ಉ.ಕೊರಿಯಾ ಜಲಾಂತರ್ಗಾಮಿ ನೌಕೆ ನಿಗೂಢ ಕಣ್ಮರೆ; ಅಮೆರಿಕದ ಪಾತ್ರವೇನು?

By Nagaraja

ಎರಡನೇ ಲೋಕ ಮಹಾಯುದ್ಧದ ಬಳಿಕವೂ ಮುಂಚೂಣಿಯ ರಾಷ್ಟ್ರಗಳ ನಡುವಣ ಶೀತಲ ಸಮರ ಈಗಲೂ ಮುಂದುವರಿಯುತ್ತಿದೆ. ಇದಕ್ಕೆ ಪ್ರತಿಯೊಂದು ದೇಶಗಳು ನಡೆಸುತ್ತಿರುವ ಸಮರಾಭ್ಯಾಸವೇ ಕಾರಣವಾಗಿದೆ. ಅತ್ತ ದಕ್ಷಿಣ ಕೊರಿಯಾ ನಡುವೆ ಹೊಗೆಯಾಡುತ್ತಿರುವ ನಡುವೆಯೇ ಉತ್ತರ ಕೊರಿಯಾದ ಜಲಾಂತರ್ಗಾಮಿ ನೌಕೆ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿರುವುದು ಹೆಚ್ಚಿನ ಆತಂಕ ಸೃಷ್ಟಿ ಮಾಡಿದೆ.

Also Read: ಭವಿಷ್ಯ ಭಾರತದ ಬೆನ್ನೆಲುಬು; 10 ಶಸ್ತ್ರಾಸ್ತ್ರಗಳು

ವಿಶ್ವದ ಪ್ರಬಲ ಅಶ್ವಶಕ್ತಿ ಅಮೆರಿಕ ಜಂಟಿ ಆಶ್ರಯದಲ್ಲಿ ದಕ್ಷಿಣ ಕೊರಿಯಾ ಸಮರಾಭ್ಯಾಸವನ್ನು ಹಮ್ಮಿಕೊಂಡಿತ್ತು. ಈ ನಡುವೆ ಜಲಾಂತರ್ಗಾಮಿ ನೌಕೆ ನಾಪತ್ತೆ ದಾಖಲಾಗಿದೆ. ಇದು ಎರಡೂ ಕಡೆಗಳಲ್ಲಿ ಗಂಭೀರ ವಾತಾವರಣ ಸೃಷ್ಟಿಸುವಂತೆ ಮಾಡಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರೂ ಕೆಡಿಸಿಕೊಳ್ಳದ ಉತ್ತರ ಕೊರಿಯಾ, ಉಳಿದ 70ರಷ್ಟು ಜಲಾಂತರ್ಗಾಮಿ ನೌಕೆಗಳ ಬಲದೊಂದಿಗೆ ಬೀಗಿ ನಿಂತಿದೆ. ಅಷ್ಟಕ್ಕೂ ಜಲಾಂತರ್ಗಾಮಿ ನೌಕೆಗಳ ವಿಚಾರದಲ್ಲಿ ವಿಶ್ವದ ಅಶ್ವ ಶಕ್ತಿ ಯಾವುದು ಗೊತ್ತೇ? ಈ ವಿಭಾಗದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ?

10. ಗ್ರೀಸ್

10. ಗ್ರೀಸ್

ವಿಶ್ವದಲ್ಲಿ ಅತಿ ಹೆಚ್ಚು ಜಲಾಂತರ್ಗಾಮಿ ನೌಕೆಗಳ ಬಲದ ಪಟ್ಟಿಯಲ್ಲಿ ಗ್ರೀಸ್ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಸದ್ಯ ಗ್ರೀಸ್ ಬಳಿಯೀಗ 11 ಜಲಾಂತರ್ಗಾಮಿ ನೌಕೆಗಳಿದ್ದು, ಮತ್ತಷ್ಟು ಬಲ ವೃದ್ಧಿಸುವ ಇರಾದೆಯಲ್ಲಿದೆ.

