಂತಹ ತಂತ್ರಗಾರಿಕೆ ಈಗಲೂ ಇರುತ್ತಿದ್ದರೇ?

08. ಹಿಟ್ ಆ್ಯಂಡ್ ರನ್ ಕೇಸ್

08. ಹಿಟ್ ಆ್ಯಂಡ್ ರನ್ ಕೇಸ್

ಆಗಿನ ಕಾಲದಲ್ಲೇ ಹಿಟ್ ಆ್ಯಂಡ್ ರನ್ ಕೇಸ್ ಗಳು ಬಹಳ ಪ್ರಚಲಿತದಲ್ಲಿದ್ದವು. ಇದನ್ನು ನಿಯಂತ್ರಿಸಲು 1931ರಲ್ಲಿ ಪೋಪುಲರ್ ಮೆಕಾನಿಕ್ಸ್ ನಾವೀನ್ಯ ತಂತ್ರಜ್ಞಾನವನವೊಂದನ್ನು ಹೊರ ತಂದಿತ್ತು. ಇದರಂತೆ ಯಾರೆ ಕಾರಿಗೆ ಢಿಕ್ಕಿ ಹೊಡೆದು ಪಲಾಯನಗೈಯಲು ಯತ್ನಿಸಿದ್ದಲ್ಲಿ ಬಂಪರ್ ಮೇಲೆ ಆಳವಡಿಸಲಾಗಿರುವ ವಿಶೇಷ ಡಿಸ್ಕ್ ಹೊರನೂಕುವ ಮೂಲಕ ಢಿಕ್ಕಿ ಹೊಡೆದ ಕಾರಿನ ಚಾಲಕ ಹಾಗೂ ಆತನ ಕಾರಿನ ಲೈಸನ್ಸ್ ನಂಬರ್ ಗುರುತಿಸುವಲ್ಲಿ ಸಾಧ್ಯವಾಗುತ್ತಿತ್ತು. ಆದರೆ ನೈಜ ಪರಿಸ್ಥಿತಿಯಲ್ಲಿ ಇದರ ಯಶಸ್ಸು ಸೀಮಿತವಾಗಿದ್ದರಿಂದ ಈ ತಂತ್ರಜ್ಞಾನ ಕೆಲವೇ ಸಮಯಗಳಲ್ಲಿ ಕಣ್ಮರೆಯಾಗಿತ್ತು.

07. ಉಭಯಚರ ಗಾಡಿ

07. ಉಭಯಚರ ಗಾಡಿ

ನೆಲದಲ್ಲೂ ನೀರಲ್ಲೂ ಸಂಚರಿಸಬಲ್ಲ ಉಭಯಚರ ಆಂಪಿಕಾರ್ ಗಳನ್ನು 1961ನೇ ಇಸವಿಯಲ್ಲೇ ಹೊರತರಲಾಗಿತ್ತು. ಆದರೆ ಇದರ ಯಶಸ್ಸು ಕೇವಲ ನಾಮ ಮಾತ್ರವಾಗಿತ್ತು. ಏನೇ ಆದರೂ ಇಂತಹದೊಂದು ಹೊಸ ತಂತ್ರಜ್ಞಾನಕ್ಕೆ ಹಾಟ್ಸಪ್ ಹೇಳಲೇಬೇಕು.

