ಇಂಡಿಯನ್ ರೈಲ್ವೆ 162ರ ಸಂಭ್ರಮ; 40 ಸ್ವಾರಸ್ಯಕರ ಅಂಶಗಳು

By Nagaraja

ಪ್ರಪಂಚದಲ್ಲೇ ಅತಿ ದೊಡ್ಡ ಹಾಗೂ ಅತಿ ಚಟುವಟಿಕೆಯ ರೈಲ್ವೆ ಜಾಲಗಳಲ್ಲಿ ಒಂದಾಗಿರುವ ಇಂಡಿಯನ್ ರೈಲ್ವೆ ಅಥವಾ ಭಾರತೀಯ ರೈಲ್ವೆ 2015 ಎಪ್ರಿಲ್ 16ರಂದು ತನ್ನ 162ನೇ ವರ್ಷಾಚರಣೆಯನ್ನು ಆಚರಿಸಿಕೊಂಡಿತ್ತು.

ಜಗತ್ತಿನ ಅತಿ ದೊಡ್ಡ ರೈಲ್ವೇ ಜಾಲವನ್ನು ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತೀಯ ರೈಲ್ವೆ 115,000 ಕೀ.ಮೀ. ರೈಲು ಹಳಿ (65,436 ಕೀ.ಮೀ. ರೈಲು ರೂಟ್) ಮತ್ತು 7172 ಸ್ಟೇಷನ್‌ಗಳನ್ನು ಹೊಂದಿದೆ. ಈಗ ಭಾರತೀಯ ರೈಲ್ವೆಗೆ ಸಂಬಂಧಿಸಿದಂತಹ 40 ಅತಿ ಸ್ವಾರಸ್ಯದಾಯಕ ಮಾಹಿತಿಗಳನ್ನು ಬಹಿರಂಗಪಡಿಸಲಿದ್ದೇವೆ. ತಪ್ಪದೇ ಓದಿ...

ಭಾರತೀಯ ರೈಲ್ವೆ; 40 ಸ್ವಾರಸ್ಯಕರ ಅಂಶಗಳು

40. ಭಾರತೀಯ ರೈಲ್ವೆಯಲ್ಲಿ 16 ಲಕ್ಷಕ್ಕೂ ಹೆಚ್ಚು ಮಂದಿ ನೌಕಕರು ದುಡಿಯುತ್ತಿದ್ದಾರೆ. ಪ್ರಪಂಚದಲ್ಲೇ ಒಂದೇ ಸಂಸ್ಥೆಯಲ್ಲಿ ಇದಕ್ಕೂ ಹೆಚ್ಚು ಜನರು ದುಡಿಯುತ್ತಿರುವುದು ಚೀನಾ ಸೇನೆಯಲ್ಲಿ ಮಾತ್ರವಾಗಿದೆ.

39.

39.

ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಬರುವ ವೇಳೆಯಲ್ಲಿ 42 ರೈಲ್ವೇಗಳು ಅಸ್ತಿತ್ವದಲ್ಲಿದ್ದವು ಎಂಬುದಕ್ಕೆ ದಾಖಲೆಗಳಿವೆ. 1951ರಲ್ಲಿ ಇವೆಲ್ಲವನ್ನು ರಾಷ್ಟ್ರೀಕರಿಸಿ ಒಂದುಗೂಡಿಸಲಾಯಿತು.

38.

38.

ದೇಶದ ಮೊದಲ ರೈಲು ಸೇವೆ ಬ್ರಿಟಿಷ್ ಆಡಳಿತ ಕಾಲದಲ್ಲಿ 1853ರಲ್ಲಿ ಆರಂಭವಾಗಿತ್ತು.

37.

37.

ಇಂಡಿಯನ್ ರೈಲ್ವೆ ಜಗತ್ತಿನಲ್ಲೇ ಅತಿ ದೊಡ್ಡ ರೈಲ್ವೆ ಜಾಲವಾಗಿದೆ.

