ದೇಶದ 15 ನಯನ ಮನೋಹರ ಕಡಲ ತೀರಕ್ಕೆ ಜಾಲಿ ರೈಡ್

By Nagaraja

ಪಶ್ಚಿಮ ದಿಕ್ಕಿನಲ್ಲಿ ಅರಬಿ ಸಮುದ್ರ, ಪೂರ್ವದಲ್ಲಿ ಬಂಗಾಳ ಕೊಲ್ಲಿ ಹಾಗೂ ದಕ್ಷಿಣದಲ್ಲಿ ಹಿಂದೂಮಹಾಸಾಗರ ಹರಡಿರುವ ನಮ್ಮ ಭವ್ಯ ಭಾರತದಲ್ಲಿ ಬೀಚು ಅಥವಾ ಸಮುದ್ರ ತೀರಗಳಿಗೆ ಭರವಿಲ್ಲ. ಶೇಕಡಾ 75ರಷ್ಟು ಭಾಗವನ್ನು ಸಮುದ್ರ ತೀರದೊಂದಿಗೆ ಹಂಚಿಕೊಂಡಿರುವ ಭಾರತದಲ್ಲಿ ನಯನ ಮನೋಹರ ಕಡಲ ತೀರ ಪ್ರದೇಶವು ಶಾಂತತೆಯ ಪ್ರತೀಕವಾಗಿದೆ.

ಪ್ರೇಮಿಗಳಿಗೆ ಬೀಚುಗಳೆಂದರೆ ಬಲು ಪ್ರಿಯ. ಭೋರ್ಗೆರೆಯುವ ಕಡಲ ಅಲೆಗಳ ನಡುವೆ ಬೀಸುವ ಗಾಳಿಯು ಎಷ್ಟೇ ಭಾರದ ಮನಸ್ಸನ್ನೊಮ್ಮೆ ತಣ್ಣಗಾಗಿಸುತ್ತದೆ. ಅಷ್ಟಕ್ಕೂ ದೈನಂದಿನ ರಸ್ತೆ, ಟ್ರಾಫಿಕ್ ಉಪಟಳದಿಂದ ಬೆಸತ್ತು ಹೋಗಿದ್ದೀರಾ? ಸದಾ ಹೊಸತನದೊಂದಿಗೆ ಬರುವ ನಿಮ್ಮ ಡ್ರೈವ್ ಸ್ಪಾರ್ಕ್ ಈಗ ಕಡಲ ಕಿನಾರೆಯಲ್ಲಿ ಚಾಲನೆ ಮಾಡಬಲ್ಲ ದೇಶದ 15 ನಯನ ಮನೋಹರ ಬೀಚುಗಳತ್ತ ಪಯಣ ಬೆಳೆಸಲಿದೆ. ಬನ್ನಿ ನೀವು ನಮ್ಮ ಜೊತೆಗೂಡಿರಿ. ಕೊನೆಯಲ್ಲಿ ಕೊಟ್ಟಿರುವ ಎರಡು ಬೀಚುಗಳು ನಿಮ್ಮ ಹೆಮ್ಮೆಗೆ ಕಾರಣವಾಗಲಿದೆ ಅಲ್ಲವೇ?

ದೇಶದ 15 ನಯನ ಮನೋಹರ ಕಡಲ ತೀರಕ್ಕೆ ಜಾಲಿ ರೈಡ್

ಕಡಲ ಕಿನಾರೆಯನ್ನು ಚುಂಬಿಸುವ ಅಲೆಗಳ ನಡುವೆ ಮೈಮರೆಯುವ ಯುವ ಮನಸ್ಸಿಗೆ ಈ ಚಾಲನಾ ಅನುಭವ ಅತ್ಯಂತ ಅದ್ಭುತವಾಗಿರಲಿದೆ.

