ಬಿಎಂಡಬ್ಲ್ಯು ಯಶಸ್ಸಿಗೆ ಕೈಗನ್ನಡಿಯಾದ ಹೆಡ್ ಲೈಟ್, ಕಿಡ್ನಿ ಗ್ರಿಲ್

ಜರ್ಮನಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು (Bayerische Motoren Werke AG) 1916ನೇ ಇಸವಿಯಲ್ಲಿ ಸ್ಥಾಪಿತವಾಗಿತ್ತು. ಜರ್ಮನಿಯ ಮ್ಯೂನಿಚ್ ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಬಿಎಂಡಬ್ಲ್ಯು ಸಂಸ್ಥೆಯ ರುವಾರಿಗಳಲ್ಲಿ ಫ್ರಾನ್ಜ್ ಜೋಸೆಫ್ ಪಾಪ್, ಕಾರ್ಲ್ ರಾಪ್ ಮತ್ತು ಕ್ಯಾಮಿಲೊ ಕಾಸ್ಟಿಗ್ಲಿಯೊನಿ ಪ್ರಮುಖರಾಗಿದ್ದಾರೆ.

ಮಿನಿ ಹಾಗೂ ರೋಲ್ಸ್ ರೋಲ್ಸ್ ಗಳಂತಹ ಐಕಾನಿಕ್ ಬ್ರಾಂಡ್ ಗಳನ್ನು ಹೊಂದಿರುವ ಬಿಎಂಬ್ಲ್ಯು ಕಳೆದ ಹಲವಾರು ದಶಕಗಳಿಂದ 'ಹೆಡ್ ಲೈಟ್' ಹಾಗೂ 'ಕಿಡ್ನಿ ಗ್ರಿಲ್'ಗಾಗಿ ತನ್ನದೇ ಆದ ವಿಶಿಷ್ಟತೆಯನ್ನು ಪಡೆದುಕೊಂಡಿದೆ. ಒಂದು ರೀತಿಯಲ್ಲಿ ಬಿಎಂಡಬ್ಲ್ಯು ಯಶಸ್ಸಿನಲ್ಲಿ ಇದರ ಪಾತ್ರ ಬಹುದೊಡ್ಡದಾಗಿದೆ. ಈಗ ಬಿಎಂಡಬ್ಲ್ಯು ಕಾರಿನ ತಲಾ ಐದು ಶ್ರೇಷ್ಠ ಹೆಡ್ ಲೈಟ್ ಹಾಗೂ ಕಿಡ್ನಿ ಗ್ರಿಲ್ ಬಗ್ಗೆ ನಾವಿಂದು ಚರ್ಚಿಸಲಿದ್ದೇವೆ.

05. ಬಿಎಂಡಬ್ಲ್ಯು ಐ3

05. ಬಿಎಂಡಬ್ಲ್ಯು ಐ3

ಯಾವ ರೀತಿ ನಾವು ಮುಖಕ್ಕೆ ಫೇಸ್ ಕ್ರೀಮ್ ಹಚ್ಚುತ್ತೆವೋ ಅದೇ ರೀತಿಯಲ್ಲಿ ಬಿಎಂಡಬ್ಲ್ಯು ತನ್ನೆಲ್ಲ ಮಾದರಿಗಳಲ್ಲಿ ಹೊಸತನವನ್ನು ಕಾಪಾಡುವ ಪ್ರಯತ್ನವನ್ನು ಮಾಡುತ್ತದೆ. ಇದೇ ರೀತಿಯಲ್ಲಿ ಎಲ್ ಎಡಿ ಬೆಳಕು ಸುತ್ತುವರಿಯಲ್ಪಟ್ಟ ಬಿಎಂಡಬ್ಲ್ಯು ಐ3 ಹೆಡ್ ಲೈಟ್ ತಾಜಾತನಕ್ಕೆ ಕಾರಣವಾಗಿದೆ.

04. ಬಿಎಂಡಬ್ಲ್ಯು ಇ30 ಎಂ3

04. ಬಿಎಂಡಬ್ಲ್ಯು ಇ30 ಎಂ3

ನೀವೇ ನೋಡುತ್ತಿರುವ ಬಿಎಂಡಬ್ಲ್ಯು ಇ30 ಎಂ3 ಮಾದರಿಯಲ್ಲಿ ಡ್ಯುಯಲ್ ಹೆಡ್ ಲೈಟ್ ಸೌಲಭ್ಯವನ್ನು ನೀಡಲಾಗಿದೆ. ವೃತ್ತಾಕಾರಾದ ಈ ಬೃಹತ್ ಹೆಡ್ ಲೈಟ್ ಗಳು ಹೆಚ್ಚು ಪ್ರಕಾಶಮಾನವಾಗಿದೆ.

