ಪ್ರಪಂಚದ 23 ಭಯಾನಕ ವಿಮಾನ ರನ್‌ವೇಗಳು!

By Nagaraja

ಜೀವನದಲ್ಲಿ ಒಂದಲ್ಲ ಒಂದು ದಿನ ವಿಮಾನದಲ್ಲಿ ಪಯಣಿಸಬೇಕೆಂಬುದು ಬಹುತೇಕರ ಕನಸಾಗಿರುತ್ತದೆ. ಆದರೆ ಸಹಜವಾಗಿಯೇ ವಿಮಾನ ಟೇಕ್ ಆಫ್ ಅಥವಾ ಲ್ಯಾಂಡಿಂಗ್ ವೇಳೆ ಬಿದ್ದು ಹೋಗಬಹುದೆಂಬ ಭಯ ಕಾಡುತ್ತದೆ. ಭಯ ಮಾನವ ಸಹಜವಾಗಿದ್ದರೂ ನಾವಿದನ್ನು ಒಪ್ಪಲೇ ಬೇಕು. ಏನೆಂದರೆ ಶೇಕಡಾ 60ರಷ್ಟು ವಿಮಾನ ಅವಘಡಗಳು ಟೇಕ್ ಆಫ್ ಅಥವಾ ಲ್ಯಾಂಡಿಂಗ್ ವೇಳೆಯೇ ಸಂಭವಿಸುತ್ತದೆ ಎಂಬುದು ಅಷ್ಟೇ ಗಮನಾರ್ಹ.

ಇವನ್ನೂ ಓದಿ: ವಿಶ್ವದ 10 ಅತ್ಯುತ್ತಮ ವಿಮಾನ ನಿಲ್ದಾಣಗಳು

ಇದಕ್ಕೊಂದು ಉತ್ತಮ ಉದಾಹರಣೆ ಕರಾವಳಿ ನಗರ ಮಂಗಳೂರಿನ ಬಜಪೆ ವಿಮಾನ ನಿಲ್ದಾಣದಲ್ಲಿ 2010ರಲ್ಲಿ ಸಂಭವಿಸಿರುವ ವಿಮಾನ ಅಪಘಾತ. ಅಲ್ಲಿ ದೂರದ ಗಲ್ಫ್ ರಾಷ್ಟ್ರದಲ್ಲಿ ಉದ್ಯೋಗ ಹರಸಿಕೊಂಡು ತೆರಳಿದ್ದ 166ರಷ್ಟು ಪ್ರಯಾಣಿಕರು ಅಪಾರ ಕನಸನ್ನು ಹೊತ್ತುಕೊಂಡು ತಾಯ್ನೆಲಕ್ಕೆ ಹೆಜ್ಜೆಯನ್ನಿಡಲು ತವಕಿಸುತ್ತಿದ್ದಂತೆ ಏರ್ ಇಂಡಿಯಾ ವಿಮಾನ ಲ್ಯಾಂಡಿಂಗ್ ವೇಳೆ ಸಂಭವಿಸಿದ ಅಪಘಾತದಲ್ಲಿ 158 ಪ್ರಯಾಣಿಕರು ಸಜೀವ ದಹನವಾಗಿದ್ದರು.

