ಪಾಕ್‌ಗೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಲು ಭಾರತೀಯ ವಾಯುಪಡೆ ಸಿದ್ಧ!

By Nagaraja

ಉರಿ ಸೇನಾ ಶಿಬಿರದ ಮೇಲೆ ಪಾಕಿಸ್ತಾನ ಉಗ್ರರಿಂದ ದಾಳಿಯ ಬೆನ್ನಲ್ಲೇ ಕಠಿಣ ನಿಲುವಿಗೆ ಮುಂದಾಗಿರುವ ಭಾರತ ಸರಕಾರ ಮುಂಬರುವ ಸಾರ್ಕ್ ಶೃಂಗ ಸಭೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿದೆ. ಗಡಿಯಾಚೆಗಿನ ಭಯೋತ್ಪಾದನೆ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ರಾಜತಾಂತ್ರಿಕ ವ್ಯವಹಾರದಿಂದ ಪಾಕಿಸ್ತಾನವನ್ನು ಪ್ರತ್ಯೇಕಿಸುವ ಮೂಲಕ ಭಾರತ ತಕ್ಕ ಉತ್ತರ ನೀಡಿದೆ. ಇದಕ್ಕೂ ಮೊದಲು ಸಿಂಧು ನದಿ ತಡೆ ಹಿಡಿಯುವ ಮೂಲಕ ಪಾಕಿಸ್ತಾನಕ್ಕೆ ಭಾರಿ ಹೊಡೆತ ನೀಡುವ ಭಾರತ ಮುಂದಾಗಿತ್ತು. ಇವೆಲ್ಲದರಿಂದ ಎರಡು ದೇಶದ ನಡುವೆ ಪ್ರಶುಬ್ಧ ವಾತಾವರಣ ನಿರ್ಮಾಣಗೊಂಡಿದೆ.

ವಿಶ್ವದಲ್ಲೇ ನಾಲ್ಕನೇ ಅತಿ ದೊಡ್ಡ ವಾಯುಪಡೆಯನ್ನು ಹೊಂದಿರುವ ಭಾರತೀಯ ವಾಯುಪಡೆಯ 2016 ಲೆಕ್ಕಾಚಾರದ ಪ್ರಕಾರ 12,244 ಅಧಿಕಾರಿಗಳು ಹಾಗೂ 138,596 ಸೈನಿಕರು ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಭಾರತೀಯ ವಾಯು ಸೇನೆಯಲ್ಲಿ 2000ದಷ್ಟು ಸಕ್ರಿಯ ಯುದ್ಧ ವಿಮಾನಗಳು ಸೇವೆ ಸಲ್ಲಿಸುತ್ತಿದೆ. ವಾಯು ವಲಯದಲ್ಲಿ ದೇಶದ ರಕ್ಷಣೆ ಇದರ ಪ್ರಮುಖ ಕರ್ತವ್ಯವಾಗಿದೆ.

ಸುಖೋಯ್ ಸು-30 ಎಂಕೆಐ ಬಹುಪಾತ್ರಧಾರಿ ಯುದ್ಧ ವಿಮಾನ

ಸುಖೋಯ್ ಸು-30 ಎಂಕೆಐ ಬಹುಪಾತ್ರಧಾರಿ ಯುದ್ಧ ವಿಮಾನ

ವಾಯು ಮೇಲ್ಮೆಯಲ್ಲಿ ಹಿರಿಮೆಯನ್ನು ಎತ್ತಿ ಹಿಡಿದಿರುವ ಸುಖೋಯ್ ಸು-3- ಎಂಕೆಐ ಟ್ವಿನ್ ಜೆಟ್ ಯುದ್ಧ ವಿಮಾನವನ್ನು, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಪರವಾನಗಿಯಲ್ಲಿ ರಷ್ಯಾ ಅಭಿವೃದ್ಧಿಪಡಿಸಿದೆ.

ಪಾಕ್‌ಗೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಲು ಭಾರತೀಯ ವಾಯುಪಡೆ ಸಿದ್ಧ!

