ಜಗತ್ತಿನ 10 ಅತ್ಯಂತ ದುಬಾರಿ ಖಾಸಗಿ ಜೆಟ್ ವಿಮಾನಗಳು

By Nagaraja

ಶ್ರೀಮಂತರು, ಗಣ್ಯ ವ್ಯಕ್ತಿಗಳು ಹಾಗೂ ಉದ್ಯಮಿಗಳು ತಮ್ಮದೇ ಆದ ಖಾಸಗಿ ಜೆಟ್ ವಿಮಾನಗಳನ್ನು ಹೊಂದಿರುತ್ತಾರೆ. ಇದರಲ್ಲಿ ತಮಗೆ ಬೇಕಾದ ಎಲ್ಲ ಖಾಸಗಿ ಸೌಲಭ್ಯಗಳನ್ನು ಹೊಂದಿರುತ್ತಾರೆ.

ಇವನ್ನೂ ಓದಿ: ಟಾಪ್ 10 ವಿಮಾನ ನಿಲ್ದಾಣಗಳು

ಈ ಮೂಲಕ ಖಾಸಗಿ ವಿಮಾನದಲ್ಲಿ ದೂರ ಪ್ರಯಾಣದಿಂದ ಉಂಟಾಗುವ ದೈಹಿಕ ಪರಿಣಾಮ ಹಾಗೂ ಸುಸ್ತಾಗುವುದನ್ನು ತಡೆಯಲು ನೆರವಾಗುತ್ತದೆ. ಇವೆಲ್ಲದಕ್ಕೂ ಮಿಗಿಲಾಗಿ ತಮಗೆ ಮನಬಂದಂತೆ ಅಗತ್ಯ ಸಂದರ್ಭಗಳಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತೆರಳಲು ಸಾಧ್ಯವಾಗುತ್ತದೆ.

ಜಗತ್ತಿನ 10 ಅತ್ಯಂತ ದುಬಾರಿ ಖಾಸಗಿ ಜೆಟ್ ವಿಮಾಗಳು

ಅಂದ ಹಾಗೆ ಸಾಮಾನ್ಯರಿಗೆ ಜೆಟ್ ವಿಮಾನವನ್ನು ಖರೀದಿಸುವುದು ಅಷ್ಟು ಸುಲಭದ ಮಾತಲ್ಲ. ಯಾಕೆಂದರೆ ಇದು ಕೋಟಿಗಿಂತಲೂ ಹೆಚ್ಚು ದುಬಾರಿಯಾಗಿರುತ್ತದೆ. ಈ ಲೇಖನದ ಮೂಲಕ ಜಗತ್ತಿನಲ್ಲಿ ಅತ್ಯಂತ ದುಬಾರಿ ಖಾಸಗಿ ಜೆಟ್ ವಿಮಾನ ಹಾಗೂ ಅವುಗಳನ್ನು ಹೊಂದಿರುವ ಗಣ್ಯ ವ್ಯಕ್ತಿಗಳ ಬಗ್ಗೆ ಚರ್ಚಿಸೋಣವೇ...ಇದಕ್ಕಾಗಿ ಮುಂದಿನ ಪುಟದತ್ತ ಮುಂದುವರಿಯಿರಿ...

