ಜಗತ್ತಿನ ಅತಿದೊಡ್ಡ 10 ನೌಕಾಯಾನ ಕಂಪನಿಗಳು

By Nagaraja

ಹಡುಗುಗಳನ್ನು ಮುಖ್ಯವಾಗಿ ಸರಕು ಸಾಗಣೆಯ ಯಂತ್ರಗಳಾಗಿ ಬಳಕೆ ಮಾಡಲಾಗುತ್ತದೆ. ನೌಕಾಯಾನ ಜಗತ್ತಿನ ಅತಿ ದೊಡ್ಡ ಉದ್ಯಮಗಳಲ್ಲಿ ಒಂದಾಗಿದೆ. ಆದರೆ ಬಹುತೇಕ ಜನರು ಇದರ ಬಗ್ಗೆ ಅರಿವು ಹೊಂದಿರುವುದಿಲ್ಲ.

ಟೈಟಾನಿಕ್ ಹಡಗಿಗೆ ಸಂಬಂಧಪಟ್ಟ 10 ರೋಚಕ ಸತ್ಯಗಳು!

ನೀವು ಯಾವತ್ತಾದರೂ ಯೋಚನೆ ಮಾಡಿ ನೋಡಿದ್ದೀರಾ ಏಷ್ಯಾದಲ್ಲಿ ಬೆಳೆದ ಹಣ್ಣು ಹಂಪಲುಗಳು ಅಷ್ಟೇ ತಾಜಾತನದೊಂದಿಗೆ ಯುರೋಪ್ ಅಥವಾ ಇನ್ನಿತರ ಖಂಡಗಳಲ್ಲಿ ದೊರಕುವುದಾದರೂ ಹೇಗೆ? ಹೌದು, ಈ ನಿಟ್ಟಿನಲ್ಲಿ ನೌಕಾಯಾನ ಉದ್ಯಮವು ತನ್ನ ಅಸ್ತಿತ್ವವನ್ನು ಬೆಳೆಸಿಕೊಂಡಿದೆ.

ಜಗತ್ತಿನ ಅತಿದೊಡ್ಡ 10 ನೌಕಾಯಾನ ಕಂಪನಿಗಳು

ನೌಕಾಯಾನದಿಂದಾಗಿ ಇಡೀ ಜಗತ್ತೇ ಒಂದು ಸಣ್ಣ ನಗರವಾಗಿ ಪರಿವರ್ತನೆಯಾಗಿದೆ. ಇಲ್ಲಿ ಕೋಟಿಗಟ್ಟಲೆ ರುಪಾಯಿಗಳ ವ್ಯಾಪಾರ ನಡೆಯುತ್ತಿದೆ. ಇಂದಿನ ಈ ಲೇಖನದ ಮೂಲಕ ಜಗತ್ತಿನ 10 ಅತಿದೊಡ್ಡ ನೌಕಾಯಾನ ಸಂಸ್ಥೆಗಳ ಬಗ್ಗೆ ಮಾಹಿತಿ ಕೊಡುವ ಪ್ರಯತ್ನ ಮಾಡಲಿದ್ದೇವೆ.

ಚಿತ್ರ ಕೃಪೆ: Corey Seeman via Flickr
10. ಮಿಟ್ಸುಯಿ ಒ.ಎಸ್.ಕೆ. ಲೈನ್ಸ್ (ಎಂಒಎಲ್)

10. ಮಿಟ್ಸುಯಿ ಒ.ಎಸ್.ಕೆ. ಲೈನ್ಸ್ (ಎಂಒಎಲ್)

ಜಪಾನ್‌ನ ಟೊಕಿಯೋ ತಲಹದಿಯ ಮಿಟ್ಸುಯಿ ಒ.ಎಸ್.ಕೆ. ಲೈನ್ಸ್ ಲಿಮಿಟೆಡ್ ಅಥವಾ ಎಂಒಲ್ ಪ್ರಮುಖವಾಗಿಯೂ ಅಂತರಾಷ್ಟ್ರೀಯ ನೌಕಾಯಾನದಲ್ಲಿ ಗಮನ ಕೇಂದ್ರಿತವಾಗಿದೆ. 1884ನೇ ಇಸವಿಯಲ್ಲಿ ಸ್ಥಾಪನೆಯಾಗಿರುವ ಈ ಸಂಸ್ಥೆಯು ಪ್ರಮುಖವಾಗಿಯೂ ಬೃಹತ್ ನೌಕೆಗಳನ್ನು, ಕಾರುಗಳನ್ನು, ಕ್ರೂಸ್ ನೌಕೆ, ದೋಣಿ, ಎನ್‌ಎನ್‌ಜಿ ನೌಕೆ, ಟ್ಯಾಂಕರ್ ಮತ್ತು ಸರಕು ಸಾಗಣಿಕೆಯ ನೌಕೆಗಳಾಗಿ ಕೆಲಸ ಮಾಡುತ್ತದೆ.