ಭಾರತ ವಾಯುಪಡೆಯನ್ನು ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಸುಖೋಯ್ 30 ಎಂಕೆಐ ಎಲ್ಲ ಹವಾಮಾನ ಪರಿಸ್ಥಿತಿಯಲ್ಲೂ ಕಾರ್ಯಾಚರಣೆ ನಡೆಸುವಷ್ಟು ಶಕ್ತವಾಗಿದೆ. 2002ನೇ ಇಸವಿಯಿಂದಲೇ ಸೇವೆಯಲ್ಲಿರುವ ಸುಖೋಯ್ ವ್ಯೋಮಸೇನೆಯನ್ನು ಬಲಿಷ್ಠಗೊಳಿಸಿದೆ.

ಎಚ್ ಎಎಲ್ ತೇಜಸ್ ಬಹುಪಾತ್ರಧಾರಿ ಯುದ್ಧ ವಿಮಾನ

ಎಚ್ ಎಎಲ್ ತೇಜಸ್ ಬಹುಪಾತ್ರಧಾರಿ ಯುದ್ಧ ವಿಮಾನ

ಸಿಂಗಲ್ ಸೀಟು, ಸಿಂಗಲ್ ಎಂಜಿನ್, ಹಗುರ ಭಾರ, ಹೆಚ್ಚು ಚುರುಕತನದ ಸೂಪರ್ ಸೋನಿಕ್ ಬಹುಪಾತ್ರಧಾರಿ ತೇಜಸ್ ಯುದ್ಧ ವಿಮಾನವನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅಭಿವೃದ್ಧಿಪಡಿಸಿದೆ. ಕಳೆಗುಂದಿರುವ ಮಿಗ್-21 ಫೈಟರ್ ಜೆಟ್ ಸ್ಥಾನ ತುಂಬಿಕೊಂಡಿರುವ ತೇಜಸ್ ಹಗುರ ಭಾರತದ ಯುದ್ಧ ವಿಮಾನಗಳ ಸಾಲಿನಲ್ಲಿ ಗುರುತಿಸಿಕೊಂಡಿದೆ.

ಪಾಕ್‌ಗೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಲು ಭಾರತೀಯ ವಾಯುಪಡೆ ಸಿದ್ಧ!

ಎಚ್ ಎಫ್ 24 ಮಾರುತ್ ಬಳಿಕ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅಭಿವೃದ್ಧಿಪಡಿಸಿರುವ ಎರಡನೇ ಸೂಪರ್ ಸೋನಿಕ್ ಯುದ್ಧ ವಿಮಾನ ಇದಾಗಿದೆ. ಏರೋನಾಟಿಕಲ್ ಅಭಿವೃದ್ಧಿ ಪ್ರಾಧಿಕಾರ (ಎಡಿಎ) ಮುತುವರ್ಜಿಯಲ್ಲಿ ತೇಜಸ್ ವಿಮಾನವನ್ನು ವಿನ್ಯಾಸಗೊಳಿಸಲಾಗಿದೆ.

ಮಿಕೊಯಾನ್ ಮಿಗ್-29 ಯುದ್ಧ ವಿಮಾನ

ಮಿಕೊಯಾನ್ ಮಿಗ್-29 ಯುದ್ಧ ವಿಮಾನ

ಟ್ವಿನ್ ಎಂಜಿನ್ ನಿಯಂತ್ರಿತ ಮಿಕೊಯಾನ್ ಮಿಗ್ 29 ಯುದ್ಧ ವಿಮಾನವನ್ನು ಸೋವಿಯತ್ ಒಕ್ಕೂಟ ವಿನ್ಯಾಸಗೊಳಿಸಿದೆ. ಇದನ್ನು ವಿವಿಧ ಕಾರ್ಯಾಚರಣೆಗಳಿಗೆ ನಿಯುಕ್ತಿಗೊಳಿಸಬಹುದಾಗಿದೆ. ಮಿಗ್ 29ಎಂ, ಮಿಗ್ 29ಕೆ ಹಾಗೂ ಮಿಗ್-35 ಈ ಶ್ರೇಣಿಯ ಯುದ್ಧ ವಿಮಾನಗಳಾಗಿವೆ.

ಪಾಕ್‌ಗೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಲು ಭಾರತೀಯ ವಾಯುಪಡೆ ಸಿದ್ಧ!