ಇವನ್ನೂ ಓದಿ: ವಿಶ್ವದ ಟಾಪ್ 10 ಅತಿದೊಡ್ಡ ಯುದ್ಧ ವಾಯುಪಡೆಗಳು

ಈ ಎಲ್ಲ ವಿಚಾರಗಳು ಈಗಲೂ ನಮ್ಮ ಕಣ್ಣ ಮುಂದೆ ಹರಿದಾಡುತ್ತಿರುವಂತೆಯೇ ಇಂದಿನ ಈ ಲೇಖನದ ಮೂಲಕ ಜಗತ್ತಿನ 23 ಭಯಾನಕ ರನ್‌ವೇಗಳ ಕುರಿತು ಚರ್ಚಿಸಲಿದ್ದೇವೆ. ಖಂಡಿತವಾಗಿಯೂ ನೀವಿದನ್ನು ಮಿಸ್ ಮಾಡಿಕೊಳ್ಳಲಾರರು ಎಂಬ ವಿಶ್ವಾಸ ನಮ್ಮಲ್ಲಿದೆ. ಹಾಗಿದ್ದರೆ ಇನ್ಯಾಕೆ ತಡ. ನೇರವಾಗಿ ಕೆಳಗಡೆ ಕೊಡಲಾಗಿರುವ ನಮ್ಮ ಫೋಟೊ ಸ್ಲೈಡರ್‌ಗೆ ಭೇಟಿ ಕೊಟ್ಟು ಮಾಹಿತಿ ಸಂಪಾದಿಸಿರಿ...

Barra airport

Barra airport

ಇದು ಸ್ಕಾಟ್ಲೆಂಡ್‌ನ ಪಶ್ಚಿಮ ಕರಾವಳಿಯಲ್ಲಿ ಸ್ಥಿತಗೊಂಡಿದೆ. ಹೌದು, ನೀವು ಊಹೆ ನಿಜ. ಸಮುದ್ರ ತೀರಾ ಪ್ರದೇಶದಲ್ಲೇ ಇದು ಟೇಕ್ ಆಫ್ ಹಾಗೂ ಲ್ಯಾಂಡಿಂಗ್ ಹೊಂದಿರುತ್ತದೆ. ಸದ್ಯ ಬಚಾವ್, ಯಾಕೆಂದರೆ ಹಗಲು ವೇಳೆ ಮಾತ್ರ ಇದು ಕಾರ್ಯ ನಿರತವಾಗಿರುತ್ತದೆ.

chubu centrair international airport

chubu centrair international airport

ನೀರು, ನೀರು, ನೀರು ಸುತ್ತಲು ನೀರು ಆವರಿಸುವ ಚುಬು ಸೆಂಟ್ರೈರ್ ಇಂಟರ್‌ನ್ಯಾಷನಲ್ ಏರ್‌ಪೋರ್ಟ್, ಜಪಾನ್‌ನ ಟೊಕೊನೇಮ್‌ನಲ್ಲಿ ಸ್ಥಿತಗೊಂಡಿದೆ.

Congonhas-Sao Paulo Airport

Congonhas-Sao Paulo Airport

ಬ್ರೆಜಿಲ್‌ನ ವಾಣಿಜ್ಯ ವಿಮಾನ ನಿಲ್ದಾಣಗಳ ಪೈಕಿ ಇದು ಪ್ರಮುಖವಾಗಿದೆ. ಸರಣಿ ಅಪಘಾತಗಳೇ ಸಂಭವಿಸಿರುವ ಇಲ್ಲಿನ ರನ್‌ವೇದಲ್ಲಿ ವಿಮಾನ ಲ್ಯಾಂಡಿಂಗ್ ಮಾಡುವುದು ಪೈಲಟ್‌ಗಳಿಗೆ ದೊಡ್ಡ ಸವಾಲೇ ಸರಿ.

Copalis State Airport

Copalis State Airport

ತೀರಾ ಪ್ರದೇಶ ರನ್‌ವೇಗಳ ಸಾಲಿಗೆ ಸೇರ್ಪಡೆಯಾಗಿರುವ ಮಗದೊಂದು ವಿಮಾನ ನಿಲ್ದಾಣ ಇದಾಗಿದೆ. ಅಮೆರಿಕದ ವಾಷಿಂಗ್ಟನ್‌ನ ಗ್ರೇಯ್ಸ್ ಹಾರ್ಬಲ್ ಕಂಟ್ರಿ ಪ್ರದೇಶದಲ್ಲಿರುವ ಈ ವಿಮಾನ ನಿಲ್ದಾಣ ಕೋಪಲಿಸ್ ನದಿ ತಟದಲ್ಲಿದೆ.

