ಇದೇ ಆಟೋ ವಿಸ್ಮಯ; ಬಹುಕೋಟಿ ವೆಚ್ಚದ ಭೂಗತ ಗ್ಯಾರೇಜ್

ಅತ್ಯಾಕರ್ಷಕ ವಾಹನಗಳ ಸೃಷ್ಟಿಗಳಲ್ಲಿ ಗ್ಯಾರೇಜ್‌ಗಳ ಪಾತ್ರ ಮಹತ್ವದ್ದಾಗಿರುತ್ತದೆ. ಮೋಟಾರುಖಾನೆಗಳಲ್ಲಿ ಗರಿಷ್ಠ ಮೂಲಸೌಲಭ್ಯ ಲಭ್ಯವಿದ್ದರೆ ಮಾತ್ರ ಅಲ್ಲಿ ಉತ್ಪಾದನೆಯಾಗುವ ವಾಹನಗಳು ಅಷ್ಟೇ ಶ್ರೇಷ್ಠ ಗುಣಮಟ್ಟವನ್ನು ಹೊಂದಿರುತ್ತವೆ.

ಇಂತಹ ಶ್ರೇಷ್ಠ ಮೋಟಾರ್ ಷೇಡ್ ಹುಡುಕಾಟದಲ್ಲಿ ತೊಡಗಿದ್ದ ನಮ್ಮ ಡ್ರೈವ್ ಸ್ಪಾರ್ಕ್ ತಂಡಕ್ಕೆ ಮಿಲಿಯನ್ ಡಾಲರ್ ಗ್ಯಾರೇಜ್‌ವೊಂದು ಪತ್ತೆಯಾಗಿದೆ. ತಕ್ಷಣವೇ ಗೂಗಲ್‌ ಸರ್ಜ್ ಇಂಜಿನ್‌ನಲ್ಲಿ ಹುಡುಕಾಟ ಆರಂಭಿಸಿದ ನಮ್ಮ ತಂಡ ವಿಸ್ಮಯಕಾರಿ ಮಾಹಿತಿಯನ್ನು ನಿಮ್ಮ ಮುಂದಿಡುವಲ್ಲಿ ಯಶಸ್ವಿಯಾಗಿದೆ.

ಅಮೆರಿಕ ಮೂಲದ ಟಾಮ್ ಗೊನ್ಜಾಲೆಸ್ (Tom Gonzales) ಈ ಬಹುಕೋಟಿ ವೆಚ್ಚದ ಭೂಗತ ಗ್ಯಾರೇಜ್‌ವೊಂದನ್ನು ಹೊಂದಿದ್ದಾರೆ. ನೆವೆಡಾದ ತಾಹೋಯ್ (tahoe) ಸರೋವರ ತಟದಲ್ಲಿ ಈ 27 ಕೋಟಿ ಮೌಲ್ಯದ ಬೃಹತ್ ಮೋಟಾರುಖಾನೆ ಸ್ಥಿತಗೊಂಡಿದೆ.

ಕಾರು ಹಾಗೂ ಬೈಕ್‌ಗಳನ್ನು ಸಂಗ್ರಹಿಸಿಡುವುದನ್ನು ತಮ್ಮ ಹವ್ಯಾಸವಾಗಿ ಬೆಳೆಸಿಕೊಂಡಿರುವ ಈ ವಾಹನ ಪ್ರೇಮಿ ತಮ್ಮದೇ ಆದ ಅದ್ಭುತ ಗ್ಯಾರೇಜ್ ನಿರ್ಮಿಸಿದ್ದಾರೆ. ಹಾಗಿದ್ದರೆ ಬನ್ನಿ ಇದು ಹೇಗೆ ಕೆಲಸ ಮಾಡುತ್ತೇ ಎಂಬುದನ್ನು ಫೋಟೊ ಫೀಚರ್ ಮೂಲಕ ಗಮನಿಸೋಣ...(ವಿ.ಸೂ: ಅಂತಿಮದಲ್ಲಿ ಕೊಡಲಾಗಿರುವ ವೀಡಿಯೋ ಕ್ಲಿಕ್ಕಿಸಲು ಮರೆಯದಿರಿ)

ಇದೇ ಆಟೋ ವಿಸ್ಮಯ; ಬಹುಕೋಟಿ ವೆಚ್ಚದ ಭೂಗತ ಗ್ಯಾರೇಜ್

ಗೊನ್ಜಾಲೆಸ್ ತಮ್ಮ ಈ ಮಿಲಿಯನ್ ಡಾಲರ್ ಮೊತ್ತದ ಗ್ಯಾರೇಜ್‌ಗೆ 'ಟಾಯ್ ಬಾಕ್ಸ್' ಎಂದು ಹೆಸರಿಸಿದ್ದಾರೆ. ಇನ್ನು ಹೆಣ್ಣಕ್ಕಳು ಕಾರು ಬೈಕ್‌ಗಳನ್ನು ಹೆಚ್ಚು ಇಷ್ಟಪಡುವುದರಿಂದ ತಾವು ವಾಹನ ಕಲೆಕ್ಷನ್ ಆರಂಭಿಸಿರುವುದಾಗಿ ಗೊನ್ಜಾಲೆಸ್ ತಿಳಿಸುತ್ತಾರೆ.