06. ತಿಚಕ್ರ ಕಾರು

06. ತಿಚಕ್ರ ಕಾರು

ಬ್ರಿಟನ್ ನ ರಾಬಿನ್ಸ್ ಎಂಬವರು ಆಟೋ ರಿಕ್ಷಾಗಳಿಗೆ ಸಮಾನವಾಗಿ ತ್ರಿಚಕ್ರಗಳ ಕಾರನ್ನು ಹೊರತಂದಿದ್ದರು. ಮೂರು ಚಕ್ರಗಳಾಗಿದ್ದರಿಂದ ಇದು ಮೋಟಾರ್ ಸೈಕಲ್ ವಿಭಾಗದಲ್ಲಿ ಪರವಾನಗಿ ಗಿಟ್ಟಿಸಿಕೊಂಡಿತ್ತು. ಅಲ್ಲದೆ ಅತಿ ಕಡಿಮೆ ಬೆಲೆಯಲ್ಲಿ ರಿಜಿಸ್ಟ್ರೇಷನ್ ಪಡೆಯುವಲ್ಲಿ ಯಶಸ್ಸಿಯಾಗಿತ್ತು. ಆದರೆ ಏನೇ ಮಾಡಿ ಏನು ಪ್ರಯೋಜನ ಹೇಳಿ ನೋಡೋಣ? ಅತ್ತ ಕಾರು ಅಲ್ಲ ಇತ್ತ ಆಟೋ ರಿಕ್ಷಾವೂ ಅಲ್ಲದ ಈ ವಾಹನವು ತಿರುವುಗಳಲ್ಲಿ ಮಕಾಡೇ ಮಲಗಿತ್ತು. ಹೇಗೆ ಅಂತೀರಾ? ಕೊನೆಯಲ್ಲಿ ಕೊಟ್ಟಿರುವ ವೀಡಿಯೊ ವೀಕ್ಷಿಸಿ

05. ಸ್ಟೀರಿಂಗ್ ವೀಲ್

05. ಸ್ಟೀರಿಂಗ್ ವೀಲ್

1965ರಲ್ಲಿ ದೊಡ್ಡದಾದ ಸ್ಟೀರಿಂಗ್ ವೀಲ್ ಗಳ ಬದಲು ಡ್ಯಾಶ್ ಬೋರ್ಡ್ ನಲ್ಲಿ ಸುಲಭವಾಗಿ ನಿರ್ವಹಿಸಬಹುದಾದ ಹಾಗೂ ಹೆಚ್ಚು ಗೋಚರತೆಯನ್ನು ಪ್ರದಾನ ಮಾಡಬಹುದಾದ ಸ್ಕೂಟರ್ ಶೈಲಿಯ ಸ್ಟೀರಿಂಗ್ ವೀಲನ್ನು ಫೋರ್ಡ್ ಪರಿಚಯಿಸಿತ್ತು. ಆದರೆ ಈ ಅತಿಬುದ್ಧಿವಂತಿಕೆಯು ಸಹ ವೈಫಲ್ಯ ಅನುಭವಿಸಿದ ತಂತ್ರಜ್ಞಾನಗಳ ಸಾಲಿನಲ್ಲಿ ಸೇರಿವೆ ಎಂಬುದನ್ನು ವಿಶೇಷವಾಗಿ ಹೇಳುವ ಅಗತ್ಯವಿಲ್ಲ ತಾನೇ?

04. ತಿರುಗುವ ಸೀಟು

04. ತಿರುಗುವ ಸೀಟು

1961ರ ಬ್ಯೂಕ್ ಫ್ಲೇಮಿಂಗೊ ಮೊಟೊರಾಮಾ ಶೋ ಕಾರಿನಲ್ಲಿ ತಿರುಗುವ ಸೀಟುಗಳನ್ನು ಮೊದಲ ಬಾರಿಗೆ ಪರಿಚಯಿಸಲಾಗಿತ್ತು. 180 ಡಿಗ್ರಿಯಲ್ಲಿ ತಿರುಗಬಲ್ಲ ಈ ವಿಶೇಷ ಪಿಂಕ್ ಬಣ್ಣದ ಓಪನ್ ಟಾಪ್ ಕಾರು ಸೀಟುಗಳು ಪ್ರಯಾಣಿಕರಲ್ಲಿ ವಿಶಿಷ್ಟ ಅನುಭವಕ್ಕೆ ಕಾರಣವಾಗಿತ್ತು.