Courchevel Airport

Courchevel Airport

ಫ್ರಾನ್ಸ್‌ನ ಆಲ್ಫ್ ಪರ್ವತ ಶ್ರೇಣಿಯಲ್ಲಿರುವ ಈ ವಿಮಾನ ನಿಲ್ದಾಣ ಅತಿ ಕಿರಿದಾದ ಅಂದರೆ 535 ಮೀಟರ್ ಉದ್ದವನ್ನಷ್ಟೇ ಹೊಂದಿದೆ. ಇದು ಜಗತ್ತಿನ ಅತ್ಯಂತ ಅಪಾಯಕಾರಿ ರನ್‌ವೇಗಳಲ್ಲಿ ಒಂದಾಗಿದೆ.

 Gibraltar International Airport

Gibraltar International Airport

ಗ್ರಿಬ್ರಾಲ್ಟರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ನಗರದ ಪ್ರದೇಶದ ನಡುವೆಯೇ ಹಾದು ಹೋಗುತ್ತಿರುವುದು ವಿಚಿತ್ರ ಮೂಡಿಸುತ್ತಿದೆ. ಬ್ರಿಟಿಷ್ ಕಡಲಾಚೆಯ ಪ್ರದೇಶದಲ್ಲಿರುವ ( British overseas territory) ಗಿಬ್ರಾಲ್ಟರ್ ಅಂತರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ವಿಮಾನ ಟೇಕ್ ಆಫ್ ಹಾಗೂ ಲ್ಯಾಂಡಿಂಗ್ ವೇಳೆ, ಟ್ರಾಫಿಕ್ ನಿಲುಗಡೆಗೊಳಿಸಲಾಗುತ್ತದೆ. ಅಂದ ಹಾಗೆ ಇದು 1800 ಮೀಟರ್‌ಗಳಷ್ಟು ರನ್‌ವೇ ಪಡೆದುಕೊಂಡಿದೆ.

Gustaf III Airport

Gustaf III Airport

ಕೆರೆಬಿಯನ್ ದ್ವೀಪ ಸೈಂಟ್ ಬರ್ತಲೆಮಿಯಲ್ಲಿ ಸ್ಥಿತಗೊಂಡಿರುವ ಗುಸ್ತಾಫ್ III ವಿಮಾನ ನಿಲ್ದಾಣದ ರನ್ ವೇ, ಇಳಿಜಾರಿನಿಂದ ಆರಂಭವಾಗಿ ಸಮುದ್ರ ತಪ್ಪಲಲ್ಲಿ ಕೊನೆಗೊಳ್ಳುತ್ತದೆ. ಇದು ಸೈಂಟ್ ಬರ್ತಲೆಮಿ ಏರ್‌ಪೋರ್ಟ್ ಎಂದು ಸಹ ಕರೆಯಲ್ಪಡುತ್ತದೆ.

 Kai Tak Airport

Kai Tak Airport

ಹಾಂಕಾಂಗ್‌ನ ಅಂತರಾಷ್ಟ್ರೀಯ ಏರ್‌ಪೋರ್ಟ್ ಆಗಿರುವ ಕೈ ತಾಕ್, ಅಲ್ಲಿನ ಅತಿ ಪುರಾತನ ವಿಮಾನ ನಿಲ್ದಾಣಗಳಲ್ಲಿ (1925-1998) ಒಂದಾಗಿದೆ. ಗಗನ ಚುಂಬಿಯಂತೆ ಸುತ್ತಲೂ ತಲೆಯೆತ್ತಿರುವ ಕಟ್ಟಡಗಳು ಹಾಗೂ ಪವರ್ತಗಳು ಪೈಲಟ್‌ಗಳಿಗೆ ವಿಮಾನ ಲ್ಯಾಂಡ್ ಮಾಡಲು ತಾಂತ್ರಿಕ ತೊಂದರೆಯನ್ನಿಟ್ಟುಮಾಡುತ್ತದೆ.

Kansai International Airport

Kansai International Airport

ಜಪಾನ್‌ನ ಒಸಕಾದಲ್ಲಿರುವ ಕನ್ಸಾಯ್ ವಿಮಾನ ನಿಲ್ದಾಣದ ಹತ್ತಿರ ಪ್ರವೇಶಿಸಿರುವಂತೆಯೇ ವಿಮಾನ ಇನ್ನೇನು ನೀರಿನಲ್ಲಿ ಲ್ಯಾಂಡ್ ಆಗಲಿರುವಂತೆಯೇ ಪ್ರಯಾಣಿಕರಿಗೆ ಭಾಸವಾಗಲಿದೆ.

