ಪ್ರಪಂಚದ ಟಾಪ್ 10 ಅತಿ ದೂರ ರೈಲು ಪ್ರಯಾಣದ ಬಗ್ಗೆ ಮಾಹಿತಿ ಇಲ್ಲಿದೆ

Written By:

ಪ್ರತಿಯೊಬ್ಬರ ಜೀವನದಲ್ಲಿ ಪ್ರಯಾಣ ಬಹಳ ಮುಖ್ಯವಾದ ಅಂಶವಾಗಿದ್ದು, ಈ ಪ್ರಯಾಣದಲ್ಲಿ ರೈಲು ಕೂಡ ಅತಿ ಮುಖ್ಯ ವಹಿಸುತ್ತದೆ ಎಂಬುದನ್ನು ಮರೆಯುವಂತಿಲ್ಲ. ಇಂತಹ ರೈಲಿನಲ್ಲಿ ಹೋಗುವಂತಹ ಅತಿ ದೂರದ ಹತ್ತು ಪ್ರಯಾಣಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

1. ಸೈಬೀರಿಯನ್: ಮಾಸ್ಕೋ ಇಂದ ವ್ಲಾಡಿವೋಸ್ಟಾಕ್ (ರಷ್ಯಾ)

ಈ ರೈಲು, ಅಂತ್ಯವಿಲ್ಲದ ಬಿರ್ಚ್ ಮರಗಳನ್ನು, ಉರಲ್ ಪರ್ವತಗಳನ್ನು ಮತ್ತು ವಿಶ್ವದ ದೊಡ್ಡ ಸಿಹಿನೀರಿನ ಕೆರೆ ಎಂದೇ ಖ್ಯಾತಿ ಪಡೆದಿರುವ ಬೈಕಲ್ ಕೆರೆಯನ್ನು ಹಾದು ತನ್ನ ನಿಮಗೇನಾದರೂ ರೈಲಿನಲ್ಲಿ ಅತ್ಯಂತ ದೂರದ ಪ್ರಯಾಣ ಮಾಡಬೇಕು ಎನ್ನಿಸಿ, ಅದರ ಬಗ್ಗೆ ಮಾಹಿತಿ ಬೇಕೆಂದರೆ ಅತ್ವ ಪ್ರಪಂಚದಲ್ಲಿಯೇ ರೈಲಿನಲ್ಲಿ ಅತ್ಯಂತ ದೂರದ ಪ್ರಯಾಣಗಳ ಬಗ್ಗೆ ತಿಳ್ಕೊಬೇಕು ಎಂದರೆ ಈ ಲೇಖನವನ್ನೊಮ್ಮೆ ಒಮ್ಮೆ ಓದಿ.

ವಿಶ್ವದ ಅತ್ಯಂತ ದೂರದ ರೈಲು ಪ್ರಯಾಣ ಮಾಸ್ಕೋದಲ್ಲಿ ಆರಂಭವಾಗಿ ವ್ಲಾಡಿವೋಸ್ಟಾಕ್‌ನಲ್ಲಿ ಕೊನೆಗೊಳ್ಳುತ್ತದೆ.

ಪ್ರಯಾಣದ ಅಂತರ    : 5,753 ಮೈಲಿಗಳು
ಪ್ರಯಾಣದ ಸಮಯ   : 6 ದಿನಗಳು
ಪ್ರಯಾಣದ ದರ        : ರೂ. 40,348.75

2. ದಿ ಕೆನಡಿಯನ್ : ಟೊರಾಂಟೊ ಇಂದ ವ್ಯಾಂಕೋವರ್ (ಕೆನಡಾ)

ಈ ರೈಲಿನಲ್ಲಿನ ಪ್ರಯಾಣವನ್ನು ಅತ್ಯಂತ ರೋಮಾಂಚನಕಾರಿ ರೈಲು ಪ್ರಯಾಣ ಎನ್ನಬಹುದು. ಹಿಮ ತುಂಬಿದ ಪ್ರದೇಶದಲ್ಲಿ, ಕಾಡಿನ ಮಧ್ಯೆ ಬೆಟ್ಟ ಗುಡ್ಡಗಳ ನಡುವೆ ಹೋಗುವುದೇ ಒಂದು ವಿಸ್ಮಯ ರೀತಿಯ ಅನುಭವ ಎನ್ನಬಹುದು.