10. ದಸ್ಸಾಲ್ಟ್ ಫಾಲ್ಕನ್ 900

10. ದಸ್ಸಾಲ್ಟ್ ಫಾಲ್ಕನ್ 900

ಜಗತ್ತಿನ ಅತ್ಯಂತ ದುಬಾರಿ ಖಾಸಗಿ ಜೆಟ್ ವಿಮಾನಗಳ ಸಾಲಿನಲ್ಲಿ ಕೊನೆಯ ಸ್ಥಾನದಲ್ಲಿ ದಸ್ಸಾಲ್ಟ್ ಫಾಲ್ಕನ್ 900 ಇದೆ. ಇದನ್ನು ಸ್ವಿಜರ್ಲೆಂಡ್ ಮೂಲದ ಉದ್ಯಮಿ ಸೆರ್ಗಿಯೊ ಮ್ಯಾಂಟೆಗಝ ಹೊಂದಿದ್ದಾರೆ. 33 ಮಿಲಿಯನ್ ಅಮೆರಿಕನ್ ಡಾಲರುಗಳಷ್ಟು ದುಬಾರಿಯಾಗಿರುವ ಈ ಜೆಟ್ ವಿಮಾನ, ಅತ್ಯಂತ ವೇಗದ, ದಕ್ಷತೆಯ ಹಾಗೂ ಅತ್ಯಂತ ಹೆಚ್ಚು ತಾಪಮಾನದಲ್ಲೂ ಕಾರ್ಯನಿರ್ವಹಿಸುವಷ್ಟು ಸಮರ್ಥವಾಗಿದೆ. ಇದು ತ್ರಿ ಹನಿವೆಲ್ ಟಿಎಫ್‌ಇ731-5ಬಿಆರ್-1ಸಿ ಟ್ರಬೊಫ್ಯಾನ್ ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿದೆ. ಪ್ರಸ್ತುತ ಜೆಟ್‌ನಲ್ಲಿ ಏಳು ಮಂದಿ ಪ್ರಯಾಣಿಕರಿಗೆ ಸಂಚರಿಸಬಹುದಾಗಿದೆ. ಇದು ಗಂಟೆಗೆ 950 ಕೀ.ಮೀ. ವೇಗವರ್ಧಿಸುವ ಹಾಗೆಯೇ 7,400 ಕೀ.ಮೀ. ವ್ಯಾಪ್ತಿ ವರೆಗೆ ಚಲಿಸುವ ಸಾಮರ್ಥ್ಯ ಹೊಂದಿದೆ.

9. ಎಂಬ್ರೇಯರ್ ಇಎಂಬಿ190ಬಿಜೆ ಲೈನೇಜ್ 1000

9. ಎಂಬ್ರೇಯರ್ ಇಎಂಬಿ190ಬಿಜೆ ಲೈನೇಜ್ 1000

ಮೆಕ್ಸಿಕೊದ ಉದ್ಯಮಿ ಜಾರ್ಜ್ ವರ್ಗರಾ ಅವರು 40.95 ಮಿಲಿಯನ್ ಅಮೆರಿಕನ್ ಡಾಲರ್ ಬೆಲೆ ಬಾಳುವ ಎಂಬ್ರೇಯರ್ ಇಎಂಬಿ190ಬಿಜೆ ಲೈನೇಜ್ 1000 ಜೆಟ್ ವಿಮಾನವನ್ನು ಹೊಂದಿದ್ದಾರೆ. ಬ್ರೆಜಿಲ್‌ನಲ್ಲಿ ವಿನ್ಯಾಸಿತ ಹಾಗೂ ನಿರ್ಮಿತ ಈ ವಿಮಾನ 2 ಜನರಲ್ ಎಲೆಕ್ಟ್ರಿಕ್ ಸಿಎಫ್34-10ಇ ಟರ್ಬೊಫ್ಯಾನ್‌ ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿದೆ. ಅಂತೆಯೇ ತಯಾರಕರ ಪ್ರಕಾರ 8,149 ಕೀ.ಮೀ. ವ್ಯಾಪ್ತಿ ವರೆಗೂ ಚಲಿಸಲಿದೆ.

8. ದಸ್ಸಾಲ್ಟ್ ಫಾಲ್ಕನ್ 7ಎಕ್ಸ್

8. ದಸ್ಸಾಲ್ಟ್ ಫಾಲ್ಕನ್ 7ಎಕ್ಸ್

ಅಮೆರಿಕದ ಖ್ಯಾತ ಉದ್ಯಮಿ 41 ಮಿಲಿಯನ್ ಅಮೆರಿಕನ್ ಡಾಲರ್ ವೆಚ್ಚದ ದಸ್ಸಾಲ್ಟ್ ಫಾಲ್ಕನ್ 7 ಎಕ್ಸ್ ಜೆಟ್ ವಿಮಾನವನ್ನು ಹೊಂದಿದ್ದಾರೆ. ಇದರ ವಿಶೇಷವೆಂದರೆ ತಯಾರಕರು ನೈಜ ವಿಮಾನ ತಯಾರಿಗೂ ಮೊದಲಾಗಿ ಇದರ ನಿರ್ವಹಣೆಯನ್ನು ಖಾತ್ರಿಪಡಿಸಲಿಕ್ಕಾಗಿ ಮೊದಲು ತದ್ರೂಪವನ್ನು ನಿರ್ಮಿಸಿದ್ದರು. ಇದು 3 ಪ್ರಾಟ್, ವಿಟ್ನಿ ಕೆನಡಾ ಪಿಡಬ್ಲ್ಯು307ಎ ಟರ್ಬೊಫ್ಯಾನ್‌ನಿಂದ ನಿಯಂತ್ರಿಸಲ್ಪಡಲಿದ್ದು, ಗಂಟೆಗೆ 900 ಕೀ.ಮೀ. ಅಂತೆಯೇ 11,000 ಕೀ.ಮೀ. ವ್ಯಾಪ್ತಿ ವರೆಗೂ ಚಲಿಸಲಿದೆ.