1. ವರ್ಕಲ ಕಡಲ ಕಿನಾರೆ (Varkala)

1. ವರ್ಕಲ ಕಡಲ ಕಿನಾರೆ (Varkala)

ಕಲ್ಪವೃಕ್ಷದ ನಾಡು ಕೇರಳದಲ್ಲಿ ಹೇಳಿದಷ್ಟು ಮುಗಿಯಲಾರದ ಪ್ರವಾಸಿ ತಾಣಗಳಿವೆ. ವರ್ಕಲ ಬೀಚ್ ಕೇರಳದ ರಾಜಧಾನಿ ತಿರುವನಂತಪುರದಲ್ಲಿ ಸ್ಥಿತಗೊಂಡಿದೆ. ನೀಲಿ ಬಣ್ಣದಿಂದ ಕಂಗೊಳಿಸುವ ಅರೇಬಿಯನ್ ಸಮುದ್ರಗಳ ತಡದಲ್ಲಿರುವ ದೊಡ್ಡ ದೊಡ್ಡ ಬಂಡೆ ಕಲ್ಲುಗಳು ಎಂಥವರನ್ನು ಒಮ್ಮೆ ಸ್ತಬ್ಧಗೊಳಿಸುವಂತಿದೆ. ಅಲ್ಲದೆ ಸೂರ್ಯನ ಉರಿ ಬಿಳಿಸಿನಲ್ಲಿ ಸ್ನಾನ ಮಾಡುವುದಕ್ಕೆ ಈ ಬೀಚ್ ಹೆಸರುವಾಸಿಯಾಗಿದೆ.

ತಲುಪುವುದು ಹೇಗೆ?

ಬೆಂಗಳೂರಿನಿಂದ 680+ ಕೀ.ಮೀ.

ಹಾದಿ ರಾಷ್ಟ್ರೀಯ ಹೆದ್ದಾರಿ 7, 12 ಗಂಟೆಗಳ ಪಯಣ

ಅತ್ಯುತ್ತಮ ಭೇಟಿ ಕಾಲ: ಅಕ್ಟೋಬರ್ ನಿಂದ ಮಾರ್ಚ್

02. ಮುಳಪ್ಪಿಲಘಾಂಡ್ (Muzhappilangad) ಬೀಚ್

02. ಮುಳಪ್ಪಿಲಘಾಂಡ್ (Muzhappilangad) ಬೀಚ್

ಏಷ್ಯಾದಲ್ಲೇ ಚಾಲನೆ ಮಾಡಬಹುದಾದ ಅತಿ ದೊಡ್ಡ ಬೀಚ್ ಎಂಬ ಗೌರವಕ್ಕೆ ಪಾತ್ರವಾಗಿರುವ ಮುಳಪ್ಪಿಲಘಾಂಡ್ ಬೀಚ್ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಸ್ಥಿತಗೊಂಡಿದೆ. ಕಣ್ಣೂರು ಹಾಗೂ ತಲಶ್ಶೇರಿ ನಡುವೆ ಇರುವ ಈ ಕಡಲ ಕಿನಾರೆಯಲ್ಲಿ ನಾಲ್ಕು ಕೀ.ಮೀ. ಉದ್ದದ ಕಡಲ ಕಿನಾರೆ ಹರಡಿದೆ. ಸುತ್ತಲೂ ಬಂಡೆಕಲ್ಲುಗಳಿಂದ ಆವರಿಸ್ಪಟ್ಟ ಈ ಬೀಚ್ ದೇಶದಲ್ಲೇ ಅತಿ ವಿಶಿಷ್ಟ ಕಡಲ ಕಿನಾರೆಗಳಲ್ಲಿ ಒಂದಾಗಿದೆ.

ತಲುಪುವುದು ಹೇಗೆ?

ಬೆಂಗಳೂರಿನಿಂದ 615 ಕೀ.ಮೀ.