Madeira Airport

Madeira Airport

ಪರ್ವತ ಶ್ರೇಣಿ ಹಾಗೂ ಅಟ್ಲಾಂಟಿಕ್ ಮಹಾಸಮುದ್ರದ ನಡುವೆ ಸ್ಥಿತಗೊಂಡಿರುವ ಪೋರ್ಚುಗ‌ಲ್‌ನ ಮದಿರಾ ಏರ್‌ಪೋರ್ಟ್, ಅತ್ಯಂತ ಅನುಭವಿ ಪೈಲಟ್‌ಗಳಿಗೂ ವಿಮಾನ ಲ್ಯಾಂಡ್‌ ಮಾಡಲು ಇಕ್ಕಟ್ಟಿನ ಪರಿಸ್ಥಿತಿಯನ್ನುಂಟು ಮಾಡುತ್ತಿದೆ.

Matekane Air Strip

Matekane Air Strip

ಆಫ್ರಿಕಾದ ಲೆಸೊಥೊದಲ್ಲಿರುವ ಮ್ಯಾಟ್ಕೇನ್ ಏರ್ ಸ್ಟ್ರಿಪ್ ನಿಜಕ್ಕೂ ಭಯಾನಕವಾಗಿದ್ದು 400 ಮೀಟರ್ ರನ್‌ವೇ ಮಾತ್ರ ಪಡೆದುಕೊಂಡಿದೆ.

Narsarsuaq Airport

Narsarsuaq Airport

ಗ್ರೀನ್‌ಲ್ಯಾಂಡ್‌ನಲ್ಲಿರುವ ಈ ಏರ್‌ಪೋರ್ಟ್‌ನ ಸುತ್ತಲಿಂದಲೂ ಬೀಸುತ್ತಿರುವ ಗಾಳಿಯಿಂದಾಗಿ ಪ್ರಕ್ಷುಬ್ಧವಾಗಿದ್ದು, ಪೈಲಟ್‌ಗಳಿಗೆ ವಿಮಾನ ಲ್ಯಾಂಡ್ ಮಾಡಲು ವಿಷಮ ಸ್ಥಿತಿಯನ್ನು ಒಡ್ಡುತ್ತಿದೆ.

Paro International Airport

Paro International Airport

ಭೂತಾನ್‌ನ ಏಕಮಾತ್ರ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿರುವ ಪ್ಯಾರೊ ಏರ್‌ಪೋರ್ಟ್, ಸುತ್ತಲೂ ಹರಡಿರುವ 5000 ಮೀಟರ್ ಎತ್ತರದ ಹಿಮಾಲಯ ಪರ್ವತವು ಸುತ್ತುವರಿದಿದೆ. ಇದೇ ಕಾರಣಕ್ಕಾಗಿ ರಾತ್ರಿ ಹಾಗೂ ಮಂಜಿನ ವೇಳೆಯಲ್ಲಿ ಲ್ಯಾಂಡಿಂಗ್ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

Pegasus White Ice Runway

Pegasus White Ice Runway

ಅಂಟಾರ್ಟಿಕಾದ ಅತ್ಯಂತ ದಕ್ಷಿಣದ ಮೆಕ್‌ಮುರ್ಡೊ ಸ್ಟೇಷನ್‌ಗೆ ಸೇವೆ ಸಲ್ಲಿಸಿರುವ ವಿಮಾನ ನಿಲ್ದಾಣಗಳಲ್ಲಿ ಇದು ಒಂದಾಗಿದೆ. ನೀವು ನಂಬ್ತೀರೋ ಬೀಡ್ತಿರೋ ಗೊತ್ತಿಲ್ಲ ಯಾಕೆಂದರೆ ಈ ನೀಲಿ ಐಸ್ ರನ್‌ವೇ ವರ್ಷಪೂರ್ತಿ ಚಕ್ರಗಳನ್ನು ಹೊಂದಿರುವ ವಿಮಾನ ಲ್ಯಾಂಡಿಂಗ್‌ ಮಾಡುವಲ್ಲಿಯೂ ಯಶಸ್ವಿಯಾಗಿದೆ.