03. ಬಿಎಂಡಬ್ಲ್ಯು ಎಂ4

03. ಬಿಎಂಡಬ್ಲ್ಯು ಎಂ4

ಬಿಎಂಡಬ್ಲ್ಯು ಎಂ4 ಕಾರಿನಲ್ಲಿ ನಿಖರತೆಯನ್ನು ಕಾಯ್ದುಕೊಳ್ಳುವ ಹೆಡ್ ಲೈಟ್ ನೀಡಲಾಗಿದೆ. ಇದು ತೀಕ್ಷ್ಣವಾದ ವಿನ್ಯಾಸಕ್ಕೆ ಸಾಕ್ಷಿಯಾಗಿದೆ.

02. ಬಿಎಂಡಬ್ಲ್ಯು 3.0 ಸಿಎಸ್ ಎಲ್

02. ಬಿಎಂಡಬ್ಲ್ಯು 3.0 ಸಿಎಸ್ ಎಲ್

ಬಿಎಂಡಬ್ಲ್ಯು ಐಕಾನಿಸ್ ಸಿಎಸ್ ಎಲ್ ಮಾದರಿಯನ್ನು ಗುರುತಿಸದೆಯೇ ಪಟ್ಟಿ ಪೂರ್ಣಗೊಳ್ಳುವುದಿಲ್ಲ. ಇಲ್ಲಿ ವೃತ್ತಾಕಾರಾದ ಬೃಹತ್ ಹೆಡ್ ಲೈಟ್ ನಡುವೆ ಅಂತರವನ್ನು ಕೊಡಲಾಗಿದೆ. ಇದು ಪರಿಪೂರ್ಣ ವಿಂಟೇಜ್ ಕಾರೆನಿಸಿಕೊಂಡಿದೆ.

01. ಬಿಎಂಡಬ್ಲ್ಯು ಐ8

01. ಬಿಎಂಡಬ್ಲ್ಯು ಐ8

ಬಿಎಂಡಬ್ಲ್ಯು ತಾಜಾ ಹೆಡ್ ಲೈಟ್ ವಿನ್ಯಾಸಕ್ಕೆ ಇದು ಸಾಕ್ಷಿಯಾಗಿದೆ. ಎಲ್ ಇಡಿ ಲೈಟ್ ನ ಮೇಲ್ಗಡೆಯಾಗಿ ಗುರುತಿಸಿಕೊಳ್ಳುವ ಐ8 ಭವಿಷ್ಯದ ಸಂಕೇತವನ್ನು ನೀಡುತ್ತದೆ. ಇದರಲ್ಲಿ ಭವಿಷ್ಯತ್ತಿನ ತಂತ್ರಜ್ಞಾನದ ಮೆಲುಕು ಹಾಕಬಹುದಾಗಿದೆ.

ಕಿಡ್ನಿ ಗ್ರಿಲ್ - 5. 1938 ಬಿಎಂಡಬ್ಲ್ಯು 328

ಕಿಡ್ನಿ ಗ್ರಿಲ್ - 5. 1938 ಬಿಎಂಡಬ್ಲ್ಯು 328

ಬಿಎಂಡಬ್ಲ್ಯು ಟ್ವಿನ್ ಕಿಡ್ನಿ ಗ್ರಿಲ್ ನಾವು ಯಾವತ್ತೂ ಮರೆಯಬಾರದು. ಇದು ಜಗತ್ತಿನ ಅತ್ಯಂತ ನಾವೀನ್ಯ ಹಾಗೂ ಶ್ರೇಷ್ಠ ವಿನ್ಯಾಸದ ಸಾಲಿನಲ್ಲಿ ಗುರುತಿಸಿಕೊಂಡಿದೆ. ಕಾರಿನ ಬಗ್ಗೆ ಪರಿಜ್ಞಾನವೇ ಇಲ್ಲದವರು ಗ್ರಿಲ್ ಗುರುತಿಸಿಕೊಂಡು ನಿಖರವಾಗಿ ಅದು ಬಿಎಂಡಬ್ಲ್ಯು ಕಾರು ಎಂದು ಹೇಳಿಬಿಡುತ್ತಾರೆ. 1938 ಬಿಎಂಡಬ್ಲ್ಯು ಕಾರಿನ ಕಿಡ್ನಿ ಗ್ರಿಲ್ ಹೇಗೆತ್ತೆಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇರೇ ಬೇಕೇ?

