ಪ್ರಪಂಚದಲ್ಲಿ ಕಾರುಗಳ ಸಂಚಾರವೇ ಇಲ್ಲದ ಮಾಯಾನಗರಿ

By Nagaraja

ಬಿಡುವಿಲ್ಲದ ಈ ಜೀವನದಲ್ಲಿ ದಿನವಿಡೀ ವಾಹನಗಳ ಕಿರಿಕಿರಿಯಿಂದ ಸಾಕಾಗಿ ಹೋಗಿದೆ. ದೇಶದಲ್ಲಿ ಜನಸಂಖ್ಯೆಗಿಂತಲೂ ವೇಗವಾಗಿ ವಾಹನಗಳ ಸಂಖ್ಯೆ ಶಿಪ್ರ ಗತಿಯಲ್ಲಿ ಏರುಗತಿಯಾಗುತ್ತಿದೆ. ಹಾಗಿರುವಾಗ ಪ್ರಪಂಚದಲ್ಲಿ ಕಾರುಗಳೇ ಇಲ್ಲದ ನಗರುಗಳ ಬಗ್ಗೆ ಯಾವತ್ತಾದರೂ ಯೋಚಿಸಿ ನೋಡಿರುವೀರಾ?

ಹೌದು, ನಾವಿಂದು ಸಾರ್ವಜನಿಕ ಸಾರಿಗೆ ಸಂಚಾರವನ್ನೇ ಅವಲಂಬಿಸಿರುವ ವಿಶ್ವದ ಕೆಲವು ಅತಿ ವಿಶಿಷ್ಟ ಮಾಯಾನಗರಿಗಳ ಬಗ್ಗೆ ಚರ್ಚಿಸಲಿದ್ದು, ಇಲ್ಲಿ ಕಾರು ಸಂಚಾರ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ವಿಶೇಷ ಲೇಖನದ ಮಾಹಿತಿಗಾಗಿ ಮುಂದುವರಿಯಿರಿ...

ಪ್ರಪಂಚದಲ್ಲಿ ಕಾರುಗಳ ಸಂಚಾರವೇ ಇಲ್ಲದ ಮಾಯಾನಗರಿ

ಪ್ರಸ್ತುತ ಪಟ್ಟಿಯಲ್ಲಿ ಕಾರು ಮುಕ್ತ ನಗರಗಳೊಂದಿಗೆ ಭವಿಷ್ಯದಲ್ಲಿ ಕಾರು ಮುಕ್ತ ನಗರದ ಕನಸನ್ನು ಹೊಂದಿರುವ ಪ್ರದೇಶಗಳನ್ನು ಪಟ್ಟಿ ಮಾಡಿ ಕೊಡುವ ಪ್ರಯತ್ನ ಮಾಡಲಾಗಿದೆ.

ಸಾರ್ಕ್ ದ್ವೀಪ

ಸಾರ್ಕ್ ದ್ವೀಪ

ಪಶ್ಛಿಮ ಯುರೋಪ್ ನ ಚಾನೆಲ್ ಐಲೇಂಡ್ ನಲ್ಲಿ (Channel Islands) ಸ್ಥಿತಗೊಂಡಿರುವ ಸಾರ್ಕ್ ದ್ಪೀಪದಲ್ಲಿ ಕಾರುಗಳು ಸಂಪೂರ್ಣವಾಗಿ ನಿಷೇಧಿಸಲ್ಪಟ್ಟಿದೆ. ಇಲ್ಲಿ ಕುದುರೆ ಗಾಡಿ, ಸೈಕಲ್ ಹಾಗೂ ಟ್ರ್ಯಾಕ್ಟರ್ ಸಂಚಾರಕ್ಕೆ ಮಾತ್ರ ಅನುವು ಮಾಡಿ ಕೊಡಲಾಗಿದೆ. ಪ್ರಯಾಣಿಕರು ಹಾಗೂ ಸಾಮಾಗ್ರಿಗಳು ಇಲ್ಲಿಗೆ ದೋಣಿಯ ಮೂಲಕ ಬರುವುದರಿಂದ 600ರಷ್ಟು ಜನಸಂಖ್ಯೆಯನ್ನು ಹೊಂದಿರುವ ಈ ಚೊಕ್ಕದಾದ ನಗರದಲ್ಲಿ ವಿಮಾನ ನಿಲ್ದಾಣವೇ ಇಲ್ಲ.