Princess Juliana International Airport

Princess Juliana International Airport

ಪ್ರಿನ್ಸಸ್ ಜೂಲಿಯಾನಾ ಅಂತರಾಷ್ಟ್ರೀಯ ಏರ್‌ಪೋರ್ಟ್, ಡಚ್ಚರ ಭಾಗವಾಗಿರುವ ಸೈಂಟ್ ಮಾರ್ಟಿನ್ ದ್ವೀಪದಲ್ಲಿ ಸ್ಥಿತಗೊಂಡಿದೆ. ಈ ಸಣ್ಣ ರನ್ ವೇ (2300 ಮೀಟರ್) ಮಾಹೋ ಬೀಚ್‌ನ ಸ್ವಲ್ಪ ಮೇಲಿಂದ ಹಾರಾಡುತ್ತಿದೆ. ಇದು ನಿಜಕ್ಕೂ ಪ್ರವಾಸರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದೆ.

Quito's high-altitude airport

Quito's high-altitude airport

ಜನಜಂಗುಳಿಯಂದ ಹರಿದಾಡುವ ಪ್ರದೇಶ, ಇಕ್ಕಾಟ್ಟಾದ ರನ್ವೇ, ಸಕ್ರಿಯ ಜ್ವಾಲಾಮುಖಿ ಸ್ರಾವ ಹಾಗೂ ಆಗಾಗೇ ಆವರಿಸುತ್ತಿರುವ ಮಂಜಿನಿಂದಾಗಿ ಕ್ಯೂಟೊ ವಿಮಾನ ನಿಲ್ದಾಣ ಅತ್ಯಂತ ಅಪಾಯಕಾರಿ ಎನಿಸಿಕೊಂಡಿದೆ. ಆದರೆ ಇಕ್ವಾಡೋರ್‌ನ ಈ ಪ್ರದಾನ ವಿಮಾನ ನಿಲ್ದಾಣವನ್ನು ಬಳಿಕ ಸ್ಥಳಾಂತರ ಮಾಡಲಾಗಿತ್ತು.

Svalbard Airport, Longyear

Svalbard Airport, Longyear

ನೋರ್ವೇದ ಸ್ವಾಲ್ಬರ್ಡ್ ಪ್ರದಾನ ವಿಮಾನ ನಿಲ್ದಾಣವಾಗಿದ್ದು, ಬ್ಯಾರೆಂಟ್ ಸಮುದ್ರ ತೀರದಲ್ಲಿ ಸ್ಥಿತಗೊಂಡಿದೆ.

Tenzing-Hillary Airport

Tenzing-Hillary Airport

ಸಮುದ್ರ ಮಟ್ಟಕ್ಕಿಂತ 2860 ಮೀಟರ್ ಎತ್ತರದಲ್ಲಿ ಸ್ಥಿತಗೊಂಡಿರುವ ನೇಪಾಳದ ತೇನ್ಸಿಂಗ್ ಹಿಲರಿ ಏರ್‌ಪೋರ್ಟ್ (ಲುಕ್ಲ ಏರ್‌ಪೋರ್ಟ್), ಸಣ್ಣ ರನ್‌ವೇ ನಿಜಕ್ಕೂ ಅಪಾಯವನ್ನು ಆಹ್ವಾನಿಸುತ್ತಿದೆ.

Toncontín International Airport

Toncontín International Airport

ಹೋಂಡುರಾಸ್‌ನಲ್ಲಿ ಸ್ಥಿತಗೊಂಡಿರುವ ಈ ವಿಮಾನ ಅತಿ ಕಿರಿದಾಗಿದ್ದಲ್ಲದೆ ಸುತ್ತಲೂ ಪರ್ವತಗಳು ಸುತ್ತುವರಿದುಕೊಂಡಿದೆ. ಶೈತ್ಯ ಕಾಲದಲ್ಲಂತೂ ಲ್ಯಾಂಡಿಂಗ್ ತುಂಬಾನೇ ಕ್ಲಿಷ್ಟಕರವೆನಿಸುತ್ತದೆ.