03. ವೈ-ಫೈಗಿಂತಲೂ ಮೊದಲು ಹೈ-ಫೈ

03. ವೈ-ಫೈಗಿಂತಲೂ ಮೊದಲು ಹೈ-ಫೈ

ಇದು ವೈ-ಫೈ ಜಾಮಾನಾ. ಆದರೆ ವೈ-ಫೈಗಿಂತ ಮೊದಲು 1956ರಲ್ಲಿ ಸಂಗೀತ ಆಲಿಸುವ ನಿಟ್ಟಿನಲ್ಲಿ ಕ್ಲೈಸ್ಲರ್, ಡೆಸೊಟೊ, ಡೊಡ್ಜ್ ಹಾಗೂ ಪ್ಲೈಮೌತ್ ಗಳಂತಹ ಕಾರುಗಳಲ್ಲಿ ಸುಲಭವಾಗಿ ಕಾರ್ಯನಿರ್ವಹಿಸಬಹುದಾದ ಹೈವೇ ಹೈ-ಫೈಗಳನ್ನು ಪರಿಚಯಿಸಲಾಗಿತ್ತು.

02. ಬಾಗಿಸಬಹುದಾದ ಸ್ಟೀರಿಂಗ್ ವೀಲ್

02. ಬಾಗಿಸಬಹುದಾದ ಸ್ಟೀರಿಂಗ್ ವೀಲ್

1961ರಲ್ಲಿ ಫೋರ್ಡ್ ಸಂಸ್ಥೆಯು ಟಿ ಬರ್ಡ್ ಕಾರಿನಲ್ಲಿ ಮಗದೊಂದು ಅತಿ ನೂತನ ಸ್ವಿಂಗ್-ಎವೇ ಸ್ಟೀರಿಂಗ್ ವೀಲ್ ಅನ್ನು ಪರಿಚಯಿಸಿತ್ತು. 10.5 ಇಂಚುಗಳ ವರೆಗೆ ಬಾಗಿಸಬಹುದಾದ ಈ ಸ್ಟೀರಿಂಗ್ ವೀಲ್ (ಚಿತ್ರದಲ್ಲಿ ತೋರಿಸಿರುವಂತೆಯೇ) ಚಾಲಕರಿಗೆ ಸುಲಭವಾಗಿ ಕಾರಿನ ಒಳಗೆ ಪ್ರವೇಶಿಸಲು ಹಾಗೂ ಹೊರ ಹೋಗುವ ಉದ್ದೇಶದೊಂದಿಗೆ ನಿರ್ಮಿಸಲಾಗಿತ್ತು.

01. ಪ್ರಕಾಶಿಸುವ ಚಕ್ರಗಳು

01. ಪ್ರಕಾಶಿಸುವ ಚಕ್ರಗಳು

1961ನೇ ಇಸವಿಯಲ್ಲಿ ಗುಡ್ ಇಯರ್ ಕಾರುಗಳಲ್ಲಿ ಅತಿ ನೂತನ ಪ್ರಕಾಶಿಸುವ ಚಕ್ರಗಳನ್ನು ಪರಿಚಯಿಸಿತ್ತು. ಆದರೆ ಯಾಕೋ ವಾಹನ ಪ್ರೇಮಿಗಳನ್ನು ಆಕರ್ಷಿಸುವಲ್ಲಿ ಮಾತ್ರ ವಿಫಲವಾಗಿತ್ತು.

ಮತ್ತಷ್ಟು...

ವಾಹನಗಳಿಗೆ ಸಂಬಂಧಿಸಿದ 10 ರೋಚಕ ಸತ್ಯಗಳು

ಯೇಸು ಕ್ರಿಸ್ತನ ಬಳಿಯೂ ಲೈಸನ್ಸ್ ಇತ್ತು

ರೋಚಕ ವೀಡಿಯೋ ವೀಕ್ಷಿಸಿ


Most Read Articles

Kannada
English summary
10 Weird Features Of Old Cars
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X