ಜಗತ್ತಿನ ದುಬಾರಿ ಬೈಕ್‌ಗಳು ಯಾವವು ಗೊತ್ತಾ..!!

Written By:

ಜಗತ್ತಿನ ದುಬಾರಿ ಬೈಕ್‌ಗಳು ಯಾವವು ಎಂಬುವುದರ ಬಗ್ಗೆ ತಿಳಿಯಲು ಪ್ರತಿ ಒಬ್ಬರಿಗೂ ಕುತೂಹಲ ಇದ್ದೇ ಇರುತ್ತೆ. ಅಂತಹ ಇಂಟ್ರೆಸ್ಟಿಂಗ್ ಮಾಹಿತಿಯನ್ನು ಇಲ್ಲಿ ಸಂಗ್ರಹಿಸಲಾಗಿದ್ದು, ಅವುಗಳ ಬೆಲೆಗಳು ಮತ್ತು ವೈಶಿಷ್ಟ್ಯತೆಗಳನ್ನು ಪರಿಗಣಿಸಿ ದುಬಾರಿ ಬೈಕ್‌ಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಸಂಗ್ರಹಿಸಲಾಗಿದೆ.

ಏನೆರ್ಗಿಕ್ ಈಗೋ 45
ಇಟಾಲಿಯನ್ ಮೂಲದ ಬೈಕ್ ಉತ್ಪಾದನಾ ಸಂಸ್ಥೆಗಳಲ್ಲಿ ಒಂದಾಗಿರುವ ಏನೆರ್ಗಿಕ್, ಸೂಪರ್ ಬೈಕ್‌ಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಮುಂಚೂಣಿಯಲ್ಲಿದೆ. ಹೊಸ ವೈಶಿಷ್ಟ್ಯತೆಗಳೊಂದಿಗೆ ಸಿದ್ಧಗೊಂಡಿರುವ ಈಗೋ 45 ಬೈಕ್ ಮಾದರಿಯನ್ನು ಸದ್ಯ ಜಗತ್ತಿನ ಟಾಪ್ ಬೈಕ್‌ಗಳಲ್ಲಿ ಒಂದಾಗಿ ಪರಿಗಣಿಸಲಾಗಿದ್ದು, ಎಲೆಕ್ಟ್ರಿಕ್ ಮಾದರಿ ಹೊಂದಿರುವ ಇದರ ಬೆಲೆ 45.21 ಲಕ್ಷ ರೂಪಾಯಿ.

ಡುಕಾಟಿ 1098 ಸೂಪರ್ ಬೈಕ್

ಸೂಪರ್ ಬೈಕ್‌ಗಳಲ್ಲಿ ಒಂದಾಗಿರುವ ಡುಕಾಟಿ 1098 ಮಾದರಿಯೂ ಜಗತ್ತಿನ ಟಾಪ್ ಬೈಕ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಇದರ ಬೆಲೆ48 ಲಕ್ಷ ರೂಪಾಯಿಗಳಲ್ಲಿದ್ದು, ಬಾಲಿವುಡ್‌ನ ಬಹುಕತೇಕ ನಟರ ಬಳಿ ಈ ಬೈಕ್ ಇದೆ.

ಆರ್ಚ್ ಮೋಟಾರ್‌ ಸೈಕಲ್ ಕೆಆರ್‌ಜಿಟಿ-1
ಕೀನು ರೀವೇ ಮತ್ತು ಗಾರ್ಡ್ ಹೊಲೀಂಗರ್ ಎಂಬುವರಿಂದ ಸಿದ್ಧಗೊಂಡಿರುವ ಆರ್ಚ್ ಮೋಟಾರ್‌ ಸೈಕಲ್ ಕೆಆರ್‌ಜಿಟಿ-1 ಬೈಕ್, 2032 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿದೆ. ಇದರ ಜೊತೆಗೆ ಟಿ124 ವಿ-ಟ್ವಿನ್ ಸಿಲಿಂಡರ್ ಎಂಜಿನ್ ಕೂಡಾ ಹೊಂದಿದ್ದು, ಇದರ ಪ್ರಸ್ತುತ ಬೆಲೆ ರೂ. 51.66 ಲಕ್ಷ ಮಾತ್ರ.