36.

36.

1853ನೇ ಇಸವಿಯ ಎಪ್ರಿಲ್ 16ರಂದು ದೇಶದ ಮೊದಲ ಪ್ರಯಾಣಿಕ ರೈಲು ಸೇವೆ ಆರಂಭವಾಯಿತು. ಈ ರೈಲು ಬೋರಿ ಬಂದರ್ (ಈಗಿನ ಛತ್ರಪತಿ ಶಿವಾಜಿ ನಿಲ್ಧಾಣ, ಮುಂಬೈ) ಹಾಗೂ ಥಾಣೆ ನಡುವೆ ಸಂಚರಿಸಿತ್ತು.

35.

35.

ಈ ಎರಡು ನಿಲ್ದಾಣಗಳ ನಡುವಣ ಅಂತರ 34 ಕೀ.ಮೀ. (21 ನಿಮಿಷ) ಆಗಿದೆ. ಸಾಹಿಬ್, ಸಿಂಧ್ ಹಾಗೂ ಸುಲ್ತಾನ್‌ಗಳೆಂಬ ಮೂರು ಎಂಜಿನ್‌ಗಳ ನೆರವಿನಿಂದ ಮೊದಲ ಸಂಚಾರ ಆರಂಭಿಸಲಾಗಿತ್ತು.

34

34

ಮುಂಬೈನ ಬೋರಿ ಬಂದರ್ ನಿಂದ 14 ಬೋಗಿಗಳಲ್ಲಿ 400 ಅತಿಥಿಗಳನ್ನು ಹೊತ್ತ ರೈಲು ಏಪ್ರಿಲ್ 16ರಂದು ಮಧ್ಯಾಹ್ನ 3.30ಕ್ಕೆ ಸಂಚಾರ ಆರಂಭಿಸಿತು.

33.

33.

ಸಾರ್ವಜನಿಕರಿಗೆ ಪ್ರಯಾಣಕ್ಕೆ ಈ ರೈಲಿನಲ್ಲಿ ಅವಕಾಶ ಇರದ ಕಾರಣ ಭಾರತದ ಮೊತ್ತ ಮೊದಲ ಪ್ರಯಾಣಿಕರ ರೈಲು ಎಂಬ ಪಟ್ಟದಿಂದ ಇದು ವಂಚಿತವಾಯಿತು.

32.

32.

1854ರ ಆಗಸ್ಟ್‌ 15ರಂದು ಕೋಲ್ಕತ್ತದ ಹೌರಾ ನಿಲ್ದಾಣದಿಂದ ಹೂಗ್ಲಿಗೆ 24 ಮೈಲು ಸಂಚರಿಸಿದ ಈಸ್ಟ್‌ ಇಂಡಿಯಾ ಕಂಪೆನಿಯ ರೈಲು ಭಾರತದ ಮೊದಲ ಪ್ರಯಾಣಿಕರ ರೈಲು ಎಂದು ಇತಿಹಾಸದಲ್ಲಿ ದಾಖಲಾಗಿದೆ.

31.

31.

ಇದಾದ ಎರಡು ವರ್ಷಗಳ ಬಳಿಕ 1856ರಲ್ಲಿ ದಕ್ಷಿಣ ಭಾರತದಲ್ಲಿ ಮದ್ರಾಸ್ ರೈಲು ಕಂಪೆನಿ ಪ್ರಯಾಣಿಕರ ರೈಲು ವೇಸರಪಾಂಡಿ - ಅರ್ಕಾಟ್‌ ನಡುವೆ 63 ಮೈಲು ಸಂಚರಿಸಿತು.

30.

30.

ಇದಾದ ಮೂರು ವರ್ಷಗಳ ನಂತರ 1859ರಲ್ಲಿ ಉತ್ತರ ಭಾರತದಲ್ಲಿ ಮೊದಲ ರೈಲು ಸಂಚರಿಸಿತು. ಮಾರ್ಚ್‌ 3ರಂದು ಅಲಹಾಬಾದ್‌-ಕಾನ್ಪುರ ನಡುವೆ ಈ ರೈಲು 119 ಮೈಲು ಸಂಚರಿಸಿತು.