ಸತ್ಯಾಂಶ: 194 ಕೀ.ಮೀ. ಪ್ರದೇಶವನ್ನು ಹೊಂದಿರುವ ಇಲ್ಲಿ ಮೇಲ್ಸುತುವೆ (Flyover) ಸಹ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಮ್ಯಾಡ್ರಿಡ್

ಮ್ಯಾಡ್ರಿಡ್

ಸ್ಪೇನ್ ರಾಜಧಾನಿಯಾಗಿರುವ ಮ್ಯಾಡ್ರಿಡ್ ಬಗ್ಗೆ ನೀವೆಲ್ಲರೂ ಕೇಳಿರುವೀರಿ. 604.3 ಕೀ.ಮೀ. ಪ್ರದೇಶವನ್ನು ಹೊಂದಿರುವ ಇಲ್ಲಿನ ಕೆಲವು ನಿರ್ದಿಷ್ಟ ಸ್ಟ್ರೀಟ್ ಗಳಲ್ಲಿ ಕಾರು ಸಂಚಾರವನ್ನು ನಿಷೇಧಿಸಲಾಗಿದೆ. ಅಲ್ಲದೆ ಹೊರಗಿನ ವಾಹನಗಳು ಪ್ರವೇಶಿಸಿದರೆ 100 ಡಾಲರ್ ದಂಡ ತೆರಬೇಕಾಗುತ್ತದೆ. ಇಲ್ಲಿನ ಪ್ರದೇಶವನ್ನು ಪಾದಚಾರಿ ಕೇಂದ್ರವಾಗಿಸುವುದು ಉದ್ದೇಶವಾಗಿದೆ. ಹಾಗೆಯೇ 24ರಷ್ಟು ಸ್ಟ್ರೀಟ್ ಗಳನ್ನು ಪಾದಚಾರಿಗಳ ನಡೆದಾಟಕ್ಕೆ ಮೀಸಲಿಡಲಾಗಿದೆ.

ಸತ್ಯಾಂಶ: 20ನೇ ಶತಮಾನದ ಅತಿ ಯಶಸ್ವಿ ಫುಟ್ಬಾಲ್ ತಂಡ ರಿಯಲ್ ಮ್ಯಾಡ್ರಿಡ್ ಎಫ್ ಸಿ ತಂಡವನ್ನು ಮ್ಯಾಡ್ರಿಡ್ ಹೊಂದಿದೆ.

ಪ್ಯಾರಿಸ್

ಪ್ಯಾರಿಸ್

ಫ್ರಾನ್ಸ್ ರಾಜಧಾನಿ ಪ್ಯಾರಿಸ್ ಸಂಪೂರ್ಣ ಕಾರು ಮುಕ್ತ ನಗರವೆನಿಸಿಕೊಳ್ಳುವತ್ತ ದಿಟ್ಟ ಹೆಜ್ಜೆಯನ್ನಿಡುತ್ತಿದೆ. ಕಳೆದ ವರ್ಷ ನಗರದ್ಯಾಂತ ಮಾಲಿನ್ಯದ ಪ್ರಭಾವ ಹೆಚ್ಚಾದ ಹಿನ್ನೆಲೆಯಲ್ಲಿ ಸ್ವಲ್ಪ ಸಮಯದ ವರೆಗೆ ಕಾರುಗಳ ಜೊತೆಗೆ ನಂಬರ್ ಪ್ಲೇಟ್ ವಾಹನಗಳನ್ನು ನಿಷೇಧಿಸಲಾಗಿತ್ತು. ಇದರಿಂದಾಗಿ ಮಾಲಿನ್ಯ ಮಟ್ಟದಲ್ಲಿ ಶೇಕಡಾ 30ರಷ್ಟು ಇಳಿಕೆಯಾಗಿತ್ತು. ಪ್ರಸ್ತುತ ನಗರವೀಗ ಸಂಪೂರ್ಣವಾಗಿ ಕಾರುಗಳಿಗೆ ನಿಷೇಧ ಹೇರುವ ತಯಾರಿಯಲ್ಲಿ ತೊಡಗಿದೆ. 2020ರ ವೇಳೆಯಾಗುವಾಗ ಡೀಸೆಲ್ ಕಾರುಗಳಿಗೆ ನಿಷೇಧ ಹೇರುವ ಮೂಲಕ ಗರಿಷ್ಠ ವಾಹನ ದಟ್ಟಣೆಯ ಪ್ರದೇಶದಲ್ಲಿ ಎಲಕ್ಟ್ರಿಕ್ ಹಾಗೂ ಕಡಿಮೆ ಹೊಗೆ ಹೊರ ಸೂಸುವ ಅಲ್ಟ್ರಾ ವಾಹನಗಳನ್ನು ರಸ್ತೆಗಿಳಿಸುವ ಯೋಜನೆ ಹೊಂದಿದೆ.

