ಬಿಗಿಹಗ್ಗದಲ್ಲಿ ಸೈಕಲ್ ಸ್ಟಂಟ್ ವೇಳೆ ಜಾರಿಬಿದ್ದ ಸವಾರ ಸಾವು

By Nagaraja

ನಮ್ಮ ದೇಶದಲ್ಲಿ ಸಮುದ್ರ ತೀರ ಪ್ರದೇಶದಲ್ಲಿ ಅಥವಾ ಸಣ್ಣ ಪುಟ್ಟ ಪಟ್ಟಣಗಳಲ್ಲಿ ಅಲೆಮಾರಿಗಳು ತಮ್ಮ ಜೀವನೋಪಾಯಕ್ಕಾಗಿ ಸೈಕಲ್ ಮೇಲೆ ಸರ್ಕಸ್ ಪ್ರದರ್ಶನವನ್ನು ನೀಡುತ್ತಿರುವುದನ್ನು ಗಮನಿಸಿರುತ್ತೇವೆ. ಈಗ ಇದಕ್ಕೆ ಸಮಾನವಾದ ಸುದ್ದಿಯೊಂದು ನೆರೆಯ ಚೀನಾ ರಾಷ್ಟ್ರದಿಂದ ವರದಿಯಾಗಿದೆ.

ಆದರೆ ದುರದೃಷ್ಟವಶಾತ್ ಬಿಗಿ ಹಗ್ಗದ ಮೇಲೆ ಸ್ಟಂಟ್ ಶೋ ನೀಡುತ್ತಿದ್ದ ಹವ್ಯಾಸಿ ಸೈಕಲ್ ಸವಾರಿಯೊಬ್ಬರು ಜಾರಿ ಬಿದ್ದ ಪರಿಣಾಮ ಸಾವಿಗೆ ಶರಣಾಗಿರುವ ಘಟನೆ ಬೇಸರಕ್ಕೆ ಕಾರಣವಾಗಿದೆ.

ಬಿಗಿಹಗ್ಗದಲ್ಲಿ ಸೈಕಲ್ ಸ್ಟಂಟ್ ವೇಳೆ ಜಾರಿಬಿದ್ದ ಸವಾರ ಸಾವು

ಚೀನಾದ ಹುನಾನ್ ಪ್ರಾಂತ್ಯದಿಂದ ಘಟನೆ ವರದಿಯಾಗಿದ್ದು, ವ್ಯಕ್ತಿಯೋರ್ವ 50 ಮೀಟರ್ ಗಳಷ್ಟು ಎತ್ತರದಲ್ಲಿ ಬಿಗಿ ಹಗ್ಗದ ಮೇಲೆ ಸೈಕಲ್ ನಲ್ಲಿ ಸ್ಟಂಟ್ ಶೋ ನೀಡಲು ಯತ್ನಿಸುತ್ತಿರುವ ಮೇಲೆ ಸಮತೋಲನ ತಪ್ಪಿ ಕೆಳಕ್ಕೆ ಜಾರಿ ಬಿದ್ದಿದ್ದಾರೆ.

ಬಿಗಿಹಗ್ಗದಲ್ಲಿ ಸೈಕಲ್ ಸ್ಟಂಟ್ ವೇಳೆ ಜಾರಿಬಿದ್ದ ಸವಾರ ಸಾವು

ಶಾನ್ಸಿ ಪ್ರಾಂತ್ಯದ ನಿವಾಸಿ 40ರ ಹರೆಯದ ಯಾಂಗ್ ಎಂಬವರೇ ಸಾವಿಗೆ ಶರಣಾದ ದುರ್ದೈವಿ. ನೆಲಕ್ಕೆ ಬಿದ್ಧ ರಭಸದಲ್ಲಿ ಬಲವಾದ ಪೆಟ್ಟಾಗಿತ್ತು ಎಂಬುದು ತಿಳಿದು ಬಂದಿದೆ.

ಬಿಗಿಹಗ್ಗದಲ್ಲಿ ಸೈಕಲ್ ಸ್ಟಂಟ್ ವೇಳೆ ಜಾರಿಬಿದ್ದ ಸವಾರ ಸಾವು

ಪ್ರಸ್ತುತ ತನಿಖೆಯನ್ನು ಕೈಗೆತ್ತಿಕೊಂಡಿರುವ ಸ್ಥಳೀಯ ಪೊಲೀಸರು ವ್ಯಕ್ತಿಯು ಸೊಂಟಕ್ಕೆ ಸುರಕ್ಷಾ ಹಗ್ಗವನ್ನು ಬಿಗಿಯಾಗಿ ಧರಿಸಿರಲಿಲ್ಲವೇ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಬಿಗಿಹಗ್ಗದಲ್ಲಿ ಸೈಕಲ್ ಸ್ಟಂಟ್ ವೇಳೆ ಜಾರಿಬಿದ್ದ ಸವಾರ ಸಾವು

ಚೀನಾದಲ್ಲಿ 'ಟೈಟ್ ರೋಪ್ ಬೈಕಿಂಗ್' ‘tightrope biking' ಸಾಹಸ ಕ್ರೀಡೆಯಾಗಿದ್ದು, ಇದಕ್ಕಾಗಿ ವಿಶೇಷ ಪರಿಣತಿ ಪಡೆದ ಸ್ಟಂಟರ್ ಗಳನ್ನು ನೇಮಕ ಮಾಡಲಾಗುತ್ತದೆ.

ಬಿಗಿಹಗ್ಗದಲ್ಲಿ ಸೈಕಲ್ ಸ್ಟಂಟ್ ವೇಳೆ ಜಾರಿಬಿದ್ದ ಸವಾರ ಸಾವು

ಪರ್ವತ ಶಿಖರಗಳಿಗೆ ಅಥವಾ ಉದ್ಯಾನಗಳಿಗೆ ಭೇಟಿ ಕೊಡುವ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಇಂತಹ ಸ್ಟಂಟ್ ಶೋಗಳನ್ನು ನಡೆಸಿಕೊಡಲಾಗುತ್ತಿದೆ.


Most Read Articles

Kannada
Read more on ಸೈಕಲ್ cycle
English summary
Tightrope biking accident: Man falls to death
Story first published: Tuesday, August 18, 2015, 11:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X