ಜಗತ್ತಿನ ಅತಿ ವೇಗದ 20 ವಿಹಾರ ನೌಕೆಗಳು

ಆಧುನಿಕ ಜಗತ್ತಿನಲ್ಲಿ ಮನರಂಜನೆಗೂ ಹೆಚ್ಚಿನ ಪ್ರಾಮುಖ್ಯತೆಯಿದೆ. ಪ್ರತಿಯೊಬ್ಬರೂ ತಮ್ಮ ಬಿಡುವಿನ ಸಂದರ್ಭದಲ್ಲಿ ಕುಟುಂಬ ಹಾಗೂ ಗೆಳೆಯ ಗೆಳತಿಯರ ಜೊತೆ ತಮ್ಮ ಕಾಲವನ್ನು ಕಳೆಯನ್ನು ಬಯಸುತ್ತಾರೆ.

ಇದರಂತೆ ಜಲಕ್ರೀಡೆಗೂ ಅಷ್ಟೇ ಮಹತ್ವವಿದೆ. ಬರ ಬರುತ್ತಾ ವಿಹಾರ ನೌಕೆಗಳು ಪ್ರವಾಸಿಗಳ ಪಾಲಿಗೆ ಹೆಚ್ಚಿನ ಮೋಜು ಸೃಷ್ಟಿ ಮಾಡುತ್ತಿದೆ. ಇಂದಿನ ಈ ಲೇಖನದಲ್ಲಿ ಜಗತ್ತಿನ ಅತಿ ವೇಗದ 20 ವಿಹಾರ ನೌಕೆಗಳ ಬಗ್ಗೆ ಚರ್ಚಿಸಲಿದ್ದೇವೆ. ಇದು ನಿಮಗೆ ಇಷ್ಟವಾಗಲಿದೆ ಎಂಬುದು ನಮ್ಮ ಆಶಯವಾಗಿದೆ. ಹಾಗೆಯೇ ನಿಮ್ಮ ಸ್ನೇಹಿತರೊಂದಿಗೂ ಹಂಚಿಕೊಳ್ಳಲು ಮರೆಯದಿರಿ...

1. ವರ್ಲ್ಡ್ ಈಸ್ ನಾಟ್ ಈನಫ್ - 70 ನಾಟ್

1. ವರ್ಲ್ಡ್ ಈಸ್ ನಾಟ್ ಈನಫ್ - 70 ನಾಟ್

ವರ್ಲ್ಡ್ ಈಸ್ ನಾಟ್ ಈನಫ್ ನೌಕೆಯನ್ನು ಮಿಲೆನಿಯಂ ಸೂಪರ್ ಯಾಚ್ಟ್ ನಿರ್ಮಿಸಿದೆ. ಪ್ರಸ್ತುತ ಸಂಸ್ಥೆಯನ್ನು 1998ನೇ ಇಸವಿಯಲ್ಲಿ ಅಮೆರಿಕದ ಉದ್ಯಮಿಗಳಾದ ಜಾನ್ ಸ್ಟಾಲುಪ್ಪಿ ಮತ್ತು ಜಾನ್ ರೋಸಟ್ಟಿ ಅವರು ಸ್ಥಾಪಿಸಿದ್ದಾರೆ. ಡಚ್‌ನ ವಿನ್ಯಾಸಗಾರ ಫ್ರಾಂಕ್ ಮಲ್ಡರ್ ಎಂಬರರು ಇದರ ವಿನ್ಯಾಸ ರಚಿಸಿದ್ದಾರೆ. ಅತ್ಯಂತ ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಈ ಯಾಚ್ಟ್‌ನಲ್ಲಿ 10 ಆತಿಥಿಗಳಿಗೆ ತಂಗುವ ವ್ಯವಸ್ಥೆಯಿದೆ.

ವೇಗ: 70 ನಾಟ್ಸ್ (129.64 ಕೀ.ಮೀ.)