ಸತ್ಯಾಂಶ: ಶಾಪಿಂಗ್ ಹಾಗೂ ಫ್ಯಾಷನ್ ನ ವಿಶ್ವ ರಾಜಧಾನಿಯಾಗಿ ಪ್ಯಾರಿಸ್ ಹೊರಹೊಮ್ಮಿದೆ.

ಚೆಂಗ್ಡು

ಚೆಂಗ್ಡು

ನೈಋತ್ಯ ಚೀನಾದ ಸ್ಯಾಟಲೈಟ್ ನಗರವಾದ ಚೆಂಗ್ಡು ಪ್ರದೇಶವನ್ನು ಅಲ್ಲಿನ ಆಡಳಿತವು ಆಧುನಿಕ ಉಪನಗರಗಳಿಗೆ ಮಾದರಿಯಾಗಿಸುವ ಪ್ರಯತ್ನದಲ್ಲಿ ತೊಡಗಿದೆ. ಇಲ್ಲಿನ ಮಾರ್ಗಗಳಲ್ಲಿ ಚಾಲನೆಗೆ ಒತ್ತು ಕೊಡುವ ಬದಲು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ನಡೆದಾಡುವ ಮೂಲಕ ಹೇಗೆ ತಲುಪಬಹುದು ಎಂಬ ರೀತಿಯಲ್ಲಿ ವಿನ್ಯಾಸಗೊಳಿಸಲಾಗುತ್ತದೆ. ಚಿಕಾಗೊ ತಳಹದಿಯ ವಾಸ್ತುಶಿಲ್ಪಿಗಳಾದ ಆಡ್ರಿಯಾನ್ ಸ್ಮಿತ್ ಮತ್ತು ಗೋರ್ಡನ್ ಗಿಲ್ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸತ್ಯಾಂಶ: ಚೀನಾದ ವಾಸಯೋಗ್ಯ ನಗರಗಳಲ್ಲಿ ಇದು ಒಂದಾಗಿದೆ.

ಹಂಬರ್ಗ್

ಹಂಬರ್ಗ್

ಜರ್ಮನಿಯ ಎರಡನೇ ಅತಿ ದೊಡ್ಡ ನಗರವಾಗಿರುವ ಹಂಬರ್ಗ್ ಭವಿಷ್ಯದಲ್ಲಿ ಕಾರ್ ಫ್ರೀ ಎನಿಸಿಕೊಳ್ಳಲಿದೆ. ಹಸಿರು ಜಾಲಕ್ಕೆ ಉತ್ತೇಜನ ನೀಡುತ್ತಿರುವ ಜರ್ಮನಿಯು ಮುಂದಿನ 15ರಿಂದ 20 ವರ್ಷಗಳಲ್ಲಿ ಈ ಕನಸನ್ನು ನನಸಾಗಿಸಲಿದೆ. ಪ್ರಸ್ತುತ ಜಾಲವು ನಗರದ ಶೇಕಡಾ 40ರಷ್ಟು ಪ್ರದೇಶವನ್ನು ಆಕ್ರಮಿಸಿಕೊಳ್ಳಲಿದೆ. ಹೆಸರಾಂತ ಹೈದ್ದಾರಿ ಎ7 ಆಟೋಬಾನ್ ಒಂದು ವಿಭಾಗವನ್ನು ಇದು ಆವರಿಸುತ್ತದೆ.