ಹಾದಿ ರಾಷ್ಟ್ರೀಯ ಹೆದ್ದಾರಿ 17, 6 ತಾಸು 57 ನಿಮಿಷಗಳ ಪಯಣ

ಅತ್ಯುತ್ತಮ ಭೇಟಿ ಕಾಲ: ಸೆಪ್ಟೆಂಬರ್ ನಿಂದ ಮಾರ್ಚ್

03. ತರ್ಕಾರ್ಲಿ (Tarkarli)

03. ತರ್ಕಾರ್ಲಿ (Tarkarli)

ಕೇರಳದಿಂದ ನೇರವಾಗಿ ಸ್ವಲ್ಪ ದೂರದ ಮಹಾರಾಷ್ಟ್ರವನ್ನು ತಲುಪಿದಾಗ ಕೊಂಕಣ ತೀರ ಪ್ರದೇಶದಲ್ಲಿ ಒಂದು ಕಲರ್ ಫುಲ್ ಬೀಚ್ ಕಾಣಸಿಗುವುದು. ಇಲ್ಲಿ ಕಡಲ ಕಿನಾರೆಯ ಸಮೀಪದಲ್ಲಿ ಕ್ರಿಕೆಟ್ ಆಡುವ ಮಕ್ಕಳನ್ನು ಕಾಣಬಹುದಾಗಿದೆ. ಪ್ರೇಮಿಗಳಿಗಂತೂ ಲೋಕವೇ ಮರೆತಂಥ ಅನುಭವ ನೀಡಲಿದೆ.

ತಲುಪುವುದು ಹೇಗೆ?

ಬೆಂಗಳೂರಿನಿಂದ 648 ಕೀ.ಮೀ.

ರಾಷ್ಟ್ರೀಯ ಹೆದ್ದಾರಿ 4, 10 ತಾಸುಗಳ ಪಯಣ

ಅತ್ಯುತ್ತಮ ಭೇಟಿ ಕಾಲ: ಅಕ್ಟೋಬರ್ ನಿಂದ ಡಿಸೆಂಬರ್.

04. ಲೈಟ್ ಹೌಸ್ ಬೀಚ್ (Lighthouse)

04. ಲೈಟ್ ಹೌಸ್ ಬೀಚ್ (Lighthouse)

ನಿಮ್ಮ ಪ್ರೇಯಸಿಯ ಜೊತೆ 'ಲಿಪ್ ಲಾಕ್' ಚುಂಬನ ಮಾಡುವ ಆಸೆ ಹುಟ್ಟಿದೆಯೇ? ನಿಮಗೆ ಲೈಟ್ ಹೌಸ್ ಬೀಚ್ ಉತ್ತರವಾಗಲಿದೆ. ಆದರೆ ನೈತಿಕ ಪೊಲೀಸಗಿರಿ ಎದುರಾದರೆ ನಾವು ಹೊಣೆಗಾರರಲ್ಲ? ಕೇರಳ ರಾಜಧಾನಿ ತಿರುವನಂತಪುರದಲ್ಲೇ ಸ್ಥಿತಗೊಂಡಿರುವ ಲೈಟ್ ಹೌಸ್ ಬೀಚ್ ಸಂಜೆ ವೇಳೆಯಲ್ಲಿ ಅತ್ಯಂತ ಪ್ರಕಾಶಮಾನವೆನಿಸುತ್ತದೆ. ಹಳೆಯ ವಿಲಿಝಂ ಲೈಟ್ ಹೌಸ್ 35 ಮೀಟರ್ ಎತ್ತರದಲ್ಲೇ ಸ್ಥಿತಗೊಂಡಿರುವುದಕ್ಕೆ ಇದಕ್ಕೆ ಈ ಹೆಸರು ಬರಲು ಕಾರಣವಾಗಿದೆ.

ತಲುಪುವುದು ಹೇಗೆ?

ಬೆಂಗಳೂರಿನಿಂದ 772 ಕೀ.ಮೀ.

ರಾಷ್ಟ್ರೀಯ ಹೆದ್ದಾರಿ 7, 11 ಗಂಟೆ 9 ನಿಮಿಷಗಳ ಪಯಣ

ಅತ್ಯುತ್ತಮ ಭೇಟಿ ಕಾಲ: ಸೆಪ್ಟೆಂಬರ್ ನಿಂದ ಫೆಬ್ರವರಿ

05. ಪ್ಯಾರಡೈಸ್ ಬೀಚ್ (Paradise)

05. ಪ್ಯಾರಡೈಸ್ ಬೀಚ್ (Paradise)

ಫ್ರಾನ್ಸ್ ಅಧೀನತೆಯಲ್ಲಿದ್ದ ಪಾಂಡಿಚೇರಿಯಲ್ಲಿ ಈಗಲೂ ವಿದೇಶ ಸಂಸ್ಕೃತಿ ಪಸರಿಸಿದೆ. ಇಲ್ಲಿನ 8 ಕೀ.ಮೀ. ದೂರದಲ್ಲಿರುವ ಸಮುದ್ರ ಕಿನಾರೆಯು ಬೋಟ್ ವಿಹಾರಕ್ಕೆ ಹೆಚ್ಚಿನ ಖ್ಯಾತಿ ಪಡೆದಿದೆ.