ನಿರ್ಮಾಪಕ: ಮಿಲ್ಲೆನಿಯಂ ಸೂಪರ್ ಯಾಚ್ಟ್

ಒಟ್ಟು ಉದ್ದ: 42.4 ಮೀಟರ್

ತಳ್ಳುವಿಕೆ: ಟ್ರಿಪರ್ ವಾಟರ್ ಜೆಟ್

ಒಟ್ಟು ಅಶ್ವಶಕ್ತಿ: 20,600 ಎಚ್‌ಪಿ

ಮಾಹಿತಿ: ನಾಟ್ಸ್ (knots) ಅಂದರೆ ಹಡಗು ಯಾ ವಿಮಾನದ ವೇಗದ ಮೂಲಮಾನ.

2. ಫೋನೆರ್ಸ್ (Foners)- 68 ನಾಟ್

2. ಫೋನೆರ್ಸ್ (Foners)- 68 ನಾಟ್

ಫೋನೆರ್ಸ್ (ಎಕ್ಸ್ ಫಾರ್ಚುನಾ) ವಿಹಾರ ನೌಕೆಯನ್ನು ಸ್ಪೇನ್‌ನ ಜೂವಾನ್ ಕಾರ್ಲೊಸ್ ಎಂವರಿಗಾಗಿ ನಿರ್ಮಿಸಲಾಗಿತ್ತು. ಇದನ್ನು ಫಾರ್ಮುಲಾ ಒನ್ ಶೈಲಿಯಲ್ಲಿ ನಿರ್ಮಿಸಲಾಗಿದ್ದು, 2000ನೇ ಇಸವಿಯಲ್ಲಿ ಅತ್ಯಂತ ವೇಗದ ಯಾಚ್ಟ್ ಎಂಬ ಗೌರವಕ್ಕೆ ಪಾತ್ರವಾಗಿತ್ತು.

ವೇಗ: 68 ನಾಟ್ಸ್ (125.9 ಕೀ.ಮೀ.)

ನಿರ್ಮಾಪಕ: ಇಜಾರ್

ಒಟ್ಟು ಉದ್ದ: 41.5 ಮೀಟರ್

ತಳ್ಳುವಿಕೆ: ಟ್ರಿಪಲ್ ವಾಟರ್ ಜೆಟ್

3. ಅಲಾಂಷಾರ್ - 65 ನಾಟ್

3. ಅಲಾಂಷಾರ್ - 65 ನಾಟ್

ಇದು ಜಗತ್ತಿನಲ್ಲೇ ತಯಾರಿಸಲಾಗಿರುವ ಅತ್ಯಂತ ಮುಂದುವರಿದ ವಿಹಾರ ನೌಕೆಗಳಲ್ಲಿ ಒಂದಾಗಿದೆ. ಇದರಲ್ಲಿ ತಾಜಾ ಗ್ಯಾಸ್ ಟರ್ಬೈನ್ ತಂತ್ರಗಾರಿಕೆ ಆಳವಡಿಸಲಾಗಿದೆ.

ವೇಗ: 65 ನಾಟ್ಸ್ (120 ಕೀ.ಮೀ.)

ನಿರ್ಮಾಪಕ: ಡಿವೊನ್‌ಪೋರ್ಟ್ (ಈವಾಗ ಬಾಬ್‌ಕಾಕ್ ಮರೈನ್‌ನಿಂದ ನಿರ್ವಹಣೆ)

ಒಟ್ಟು ಉದ್ದ : 50 ಮೀಟರ್

ತಳ್ಳುವಿಕೆ: ಟ್ರಿಪಲ್ ವಾಟರ್ ಜೆಟ್

4. ಜೆಂಟ್ರಿ ಈಗಲ್ - 64 ನಾಟ್

4. ಜೆಂಟ್ರಿ ಈಗಲ್ - 64 ನಾಟ್

ಹಲವು ದಾಖಲೆಗಳನ್ನು ಬರೆದಿರುವ ದಿವಂಗತ ಟಾಮ್ ಜೆಂಟ್ರಿ ಎಂಬವರು ಜೆಂಟ್ರಿ ಈಗಲ್ ನಿರ್ಮಾಣದಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ.