09. ಟರ್ಕಿ

09. ಟರ್ಕಿ

48,600 ನಾವಿಕ ಸೈನ್ಯ ಬಲವಿರುವ ಟರ್ಕಿ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದು, 13 ಜಲಾಂತರ್ಗಾಮಿ ನೌಕೆಗಳಿವೆ.

08. ಭಾರತ

08. ಭಾರತ

ವಿಶ್ವದ ನಾಲ್ಕನೇ ಅತಿ ದೊಡ್ಡ ಸೈನ್ಯ ಬಲ ಹೊಂದಿರುವ ಭಾರತ ಜಲಾಂತರ್ಗಾಮಿ ನೌಕೆಗಳ ಸಾಲಿನಲ್ಲಿ ಎಂಟನೇ ಸ್ಥಾನದಲ್ಲಿದೆ. ಅಣ್ವಸ್ತ್ರ ದಾಳಿ ಸಾಮರ್ಥ್ಯದ ಅಕುಲಾ ಸೇರಿದಂತೆ ಭಾರತದಲ್ಲಿ 14 ಜಲಾಂತರ್ಗಾಮಿ ನೌಕೆಗಳಿವೆ.

07. ದಕ್ಷಿಣ ಕೊರಿಯಾ

07. ದಕ್ಷಿಣ ಕೊರಿಯಾ

ಏಳನೇ ಸ್ಥಾನದಲ್ಲಿರುವ ದಕ್ಷಿಣ ಕೊರಿಯಾ ಬಳಿ 15 ಜಲಾಂತರ್ಗಾಮಿ ನೌಕೆಗಳಿವೆ. ಇದು ಸಮುದ್ರ ತಳದಿಂದ ಬರುವ ಎಲ್ಲ ತರಹದ ಅಪಾಯವನ್ನು ಎದುರಿಸುವಷ್ಟು ಸಮರ್ಥವಾಗಿದೆ.

06. ಜಪಾನ್

06. ಜಪಾನ್

ಸಣ್ಣ ದ್ವೀಪ ರಾಷ್ಟ್ರವಾಗಿರುವ ಜಪಾನ್ ಜಲಾಂತರ್ಗಾಮಿ ನೌಕೆ ರಕ್ಷಣೆಯ ವಿಚಾರದಲ್ಲಿ ಆರನೇ ಸ್ಥಾನ ಕಾಪಾಡಿಕೊಂಡಿದೆ. ಜಪಾನ್ ಬಳಿಯೀಗ 17ರಷ್ಟು ಜಲಾಂತರ್ಗಾಮಿ ನೌಕೆಗಳಿವೆ.

05. ಇರಾನ್

05. ಇರಾನ್

ರಷ್ಯಾ ನಿರ್ಮಿತ ಮೂರು ಜಲಾಂತರ್ಗಾಮಿ ನೌಕೆಗಳು ಸೇರಿದಂತೆ ಇರಾನ್ ಸಮುದ್ರ ಕಾವಲುಪಡೆಯ ಬಳಿ 33 ಜಲಾಂತರ್ಗಾಮಿ ನೌಕೆಗಳಿವೆ.

04. ರಷ್ಯಾ

04. ರಷ್ಯಾ

ಭಾರತದ ಮಿತ್ರ ರಾಷ್ಟ್ರವಾಗಿರುವ ರಷ್ಯಾ 60ರಷ್ಟು ಅತ್ಯಾಧುನಿಕ ಜಲಾಂತರ್ಗಾಮಿ ನೌಕೆಗಳನ್ನು ಹೊಂದಿದೆ. ಇಲ್ಲಿ ಭಾರತದ ಜೊತೆಗೆ ವರ್ಷಂಪ್ರತಿ ಜಂಟಿ ಸಮರಾಭ್ಯಾಸವನ್ನು ನಡೆಸಿಕೊಳ್ಳುತ್ತಿರುವುದನ್ನು ನೀವು ನೆನಪಿಸಿಕೊಳ್ಳಬಹುದಾಗಿದೆ.