ತಲುಪುವುದು ಹೇಗೆ?

ಬೆಂಗಳೂರಿನಿಂದ 377 ಕೀ.ಮೀ.

ರಾಷ್ಟ್ರೀಯ ಹೆದ್ದಾರಿ 46, 6 ತಾಸು 10 ನಿಮಿಷಗಳ ಪಯಣ

ಅತ್ಯುತ್ತಮ ಭೇಟಿ ಕಾಲ: ಅಕ್ಟೋಬರ್ ನಿಂದ ಫೆಬ್ರವರಿ

06. ಧನುಷ್ಕೋಡಿ ಬೀಚ್ (Dhanushkodi)

06. ಧನುಷ್ಕೋಡಿ ಬೀಚ್ (Dhanushkodi)

ರಾಮೇಶ್ವರಂ ದ್ವೀಪದ ದಕ್ಷಿಣದ ತುತ್ತತುದಿಯಲ್ಲಿರುವ ಧುನಿಷ್ಕೋಡಿ ಸಮುದ್ರ ತಟದ ನೈಸರ್ಗಿಕ ಆಶ್ಚರ್ಯವನ್ನುಂಟು ಮಾಡುತ್ತದೆ. ರಾಮೇಶ್ವರಂನಿಂದ 20 ಕೀ.ಮೀ. ದೂರದಲ್ಲಿರುವ ಈ ಬೀಚ್ ಒಂದು ಕಡೆಯಿಂದ ಬಂಗಾಳ ಕೊಲ್ಲಿ ಹಾಗೂ ಇನ್ನೊಂದು ತುದಿಯಿಂದ ಹಿಂದೂಮಹಾಸಾಗರಗಳ ಸಂಗಮವಾಗುತ್ತಿದೆ. ಇದು ಪ್ರವಾಸಿಗಳಿಗೆ ನಿಜಕ್ಕೂ ರಸದೌತಣವನ್ನು ನೀಡುತ್ತದೆ. ರಾಮಾಯಣದಲ್ಲಿ ಶ್ರೀರಾಮ ಪ್ರಭು ಸೀತಾನ್ವೇಷಣೆಯ ಸಂದರ್ಭದಲ್ಲಿ ಹನುಮಾನ್ ನೇತೃತ್ವದ ವಾನರ ಸೇನೆಯು ಇಲ್ಲಿಂದಲೇ ರಾಮಸೇತು ನಿರ್ಮಿಸುವ ಮೂಲಕ ಶ್ರೀಲಂಕಾದತ್ತ ಪಯಣ ಬೆಳೆಸಿತ್ತು. ಇದಕ್ಕೂ ಇಲ್ಲಿ ಕುರುಹುಗಳಿವೆ.

ತಲುಪುವುದು ಹೇಗೆ?

ಬೆಂಗಳೂರಿನಿಂದ 623 ಕೀ.ಮೀ.

ರಾಷ್ಟ್ರೀಯ ಹೆದ್ದಾರಿ 49, 10 ಗಂಟೆ 19 ನಿಮಿಷಗಳ ಪಯಣ

ಅತ್ಯುತ್ತಮ ಭೇಟಿ ಕಾಲ: ಅಕ್ಟೋಬರ್ ನಿಂದ ಎಪ್ರಿಲ್.

