ವೆಟರನ್ಸ್ ಡೇ; ಆರ್ಮಿ ಅವತಾರದಲ್ಲಿ ಟೆಸ್ಲಾ ಮಾಡೆಲ್ ಎಸ್

By Nagaraja

ಅಮೆರಿಕದಲ್ಲಿ ಪ್ರತಿ ವರ್ಷವೂ ನವೆಂಬರ್ 11ರಂದು 'ವೆಟರನ್ಸ್ ಡೇ' ಅಥವಾ ಸೈನಿಕ ದಿನಾಚರಣೆಯನ್ನು ಆಚರಿಸಲಾಗುತ್ತದೆ. ವೆಟರನ್ಸ್ ಡೇರಂದು ಅಮೆರಿಕದಲ್ಲಿ ಅಧಿಕೃತ ರಜಾದಿನವಾಗಿದ್ದು, ಅಮೆರಿಕ ಸೇನೆಗಾಗಿ ಸೇವೆ ಸಲ್ಲಿಸಿದ ಸೈನಿಕರನ್ನು ಗೌರವಿಸಲಾಗುತ್ತದೆ.

ಪ್ರತಿ ವರ್ಷದಂತೆ ಈ ವರ್ಷವೂ ವೆಟರನ್ಸ್ ಡೇ ಹಲವಾರು ಕಾರಣಗಳಿಂದಾಗಿ ಗಮನ ಕೇಂದ್ರಿತವಾಗಿತ್ತು. ಯಾಕೆಂದರೆ ಅಮೆರಿಕ ಮೂಲದ ವಾಹನ ತಯಾರಕ ಸಂಸ್ಥೆಯೇ ಆಗಿರುವ ಟೆಸ್ಲಾ ಮೋಟಾರ್ಸ್ ದೇಶಕ್ಕೆ ಸೇವೆ ಸಲ್ಲಿಸಿದ ಸೈನಿಕರಿಗೆ ವಿನೂತನ ಕೊಡುಗೆಯೊಂದನ್ನು ನೀಡಿತ್ತು.

ಟೆಸ್ಲಾ ಮೋಟಾರ್ಸ್ ಅಮೆರಿಕ ಮೂಲದ ವಾಹನ ತಯಾರಿಕ ಸಂಸ್ಥೆಯಾಗಿದ್ದು ಎಲೆಕ್ಟ್ರಿಕ್ ಕಾರು ನಿರ್ಮಾಣದಲ್ಲಿ ಹೆಚ್ಚು ಹೆಸರುವಾಸಿಯಾಗಿದೆ.

ಪ್ರಸ್ತುತ ಎಸ್‌ಎಸ್ ಕಸ್ಟಮ್ಸ್ ಜೊತೆ ಕೈಜೋಡಿಸಿಕೊಂಡಿರುವ ಟೆಸ್ಲಾ, ಆರ್ಮಿ ಶೈಲಿಯ ವಿನೂತನ ಮಾಡೆಸ್ ಎಸ್ ಕಾರನ್ನು ನಿರ್ಮಿಸಿತ್ತು.

ಅಮೆರಿಕ ಸೈನಿಕರ ಪಾಲಿಗೆ ಅತ್ಯಂತ ದೊಡ್ಡ ಉದ್ಯೋಗದಾತ ಎನಿಸಿಕೊಳ್ಳುವುದು ಸಂಸ್ಥೆಯ ಗುರಿಯಾಗಿದೆ.

ಸಂಪೂರ್ಣ ಆರ್ಮಿ ಶೈಲಿ ಹೊಂದಿರುವ ಕಾರನ್ನು ಟೆಸ್ಲಾ ಅಮೆರಿಕ ವೆಟರನ್ಸ್‌ಗಾಗಿ ಅರ್ಪಿಸಿದೆ.


ಇದರಲ್ಲಿ ಹಸಿರು ಬಣ್ಣದ ಅಲಾಯ್ ವೀಲ್ಸ್, ಹಳದಿ ಬಣ್ಣದ ಹೆಡ್‌ಲೈಟ್‌ಗಳು ಮುಂತಾದ ವೈಶಿಷ್ಟ್ಯಗಳು ಕಾಣಬಹುದು.

ಕಾರಿನ ಮೇಲ್ಗಡೆ ಲಗ್ಗತ್ತಿಸಲಾಗಿರುವ ರೂಫ್ ಬಾಸ್ಕೆಟ್ ಪ್ರಮುಖ ಆಕರ್ಷಣೆಯಾಗಿದೆ. ಇದರಲ್ಲಿ ಮೆಡಿಕಲ್ ಕಿಟ್, ಕಾರ್ಗೊ ನೆಟ್ ಮುಂತಾದ ಅತ್ಯಾವಶ್ಯಕ ವಸ್ತುಗಳನ್ನು ಇಡಲಾಗಿದೆ.

ಈಗಾಗಲೇ ಟೆಸ್ಲಾದಲ್ಲಿರುವ ಶೇಕಡಾ ಐದರಷ್ಟು ಸಿಬ್ಬಂದಿ ವರ್ಗದವರು ಸೇನೆಗೆ ಸೇರಿದವರಾಗಿದ್ದಾರೆ.

ಅಲ್ಲದೆ ನಿಕಟ ಭವಿಷ್ಯದಲ್ಲೇ ಇನ್ನು ಹೆಚ್ಚುವರಿ 600ರಷ್ಟು ಸೈನಿಕರನ್ನು ತಮ್ಮ ಸಂಸ್ಥೆಗೆ ಸೇರಿಕೊಳ್ಳುವ ಇರಾದೆಯನ್ನು ಹೊಂದಿದೆ.

ಈ ಎಲ್ಲದರ ಮೂಲಕ ಟೆಸ್ಲಾ ಸಂಸ್ಥೆಯು ಆರ್ಮಿ ಶೈಲಿಯ ಮಾಡೆಲ್ ಎಸ್ ನಿರ್ಮಿಸುವ ಮೂಲಕ ಅಮೆರಿಕ ವೆಟರನ್ಸ್ ಡೇಗೆ ತಮ್ಮ ಕಾಣಿಕೆಯನ್ನು ಸಲ್ಲಿಸಿದೆ.

Image Courtsey: sscustomsweb

Most Read Articles
 
English summary
Tesla Motors teamed up with SS Customs to custom wrap a Model S in army camo.
Please Wait while comments are loading...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X