 7. ಬಂಬಾರ್ಡಿಯರ್ ಬಿಡಿ-700 ಗ್ಲೋಬಲ್ ಎಕ್ಸ್‌ಪ್ರೆಸ್

7. ಬಂಬಾರ್ಡಿಯರ್ ಬಿಡಿ-700 ಗ್ಲೋಬಲ್ ಎಕ್ಸ್‌ಪ್ರೆಸ್

47.7 ಮಿಲಿಯನ್ ಅಮೆರಿಕನ್ ಡಾಲರ್ ಬೆಲೆಬಾಳುವ ಬಂಬಾರ್ಡಿಯರ್ ಬಿಡಿ-700 ಗ್ಲೋಬಲ್ ಎಕ್ಸ್‌ಪ್ರೆಸ್ ಜೆಟ್ ವಿಮಾನದ ಮಾಲಿಕತ್ವವನ್ನು ಸೆಲಿನ್ ಡಿಯನ್ ಮತ್ತು ಓಪ್ರ ವಿನ್ಪ್ರೇ ಹೊಂದಿದ್ದಾರೆ. ಪ್ರಸ್ತುತ ಜೆಟ್, ಎರಡು ಬಿಎಂಡಬ್ಲ್ಯು ರೋಲ್ಸ್ ರಾಯ್ಸ್ ಬಿಆರ್-710ಎ-220 ಟರ್ಬೊಫ್ಯಾನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು ಗಂಟೆಗೆ ಗರಿಷ್ಠ 935 ಕೀ.ಮೀ. ಅಂತೆಯೇ 11,390 ಕೀ.ಮೀ. ವ್ಯಾಪ್ತಿ ವರೆಗೂ ಚಲಿಸಲಿದೆ.

6. ಬೋಯಿಂಗ್ ಬ್ಯುಸಿನೆಸ್ ಜೆಟ್

6. ಬೋಯಿಂಗ್ ಬ್ಯುಸಿನೆಸ್ ಜೆಟ್

ಭಾರತದ ಪ್ರಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಬಳಿಯೂ ಅತಿ ದುಬಾರಿ ಖಾಸಗಿ ಜೆಟ್ ವಿಮಾನವಿದ್ದು, ಇದು ಬರೋಬ್ಬರಿ 55.5 ಮಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟು ದುಬಾರಿಯೆನಿಸಿದೆ. ಇದರಲ್ಲಿ 50 ಪ್ರಯಾಣಿಕರಿಗೆ ಚಲಿಸಬಹುದಾಗಿದೆ. ಇದು 2 ಸಿಎಫ್‌ಎಂ ಇಂಟರ್‌ನ್ಯಾಷನಲ್ ಸಿಎಫ್‌ಎಂ56-7 ಟರ್ಬೊಫ್ಯಾನ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು 11,480 ಕೀ.ಮೀ. ವ್ಯಾಪ್ತಿ ವರೆಗೂ ಚಲಿಸಲಿದೆ. ಹಾಗೆಯೇ ಗಂಟೆಗೆ ಗರಿಷ್ಠ 890 ಕಿ.ಮೀ. ವೇಗವನ್ನು ಪಡೆಯಲಿದೆ.