ಚಿತ್ರ ಕೃಪೆ: MOL by Scott Hess via Flickr

9. ಚೀನಾ ಶಿಪ್ಪಿಂಗ್ ಕಂಟೈನರ್ ಲೈನ್ಸ್ (ಸಿಎಸ್‌ಸಿಎಲ್)

9. ಚೀನಾ ಶಿಪ್ಪಿಂಗ್ ಕಂಟೈನರ್ ಲೈನ್ಸ್ (ಸಿಎಸ್‌ಸಿಎಲ್)

ಚೀನಾ ನೌಕಾಯಾನ ಸಂಸ್ಥೆಯ ಭಾಗವಾಗಿರುವ ಚೀನಾ ಶಿಪ್ಪಿಂಗ್ ಕಂಟೈನರ್ ಲೈನ್ಸ್ ಕೊ ಲಿಮಿಟೆಡ್, ಶಾಂಘೈ ಕೇಂದ್ರಿಕರಿಸಿ ವ್ಯಾಪಾರವನ್ನು ವಿಸ್ತರಿಸಿದೆ. 1997ನೇ ಇಸವಿಯಲ್ಲಿ ಸ್ಥಾಪನೆಯಾಗಿದ್ದ ಈ ಸಂಸ್ಥೆಯು ಶಿಪ್ರ ಗತಿಯಲ್ಲಿ ಪ್ರಗತಿ ಸಾಧಿಸುತ್ತಿದ್ದು, ಜಗತ್ತಿನಾದ್ಯಂತ ತನ್ನ ಬಂದರುಗಳನ್ನು ಹೊಂದಿರುತ್ತದೆ.

ಚಿತ್ರ ಕೃಪೆ: CSCL by Corey Seeman via Flickr
8. ಹಂಜಿನ್ ಶಿಪ್ಪಿಂಗ್

8. ಹಂಜಿನ್ ಶಿಪ್ಪಿಂಗ್

ದಕ್ಷಿಣ ಕೊರಿಯಾ ತಲಹದಿಯ ಹಂಜಿನ್ ಶಿಪ್ಪಿಂಗ್ ಕಂಪನಿ ಲಿಮಿಟೆಡ್ 1949ನೇ ಇಸವಿಯಲ್ಲಿ ಸ್ಥಾಪಿತವಾಗಿದೆ. ಜಗತ್ತಿನ ಅತಿ ದೊಡ್ಡ ಸರಕು ಸಾಗಾಣೆಯ ಹಡಗುಗಳಲ್ಲಿ ಗುರುತಿಸಿಕೊಂಡಿರುವ ಹಂಜಿನ್, 200ರಷ್ಟು ಸರಕು ಸಾಗಾಣೆಯ ಹಡಗುಗಳನ್ನು ಹೊಂದಿದೆ.

ಚಿತ್ರ ಕೃಪೆ: Hanjin by Pete via Flickr
7. ಅಮೆರಿಕನ್ ಪ್ರೆಸಿಡೆಂಟ್ ಲೈನ್ಸ್

7. ಅಮೆರಿಕನ್ ಪ್ರೆಸಿಡೆಂಟ್ ಲೈನ್ಸ್

ಅಮೆರಿಕನ್ ಪ್ರೆಸಿಡೆಂಟ್ ಲೈನ್ಸ್ ಲಿಮಿಟೆಡ್ ಅಥವಾ ಸುಲಭದಲ್ಲಿ ಎಪಿಎಲ್ ಎಂದು ಉಲ್ಲೇಖಿಸಬಹುದಾದ ಈ ಸಂಸ್ಥೆಯು ಜಗತ್ತಿನ ಏಳನೇ ಅತಿದೊಡ್ಡ ಸರಕು ಸಾಗಾಣೆಯ ಹಡಗು ಸಂಸ್ಥೆಯಾಗಿದೆ. ಇದು ವಾರದಲ್ಲಿ 80 ಸೇವೆಗಳನ್ನು ಒದಗಿಸುತ್ತದೆ.