ಸತ್ಯಾಂಶ: ಮಿಲಿನಿಯರ್ ಗಳ ನಗರವೆಂದೇ ಹಂಬರ್ಗ್ ಜರ್ಮನಿಯಲಲ್ಲಿ ಪ್ರಸಿದ್ಧಿಯನ್ನು ಪಡೆದಿದೆ.

ಹೆಲ್ಸಿಂಕಿ

ಹೆಲ್ಸಿಂಕಿ

ಫಿನ್ ಲ್ಯಾಂಡ್ ರಾಜಧಾನಿ ಹಾಗೂ ಅತಿ ದೊಡ್ಡ ನಗರವಾಗಿರುವ ಹೆಲ್ಸಿಂಕಿ ಭವಿಷ್ಯದಲ್ಲಿ ಕಾರು ಮುಕ್ತವಾಗಲಿರುವ ಮಗದೊಂದು ನಗರವಾಗಿದೆ. ಭವಿಷ್ಯದಲ್ಲಿ ಇಲ್ಲಿನ ಜನಸಂಖ್ಯೆ ಹೆಚ್ಚಾಗಲಿರುವಂತೆಯೇ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹೆಚ್ಚಿನ ಒತ್ತು ಕೊಡಲಾಗುವುದು. ನಗರದಲ್ಲಿ ಏಕಜಾಲದಲ್ಲಿ ಪ್ರಯಾಣಿಕರಿಗೆ ಹತ್ತಿರದಲ್ಲಿ ಸಾರ್ವಜನಿಕ ವ್ಯವಸ್ಥೆ ಕಲ್ಪಿಸುವ ಮೂಲಕ ಕಾರು ಬಳಕೆಯನ್ನು ಸಂಪೂರ್ಣವಾಗಿ ಕೈಬಿಡುವ ಯೋಜನೆ ಹೊಂದಿದೆ.

ಸತ್ಯಾಂಶ: ಹೆಲ್ಸಿಂಕಿ ನಗರದಲ್ಲಿ ಪುರುಷರಿಗಿಂತ ಮಹಿಳಾ ಜನಸಂಖ್ಯಾ ಅನುಪಾತ ಹೆಚ್ಚಿದೆ.

ಮಿಲನ್

ಮಿಲನ್

ಇಟಲಿಯ ಎರಡನೇ ಜನನಿಬಿಡ ನಗರವಾಗಿರುವ ಮಿಲನ್ ನಲ್ಲಿ ವಿಶೇಷ ಯೋಜನೆಯೊಂದು ಜಾರಿಗೆ ಬರಲಿದ್ದು, ಇದರಂತೆ ತಮ್ಮ ಕಾರುಗಳನ್ನು ಮನೆಯಲ್ಲೇ ಬಿಟ್ಟು ತೆರಳುವವರಿಗೆ ವಿಶೇಷ ಉಚಿತ ಸಾರ್ವಜನಿಕ ಸಂಚಾರ ವ್ಯವಸ್ಥೆ (ಬಸ್ ಅಥವಾ ರೈಲು) ದೊರಕಲಿದೆ. ಆದರೆ ಇಲ್ಲಿ ಯಾರು ಮೋಸಮಾಡುವಂತಿಲ್ಲ. ಇದಕ್ಕಾಗಿ ವಿಶೇಷ ಇಂಟರ್ ನೆಟ್ ಸಂಪರ್ಕಿತ ಬಾಕ್ಸ್ ಟ್ರ್ಯಾಕ್ ಮಾಡಲಿದೆ.

ಸತ್ಯಾಂಶ: ವಾಣಿಜ್ಯ ತವರೂರು ಎಂದೇ ಕರೆಯಲ್ಪಡುವ ಮಿಲನ್ ನಲ್ಲಿ 12,000 ಕಂಪನಿ, 800 ಶೋ ರೂಂ, 6000 ಮಾರಾಟ ಕೇಂದ್ರಗಳು ಸ್ಥಿತಗೊಂಡಿದ್ದು, ಜಗತ್ತಿನ 12ನೇ ಅತಿ ದುಬಾರಿ ನಗರವೆನಿಸಿಕೊಂಡಿದೆ.