ಇದೇ ಆಟೋ ವಿಸ್ಮಯ; ಬಹುಕೋಟಿ ವೆಚ್ಚದ ಭೂಗತ ಗ್ಯಾರೇಜ್

ಬೃಹತ್ ಎಸ್ಟೇಟ್‌ನಲ್ಲಿರುವ ಗ್ಯಾರೇಜ್ ಒಳಪ್ರವೇಶಿಸಿದ ತಕ್ಷಣ ನಿಮಗೆ ಟಾಮ್ ಅವರ 100ಕ್ಕೂ ಹೆಚ್ಚು ಅತಿ ನೂತನ ಬೈಕ್‌ ಬ್ರಾಂಡ್‌ಗಳು ಕಾಣಸಿಗುವುದು. ಇದರ ವಿಶೇಷತೆ ಏನೆಂದರೆ ಒಂದು ಬಾರಿಯೂ ರೈಡಿಂಗ್ ಮಾಡದ ಈ ಬೈಕ್‌ಗಳಿಗೆ ರಿಜಿಷ್ಟ್ರೇಷನ್ ಕೂಡಾ ಆಗಿಲ್ಲ.

ಇದೇ ಆಟೋ ವಿಸ್ಮಯ; ಬಹುಕೋಟಿ ವೆಚ್ಚದ ಭೂಗತ ಗ್ಯಾರೇಜ್

ಮೊದಲ ನೋಟದಲ್ಲಿ ಅಲ್ಲಿ ಗ್ಯಾರೇಜ್ ಇದೆಯೇ ಎಂಬ ಅನುಮಾನ ನಿಮ್ಮಲ್ಲಿ ಮೂಡಬಹುದು. ಯಾಕೆಂದರೆ ನೆಲದಡಿಯಿಂದ ವಿಮಾನ ಎಲಿವೇಟರ್ ಬಳಸಿ (ಲಿಫ್ಟ್ ತಂತ್ರಜ್ಞಾನ) ಇದನ್ನು ತೆರೆಯಲಾಗುತ್ತದೆ. ಈ ಸಂದರ್ಭದಲ್ಲಿ ಮಾನವ ನಿರ್ಮಿತ ಭೂಪ್ರದೇಶ ಮೇಲಕ್ಕೆ ಸರಿಯಲ್ಪಡುತ್ತದೆ.

ಇದೇ ಆಟೋ ವಿಸ್ಮಯ; ಬಹುಕೋಟಿ ವೆಚ್ಚದ ಭೂಗತ ಗ್ಯಾರೇಜ್

ಬೈಕ್ ತರಹನೇ ಕಾರು ಪಾರ್ಕಿಂಗ್‌ಗೂ ಆಡಂಬರದ ಕೋಣೆಗಳನ್ನು ಬಳಸಲಾಗಿದೆ. ಇಲ್ಲೂ ವಿವಿಧ ವರ್ಣೀಯ ಕಾರುಗಳು ಕಾಣಸಿಗುತ್ತವೆ.

ಇದೇ ಆಟೋ ವಿಸ್ಮಯ; ಬಹುಕೋಟಿ ವೆಚ್ಚದ ಭೂಗತ ಗ್ಯಾರೇಜ್

ಈ ಭೂಗತ ಗ್ಯಾರೇಜ್ 6,000 ಚದರ ಅಡಿ ಸುತ್ತಳತೆಯನ್ನು ಹೊಂದಿದೆ. ಇದು ಅಮೆರಿಕದ ಅತಿದೊಡ್ಡ ಮೋಟಾರುಖಾನೆಗಳಲ್ಲಿ ಒಂದಾಗಿದೆ.

ಇದೇ ಆಟೋ ವಿಸ್ಮಯ; ಬಹುಕೋಟಿ ವೆಚ್ಚದ ಭೂಗತ ಗ್ಯಾರೇಜ್

ಈ ಮೊದಲೇ ಸೂಚಿಸಿದಂತೆ ಏರ್‌ಕ್ರಾಫ್ಟ್ ಎಲಿವೇಟರ್ ಕಾರುಗಳನ್ನು ಮೇಲಕ್ಕೆ ತರುವಲ್ಲಿ ನೆರವಾಗುತ್ತವೆ. ಅಷ್ಟೇ ಯಾಕೆ ಅತಿ ಭಾರದ ಬಸ್ಸನ್ನು ಕೂಡಾ ಇದೇ ತಂತ್ರಜ್ಞಾನದಲ್ಲಿ ಹೊರಕ್ಕೆ ತರಲಾಗುತ್ತಿದೆ.