 

ಈ ಪ್ರಯಾಣದಲ್ಲಿ ನಿಮಗೆ ಅದೃಷ್ಟವಿದ್ದರೆ ಜಿಂಕೆ, ಕರಡಿ ಹಾಗು ಮೂಸ್ ಎಂಬ ಅಮೆರಿಕದ ಒಂದು ಜಾತಿಯ ದೊಡ್ಡ ಕಡವೆ ಜಾತಿಯ ಪ್ರಾಣಿಗಳನ್ನು ನೋಡಿ ಕಣ್ಣುತುಂಬಿಕೊಳ್ಳಬಹುದು.

ಪ್ರಯಾಣದ ದೂರ : 2,775 ಮೈಲಿಗಳು
ಪ್ರಯಾಣದ ಸಮಯ : 3 ದಿನಗಳು
ಪ್ರಯಾಣದ ದರ : ರೂ.15,655.31

3. ಶಾಂಘೈ ಇಂದ ಲ್ಹಾಸಾ (ಚೀನಾ)

ಜಾಗತಿಕ ಹಣಕಾಸು ಕೇಂದ್ರ ಎಂದೇ ಗುರುತಿಸಿಕೊಂಡಿರುವ ಶಾಂಘೈ ನಗರದಿಂದ ಟಿಬೆಟಿನ ಸ್ವಾಯತ್ತ ಪ್ರದೇಶದ ರಾಜಧಾನಿಯಾದ ಲ್ಹಾಸಾಗೆ ಈ ರೈಲು ಸಂಚರಿಸುತ್ತದೆ.

 

ಈ ರೈಲು ಚೈನಾದ ಮಧ್ಯಭಾಗದಲ್ಲಿ ಸಂಚರಿಸಿ, ಇಂಪೀರಿಯಲ್‌ನ ಹಳೆಯ ರಾಜಧಾನಿಯಾದ ಕ್ಸಿಯಾನ್ ಮೂಲಕ ಚೈನಾದ ಲ್ಹಾಸಾ ತಲುಪುತ್ತದೆ.

ಪ್ರಯಾಣದ ದೂರ     : 2,717 ಮೈಲಿಗಳು
ಪ್ರಯಾಣದ ಸಮಯ  : 47 ಗಂಟೆ ಮತ್ತು 40 ನಿಮಿಷಗಳು
ಪ್ರಯಾಣದ ದರ       : ರೂ. 3228.12

4. ಸ್ಯಾನ್ ಫ್ರಾನ್ಸಿಸ್ಕೋ ಇಂದ ಚಿಕಾಗೊ (ಚೀನಾ)

ಹೆಚ್ಚು ಕಡಿಮೆ ಎರಡು ದಿನಗಳ ಪ್ರಯಾಣದ ಅವಧಿಯಾಗಿದ್ದು, ಯುನೈಟೆಡ್ ಸ್ಟೇಟ್ಸ್‌ನಲ್ಲಿಯೇ ಅತ್ಯಂತ ರಮಣೀಯ ಪ್ರದೇಶಗಳ ಮಧ್ಯೆ ಈ ರೈಲು ಸಾಗಲಿದೆ.

 

ಕೊಲೊರಾಡೊ ನದಿ, ಬಂಡೆಗಳ ಮಧ್ಯೆ ಮತ್ತು ಸೆರ್ರಾ ನೆವಡಾ ಸರಣಿಗಳ ನಡುವೆ ನಿಮ್ಮ ಕಣ್ಣುಗಳಿಗೆ ಹಬ್ಬ ನೀಡುವಂತಹ ನಿಸರ್ಗದ ಸೌಂದರ್ಯ ಸವಿಯುತ್ತ ನೀವು ಪ್ರಯಾಣ ಮಾಡಬಹುದಾಗಿದೆ.

ಪ್ರಯಾಣದ ದೂರ : 2,438 ಮೈಲಿಗಳು
ಪ್ರಯಾಣದ ಸಮಯ : 51 ಗಂಟೆಗಳು
ಪ್ರಯಾಣದ ದರ : ರೂ. 8,068.62 ಮತ್ತು 48,403.21ಗಳ ಮಧ್ಯೆ ಇರಲಿದೆ.

5. ಇಂಡಿಯನ್ ಪೆಸಿಫಿಕ್: ಪರ್ತ್ ಸಿಡ್ನಿ (ಆಸ್ಟ್ರೇಲಿಯಾ)

ನಾಲ್ಕು ದಿನ ಮತ್ತು ಮೂರು ರಾತ್ರಿಗಳ ಈ ರೈಲು ಪ್ರಯಾಣದಲ್ಲಿ ನುಲ್ಲಾರ್‌ಬೋರ್, ನೀಲಿ ಪರ್ವತಗಳು, ಜಲಪಾತಗಳ ನಡುವೆ ಸಾಗಬೇಕಾಗುತ್ತದೆ.