07. ಮರಾರಿ ಬೀಚ್ (Marari)

07. ಮರಾರಿ ಬೀಚ್ (Marari)

ಮರಾರಿ ಬೀಚ್ ಕೇರಳದ ಆಲೆಪ್ಪಿ ಜಿಲ್ಲಿಯಲ್ಲಿದೆ. ತಮ್ಮ ರಜಾ ಸಮಯ ಕಳೆಯಲು ಬಯಸುವವರಿಗೆ ಇಂದೊಂದು ಅತ್ಯುತ್ತಮ ಆಯ್ಕೆಯಾಗಿರಲಿದೆ. ಹಿನ್ನೀರುಗಳಿಂದ ತುಂಬಿಕೊಂಡಿರುವ ಆಲೆಪ್ಪಿ ಕೇರಳದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಹಿನ್ನೀರಿನ ಪ್ರಶಾಂತತೆ, ಹಕ್ಕಿಗಳು ಚಿಲಿಪಿಲಿ ಗುಟ್ಟುವುದು ಇಲ್ಲಿನ ಪ್ರವಾಸಿಗರಿಗೆ ಹೊಸತನವನ್ನು ನೀಡಲಿದೆ.

ತಲುಪುವುದು ಹೇಗೆ?

ಬೆಂಗಳೂರಿನಿಂದ 600 ಕೀ.ಮೀ.

ರಾಷ್ಟ್ರೀಯ ಹೆದ್ದಾರಿ 7 ಹಾಗೂ 47, 10 ತಾಸು 50 ನಿಮಿಷಗಳ ಪಯಣ

ಅತ್ಯುತ್ತಮ ಭೇಟಿ ಕಾಲ: ಸೆಪ್ಟೆಂಬರ್ ನಿಂದ ಮಾರ್ಚ್

08. ಬಟರ್ ಫ್ಲೈ ಬೀಚ್ (Butterfly)

08. ಬಟರ್ ಫ್ಲೈ ಬೀಚ್ (Butterfly)

ಗೋವಾದ ರಹಸ್ಯ ಬೀಚ್ ಗಳಲ್ಲಿ ಇದೂ ಒಂದಾಗಿದ್ದು, ಡಾಲ್ಫಿನ್ ಗಳ ಚಕ್ಕಂದವಾಟವನ್ನು ನೀವು ಕಾಣಬಹುದಾಗಿದೆ. ಸಾಮಾನ್ಯ ಗೋವಾ ಪ್ರವಾಸಿ ತಾಣಗಿಂತಲೂ ವಿಭಿನ್ನವಾಗಿರುವ ಬಟರ್ ಫ್ಲೈ ಬೀಚ್ ರಸ್ತೆ ಮಾರ್ಗವಾಗಿ ತಲುಪಲು ಸಾಧ್ಯವಿಲ್ಲ. ಇದೇ ಕಾರಣಕ್ಕಾಗಿ ರಹಸ್ಯ ಕಡಲ ಕಿನಾರೆಯೆಂಬ ಪಟ್ಟ ಕಟ್ಟಿಕೊಂಡಿದೆ.

ತಲುಪುವುದು ಹೇಗೆ?

ದಕ್ಷಿಣ ಗೋವಾದ ಬಟರ್ ಫ್ಲೈ ದ್ವೀಪದಲ್ಲಿ ಸ್ಥಿತಗೊಂಡಿರುವ ಪ್ರಸ್ತುತ ಬೀಚ್ ತಲುಪುವುದೇ ಸಾಹಸ ಯಾತ್ರೆಗೆ ಸಮಾನವಾಗಿರಲಿದೆ. ಇದಕ್ಕಾಗಿ ನೀವು ಪಾಲೊಲೆಮ್ (Palolem) ಬೀಚ್ ನಿಂದ ಬೋಟ್ ಹತ್ತಬೇಕಾಗಿದೆ.

ಬೆಂಗಳೂರಿನಿಂದ 600 ಕೀ.ಮೀ.

ರಾಷ್ಟ್ರೀಯ ಹೆದ್ದಾರಿ 4, 8 ತಾಸು 38 ನಿಮಿಷಗಳ ಪಯಣ

ಅತ್ಯುತ್ತಮ ಭೇಟಿ ಕಾಲ: ಅಕ್ಟೋಬರ್ ನಿಂದ ಫೆಬ್ರವರಿ.