ವೇಗ: 64 ನಾಟ್ಸ್ (118.5 ಕೀ.ಮೀ.)

ನಿರ್ಮಾಪಕ : ವೊಸ್ಪೆರ್ ಥ್ರೊನಿಕ್ರಾಫ್ಟ್

ಒಟ್ಟು ಉದ್ದ : 34.1 ಮೀಟರ್

ತಳ್ಳುವಿಕೆ: ಸಿಂಗಲ್ ಸರ್ಫೆಸ್ ಡ್ರೈವ್ / ಟ್ವಿನ್ ವಾಟರ್ ಜೆಟ್

ಗರಿಷ್ಠ ಅಶ್ವಶಕ್ತಿ : 11,560 ಎಚ್‌ಪಿ

5. 118 ವ್ಯಾಲಿಪವರ್ - 60 ನಾಟ್

5. 118 ವ್ಯಾಲಿಪವರ್ - 60 ನಾಟ್

ಚೂಪಾದ ವಿನ್ಯಾಸ ಗಿಟ್ಟಿಸಿಕೊಂಡಿರುವ 118 ವ್ಯಾಲಿಪವರ್ ವಿಹಾರ ನೌಕೆಯನ್ನು ಮೂರು ವ್ಯಾರಿಕೋರ್ ಟಿಎಫ್50 ಗ್ಯಾಸ್ ಟರ್ಬೈನ್‌ನಲ್ಲಿ ಚಾಲನೆ ಮಾಡಲಾಗಿತ್ತು.

ವೇಗ: 60 ನಾಟ್ಸ್ (111 ಕೀ.ಮೀ.)

ನಿರ್ಮಾಪಕ: ಇಂಟರ್ ಮರೈನ್

ಒಟ್ಟು ಉದ್ದ: 36.0 ಮೀಟರ್

ತಳ್ಳುವಿಕೆ: ಟ್ರಿಪಲ್ ವಾಟರ್ ಜೆಟ್ / ಟ್ವಿನ್ ಸ್ಕ್ರ್ಯೂ

ಗರಿಷ್ಠ ಅಶ್ವಶಕ್ತಿ : 16,800 ಎಚ್‌ಪಿ

6. ಬ್ರೇವ್ ಚಾಲೆಂಜರ್ - 60 ನಾಟ್

6. ಬ್ರೇವ್ ಚಾಲೆಂಜರ್ - 60 ನಾಟ್

ಪ್ರಾರಂಭದಲ್ಲಿ ಮರ್ಕ್ಯೂರಿ ಎಂದು ಕರೆಯಲ್ಪಡುತ್ತಿದ್ದ ಬ್ರೇವ್ ಚಾಲೆಂಜರ್ ವಿಹಾರ ನೌಕೆಯನ್ನು ಗ್ರೀಕ್‌ನ ಸ್ಟಾವ್ರೊಸ್ ನಿಯಾರ್ಕಾಸ್ ಶಿಪ್ಪಿಂಗ್‌ಗಾಗಿ ವೊಸ್ಪರ್ ನಿರ್ಮಿಸಿದೆ. ಇದನ್ನು ಪೀಟರ್ ಡು ಕೇನ್ ಮತ್ತು ಇಂಟಿಯರ್ ಭಾಗವನ್ನು ಕಸರ್ ಪಿನ್ನೌ ವಿನ್ಯಾಸಗೊಳಿಸಿದ್ದಾರೆ.

ವೇಗ: 60 ನಾಟ್ಸ್ (111 ಕೀ.ಮೀ.)