1980ರ ದಶಕದಿಂದಲೇ ಸೇವೆಯಲ್ಲಿ ಮಿಗ್ ವಿಮಾನವು ಭಾರತೀಯ ವಾಯುಸೇನೆಯ ಅವಿಭಾಜ್ಯ ಅಂಗವಾಗಿದೆ. 1999ರ ಕಾರ್ಗಿಲ್ ಯುದ್ಧದಲ್ಲೂ ಮಿಗ್ ಯುದ್ಧ ವಿಮಾನವನ್ನು ಬಳಕೆ ಮಾಡಲಾಗಿತ್ತು.

ದಸ್ಸಾಲ್ಟ್ ಮಿರಾಜ್ 2000 ಯುದ್ಧ ವಿಮಾನ

ದಸ್ಸಾಲ್ಟ್ ಮಿರಾಜ್ 2000 ಯುದ್ಧ ವಿಮಾನ

ಫ್ರಾನ್ಸ್ ನ ದಸ್ಸಾನ್ ಎವಿಯೇಷನ್ ನಿರ್ಮಿಸಿರುವ ಮಿರಾಜ್ 2000 ಒಂದು ಸಿಂಗಲ್ ಎಂಜಿನ್ ನಿಯಂತ್ರಿತ ನಾಲ್ಕನೇ ತಲೆಮಾರಿನ ಯುದ್ಧ ವಿಮಾನವಾಗಿದೆ. ಇದು ಭಾರತ ಸೇರಿದಂತೆ ಈಜಿಪ್ಟ್, ಗ್ರೀಕ್, ತೈವಾನ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳಲ್ಲೂ ಸೇವೆ ಸಲ್ಲಿಸುತ್ತಿದೆ.

ಪಾಕ್‌ಗೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಲು ಭಾರತೀಯ ವಾಯುಪಡೆ ಸಿದ್ಧ!

ಭಾರತದಲ್ಲಿ ದಸ್ಸಾಲ್ಟ್ ಎಂ2000ಎಚ್, ದಸ್ಸಾಲ್ಟ್ ಎಂ2000ಟಿಎಚ್ ಮತ್ತು ದಸ್ಸಾಲ್ಟ್ ಮಿರಾಜ್ 2000ಐ/ಟಿಐ ಆವೃತ್ತಿಗಳು ಸೇವೆ ಸಲ್ಲಿಸುತ್ತಿದೆ. ಹಿಮಾಲಯ ಪರ್ವತಗಳಲ್ಲಿ ಮಿರಾಜ್ ಸೇವೆಯು ನಿರ್ಣಾಯಕವೆನಿಸುತ್ತದೆ.

ಮಿಕೋಯಾನ್ ಗುರೆವಿಚ್ ಮಿಗ್-21

ಮಿಕೋಯಾನ್ ಗುರೆವಿಚ್ ಮಿಗ್-21

ಮಿಕೋಯಾನ್ ಗುರೆವಿಚ್ ಮಿಗ್-21 ಸೂಪರ್ ಸೋನಿಕ್ ಜೆಟ್ ಯುದ್ಧ ವಿಮಾನವನ್ನು ವಿಕೋಯಾನ್ ಗುರೆವಿಚ್ ಡಿಸೈನ್ ಬ್ಯುರೋ ಅಭಿವೃದ್ಧಿಪಡಿಸಿದೆ. ಪ್ರಸ್ತುತ ಯುದ್ಧ ವಿಮಾನ ಭಾರತ-ಪಾಕಿಸ್ತಾನ ಹಾಗೂ ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು.

ಪಾಕ್‌ಗೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಲು ಭಾರತೀಯ ವಾಯುಪಡೆ ಸಿದ್ಧ!

ಜಗತ್ತಿನಾದ್ಯಂತ 60ರಷ್ಟು ರಾಷ್ಟ್ರಗಳು ಮಿಗ್ ವಿಮಾನದ ಸೇವೆಯನ್ನು ಪಡೆಯುತ್ತಿದೆ. ಭಾರತದಲ್ಲಿ ಮಿಗ್ 21 ಬಿಸನ್ ಹಾಗೂ ಮಿಗ್ 21 ಎಂಎಫ್ ಆವೃತ್ತಿಗಳು ಸೇವೆಯಲ್ಲಿದೆ.

Most Read Articles

Kannada
English summary
Top Five most dangerous fighter aircrafts Indian Air Force
Story first published: Wednesday, September 28, 2016, 11:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X