09. ಗಲ್ಗಿಬಾಬಾ ಬೀಚ್ (Galgibaga)

09. ಗಲ್ಗಿಬಾಬಾ ಬೀಚ್ (Galgibaga)

ಗೋವಾ ರಹಸ್ಯ ಬೀಚ್ ಗಳಲ್ಲಿ ಇದೂ ಒಂದಾಗಿದೆ. ಮಳೆಗಾಲದಲ್ಲಿ ಗಲ್ಗಿಬಾಬಾ ಕಡಲ ಕಿನಾರೆಯಲ್ಲಿ ಚಾಲನೆ ಮಾಡಲು ಅತ್ಯಾದ್ಭುತ ಅನುಭವ ನೀಡಲಿದೆ. ಕರ್ನಾಟಕದಿಂದ ಕೆಲವೇ ಕೀ.ಮೀ.ಗಳಷ್ಟೇ ದೂರದಲ್ಲಿರುವ ಇಲ್ಲಿ ಪ್ರಕೃತಿಯ ಸೌಂದರ್ಯವನ್ನು ಸವಿಯಬಹುದಾಗಿದೆ.

ತಲುಪುವುದು ಹೇಗೆ?

ಬೆಂಗಳೂರಿನಿಂದ 540.8 ಕೀ.ಮೀ.

ರಾಷ್ಟ್ರೀಯ ಹೆದ್ದಾರಿ 4, 8 ತಾಸು 13 ನಿಮಿಷಗಳ ಪಯಣ

ಅತ್ಯುತ್ತಮ ಭೇಟಿ ಕಾಲ: ಜುಲೈನಿಂದ ಫೆಬ್ರವರಿ

 10. ಭೋಗವೇ ಬೀಚ್ (Bhogave)

10. ಭೋಗವೇ ಬೀಚ್ (Bhogave)

ಇತಿಹಾಸ ಪ್ರೇಮಿಗಳು ಹಾಗೂ ಪರಿಸರವಾದಿಗಳಿಗೆ ಕಂಪ್ಲೀಟ್ ಪ್ಯಾಕೇಜ್ ಅನ್ನು ಮಹಾರಾಷ್ಟ್ರದ ಭೋಗವೇ ಬೀಚ್ ನೀಡಲಿದೆ. ಅತ್ಯಂತ ಸುಂದರ ಹಾಗೂ ಶುಭ್ರವಾದ ಕಡಲ ಕಿನಾರೆಯು ಇದಾಗಿದೆ.

ತಲುಪುವುದು ಹೇಗೆ?

ಬೆಂಗಳೂರಿನಿಂದ 640 ಕೀ.ಮೀ.

ರಾಷ್ಟ್ರೀಯ ಹೆದ್ದಾರಿ 4, 9 ತಾಸು 53 ನಿಮಿಷಗಳ ಪಯಣ

ಅತ್ಯುತ್ತಮ ಭೇಟಿ ಕಾಲ: ಜುಲೈನಿಂದ ಫೆಬ್ರವರಿ

11. ಪೊಲೆಮ್ ಬೀಚ್ (Polem)

11. ಪೊಲೆಮ್ ಬೀಚ್ (Polem)

ಗೋವಾದಲ್ಲಿ ಅನೇಕ ಬೀಚುಗಳಿವೆ. ಗೋವಾ ಪ್ರವಾಸಿ ಬೆಳವಣಿಯಲ್ಲಿ ಇದರ ಪಾತ್ರ ಮಹತ್ತರವಾಗಿದೆ. ಕರ್ನಾಟಕಕ್ಕೆ ತಾಗಿಕೊಂಡಿರುವ ಈ ಸಮುದ್ರ ತಟದಲ್ಲಿ ಮೀನುಗಾರಿಕೆ ಜೊತೆಗೆ ಸ್ಥಳೀಯರ ಚಟುವಟಿಕೆಗಳ ಅನುಭವ ಸಿಗಲಿದೆ.

ತಲುಪುವುದು ಹೇಗೆ?

ಬೆಂಗಳೂರಿನಿಂದ 600 ಕೀ.ಮೀ.