ನಿರ್ಮಾಪಕ: ವೊಸ್ಪರ್

ಒಟ್ಟು ಉದ್ದ: 31.4 ಮೀಟರ್

ತಳ್ಳುವಿಕೆ: ಟ್ರಿಪಲ್ ವಾಟರ್ ಜೆಟ್ / ಟ್ವಿನ್ ಸ್ಕ್ರ್ಯೂ

ಗರಿಷ್ಠ ಅಶ್ವಶಕ್ತಿ : 13,620 ಎಚ್‌ಪಿ

7. ಎರ್ಮಿಸ್ - 57 ನಾಟ್

7. ಎರ್ಮಿಸ್ - 57 ನಾಟ್

ರಾಬ್ ಹಂಫ್ರೇಸ್ ಅವರಿಂದ ವಿನ್ಯಾಸಗೊಂಡಿರುವ ಎರ್ಮಿಸ್ ಹೈ ಸ್ಪೀಡ್ ಯಾಚ್ಟ್ ಅನ್ನು ಕಾರ್ಬನ್ ಫೈಬರ್ ಪರಿಕರಗಳಿಂದ ನಿರ್ಮಿಸಲಾಗಿದೆ. ಇದು ಒಟ್ಟು ತೂಕ ಗಣನೀಯವಾಗಿ ಕುಸಿತವಾಗಲು ನೆರವಾಗಿದೆ.

ವೇಗ: 57 ನಾಟ್ಸ್ (105.5 ಕೀ.ಮೀ.)

ನಿರ್ಮಾಪಕ: ಮೆಕ್‌ಮುಲ್ಲೆನ್ ಆಂಡ್ ವಿಂಗ್

ಒಟ್ಟು ಉದ್ದ: 37.56 ಮೀಟರ್

ತಳ್ಳುವಿಕೆ: ಟ್ರಿಪಲ್ ವಾಟರ್ ಜೆಟ್

ಗರಿಷ್ಠ ಅಶ್ವಶಕ್ತಿ: 11,000 ಎಚ್‌ಪಿ

8. ನೊಬಡಿ - 55 ನಾಟ್

8. ನೊಬಡಿ - 55 ನಾಟ್

ಮ್ಯಾನ್‌ಗುಸ್ಟಾ 108 ಫ್ಲ್ಯಾಗ್‌ಶಿಪ್ ಮಾದರಿಯಾಗಿರುವ ನೊಬಡಿ ವಿಹಾರ ನೌಕೆಯನ್ನು ಓವರ್ ಮರೈನ್ ನಿರ್ಮಾಣಗೊಳಿಸಿದ್ದು, ಆಂಡ್ರಿಯಾ ಬ್ಯಾಸಿಗ್ಯಾಲುಪೊ ಮತ್ತು ಸ್ಟೆಫಾನೊ ರಿಘಿನಿ ಎಂಬವರು ವಿನ್ಯಾಸಗೊಳಿಸಿದ್ದಾರೆ.

ವೇಗ: 55 ನಾಟ್ಸ್ (101.8 ಕೀ.ಮೀ.)

ನಿರ್ಮಾಪಕ: ಓವರ್ ಮರೈನ್

ಒಟ್ಟು ಉದ್ದ: 33.5 ಮೀಟರ್

ತಳ್ಳುವಿಕೆ: ಟ್ರಿಪಲ್ ವಾಟರ್ ಜೆಟ್

ಗರಿಷ್ಠ ಅಶ್ವಶಕ್ತಿ: 8,770 ಎಚ್‌ಪಿ

9. ದಲೊಲಿ - 54 ನಾಟ್

9. ದಲೊಲಿ - 54 ನಾಟ್

1995ನೇ ಇಸವಿಯಲ್ಲಿ ಬ್ರೂನಿ ಸುಲ್ತಾನ್ ಅವರಿಗೆ ಹೀಸೆನ್ ಯಾಚ್ಟ್ ಎಂಬವರು ದಲೊಲಿ ವಿಹಾರ ನೌಕೆಯನ್ನು ನಿರ್ಮಿಸಿದ್ದಾರೆ. ಹಾಗೆಯೇ ಫ್ರಾಂಕ್ ಮಲ್ಡರ್ ಇದಕ್ಕೆ ವಿನ್ಯಾಸ ಕಲ್ಪಿಸಿದ್ದಾರೆ.