5. ಗಲ್ಫ್‌ಸ್ಟ್ರೀಮ್ ಜಿ-550

5. ಗಲ್ಫ್‌ಸ್ಟ್ರೀಮ್ ಜಿ-550

ಭಾರತದ ಲಕ್ಷ್ಮೀ ಮಿತ್ತಲ್ ಮತ್ತು ಬ್ರಿಟನ್ ಉದ್ಯಮಿ ಪಿಲಿಪ್ ಗ್ರೀನ್ ಎಂಬವರು ತಲಾ ಒಂದರಂತೆ ಗಲ್ಫ್‌ಸ್ಟ್ರೀಮ್ ಜಿ-550 ಜೆಟ್ ವಿಮಾನವನ್ನು ಹೊಂದಿದ್ದಾರೆ. ಇದರ 59.9 ಮಿಲಿಯನ್ ಅಮೆರಿಕನ್ ಡಾಲರುಗಳಷ್ಟು ದುಬಾರಿಯಾಗಿದೆ. ಮೊದಲ ಐದು ವರ್ಷಗಳ ಸೇವೆಯಲ್ಲಿ ಇದು 40 ಸಿಟಿ ಪೇರ್ ದಾಖಲೆಗಳನ್ನು ಸಾಧಿಸಿತ್ತು. ಈ ಜೆಟ್ ವಿಮಾನದ ಚಾಲಕನು ಕೂರುವ ಕೋಣೆಯಲ್ಲಿ (cockpit) 4 ಹನಿವೆಲ್ ಡಿಯು-1310 ಇಎಫ್ಐಎಸ್ ಸ್ಕ್ರೀನ್, ಗಲ್ಫ್‌ಸ್ಕ್ರೀನ್ ವಿನ್ಯಾಸಿತ ಕರ್ಸರ್ ಕಂಟ್ರೋಲ್ ಸಿಸ್ಟಂ, ವರ್ಧಿತ ವಿಷನ್ ಸಿಸ್ಟಂ (ಇವಿಎಸ್)ಗಳಂತಹ ತಂತ್ರಜ್ಞಾನಗಳಿದ್ದು, ಲ್ಯಾಂಡಿಂಗ್‌ ವೇಳೆ ಹೆಚ್ಚು ಸಹಕಾರಿಯಾಗಲಿದೆ. ರೋಲ್ಸ್ ರಾಯ್ಸ್ ಬಿಆರ್710 ಟರ್ಬೊಫ್ಯಾನ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಈ ಜೆಟ್ ವಿಮಾನ 12,501 ಕೀ.ಮೀ. ವ್ಯಾಪ್ತಿ ವರೆಗೂ ಚಲಿಸಲಿದೆ.

4. ಏರ್‌ಬಸ್ ಎ319 ಕಾರ್ಪೋರೇಟ್ ಜೆಟ್

4. ಏರ್‌ಬಸ್ ಎ319 ಕಾರ್ಪೋರೇಟ್ ಜೆಟ್

ಬೆಂಗಳೂರು ಮೂಲದ ಮದ್ಯದೊರೆ ವಿಜಯ್ ಮಲ್ಯ ಬರೋಬ್ಬರಿ 80.7 ಅಮೆರಿಕನ್ ಡಾಲರ್ ಬೆಲೆ ಬಾಳುವ ಏರ್‌ಬಸ್ ಎ319 ಕಾರ್ಪೋರೇಟ್ ಜೆಟ್ ವಿಮಾನದ ಮಾಲಿಕರಾಗಿದ್ದಾರೆ. ಇದರಲ್ಲಿ 39 ಪ್ರಯಾಣಿಕರಿಗೆ ಕುಳಿತುಕೊಳ್ಳಬಹುದಾಗಿದೆ. ಇದು ಎರಡು ಸಿಎಫ್‌ಎಂ ಇಂಟರ್‌ನ್ಯಾಷನಲ್ ಸಿಎಫ್‌ಎಂ56-5 ಸಿರೀಸ್ ಅಥವಾ ಐಎಇ ವಿ2500 ಸಿರೀಸ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಅಂತೆಯೇ 11,650 ಕೀ.ಮೀ. ವ್ಯಾಪ್ತಿ ವರೆಗೂ ಚಲಿಸಲಿದೆ.