ಹೆಲ್‌ಕ್ಯಾಟ್ ಎಕ್ಸ್-132

2163 ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿರುವ ಲಗ್ಷುರಿ ಬೈಕ್, ಹೆಲ್‌ಕ್ಯಾಟ್ ಎಕ್ಸ್-132 ಬೈಕ್ ದುಬಾರಿ ಬೈಕ್ ಕೂಡಾ ಹೌದು. ಭಾರತೀಯ ಮಾರುಕಟ್ಟೆಯಲ್ಲಿ ಇದರ ಬೆಲೆ 65ಲಕ್ಷ ರೂಪಾಯಿಗಳಿದ್ದು, ಕ್ರಿಕೆಟರ್ ಎಂ.ಎಸ್.ಧೋನಿ ಕೂಡಾ ಈ ಬೈಕ್ ಖರೀದಿ ಮಾಡಿದ್ದಾರೆ. 

ಸುಟೆರ್ ಎಂಎಂಎಕ್ಸ್ 500
ವಿಶಿಷ್ಠ ವಿನ್ಯಾಸ ಹೊಂದಿರುವ ಸುಟೆರ್ ಎಂಎಂಎಕ್ಸ್ 500 ಸೂಪರ್ ಬೈಕ್, ಜಗತ್ತಿನ ದುಬಾರಿ ಬೈಕ್‌ಗಳಲ್ಲೊಂದು. ಪ್ರತಿಷ್ಠಿತ ಗ್ರ್ಯಾಂಡ್ ಫಿಕ್ಸ್ ಮೋಟಾರ್ ಸೈಕಲ್ ರೇಸ್‌ನ ಮಾಜಿ ಚಾಂಪಿಯನ್ ಎಸ್ಕಿಲ್ ಸುಟೆರ್ ಅವರಿಂದ ಈ ಬೈಕ್ ವಿನ್ಯಾಸಗೊಂಡಿದೆ. 576 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ರೂ. 78.83ಲಕ್ಷ.

ಕಾಂಫೆಡರೆಟ್ ಜಿ2 ಪಿ51 ಕೊಂಬಾಟ್ ಫೈಟರ್
ವಿಶೇಷ ಹೊರ ವಿನ್ಯಾಸ ಹೊಂದಿರುವ ಕಾಂಫೆಡರೆಟ್ ಜಿ2 ಪಿ51 ಕೊಂಬಾಟ್ ಫೈಟರ್ ದುಬಾರಿ ಬೈಕ್‌ಗಳೊಂದು. ಇದು ಅಮೆರಿಕದ ಪ್ರಸಿದ್ಧ ಬೈಕ್ ಉತ್ಪಾದನಾ ಸಂಸ್ಥೆಯಿಂದ ಸಿದ್ಧಗೊಂಡಿದ್ದು, ಸೂಪರ್ ಬೈಕ್‌ಗಳ ವಿಭಾಗದಲ್ಲಿ ಇದಕ್ಕೆ ಭಾರೀ ಬೇಡಿಕೆಯಿದೆ. ಇದರ ಭಾರತೀಯ ಮಾರುಕಟ್ಟೆ ಬೆಲೆ ರೂ. 93.09 ಲಕ್ಷ ಮಾತ್ರ.

ಹೋಂಡಾ ಆರ್‌ಸಿ213ವಿ-ಎಸ್
ಹೋಂಡಾ ಉತ್ಪಾದಿತ ಆರ್‌ಸಿ213ವಿ-ಎಸ್ ಅನ್ನು ಜಗತ್ತಿನ ಟಾಪ್ ಬೈಕ್ ಎಂದೇ ಪರಿಗಣಿಸಲಾಗಿದೆ. ಗರಿಷ್ಠ ಮಟ್ಟದ ಎಂಜಿನ್ ಸಾಮರ್ಥ್ಯ ಹೊಂದಿರುವ ಹೋಂಡಾ ಆರ್‌ಸಿ213ವಿ-ಎಸ್ ಬೈಕ್, ಸೂಪರ್ ಸ್ಟೋರ್ಟ್ಸ್ ಬೈಕ್ ಕೂಡಾ ಹೌದು. ಇದರ ಭಾರತೀಯ ಮಾರುಕಟ್ಟೆ ಬೆಲೆ ಬರೋಬ್ಬರಿ ರೂ. 1.22 ಕೋಟಿ. 

ಒಂದು ವೇಳೆ ಹೋಂಡಾ ಆರ್‌ಸಿ213ವಿ-ಎಸ್ ಬೈಕ್ ನಿಮಗೆ ಇಷ್ಟವಾದಲ್ಲಿ ಮತ್ತಷ್ಟು ಚಿತ್ರಗಳ ವೀಕ್ಷಣೆಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Story first published: Monday, March 13, 2017, 12:05 [IST]
English summary
Here’s a look at the current top 5 most expensive production motorcycles in the world.
Please Wait while comments are loading...

Latest Photos