03. ಚೀನಾ

03. ಚೀನಾ

ವಿಸ್ತಾರವಾದ ಸಮುದ್ರ ತೀರ ಪ್ರದೇಶವನ್ನು ಹೊಂದಿರುವ ಚೀನಾ ಜಲಾಂತರ್ಗಾಮಿ ನೌಕೆಗಳ ಪಟ್ಟಿಯಲ್ಲೂ ಅಗ್ರಜರ ಸಾಲಿನಲ್ಲಿ ಗುರುತಿಸಿಕೊಂಡಿದೆ. ಪ್ರಸ್ತುತ ಚೀನಾ ಬಳಿ ಅಣ್ವಸ್ತ್ರ ದಾಳಿ ಸೇರಿದಂತೆ 68ರಷ್ಟು ಜಲಾಂತರ್ಗಾಮಿ ನೌಕೆಗಳಿವೆ.

02. ಉತ್ತರ ಕೊರಿಯಾ

02. ಉತ್ತರ ಕೊರಿಯಾ

ದಕ್ಷಿಣ ಕೊರಿಯಾ ಹಾಗೂ ಅಮೆರಿಕ ಜಂಟಿ ಸಮರಭ್ಯಾಸವನ್ನು ಲೆಕ್ಕಿಸದ ಉತ್ತರ ಕೊರಿಯಾ ಪ್ರಚಂಡ 70ರಷ್ಟು ಜಲಾಂತರ್ಗಾಮಿ ನೌಕೆಗಳ ಬಲವನ್ನು ಹೊಂದಿದೆ. ಈಗ ನಾಪತ್ತೆಯಾದ ಒಂದು ಜಲಾಂತರ್ಗಾಮಿ ನೌಕೆ ಕಳೆದುಕೊಂಡರೂ ತನ್ನ ಶತ್ರು ಪಾಳೇಯಕ್ಕೆ ಸೆಡ್ಡು ಹೊಡೆಯುವ ರೀತಿಯಲ್ಲಿ 69ರಷ್ಟು ಜಲಾಂತರ್ಗಾಮಿ ನೌಕೆಗಳನ್ನು ಹೊಂದಿವೆ.

01. ಅಮೆರಿಕ

01. ಅಮೆರಿಕ

ವಿಶ್ವದ ದೊಡ್ಡಣ್ಣ ಅಮೆರಿಕ ಜಲಾಂತರ್ಗಾಮಿ ನೌಕೆಗಳ ವಿಚಾರದಲ್ಲೂ ಅಗ್ರಸ್ಥಾನವನ್ನು ಕಾಪಾಡಿಕೊಂಡಿದೆ. ಉತ್ತರ ಕೊರಿಯಾಗಿಂತಲೂ ಮುನ್ನಡೆಯನ್ನು ಕಾಪಾಡಿಕೊಂಡಿರುವ ಅಮೆರಿಕ ಬಳಿ 75ರಷ್ಟು ಜಲಾಂತರ್ಗಾಮಿ ನೌಕೆಗಳಿವೆ.

ಇವನ್ನೂ ಓದಿ...

ಸಮುದ್ರದೊಳಗೆ ಧುಮುಕಿದ ಐಎನ್‌ಎಸ್ ಕಲ್ವರಿ ಆಟ್ಯಾಕ್ ಸಬ್‌ಮೆರಿನ್

ಬ್ಲೂ ಮರ್ಲಿನ್ - ಹಡಗನ್ನೇ ಹೊತ್ತೊಯ್ಯಬಲ್ಲ ದೈತ್ಯ ಹಡಗು

Most Read Articles

Kannada
English summary
North Korea Has Lost A Submarine! Here Are Some Highlights
Story first published: Tuesday, March 15, 2016, 9:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X