3. ಬೋಯಿಂಗ್ 767

3. ಬೋಯಿಂಗ್ 767

118 ಮಿಲಿಯನ್ ಅಮೆರಿಕಯನ್ ಡಾಲರ್ ವೆಚ್ಚದ ಬೋಯಿಂಗ್ 767 ಜೆಟ್ ವಿಮಾನದ ಒಡೆತನವನ್ನು ರಷ್ಯಾದ ಉದ್ಯಮಿ ರೋಮನ್ ಅಬ್ರಮೊವಿಚ್ ಮತ್ತು ಗೂಲಗ್ ಸ್ಥಾಪಕ ಲ್ಯಾರಿ ಪೇಜ್ ಹೊಂದಿದ್ದಾರೆ. ಇದು ಟು ಪ್ರಾಟ್ ಆಂಡ್ ವೈಟ್ನಿ ಪಿಡಬ್ಲ್ಯು4062 ಟರ್ಬೊಫ್ಯಾನ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು 10,342 ಕೀ.ಮೀ. ವ್ಯಾಪ್ತಿ ವರೆಗೂ ಚಲಿಸಲಿದೆ. ಇದರ ಮಗದೊಂದು ಟು ಸಿಎಫ್6-80ಸಿ2ಬಿ8ಎಫ್ ಎಂಜಿನ್ 10,418 ಕೀ.ಮೀ. ವ್ಯಾಪ್ತಿ ವರೆಗೂ ಚಲಿಸಲಿದೆ.

2. ಬೋಯಿಂಗ್ 747

2. ಬೋಯಿಂಗ್ 747

ದ್ವಿತೀಯ ಸ್ಥಾನದಲ್ಲಿ ಮಗದೊಂದು ಬೋಯಿಂಗ್ 747 ಜೆಟ್ ವಿಮಾನವಿದೆ. ಇದನ್ನು ಉದ್ಯಮಿ ಜೋಸೆಫ್ ಲೌ ಹೊಂದಿದ್ದು, 153 ಅಮೆರಿಕನ್ ಡಾಲರ್‌ಗಳಷ್ಟು ದುಬಾರಿಯೆನಿಸಿದೆ. ಇದು 4 ಜಿಇಎನ್‌ಎಕ್ಸ್-2ಬಿ67 ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿದ್ದು, ಗಂಟೆಗೆ ಗರಿಷ್ಠ 917 ಕೀ.ಮೀ. ಅಂತೆಯೇ 14,800 ಕೀ.ಮೀ. ವ್ಯಾಪ್ತಿ ವರೆಗೂ ಸಂಚರಿಸಲಿದೆ.

1. ಏರ್‌ಬಸ್ ಎ380

1. ಏರ್‌ಬಸ್ ಎ380

ಜಗತ್ತಿನ ಅತ್ಯಂತ ದುಬಾರಿ ಜೆಟ್ ವಿಮಾನವನ್ನು ಸೌದಿ ಅರೇಬಿಯಾದ ಶ್ರೀಮಂತ ಉದ್ಯಮಿ ಹಾಗೂ ಹೂಡಿಕೆದಾರರಾಗಿರುವ ಪ್ರಿನ್ಸ್ ಅಲಾವಲೀದ್ ಬಿನ್ ತಲಾಲ್ ಹೊಂದಿದ್ದಾರೆ. ಪ್ರಸ್ತುತ ಏರ್‌ಬ್ಸ್ ಎ380 ಜೆಟ್ ವಿಮಾನದಲ್ಲಿ ಎಲ್ಲ ವಿಧದ ಖಾಸಗಿ ಸೌಲಭ್ಯಗಳು ನಿಮಗೆ ಲಭ್ಯವಾಗಲಿದೆ. ಇದು ಬರೋಬ್ಬರಿ 300 ಮಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟು ದುಬಾರಿಯಾಗಿದ್ದು ನಾಲ್ಕು ರೋಲ್ಸ್ ರಾಯ್ಸ್ ಟ್ರೆಂಟ್ 900 ಅಥವಾ ಎಂಜಿನ್ ಅಲಯನ್ಸ್ ಜಿಪಿ7200 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. 15.700 ಕೀ.ಮೀ. ವ್ಯಾಪ್ತಿ ವರೆಗೂ ಸಂಚರಿಸಬಹುದಾಗ ಈ ಜೆಟ್ ವಿಮಾನದಲ್ಲಿ ಗಂಟೆಗೆ 900 ಕೀ.ಮೀ. ವರೆಗೆ ವೇಗವರ್ಧಿಸಬಹುದಾಗಿದೆ.

Most Read Articles

Kannada
English summary
With price tags that start from millions to own one, lets take a look at the world's top 10 most expensive private jets and the people who own it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X