29.

29.

1875ರ ಅಕ್ಟೋಬರ್‌ 19ರಂದು ಹಥ್ರಾಸ್‌ ರಸ್ತೆಯಿಂದ ಮಥುರಾ ದಂಡು ರೈಲು ನಿಲ್ದಾಣಕ್ಕೆ ಸಂಚರಿಸಿದ ರೈಲು ಪಶ್ಚಿಮ ಭಾರತದ ಮೊದಲ ರೈಲು ಎಂಬ ಹೆಗ್ಗಳಿಕೆ ಪಡೆದಿದೆ.

28.

28.

ಭಾರತೀಯ ರೈಲ್ವೆ ಇಲಾಖೆಯ ಎರಡು ಸ್ಥಳಗಳು ಯುನೆಸ್ಕೊ ವಿಶ್ವ ಪಾರಂಪರಿಕ ತಾಣ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

27.

27.

ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್‌ ಹಾಗೂ 'ಮೌಂಟೇನ್‌ ರೈಲ್ವೇಸ್‌ ಆಫ್‌ ಇಂಡಿಯಾ' ಈ ಹೆಗ್ಗಳಿಕೆ ಪಡೆದಿವೆ.

26.

26.

ದೇಶದ ವಿಭಿನ್ನ ಸ್ಥಳಗಳಲ್ಲಿರುವ ಮೂರು ಪರ್ವತ ಮಾರ್ಗಗಳು ಯುನೆಸ್ಕೊ ಮಾನ್ಯತೆ ಪಡೆದಿವೆ.

25.

25.

ಆಡಳಿತಾತ್ಮಕ ದೃಷ್ಟಿಯಿಂದ ಭಾರತೀಯ ರೈಲ್ವೇಯನ್ನು ಹದಿನಾರು ವಲಯಗಳನ್ನಾಗಿ ವಿಂಗಡಿಸಲಾಗಿದೆ.

24.

24.

ಅಂಕಿಅಂಶ ಪ್ರಕಾರ 2014-15ರಲ್ಲಿ ವಾರ್ಷಿಕವಾಗಿ 8.397 ಬಿಲಿಯನ್ ಪ್ರಯಾಣಿಕರು, ದೈನಂದಿನ 23 ಮಿಲಿಯನ್ ಪ್ರಯಾಣಿಕರು (ಅರ್ಧದಷ್ಟು ಜನರು ಉಪನಗರ ರೈಲಿನಲ್ಲಿ ಪ್ರಯಾಣಿಸುತ್ತಾರೆ) ಮತ್ತು 1050.18 ಮಿಲಿಯನ್ ಟನ್ ಸರಕುಗಳ ಸಾಗಾಟ ನಡೆದಿದೆ.

23.

23.

ಅಂತೆಯೇ 2014-15ರ ಸಾಲಿನಲ್ಲಿ ಒಟ್ಟು 1634.50 ಬಿಲಿಯನ್ ಆದಾಯ ಗಿಟ್ಟಿಸಿಕೊಂಡಿದೆ. ಇದರಲ್ಲಿ 1069.27 ಬಿಲಿಯನ್ ಆದಾಯ ಸರಕುಗಳಿಂದ ಹಾಗೂ 402.80 ಬಿಲಿಯನ್ ಪ್ರಯಾಣಿಕ ಟಿಕೆಟ್ ಸಂಗ್ರಹದಿಂದ ಬಂದಿದೆ.

22.

22.