ಕೋಪನ್ ಹ್ಯಾಗನ್

ಕೋಪನ್ ಹ್ಯಾಗನ್

ಡೆನ್ಮಾರ್ಕ್ ನ ರಾಜಧಾನಿ ಹಾಗೂ ಅತ್ಯಂತ ಜನನಿಬಿಡ ಪ್ರದೇಶವಾಗಿರುವ ಕೋಪನ್ ಹ್ಯಾಗನ್ ಬಹಳ ಹಿಂದೆಯೇ ಕಾರು ಮುಕ್ತ ನಗರದ ರಚನೆಯ ಪ್ರಯತ್ನದಲ್ಲಿ ತೊಡಗಿದೆ. ಪ್ರಸ್ತುತ ನಗರದಲ್ಲಿ 1960ರಲ್ಲೇ ಪಾದಚಾರಿ ವಲಯ ಅವಿಷ್ಕರಿಸಲಾಗಿತ್ತು. ಅಷ್ಟೇ ಯಾಕೆ 200 ಮೈಲ್ ಗಳಷ್ಟು ಬೈಕ್ ಲೇನ್ ಹೊಂದಿರುವ ಇಲ್ಲಿ ಹತ್ತಿರದ ಉಪನಗರಗಳನ್ನು ತಲುಪುವ ನಿಟ್ಟಿನಲ್ಲಿ ಬೈಕ್ ಸೂಪರ್ ಹೈವೇ ರಚಿಸಲಾಗುತ್ತಿದೆ. ಇಡೀ ಯುರೋಪ್ ಖಂಡವನ್ನೇ ತುಲನೆ ಮಾಡಿ ನೋಡಿದಾಗ ಡೆನ್ಮಾರ್ಕ್ ನ ಈ ನಗರದಲ್ಲಿ ಅತಿ ಕಡಿಮೆ ಮಂದಿ ಕಾರು ಮಾಲಿಕತ್ವವನ್ನು ಹೊಂದಿದ್ದಾರೆ.

ಸತ್ಯಾಂಶ: ನ್ಯೂಯಾರ್ಕ್ ನ ಕೊಲಂಬಿಯಾ ಯುನಿವರ್ಸಿಟಿಯ ಅರ್ಥ್ ಇನ್ಸಿಟ್ಯೂಟ್ ನಡೆಸಿರುವ ವಿಶ್ವ ಹ್ಯಾಪಿನೆಸ್ 2013 ವರದಿ ಪ್ರಕಾರ 'ಜಗತ್ತಿನ ಅತಿ ಸಂತುಷ್ಟ ನಗರಿ' ಎಂಬ ಕೀರ್ತಿಗೆ ಕೋಪನ್ ಹ್ಯಾಗನ್ ಪಾತ್ರವಾಗಿತ್ತು.

ಮ್ಯಾಕಿನೊ ದ್ವೀಪ

ಮ್ಯಾಕಿನೊ ದ್ವೀಪ

ಅಮೆರಿಕದ ಮಿಚಿಗನ್ ಪ್ರಾಂತ್ಯದಲ್ಲಿ ಸ್ಥಿತಗೊಂಡಿರುವ ಮ್ಯಾಕಿನೊ ದ್ವೀಪವು ಸಂಪೂರ್ಣ ಕಾರು ಮುಕ್ತವಾಗಿದ್ದು, ಕುದುರೆ ಸವಾರಿ ಇಲ್ಲಿನ ಜೀವನ ಶೈಲಿಯ ಭಾಗವಾಗಿದೆ. ಆದರೆ ಅಪತ್ಕಾಲ ಸಂದರ್ಭದಲ್ಲಿ ಮಾತ್ರ ವಾಹನಗಳಿಗೆ ಪ್ರವೇಶವಿರುತ್ತದೆ. ಉಳಿದ ಸಂದರ್ಭಗಳಲ್ಲಿ 500ರಷ್ಟು ನಿವಾಸಿಗಳು ತಮ್ಮ ಬರಿಗಾಲಿನಲ್ಲಿ, ಸೈಕಲ್ ಹಾಗೂ ಕುದುರೆ ಸವಾರಿಯಲ್ಲಿ ತೊಡಗುತ್ತಾರೆ.

ಸತ್ಯಾಂಶ: ಜಗತ್ತಿನ ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಇದೂ ಒಂದಾಗಿದೆ. ಹಾಗೆಯೇ ಟ್ರಾವೆಲ್ ಪೀಕ್ (ಗರಿಷ್ಠ ಮಟ್ಟ) ಸಂದರ್ಭದಲ್ಲಿ ಪ್ರವಾಸಿಗರ ಸಂಖ್ಯೆ 1500ಕ್ಕೆ ಏರಿಕೆಯಾಗುತ್ತದೆ.