04. 3.0 ಲೀಟರ್ ಸಿಎಸ್ ಎಲ್

04. 3.0 ಲೀಟರ್ ಸಿಎಸ್ ಎಲ್

ಪ್ರತಿಯೊಂದು ಬ್ರಾಂಡ್ ನ ಯಶಸ್ಸಿನಲ್ಲಿ ಮುಂಭಾಗದ ವಿನ್ಯಾಸ ಅತಿ ಪ್ರಾಮುಖ್ಯವೆನಿಸುತ್ತದೆ. ಮೂಗಿನ ರೀತಿಯಲ್ಲಿ ಗುರುತಿಸಿಕೊಂಡಿರುವ ಈ ಕಿಡ್ನಿ ಗ್ರಿಲ್ ಹೊಂದಿಕೆಯಾಗಿದೆ.

03. ಎಫ್30 3 ಸಿರೀಸ್

03. ಎಫ್30 3 ಸಿರೀಸ್

ಇಲ್ಲೊಂದು ವಿಶಿಷ್ಟತೆಯನ್ನು ಕಾಣಬಹುದುದಾಗಿದ್ದು ನಿಮ್ಮಿಂದ ಗುರುತಿಸಬಹುದೇ? ಹೌದು, ಇಲ್ಲಿ ಕಿಡ್ನಿ ಗ್ರಿಲ್ ಹೆಡ್ ಲೈಟ್ ಜೊತೆ ಸಂಯೋಜನೆ ಮಾಡುವ ಪ್ರಯತ್ನ ಮಾಡಲಾಗಿದೆ. ಆದರೆ ಇದೇ ಕಾರಣಕ್ಕಾಗಿ ಅಪ್ಪಟ ವಾಹನ ಪ್ರೇಮಿಗಳಿಂದ ಟೀಕೆಗೆ ಗುರಿಯಾಗಿತ್ತು.

02. ಬಿಎಂಡಬ್ಲ್ಯು 507

02. ಬಿಎಂಡಬ್ಲ್ಯು 507

ಬಿಎಂಡಬ್ಲ್ಯು ಸಂಸ್ಥೆಯಿಂದ ನಿರ್ಮಾಣವಾದ ಅತ್ಯುತ್ತಮ ಕಾರುಗಳಲ್ಲಿ ಇದೂ ಒಂದಾಗಿದೆ. ಬಹುಶ: ಮೀಸೆ ತಿರುಗಿಸಿ ಮುಂದೆ ನಡೆಯುವಂತಹ ಏಕಮಾತ್ರ ಕಾರು ಇದಾಗಿರಬಹದು. 1950ರ ಈ ಕಿಡ್ನಿ ಗ್ರಿಲ್ ಹೆಚ್ಚು ಲಕ್ಷಣವನ್ನು ನೀಡಿದೆ.

01. ಬಿಎಂಡ್ಲ್ಯು ಐ8

01. ಬಿಎಂಡ್ಲ್ಯು ಐ8

ಮಗದೊಮ್ಮೆ ಬಿಎಂಡಬ್ಲ್ಯು ಐ8 ಹೈಬ್ರಿಡ್ ಸ್ಪೋರ್ಟ್ಸ್ ಕಾರನ್ನು ನಾವಿಲ್ಲಿ ಗುರುತಿಸಲು ಇಷ್ಟಪಡುತ್ತೇವೆ. ಮೊದಲ ನೋಟದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ ಎಂದು ಅನಿಸಿದರೂ ಸೂಕ್ಷ್ಮವಾಗಿ ಗಮನಿಸಿದಾಗ 1950ರ 507 ಮಾದರಿಯಲ್ಲಿರುವಂತಹ ಹೆಚ್ಚು ವಿಶಾಲವಾದ ಫ್ರಂಟ್ ಕಿಡ್ನಿ ಗ್ರಿಲ್ ನೀವಿಲ್ಲಿ ಕಾಣಬಹುದಾಗಿದೆ. ಅಷ್ಟೇ ಅಲ್ಲದೆ ನೀಲಿ ಬಣ್ಣದಿಂದ ಆವರಿಸಲ್ಪಟ್ಟಿದೆ. ಒಟ್ಟಿನಲ್ಲಿ ಶತಕದ ಸಂಭ್ರಮದಲ್ಲಿರುವ ಬಿಎಂಡಬ್ಲುಗೆ ಇಂದೊಂದು ಮಹತ್ತರ ಕೊಡುಗೆಯಾಗಿರಲಿದೆ.

Most Read Articles

Kannada
English summary
Top 5 BMW Headlights & Kidney Grilles
Story first published: Friday, April 17, 2015, 18:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X