Toronto Islands Airport

Toronto Islands Airport

ಕೆನಡಾದ ಟೊರಂಟೊ ಐಲ್ಯಾಂಡ್ ಏರ್‌ಲ್ಯಾಂಡ್, ಮಗದೊಂದು ಪಿನ್‌ ಪಾಯಿಂಟ್ ರನ್ ವೇ ಆಗಿದೆ. ಇದು ಬಿಲ್ಲಿ ಬಿಷಪ್ ಟೊರಂಟೊ ಸಿಟಿ ಏರ್‌ಪೋರ್ಟ್ ಎಂದು ಸಹ ಅರಿಯಲ್ಪಡುತ್ತದೆ. ಇದರ ಹತ್ತಿರದಲ್ಲೇ ಬೆತ್ತಲೆ ಬೀಚ್ ಸಹ ಇರುವುದು ಪೈಲಟ್‌ಗಳ ಏಕಾಗ್ರತೆಗೆ ಭಂಗವನ್ನುಂಟು ಮಾಡುತ್ತಿದೆ.

Juancho E. Yrausquin Airport,

Juancho E. Yrausquin Airport,

ಬೆಟ್ಟಗಳಿಂದ ಸುತ್ತುವರಿಯಲ್ಪಟ್ಟಿರುವ ಕೆಬೆರಿಯನ್ ವಿಮಾನ ನಿಲ್ದಾಣವಾಗಿರುವ ಇಲ್ಲಿನ ರನ್‌ವೇದ ಎರಡು ಅಂಚುಗಳು ಸಮುದ್ರ ತಟದತ್ತ ಚಾಚಿಕೊಂಡಿರುವುದು ನೋಡಲು ಸುಂದರವೆನಿಸಿದ್ದರೂ ಅಪಾಯವನ್ನು ಕೈಬೀಸಿ ಕರೆಯುತ್ತದೆ. ಇದು ಕೆರೆಬಿಯನ್ ದ್ವೀಪ ಸಾಬಾದಲ್ಲಿರುವ ಏಕಮಾತ್ರ ವಿಮಾನ ನಿಲ್ದಾಣವಾಗಿದೆ.

Wellington

Wellington

ನ್ಯೂಜಿಲೆಂಡ್‌ ಬೆಟ್ಟಗಳ ನಡುವೆ ಇರುವ ಸಣ್ಣದಾದ ವೆಲ್ಲಿಗ್ಟಂನ್ ರನ್‌ವೆಯಲ್ಲಿ ಬಲವಾಗಿ ಬೀಸುವ ಗಾಳಿಗಳು ಅಪಾಯ ಸೃಷ್ಟಿಸುತ್ತದೆ.

Williams Field

Williams Field

ಯುಕ್ತರಾಷ್ಟ್ರ ಸಂಘದ ಅಂಟಾರ್ಟಿಕ್ ಚುಟುವಟಿಕೆಗಳ ವಿಮಾನ ಪ್ರದೇಶವಾಗಿರುವ ವಿಲಿಮಯ್ಸ್ ಫೀಲ್ಟ್ ಅಥವಾ ವಿಲ್ಲಿ ಫೀಲ್ಡ್ ಏರ್‌ಪೋರ್ಟ್, ಎರಡು ಹಿಮ ರನ್‌ವೇಗಳನ್ನು ಹೊಂದಿದೆ. ಇದು ಸಹ ಅತ್ಯಂತ ಅಪಾಯಕಾರಿ ಎನಿಸಿಕೊಂಡಿದೆ. (Williams Field consists of two snow runways located on approximately 8 meters (25 ft) of compacted snow, lying on top of 80 meters (262 ft) of ice, floating over 550 meters (1,800 ft) of water.)

Most Read Articles

Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X