 

ಈ ಪ್ರಾಯಾಣದಲ್ಲಿ ದ್ರಾಕ್ಷಿ ತೋಟಗಳು ಹೆಚ್ಚು ಕಣ್ಣಿಗೆ ಕಾಣಿಸುತ್ತವೆ. ಹೆಚ್ಚಿನ ಕಡೆ ಬಂಜರು ಭೂಮಿ ನೋಡಬಹುದಾಗಿದೆ.

ಪ್ರಯಾಣದ ಅಂತರ  : 2,704 ಮೈಲಿಗಳು
ಪ್ರಯಾಣದ ಸಮಯ : 65 ಗಂಟೆಗಳು
ಪ್ರಯಾಣದ ದರ      : ರೂ. 38731.24

6. ದಿಬ್ರುಘರ್ ಇಂದ ಕನ್ಯಾಕುಮಾರಿ (ಭಾರತ)

ವಾರಕೊಮ್ಮೆ ಸಂಚರಿಸುವ ಈ ವಿವೇಕ್ ಎಕ್ಸ್‌ಪ್ರೆಸ್ ಸದ್ಯ ಭಾರತದಲ್ಲಿರುವ ಅತ್ಯಂತ ಉದ್ದನೆಯ ರೈಲು ಪ್ರಯಾಣ ಎನ್ನಬಹುದು. ಈ ರೈಲು ಭಾರತದ ಈಶಾನ್ಯ-ದಕ್ಷಿಣ ಭಾಗದ ಗಾಡಿಯಲ್ಲಿ ಸಂಚರಿಸಲಿದ್ದು, ಗಂಟೆಗೆ 32 ಮೈಲಿಯಷ್ಟು ದೂರ ಕ್ರಮಿಸಲಿದೆ.

ಈ ಪ್ರಯಾಣ ಅತ್ಯಂತ ಪ್ರಯಾಸಧಾಯಕವಾಗಿದ್ದು, ಓದುವ ಅಭ್ಯಾಸವಿದ್ದರೆ ಸಮಯ ಕಳೆಯಲು ಸಾಕಷ್ಟು ಪುಸ್ತಕ ಕೊಂಡೊಯ್ಯುವುದು ಒಳಿತು.

ಪ್ರಯಾಣದ ಅಂತರ    : 2,633 ಮೈಲಿಗಳು
ಪ್ರಯಾಣದ ಸಮಯ   : 82 ಗಂಟೆಗಳು(4 ದಿನಗಳು)
ಪ್ರಯಾಣದ ದರ       : ರೂ. 524.36

7. ಪ್ಯಾರಿಸ್-ಮಾಸ್ಕೋ ಎಕ್ಸ್‌ಪ್ರೆಸ್ : ಪ್ಯಾರಿಸ್ (ಫ್ರಾನ್ಸ್) ಇಂದ ಮಾಸ್ಕೋ (ರಷ್ಯಾ)

ಟ್ರಾನ್ಸ್ ಯುರೋಪಿಯನ್ ಮಾರ್ಗವಾಗಿ ಸಂಚರಿಸುವ ಈ ರೈಲು ಫ್ರಾನ್ಸಿನ ರಾಜಧಾನಿ ಇಂದ ರಷ್ಯಾದ ರಾಜಧಾನಿ ತಲುಪಲು ಎರಡು ದಿನಗಳನ್ನು ತೆಗೆದುಕೊಳ್ಳಲಿದೆ.

ಈ ರೈಲು ರಾಷ್ಟ್ರದ ಪ್ರಮುಖ ನಗರಗಳ ಮಧ್ಯೆ ಸಂಪರ್ಕ ಕೊಂಡಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಉತ್ತಮ ರೀತಿಯಲ್ಲಿ ಸೇವೆ ಒದಗಿಸುತ್ತಿದೆ.

ಪ್ರಯಾಣದ ಅಂತರ  : 1,998 ಮೈಲಿಗಳು
ಪ್ರಯಾಣದ ಸಮಯ : 48 ಗಂಟೆಗಳು(2 ದಿನಗಳು)
ಪ್ರಯಾಣದ ದರ      : ರೂ. 14123.02 ಮತ್ತು 52449.39 ಗಳ ಮಧ್ಯೆ ಇರಲಿದೆ.

8. ದಿ ಘಾನ್: ಡಾರ್ವಿನ್ ಇಂದ ಆಡಿಲೈಡ್ (ಆಸ್ಟ್ರೇಲಿಯಾ)

ಎರಡು ರಾತ್ರಿ ಮತ್ತು ಮೂರು ಹಗಲು ಸಂಚಾರ ಮಾಡಲಿರುವ ಈ ದಿ ಘಾನ್ ದೇಶದ ಹೃದಯಭಾಗದಲ್ಲಿ ಸಂಚರಿಸಲಿದೆ.