ವೇಗ: 54 ನಾಟ್ಸ್ (100 ಕೀ.ಮೀ.)

ನಿರ್ಮಾಪಕ: ಹೀಸನ್ ಯಾಚ್ಟ್

ಒಟ್ಟು ಉದ್ದ: 36.58 ಮೀಟರ್

ತಳ್ಳುವಿಕೆ: ಟ್ರಿಪರ್ ವಾಟರ್ ಜೆಟ್

ಗರಿಷ್ಠ ಅಶ್ವಶಕ್ತಿ: 9,520 ಎಚ್‌ಪಿ

10. ಸನ್ ಆರ್ಕ್ - 54 ನಾಟ್

10. ಸನ್ ಆರ್ಕ್ - 54 ನಾಟ್

ಹೀಸನ್‌ಗೆ ಸೇರಿದ ಮಗದೊಂದು ನಿರ್ವಹಣಾ ಯಾಚ್ಟ್ ಸನ್ ಆರ್ಕ್ ಆಗಿದೆ. ಇದನ್ನು 1995ನೇ ಇಸವಿಯಲ್ಲಿ ಲೋಕಾರ್ಪಣೆ ಮಾಡಲಾಗಿತ್ತು. ಹಾಗೆಯೇ ಫ್ರಾಂಕ್ ಮಲ್ಡರ್ ಎಂಬವರೇ ವಿನ್ಯಾಸದಲ್ಲಿ ಚುಕ್ಕಾಣಿ ಹಿಡಿದಿದ್ದರು.

ವೇಗ: 54 ನಾಟ್ಸ್ (100 ಕೀ.ಮೀ.)

ನಿರ್ಮಾಪಕ : ಹೀಸನ್ ಯಾಚ್ಟ್

ಒಟ್ಟು ಉದ್ದ: 36.7 ಮೀಟರ್

ತಳ್ಳುವಿಕೆ: ಟ್ರಿಪಲ್ ವಾಟರ್ ಜೆಟ್

ಒಟ್ಟು ಅಶ್ವಶಕ್ತಿ: 9,520 ಎಚ್‌ಪಿ

11. ಮೂನ್ ಗಾಡೆಸ್ಸ್ - 53 ನಾಟ್

11. ಮೂನ್ ಗಾಡೆಸ್ಸ್ - 53 ನಾಟ್

2006ರಲ್ಲಿ ಡ್ಯಾನಿಶ್ ಯಾಚ್ಟ್ ಎಂಬ ಸಂಸ್ಥೆಯು ಮೂನ್ ಗಾಡೆಸ್ಸ್ ವಿಹಾರ ನೌಕೆಯನ್ನು ನಿರ್ಮಿಸಿದೆ. ಇದಕ್ಕೆ ಎಸ್ಪೆನ್ ಓಯಿನೊ ವಿನ್ಯಾಸ ಕಲ್ಪಿಸಿಕೊಟ್ಟಿದ್ದಾರೆ.

ವೇಗ: 53 ನಾಟ್ಸ್ (98 ಕೀ.ಮೀ.)