ಮೆಡಿನಾ ಆಫ್ ಫೆಸ್-ಅಲ್-ಬಾಲಿ

ಮೆಡಿನಾ ಆಫ್ ಫೆಸ್-ಅಲ್-ಬಾಲಿ

156,000ಕ್ಕಿಂತಲೂ ಹೆಚ್ಚಿನ ನಿವಾಸಿಗಳಿರುವ ಮೊರಕ್ಕೊದ ಮೆಡಿನಾ ಆಫ್ ಫೆಸ್-ಅಲ್-ಬಾಲಿ ವಿಶ್ವದಲ್ಲೇ ಕಾರು ಮುಕ್ತವಾಗಿರುವ ಅತಿ ದೊಡ್ಡ ನಗರವಾಗಿದೆ. ಇಲ್ಲಿನ ಬೀದಿ ಪ್ರದೇಶಗಳು ಪ್ರಾಚೀನ ಪರಂಪರೆಯನ್ನು ಬಿಂಬಿಸುತ್ತಿದ್ದು, ಇಕ್ಕಟ್ಟಾದ ಪ್ರದೇಶದಿಂದಾಗಿ ಬೈಕ್ ಚಾಲನೆಗೂ ನಿಷೇಧ ಹೇರಲಾಗಿದೆ.

ಸತ್ಯಾಂಶ: ವಿಶ್ವ ಪರಂಪರೆಯ ತಾಣವಾಗಿ ಪರಿಗಣಿಸಲ್ಪಟ್ಟಿದೆ.

ಹೈಡ್ರಾ, ಸಾರೋನಿಕ್ ದ್ವೀಪ

ಹೈಡ್ರಾ, ಸಾರೋನಿಕ್ ದ್ವೀಪ

ಗ್ರೀಸ್ ನ ಸಾರೋನಿಕ್ ದ್ವೀಪವಾಗಿರುವ ಹೈಡ್ರಾದಲ್ಲಿ ಕಸದ ಗಾಡಿಯನ್ನು ಬಿಟ್ಟರೆ ಇತರೆ ಯಾವುದೇ ವಾಹನಗಳಿಗೆ ಚಾಲನೆ ಅವಕಾಶವಿರುವುದಿಲ್ಲ. ಇಲ್ಲಿ ಕುದುರೆ ಹಾಗೂ ಕತ್ತೆಗಳನ್ನೇ ನೀವು ಆಶ್ರಯಿಸಬೇಕಾಗುತ್ತದೆ. ಆದರೆ ಇಲ್ಲಿನ ಜನರು ಬರಿಗಾಲಿನ ನಡೆದಾಟವನ್ನು ಇಷ್ಟಪಡುತ್ತಾರೆ.

ಸತ್ಯಾಂಶ: ಸೊಗಸಾದ ಕಲ್ಲಿನ ಮಹಲುಗಳು ಕಂಡುಬರುತ್ತದೆ.

ಲಾ ಕಂಬೆರ್ಟಿಕಾ

ಲಾ ಕಂಬೆರ್ಟಿಕಾ

ಸಮುದ್ರ ಮಟ್ಟಕ್ಕಿಂತ 1450 ಮೀಟರ್ ಎತ್ತರದಲ್ಲಿ ನೆಲೆಗೊಂಡಿರುವ ಈ ಅರ್ಜೆಂಟೀನಾ ಪ್ರಾಂತ್ಯವು ಪಾದಚಾರಿ ನಗರವೆಂದೇ ಖ್ಯಾತಿ ಪಡೆದಿದೆ. ಅಲ್ಲದೆ ಇಲ್ಲಿ ಇಕೊ ಟೂರಿಸಂ ಸಹ ಪ್ರೋತ್ಸಾಹಿಸಲಾಗುತ್ತದೆ.

ಸತ್ಯಾಂಶ: ಪ್ರಸ್ತುತ ನಗರದಲ್ಲಿ ಯಾವುದೇ ವಾಹನಗಳು ಸಂಚರಿಸುವಂತಿಲ್ಲ.