 

ಅಡಿಲೈಡಿನ ದಕ್ಷಿಣ ಸಮುದ್ರ ತೀರ ಮತ್ತು ಡಾರ್ವಿನ್ನಿನ ಉತ್ತರ ಸಮುದ್ರ ತೀರದ ಮಧ್ಯೆ ಸಂಚರಿಸುವ ಈ ರೈಲು ಹಾದು ಹೋಗಲಿದೆ.

ಪ್ರಯಾಣದ ಅಂತರ: 1,851 ಮೈಲಿಗಳು
ಪ್ರಯಾಣದ ಸಮಯ : 47 ಗಂಟೆಗಳು(2 ದಿನಗಳು)
ಪ್ರಯಾಣದ ದರ : ರೂ. 36545.16

9. ಈಸ್ಟರ್ನ್ ಅಂಡ್ ಒರಿಯಂಟಲ್ ಎಕ್ಸ್‌ಪ್ರೆಸ್ : ಬ್ಯಾಂಕಾಕ್ (ಥಾಯ್ಲೆಂಡ್) ಇಂದ ಸಿಂಗಾಪುರ

1932ರಲ್ಲಿ ಬಿಡುಗಡೆಗೊಂಡ ಶಾಂಘೈ ಎಕ್ಸ್‌ಪ್ರೆಸ್ ಸಿನಿಮಾದ ಪ್ರೇರಣೆಯೊಂದಿಗೆ ನಿರ್ಮಾಣಗೊಂಡ ರೈಲ್ವೆ ಮಾರ್ಗದಲ್ಲಿ ಸಂಚರಿಸುವ ಈ ಈಸ್ಟರ್ನ್ ಅಂಡ್ ಒರಿಯಂಟಲ್ ಎಕ್ಸ್‌ಪ್ರೆಸ್, ಬ್ಯಾಂಕಾಕ್ ಮತ್ತು ಸಿಂಗಪುರದ ನಡುವೆ ಸಂಪರ್ಕ ಸೇತುವೆಯಾಗಿ ಸೇವೆ ಸಲ್ಲಿಸುತ್ತಿದೆ.

 

ಕ್ವಾಯ್ ನದಿಯ ಸೇತುವೆ ಮೇಲೆ ಸಂಚರಿಸುವ ಈ ರೈಲು ಪೆನಾಂಗ್ ನದಿ ಸ್ಪರ್ಶ ಮಾಡಿ ಹಿಂತಿರುಗುತ್ತದೆ.

ಪ್ರಯಾಣದ ಅಂತರ   : 1,355 ಮೈಲಿಗಳು
ಪ್ರಯಾಣದ ಸಮಯ  : 3 ದಿನಗಳು
ಪ್ರಯಾಣದ ದರ       : ರೂ. 36545.16

10. ಬ್ಲೂ ರೈಲು: ಪ್ರಿಟೋರಿಯಾ ಇಂದ ಕೇಪ್ ಟೌನ್ (ದಕ್ಷಿಣ ಆಫ್ರಿಕಾ)

ವೇಗವಾಗಿ ಚಲಿಸುವ ಐಷಾರಾಮಿ ಹೋಟೆಲ್ ಎಂಬ ಹೆಸರನ್ನು ಪಡೆದಿರುವ ಈ ಬ್ಲೂ ರೈಲು, ಬಟ್ಲರ್ ಸೇವೆ, ಧೂಮಪಾನ ಮಾಡುವ ಸ್ಥಳ ಮತ್ತು ಐಷಾರಾಮಿ ಔತಣಕೂಟ ಹೊಂದಿರಲಿದೆ.

ಈ ರೈಲಿನಲ್ಲಿ ಚಲಿಸುವಾಗ ಪ್ರಮುಖ ಆಕರ್ಷಣೆ ಎಂದರೆ ದಕ್ಷಿಣ ಆಫ್ರಿಕಾದ ಅದ್ಭುತ ಕೃಷಿ ಭೂಮಿ, ಅರಣ್ಯ ಪ್ರದೇಶ ಮತ್ತು ದ್ರಾಕ್ಷಿ ತೋಟಗಳು ಕಣ್ಣಿಗೆ ಹಬ್ಬ ನೀಡಲಿವೆ.

Story first published: Friday, April 14, 2017, 17:27 [IST]
English summary
Read in Kannada about Top 10 Longest Train Journeys in the World. Get more details about Top 10 Longest Train Journey's fair, distance, travel time and more.
Please Wait while comments are loading...

Latest Photos