ನಿರ್ಮಾಪಕ: ಡ್ಯಾನಿಶ್ ಯಾಚ್ಟ್

ಒಟ್ಟು ಉದ್ದ: 35.05 ಮೀಟರ್

ತಳ್ಳುವಿಕೆ: ಟ್ವಿನ್ ವಾಟರ್ ಜೆಟ್

ಅಶ್ವಶಕ್ತಿ : 7,400 ಎಚ್‌ಪಿ

12. ಪೆರ್ಶಿಂಗ್ 115 - 52 ನಾಟ್

12. ಪೆರ್ಶಿಂಗ್ 115 - 52 ನಾಟ್

ಪೆರ್ಶಿಂಗ್ 115 ವಿಹಾರ ದೋಣಿಯನ್ನು ಫುಲ್ವಿಯೊ ಡಿ ಸಿಮೊನಿ ವಿನ್ಯಾಸಗೊಳಿಸಿದ್ದಾರೆ. ಇದರಲ್ಲಿ ಐದು ಜನರಿಗೆ ಸಂಚರಿಸಬಹುದಾಗಿದೆ. 2005ನೇ ಇಸವಿಯಲ್ಲಿ ಇದನ್ನು ಲೋಕಾರ್ಪಣೆ ಮಾಡಲಾಗಿತ್ತು.

ವೇಗ: 52 ನಾಟ್ಸ್ (96 ಕೀ.ಮೀ.)

ನಿರ್ಮಾಪಕ: ಪೆರ್ಶಿಂಗ್

ಒಟ್ಟು ಉದ್ದ: 35.07 ಮೀಟರ್

ತಳ್ಳುವಿಕೆ: ಟ್ರಿಪಲ್ ವಾಟರ್ ಜೆಟ್

ಅಶ್ವಶಕ್ತಿ: 12,500 ಅಶ್ವಶಕ್ತಿ

13. ಆಡ್ಲರ್ - 50 ನಾಟ್

13. ಆಡ್ಲರ್ - 50 ನಾಟ್

ಆಡ್ಲರ್ ವಿಹಾರ ನೌಕೆಯನ್ನು ವಿಕ್ಟರ್ ವರ್ಕ್ಸ್ ನಿರ್ಮಿಸಿದೆ. ಇದರಲ್ಲಿ 2 ಪಾಕ್ಸ್‌ಮ್ಯನ್ ಎಂಜಿನ್ ಆಳವಡಿಸಲಾಗಿದೆ.

ವೇಗ: 50 ನಾಟ್ಸ್ (92.6 ಕೀ.ಮೀ.)

ನಿರ್ಮಾಪಕ: ವಿಕ್ಟರ್ ವರ್ಕ್ಸ್ Vectorworks

ಒಟ್ಟು ಉದ್ದ : 41.45 ಮೀಟರ್

ತಳ್ಳುವಿಕೆ: ಟ್ವಿನ್ ವಾಟರ್ ಜೆಟ್

ಗರಿಷ್ಠ ಅಶ್ವಶಕ್ತಿ: 10,494 ಅಶ್ವಶಕ್ತಿ

14. ಬಟರ್ ಫ್ಲೈ -50 ನಾಟ್

14. ಬಟರ್ ಫ್ಲೈ -50 ನಾಟ್

ಡ್ಯಾನಿಶ್ ಯಾಚ್ಟ್‌ನಿಂದ ನಿರ್ಮಾಣಗೊಂಡ ಇನ್ನೊಂದು ಮನೋಹರ ವಿಹಾರ ನೌಕೆ ಇದಾಗಿದೆ. ಇದರಲ್ಲಿ ಐಷಾರಾಮಿ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ಕೊಡಲಾಗಿದೆ.

ವೇಗ: 50 ನಾಟ್ಸ್ (92.6 ಕೀ.ಮೀ.)

ನಿರ್ಮಾಪಕ: ಡ್ಯಾನಿಶ್ ಯಾಚ್ಟ್

ಒಟ್ಟು ಉದ್ದ: 38 ಮೀಟರ್

ತಳ್ಳುವಿಕೆ: ಟ್ವಿನ್ ವಾಟರ್ ಜೆಟ್

ಎಕ್ಸ್‌ಟೀರಿಯರ್ ಸ್ಟೈಲಿಂಶ್: ಎಸ್ಪೆನ್ ಒಯಿನೊ

15. ಒನ್ ಹಂಡ್ರೆಡ್ - 50 ನಾಟ್

15. ಒನ್ ಹಂಡ್ರೆಡ್ - 50 ನಾಟ್

ಬೈಯಾ ಸಂಸ್ಥೆಯು ಯಶಸ್ಸಿನ ವಿಹಾರ ನೌಕೆಗಳಲ್ಲಿ ಒನ್ ಹಂಡ್ರೆಡ್ ಕೂಡಾ ಒಂದಾಗಿದೆ.