ರಾಷ್ಟ್ರೀಯ ಹೆದ್ದಾರಿ 4, 8 ತಾಸು 38 ನಿಮಿಷಗಳ ಪಯಣ

ಅತ್ಯುತ್ತಮ ಭೇಟಿ ಕಾಲ: ಅಕ್ಟೋಬರ್ ನಿಂದ ಫೆಬ್ರವರಿ

12. ತಿರುಚೊಪುರಂ ಬೀಚ್ (Thiruchopuram)

12. ತಿರುಚೊಪುರಂ ಬೀಚ್ (Thiruchopuram)

ತಮಿಳುನಾಡಿನಲ್ಲಿ ಸ್ಥಿತಗೊಂಡಿರುವ ತಿರುಚೊಪುರಂ ಬೀಚ್ ಕಂಡುಹಿಡಿಯುವುದು ಸ್ವಲ್ಪ ಕಷ್ಟಕರ. ಹಾಗಾಗಿ ನಿಮ್ಮ ಕಾರಿನ ಜಿಪಿಎಸ್ ಆನ್ ಮಾಡಿಟ್ಟರೆ ಒಳ್ಳೆಯದು. ಇಲ್ಲಿ ನಿಮಗೆ ಪ್ರವಾಸಿಗರ ತೊಂದರೆ ಇರಲಾರದು. ಅಲ್ಲದೆ ಚೆನ್ನೈನ ಉರಿ ಬಿಸಿಲು, ಟ್ರಾಫಿಕ್ ನಿಂದ ಮುಕ್ತಿ ಪಡೆಯಬಹುದಾಗಿದೆ.

ತಲುಪುವುದು ಹೇಗೆ?

ಬೆಂಗಳೂರಿನಿಂದ 334 ಕೀ.ಮೀ.

6 ಗಂಟೆ 9 ನಿಮಿಷಗಳ ಪಯಣ

ಅತ್ಯುತ್ತಮ ಭೇಟಿ ಕಾಲ: ನವೆಂಬರ್ ನಿಂದ ಫೆಬ್ರವರಿ

13. ಕಪ್ಪಿಲ್ ಬೀಚ್ (Kappil Beach)

13. ಕಪ್ಪಿಲ್ ಬೀಚ್ (Kappil Beach)

ರಮನೀಯ ಬೇಕಲೆ ಕೋಟೆಯಿಂದ ಆರು ಕೀ.ಮೀ.ಗಳಷ್ಟೇ ದೂರದಲ್ಲಿರುವ ಕಪ್ಪಿಲ್ ಬೀಚ್ ಉತ್ತರ ಕೇರಳದ ಸೌಂದರ್ಯವನ್ನು ಮನಬೀಸಿ ಕರೆಯುತ್ತಿದೆ. ಇದು ಸಮುದ್ರ, ನದಿ ಮತ್ತು ಹಿನ್ನೀರುಗಳ ಸಂಗಮಕ್ಕೆ ಪ್ರಸಿದ್ಧಿಯಾಗಿದೆ.

ತಲುಪುವುದು ಹೇಗೆ?

ಬೆಂಗಳೂರಿನಿಂದ 685 ಕೀ.ಮೀ.