ಲಾಮು ದ್ವೀಪ

ಲಾಮು ದ್ವೀಪ

ಕೀನ್ಯಾದ ಪುರಾತನ ನಗರಗಳಲ್ಲಿ ಒಂದಾಗಿರುವ ಲಾಮು ದ್ವೀಪದಲ್ಲಿ ಒಂದು ಕಾಲದಲ್ಲಿ ಗುಲಾಮರ ವ್ಯಾಪಾರಕ್ಕೆ ಪ್ರಸಿದ್ಧಿ ಪಡೆದಿತ್ತು. ಇದು ಪೂರ್ವ ಆಫ್ರಿಕಾದ ಅತಿ ಪುರಾತನ ಹಾಗೂ ಅತ್ಯುತ್ತಮ ಸ್ಥಿತಿಯಲ್ಲಿರುವ ಸ್ವಹಿಲಿ ವಸಾಹತುಶಾಹಿಯನ್ನು ಹೊಂದಿದೆ. ಇಲ್ಲಿನ ಪ್ರಮುಖ ಸಂಚಾರ ವಾಹಕ ಕತ್ತೆಯಾಗಿದೆ.

ಸತ್ಯಾಂಶ: ಲಾಮು ದ್ವೀಪವು 14ನೇ ಶತಮಾನದಲ್ಲಿ ಅರಬ್ ವ್ಯಾಪಾರಿಗಳ ಪ್ರವೇಶದಿಂದ ಉಗಮವಾಗಿತ್ತು.

ವೆನಿಸ್

ವೆನಿಸ್

ಈಶಾನ್ಯ ಇಟಲಿ ಹೆಸರಾಂತ ನಗರವಾಗಿರುವ ವೆನಿಸ್ ನಗರಕ್ಕೊಮ್ಮೆ ನೀವು ಪ್ರವೇಶಿಸಿದರೆ ಬೋಟಿಂಗ್ ಹಾಗೂ ವಾಕಿಂಗ್ ಅವಕಾಶ ಪಡೆಯಲಿದ್ದೀರಿ. ಕಳೆದ ಶತಮಾನದಿಂದಲೂ ವೆನಿಸ್ ಜನರು ಇದನ್ನೇ ಅನುಸರಿಸಿಕೊಂಡು ಬಂದಿದ್ದರು. ಯುರೋಪ್ ನ ಅತಿ ದೊಡ್ಡ ಕಾರು ಮುಕ್ತ ಪಟ್ಟಣವಾಗಿರುವ ವೆನಿಸ್ ದ್ಯಾಂತ 118 ಸಣ್ಣ ದ್ವೀಪಗಳನ್ನು ಸಂಪರ್ಕಿಸಲು 400ರಷ್ಟು ಸೇತುವೆಗಳನ್ನು ಕಟ್ಟಲಾಗಿದೆ.

ಸತ್ಯಾಂಶ: ಕಾಲುವೆಗಳ ನಗರವೆಂದೇ ವೆನಿಸ್ ಜನಪ್ರಿಯತೆ ಗಿಟ್ಟಿಸಿಕೊಂಡಿದೆ.

ಪ್ರಪಂಚದಲ್ಲಿ ಕಾರುಗಳ ಸಂಚಾರವೇ ಇಲ್ಲದ ಮಾಯಾನಗರಿ

ಮೇಲೆ ತಿಳಿಸಿದ ಎಲ್ಲ ನಗರಗಳನ್ನು ಹೋಲಿಸಿದಾಗ ನಮ್ಮ ಭಾರತದ ಸ್ಥಾನ ಯಾವುದು? ಪರಿಸರ ಮಾಲಿನ್ಯ ನಿಯಂತ್ರಿಸಲು ಸರಕಾರ ಕೈಗೊಳುತ್ತಿರುವ ಕ್ರಮಗಳೇನು? ಈ ಬಗೆಗಿನ ವಿಸ್ತಾರವಾದ ಚರ್ಚೆ ನಡೆಯಲಿ ಎಂಬುದೇ ನಮ್ಮ ಆಶಯವಾಗಿದೆ.


Most Read Articles

Kannada
English summary
Fed up of pollution? Wondering where to go on your next vacation? Why don't you try one of these car-free cities, and let us know your experience.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X