ವೇಗ: 50 ನಾಟ್ಸ್ (92.6 ಕೀ.ಮೀ.)

ನಿರ್ಮಾಪಕ: ಬೈಯಾ

ಒಟ್ಟು ಉದ್ದ: 31 ಮೀಟರ್

ತಳ್ಳುವಿಕೆ: ಟ್ವಿನ್ ಸ್ಕ್ರೂ

ಗರಿಷ್ಠ ಅಶ್ವಶಕ್ತಿ: 7,290 ಎಚ್‌ಪಿ

16. ಮಿರೇಜ್ - 48 ನಾಟ್

16. ಮಿರೇಜ್ - 48 ನಾಟ್

1991ರಲ್ಲಿ ಏಷ್ಯಾ ಮೂಲದ ಮಾಲಿಕರಿಂದ ಮಿರೇಜ್ ನಿರ್ಮಾಣವಾಗಿದೆ. ಇದು ಪ್ರಖ್ಯಾತ ಓಕ್ಟೊಪ್ಯೂಸ್ಸಿ ಶ್ರೇಣಿಗೆ ಸೇರಿದ್ದಾಗಿದೆ.

ವೇಗ: 48 ನಾಟ್ಸ್ (88.8 ಕೀ.ಮೀ.)

ನಿರ್ಮಾಪಕ: ಹೀಸೆನ್ ಯಾಚ್ಟ್

ಒಟ್ಟು ಉದ್ದ: 40,26 ಮೀಟರ್

ತಳ್ಳುವಿಕೆ: ಟ್ರಿಪಲ್ ವಾಟರ್ ಜೆಟ್

ಗರಿಷ್ಠ ಅಶ್ವಶಕ್ತಿ: 10,440 ಎಚ್‌ಪಿ

17. ಸುಸ್ಸುರೊ - 46 ನಾಟ್

17. ಸುಸ್ಸುರೊ - 46 ನಾಟ್

ಸುಸ್ಸುರೊ ವಿಹಾರ ನೌಕೆಯಲ್ಲಿ ಗ್ಯಾಸ್ ಟರ್ಬೈನ್‌ ಜೋಡಣೆ ಮಾಡಲಾಗಿದೆ. ಅಲ್ಯೂಮಿನಿಯಂನಿಂದ ನಿರ್ಮಿತವಾದ ಕೆಲವೇ ಕೆಲವು ಯಾಚ್ಟ್‌ಗಳಲ್ಲಿ ಇದೂ ಒಂದಾಗಿದೆ.

ವೇಗ: 46 ನಾಟ್ಸ್ (85 ಕೀ.ಮೀ.)

ನಿರ್ಮಾಪಕ: ಫೀಡ್‌ಶಿಪ್

ಒಟ್ಟು ಉದ್ದ: 49.5 ಮೀಟರ್

ತಳ್ಳುವಿಕೆ: ಟ್ರಿಪಲ್ ವಾಟರ್ ಜೆಟ್

ಗರಿಷ್ಠ ಅಶ್ವಶಕ್ತಿ: 15,384 ಎಚ್‌ಪಿ

18. ಫಾರ್ಚ್ಯುನಾ - 46 ನಾಟ್

18. ಫಾರ್ಚ್ಯುನಾ - 46 ನಾಟ್

1979ನೇ ಇಸವಿಯಲ್ಲಿ ಫಾರ್ಚ್ಯುನಾ ಬಿಡುಗಡೆಯೊಂದಿಗೆ ಪಾಲ್ಮೆರ್ ಜಾನ್ಮನ್ ಹೆಚ್ಚಿನ ಹೆಸರು ಮಾಡಿದ್ದರು. ಇದನ್ನು ಸ್ಪೇನ್ ರಾಜ ಜೂವಾನ್ ಕಾರ್ಲೊಸ್ ಎಂಬವರಿಗಾಗಿ ತಯಾರಿಸಲಾಗಿದೆ.