ರಾಷ್ಟ್ರೀಯ ಹೆದ್ದಾರಿ 7, 11 ತಾಸು 23 ನಿಮಿಷಗಳ ಪಯಣ

ಅತ್ಯುತ್ತಮ ಭೇಟಿ ಕಾಲ: ಸೆಪ್ಟೆಂಬರ್ ನಿಂದ ಮಾರ್ಚ್

14. ಗೋಕರ್ಣ ಬೀಚ್

14. ಗೋಕರ್ಣ ಬೀಚ್

ಉತ್ತರ ಕರ್ನಾಟಕದಲ್ಲಿ ಸ್ಥಿತಗೊಂಡಿರುವ ಗೋಕರ್ಣ ಬೀಚ್ ಮನೋಹರ ಪ್ರವಾಸಿ ತಾಣವಾಗಿದ್ದು ಅನೇಕ ಐತಿಹ್ಯಗಳನ್ನು ಹೊಂದಿದೆ. ಗೋಕರ್ಣ ಮಹಾಬಲೇಶ್ವರ ಸೇರಿದಂತೆ ಅನೇಕ ಪುರಾತನ ದೇವಾಲಯಗಳಿಗೆ ನೀವಿಲ್ಲಿ ಭೇಟಿ ಕೊಡಬಹುದಾಗಿದೆ. ದೇವಾಲಯಗಳ ಸಮೀಪದಲ್ಲಿಯೇ ಸುಂದರ ಕಡಲ ತೀರವಿದ್ದು ನೋಡಲು ತುಂಬಾ ಆಕಷ೯ಣೀಯವಾಗಿದೆ. ಇದೊಂದು ಪ್ರವಾಸಿಗರ ತಾಣವಾಗಿದ್ದು ದೇಶ-ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಾರೆ.

ತಲುಪುವುದು ಹೇಗೆ ?

ಬೆಂಗಳೂರಿನಿಂದ 518 ಕೀ.ಮೀ.

ರಾಷ್ಟ್ರೀಯ ಹೆದ್ದಾರಿ 4, ಏಳು ತಾಸು 52 ನಿಮಿಷಗಳ ಪಯಣ

ಅತ್ಯುತ್ತಮ ಭೇಟಿ ಕಾಲ: ಸೆಪ್ಟೆಂಬರ್ ನಿಂದ ಫೆಬ್ರವರಿ

15. ಮುರುಡೇಶ್ವರ ಬೀಚ್

15. ಮುರುಡೇಶ್ವರ ಬೀಚ್

ಮುರುಡೇಶ್ವರ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿದೆ. ಇಲ್ಲಿರುವ ಮುರುಡೇಶ್ವರ ಸ್ವಾಮಿಯ ದೇವಸ್ಥಾನವು ಧಾರ್ಮಿಕ ಪುಣ್ಯ ಸ್ಠಳವಾಗಿದ್ದು, ಐತಿಹಾಸಿಕವಾಗಿ ಪ್ರಖ್ಯಾತಿಯನ್ನು ಹೊಂದಿದೆ. ಅರಬ್ಬೀ ಸಮುದ್ರದ ತೀರದಲ್ಲಿರುವ ಈ ಊರು, ಪ್ರಪಂಚದ ಅತ್ಯಂತ ಎತ್ತರದ ಶಿವನ ವಿಗ್ರಹಕ್ಕೆ ಹೆಸರುವಾಸಿ ಯಾಗಿದೆ. ಮುರುಡೇಶ್ವರ ಕೇವಲ ಧಾರ್ಮಿಕ ಕ್ಷೇತ್ರ ಮಾತ್ರವಲ್ಲ, ಪ್ರವಾಸಿ ತಾಣವೂ ಆಗಿದೆ.

ತಲುಪುವುದು ಹೇಗೆ?

ಬೆಂಗಳೂರಿನಿಂದ 506.5 ಕೀ.ಮೀ.

ರಾಷ್ಟ್ರೀಯ ಹೆದ್ದಾರಿ 4, 8 ತಾಸು 29 ನಿಮಿಷಗಳ ಪಯಣ

ಅತ್ಯುತ್ತಮ ಭೇಟಿ ಕಾಲ: ಸೆಪ್ಟೆಂಬರ್ ನಿಂದ ಫೆಬ್ರವರಿ

ದೇಶದ 15 ನಯನ ಮನೋಹರ ಕಡಲ ತೀರಕ್ಕೆ ಜಾಲಿ ರೈಡ್

ಈಗ ನಿಮಗೆ ಹತ್ತಿರವಾದ ಕಡಲ ಕಿನಾರೆ ಹಾಗೂ ಅವುಗಳ ಜನಪ್ರಿಯತೆಯ ಬಗ್ಗೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಿರಿ.


Most Read Articles

Kannada
English summary
So here is our list of top 15 scenic beaches in India to drive through. After hitting these beaches, you will realise seawater is good for the skin, coastal breezes cleanse the soul and swimming is healthy for the heart.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X