ಇದೇ ಆಟೋ ವಿಸ್ಮಯ; ಬಹುಕೋಟಿ ವೆಚ್ಚದ ಭೂಗತ ಗ್ಯಾರೇಜ್

ಈ ವಿಮಾನ ಎಲಿವೇಟರ್‌ನ ತಲಹದಿಯು 60 ಫೀಟ್ ಉದ್ದ, 12 ಫೀಟ್ ಅಗಲ ಹಾಗೂ 15 ಫೀಟ್ ಎತ್ತರ ಹೊಂದಿದೆ. ಇದು ಆರು ಹೈಡ್ರಾಲಿಕ್ ರಾಂಪ್‌ಗಳಿಂದ ಕೆಲಸ ಮಾಡುತ್ತದೆ.

ಇದೇ ಆಟೋ ವಿಸ್ಮಯ; ಬಹುಕೋಟಿ ವೆಚ್ಚದ ಭೂಗತ ಗ್ಯಾರೇಜ್

ಸಂಪೂರ್ಣವಾಗಿ ಗಣಕ ಯಂತ್ರದಿಂದ ನಿಯಂತ್ರಿಸಲ್ಪಟ್ಟಿರುವ ಈ ವಿಮಾನ ಎವಿಯೇಟರ್ 2,50,000 ಪೌಂಡ್‌ ಭಾರವನ್ನು ಮೇಲೆತ್ತುವುದರಲ್ಲಿ ಸಕ್ಷಮವಾಗಿದೆ.

ಇದೇ ಆಟೋ ವಿಸ್ಮಯ; ಬಹುಕೋಟಿ ವೆಚ್ಚದ ಭೂಗತ ಗ್ಯಾರೇಜ್

ಈ ಎಲ್ಲ ವಿನ್ಯಾಸವನ್ನು ಸ್ವತ: ಗೊನ್ಸಾಲೆಸ್ ರೂಪಿಸಿದ್ದು, ಅವರ ಪ್ರಕಾರ ಯಾವುದೇ ಪ್ರಕೃತಿ ವಿಪತ್ತನ್ನು ನಿರ್ವಹಿಸುವ ಶಕ್ತಿಯನ್ನು ಈ ಎಲಿವೇಟರ್ ಹೊಂದಿದೆ.

ಇದೇ ಆಟೋ ವಿಸ್ಮಯ; ಬಹುಕೋಟಿ ವೆಚ್ಚದ ಭೂಗತ ಗ್ಯಾರೇಜ್

ಹೊರಗಿನಿಂದ ಎಲೆವೇಟರ್ ಮುಚ್ಚಿಡುವ ಸಲುವಾಗಿ ಇದರ ಮೇಲೆ ಕೃತಕ ಮರ, ಕಲ್ಲುಗಳನ್ನು ಇಡಲಾಗಿದೆ. ಹಾಗೆಯೇ ಒಮ್ಮೆ ಮೇಲಕ್ಕೆಕ್ತಲು 25 ಡಾಲರ್ ವೆಚ್ಚದ ವಿದ್ಯುತ್ತಿನ ಅಗತ್ಯವಿದೆ.

ಇದೇ ಆಟೋ ವಿಸ್ಮಯ; ಬಹುಕೋಟಿ ವೆಚ್ಚದ ಭೂಗತ ಗ್ಯಾರೇಜ್

ಬಹುಕೋಟಿ ವೆಚ್ಚದ ಭೂಗತ ಗ್ಯಾರೇಜ್‌ನ ಸುಂದರ ನೋಟ

ಇದೇ ಆಟೋ ವಿಸ್ಮಯ; ಬಹುಕೋಟಿ ವೆಚ್ಚದ ಭೂಗತ ಗ್ಯಾರೇಜ್

ಬಹುಕೋಟಿ ವೆಚ್ಚದ ಭೂಗತ ಗ್ಯಾರೇಜ್‌ನ ಸುಂದರ ನೋಟ

ಇದೀಗ ಇಲ್ಲಿ ಕೊಡಲಾಗಿರುವ ವೀಡಿಯೋ ಲಿಂಕ್ ವೀಕ್ಷಿಸುವ ಮೂಲಕ ನಿಮಗೆ ಭೂಗತ ಗ್ಯಾರೇಜ್ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಲಿದೆ.

Most Read Articles

Kannada
English summary
Tom Gonzales is a multi millionaire and the founder and former owner of the e-commerce firm Commerce One. Former, because he sold his company and instead decided to indulge in his hobby, that of collecting exotic cars and bikes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X