ವೇಗ: 46 ನಾಟ್ಸ್ (85.1 ಕೀ.ಮೀ.)

ನಿರ್ಮಾಪಕ: ಪಾಲ್ಮೆರ್ ಜಾನ್ಸರ್

ಒಟ್ಟು ಉದ್ದ: 30.48 ಮೀಟರ್

ತಳ್ಳುವಿಕೆ: ಟ್ರಿಪಲ್ ವಾಟರ್ ಜೆಟ್

ಗರಿಷ್ಠ ಅಶ್ವಶಕ್ತಿ: 7.800 ಎಚ್‌ಪಿ

19. ಜಿ.ವಿಝ್- 46 ನಾಟ್

19. ಜಿ.ವಿಝ್- 46 ನಾಟ್

1992ರಲ್ಲಿ ಗ್ರೀಕ್ ಸಾಗರೋತ್ತರ ಉದ್ಯಮಿ ಲೂಕಸ್ ಹಾಜಿ ಅವರು ಜಿ.ವಿಝ್ ವಿಹಾರ ದೋಣಿಯನ್ನು ಖರೀದಿಸಿದ್ದರು. ಇದಕ್ಕೆ ಜಾನ್ ಬನ್ನೆನ್‌ಬರ್ಗ್ ವಿನ್ಯಾಸ ರಚಿಸಿದ್ದಾರೆ.

ವೇಗ: 46 ನಾಟ್ಸ್ (85.1 ಕೀ.ಮೀ.)

ನಿರ್ಮಾಪಕ: ಮರೈನ್

ಒಟ್ಟು ಉದ್ದ: 33 ಮೀಟರ್

ತಳ್ಳುವಿಕೆ: ಟ್ವಿನ್ ಸರ್ಫೆಸ್ ಡ್ರೈವ್ಸ್

ಗರಿಷ್ಠ ಅಶ್ವಶಕ್ತಿ: 7.000 ಎಚ್‌ಪಿ

ಟ್ಯಾಂಗಾ II - 46 ನಾಟ್

ಟ್ಯಾಂಗಾ II - 46 ನಾಟ್

ಮಂಗುಸ್ಟಾ 105 ಸಿರೀಸ್ ಯಾಚ್ಟ್‌ಗಳ ಭಾಗವಾಗಿರುವ ಟ್ಯಾಂಗಾ II ವಿಹಾರ ನೌಕೆಯನ್ನು ಓವರ್ ಮರೈನ್ ನಿರ್ಮಾಣದಲ್ಲಿ ಆಂಡ್ರಿಯಾ ಬ್ಯಾಸಿಗಾಲುಪೊ ಮತ್ತು ಸ್ಟೆಫೆನೊ ರಿಘಿನಿ ವಿನ್ಯಾಸ ಕಲ್ಪಿಸಿದ್ದಾರೆ.

ವೇಗ: 46 ನಾಟ್ಸ್ (85.1 ಕೀ.ಮೀ.)

ನಿರ್ಮಾಪಕ: ಓವರ್ ಮರೈನ್

ಒಟ್ಟು ಉದ್ದ: 32.6 ಮೀಟರ್

ತಳ್ಳುವಿಕೆ: ಟ್ರಿಪಲ್ ವಾಟರ್ ಜೆಟ್

ಗರಿಷ್ಠ ಅಶ್ವಶಕ್ತಿ: 7.700 ಎಚ್‌ಪಿ

Most Read Articles

Kannada
English summary
Here is the list of fastest luxury yachts in the world.
Story first published: Saturday, November 22, 2014, 17:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X