ಚಿತ್ರ ಕೃಪೆ: APL by Buonasera via Wikimedia Commons
6. ಹಾಪಾಗ್ ಲಾಯ್ಡ್

6. ಹಾಪಾಗ್ ಲಾಯ್ಡ್

ಜರ್ಮನಿಯ ತಲಹದಿಯ ಹಪಾಗ್ ಲಾಯ್ಡ್ ಸರಕು ಸಾಗಾಣೆಯ ಹಡಗು ಸಂಸ್ಥೆಯು 1970ನೇ ಇಸವಿಯಲ್ಲಿ ಸ್ಥಾಪಿತವಾಗಿದೆ. ಇದು ಅಟ್ಲಾಂಟಿಕ್ ಸಾಗರದಲ್ಲಿ ತನ್ನ ವ್ಯಾಪಾರವನ್ನು ಕುದುರಿಸಿಕೊಂಡಿದೆ.

ಚಿತ್ರ ಕೃಪೆ: Hapag-Lloyd-Ship by Henry M. Trotter via Wikimedia Commons
5. ಚೀನಾ ಓಷಿಯನ್ ಶಿಪ್ಪಿಂಗ್ ಕಂಟೈನರ್ ಲೈನ್

5. ಚೀನಾ ಓಷಿಯನ್ ಶಿಪ್ಪಿಂಗ್ ಕಂಟೈನರ್ ಲೈನ್

ಕೊಸ್ಕೋ ಎಂದೇ ಚಿರಪರಿಚಿತವಾಗಿರುವ ಚೀನಾ ಓಷಿಯನ್ ಶಿಪ್ಪಿಂಗ್ ಕಂಟೈನರ್ ಲೈನ್ ಸಂಸ್ಥೆಯು 1961ರಲ್ಲಿ ಸ್ಥಾಪಿತವಾಗಿದೆ. ಸರಕಾರ ನಿಯಂತ್ರಿತ ಈ ಹಡಗು 550ರಷ್ಟು ಸರ್ವೀಸ್‌ಗಳನ್ನು ಹೊಂದಿದೆ.

ಚಿತ್ರ ಕೃಪೆ: Cosco Line by Roman Boed via Wikimedia Commons
4. ಎವರ್‌ಗ್ರೀನ್ ಲೈನ್

4. ಎವರ್‌ಗ್ರೀನ್ ಲೈನ್

ತೈವಾನ್ ತಲಹದಿಯ ಎವರ್‌ಗ್ರೀನ್ ಮರೈನ್ ಕಾರ್ಪೋರೇಷನ್ ನೌಕಾಯಾನ ಸಂಸ್ಥೆಯು 1968ರಲ್ಲಿ ಸ್ಥಾಪಿತವಾಗಿದೆ. ಜಗತ್ತಿನ 80ರಷ್ಟು ರಾಷ್ಟ್ರಗಳಲ್ಲಿ ವ್ಯಾಪಾರ ವಿಸ್ತರಿಸಿರುವ ಈ ಸಂಸ್ಥೆಯು 240 ಬಂದರುಗಳಲ್ಲಾಗಿ 150ಕ್ಕೂ ಹೆಚ್ಚು ಹಡುಗುಗಳ ಸೇವೆಯನ್ನು ಹೊಂದಿದೆ.

ಚಿತ್ರ ಕೃಪೆ: Evergreen via Maritime
3. ಸಿಎಂಎ ಸಿಜಿಎಂ ಸಂಸ್ಥೆ

3. ಸಿಎಂಎ ಸಿಜಿಎಂ ಸಂಸ್ಥೆ

ಫ್ರಾನ್ಸ್‌ನ ಸರಕು ಸಾಗಾಣಿಕೆ ಹಡಗಾಗಿರುವ ಸಿಎಂಎ ಸಿಜಿಎಂ ಎಸ್.‌ಎ ಜಗತ್ತಿನ ಮೂರನೇ ಅತಿದೊಡ್ಡ ಸರಕು ಸಾಗಾಣಿಕೆ ಹಡಗಾಗಿದೆ. ಇದು ವಿಶ್ವದ್ಯಾಂತ 170 ನೌಕಾಯಾನ ಹಾದಿಯಲ್ಲಿ ಬಳಕೆಯಲ್ಲಿದ್ದು, 150ಕ್ಕೂ ಹೆಚ್ಚು ರಾಷ್ಟ್ರಗಳಲ್ಲಾಗಿ 400ರಷ್ಟು ಬಂದರುಗಳಲ್ಲಿ ತನ್ನ ವ್ಯಾಪ್ತಿ ವಿಸ್ತರಿಸಿದೆ.

ಚಿತ್ರ ಕೃಪೆ: CMA CGM Group
2. ಮೆಡಿಟೇರಿಯನ್ ಶಿಪ್ಪಿಂಗ್ ಸಂಸ್ಥೆ

2. ಮೆಡಿಟೇರಿಯನ್ ಶಿಪ್ಪಿಂಗ್ ಸಂಸ್ಥೆ

ಮೆಡಿಟೇರಿಯನ್ ಶಿಪ್ಪಿಂಗ್ ಸಂಸ್ಥೆ ಎಸ್.ಎ (ಎಂಎಸ್‌ಸಿ) ಜಗತ್ತಿನ ಎರಡನೇ ಅತಿದೊಡ್ಡ ಸರಕು ಸಾಗಾಣೆಯ ಹಡಗಾಗಿದೆ. ಜಿನೆವಾ ತಲಹದಿಯ ಈ ಇಟಲಿ ಹಡಗು ಸಂಸ್ಥೆಯು ಜಗತ್ತಿನ ಪ್ರಮುಖ ಹಡಗು ಜಾಲವನ್ನು ಹೊಂದಿರುತ್ತದೆ. ಇದು 1970ನೇ ಇಸವಿಯಲ್ಲಿ ಸ್ಥಾಪನೆಯಾಗಿದೆ.

ಚಿತ್ರ ಕೃಪೆ: MSC by Havenfoto
1. ಎ.ಪಿ. ಮೋಲರ್-ಮೀಯರ್ಸ್ ಗ್ರೂಪ್

1. ಎ.ಪಿ. ಮೋಲರ್-ಮೀಯರ್ಸ್ ಗ್ರೂಪ್

ಮೀಯರ್ಸ್ ಎಂದೇ ಅರಿಯಲ್ಪಡುವ ಡೆನ್ಮಾರ್ಕ್‌ನ ಎ.ಪಿ. ಮೋಲರ್-ಮೀಯರ್ಸ್ ಸಂಸ್ಥೆಯು ಜಗತ್ತಿ ಅತಿದೊಡ್ಡ ಸರಕು ಸಾಗಾಣೆಯ ಹಡಗಾಗಿದೆ. ಜಗತ್ತಿನ ಅತ್ಯಂತ ಪುರಾತನ ಹಡಗು ಸಂಸ್ಥೆಗಳಲ್ಲಿ ಒಂದಾಗಿರುವ ಇದು 1904ನೇ ಇಸವಿಯಲ್ಲಿ ಸ್ಥಾಪನೆಯಾಗಿದೆ. ಅಲ್ಲದೆ 135ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ತನ್ನ ಸಾನಿಧ್ಯವನ್ನು ಹೊಂದಿದೆ. ಇಲ್ಲಿ 108,000ದಷ್ಟು ಮಂದಿ ಉದ್ಯೋಗವನ್ನು ಹರಸಿಕೊಂಡಿದ್ದಾರೆ.

ಚಿತ್ರ ಕೃಪೆ: Maersk by Havenfoto
ಇವನ್ನೂ ಓದಿ

ಇವನ್ನೂ ಓದಿ

ಜಗತ್ತಿನ ಅತಿ ದೊಡ್ಡ ಪ್ರಯಾಣಿಕ ಹಡಗು

ಇವನ್ನೂ ಓದಿ

ಇವನ್ನೂ ಓದಿ

ಸಾಗರ ಯಾನದ ರಾಜ

ಇವನ್ನೂ ಓದಿ

ಇವನ್ನೂ ಓದಿ

ಪುನರ್ಜನ್ಮ ಪಡೆಯಲಿರುವ ಟೈಟಾನಿಕ್ ಹಡಗು


Most Read Articles

Kannada
English summary
Top 10 Biggest Shipping Companies In The World
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X