ನಿಮ್ಮ ಮಾಹಿತಿಗಾಗಿ, ಜಗತ್ತಿನ ಅತಿ ದೊಡ್ಡ ರೈಲ್ವೆ ಮೇಲ್ಸುತೆಯನ್ನು ಜಮ್ಮು ಮತ್ತು ಕಾಶ್ಮೀರದ ಚಿನಾಬ್ ನಲ್ಲಿ ನಿರ್ಮಿಸಲಾಗುತ್ತಿದೆ. ಇದು ದೇಶದ ಅತಿ ದೊಡ್ಡ ಸ್ತಂಭ ಕೂತುಬ್ ಮಿನಾರ್ ಗಿಂತಲೂ ಐದು ಪಟ್ಟು ದೊಡ್ಡದಾಗಿರುತ್ತದೆ.

21.

21.

ರೈಲ್ವೆಯಲ್ಲಿ ಸೇವೆ ಸಲ್ಲಿಸುತ್ತಿರುವ ಲೊಕೊ ಪೈಲಟ್ ಗಳು (ರೈಲ್ವೆ ಚಾಲಕರು) ಸಾಮಾನ್ಯ ಸಾಫ್ಟವೇರ್ ಎಂಜಿನಿಯರ್ ಗಿಂತಲೂ ಹೆಚ್ಚು ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಮೂಲಗಳ ಪ್ರಕಾರ ಲೊಕೊ ಪೈಲಟ್ ಗಳ ಒಂದು ತಿಂಗಳ ವೇತನ ಕನಿಷ್ಠ ಒಂದು ಲಕ್ಷ ರು.ಗಳಾಗಿರುತ್ತದೆ.

20.

20.

ಇನ್ನು ರೈಲು ಅಪಘಾತದಲ್ಲಿ ಪ್ರಯಾಣಿಕರು ಮೃತಪಟ್ಟರೂ ಲೊಕೊ ಪೈಲಟ್ ಗಳನ್ನು ಅಮಾನತು ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.

19.

19.

ಇಂಡಿಯನ್ ರೈಲ್ವೆ ವೆಬ್ ಸೈಟ್ ಪ್ರತಿ ನಿಮಿಷಕ್ಕೆ ಸರಾಸರಿ 12 ಲಕ್ಷ ಹಿಟ್ಸ್ ಗಳನ್ನು ಪಡೆಯುತ್ತದೆ.

18.

18.

ದೇಶದ ಅತಿ ನಿಧಾನದ ರೈಲು ಗಂಟೆಗೆ ಕನಿಷ್ಠ 10 ಕೀ.ಮೀ. ವೇಗದಲ್ಲಿ ಸಂಚರಿಸುತ್ತದೆ. ಅದುವೇ ಮೆಟ್ಟುಪಾಲಯಂ ಊಟಿ ನೀಲಗಿರಿ ಪ್ರಯಾಣಿಕ ರೈಲಾಗಿದೆ.

17.

17.

ಭಾರತೀಯ ರೈಲ್ವೆ ಹಳಿಯನ್ನು ಉದ್ದವಾಗಿ ಹರಿಯಬಿಟ್ಟರೆ ಇಡೀ ಭೂಮಿಯನ್ನೇ ಒಂದು ವರೆ ಸುತ್ತು ಹಾಕಬಹುದು ಎಂದು ಮೂಲಗಳು ತಿಳಿಸುತ್ತದೆ.

16.

16.

ಭಾರತೀಯ ರೈಲ್ವೆ ಆರಂಭವಾದ 50 ವರ್ಷಗಳ ಬಳಿಕ ರೈಲಿನಲ್ಲಿ ಶೌಚಾಲಯ ವ್ಯವಸ್ಥೆ ಆರಂಭಿಸಲಾಗಿತ್ತು.

15.

15.

ದೇಶದ ಅತಿ ಉದ್ದದ ಸ್ಟೇಷನ್ ಹೆಸರು ಇಲ್ಲಿದೆ. ಅಬ್ಬಬ್ಬಾ ನೀವೇ ಓದಿಕೊಳ್ಳಿ Venkatanarasimharajuvaripeta.ಅದೇ ರೀತಿ ಅತಿ ಚಿಕ್ಕ ಸ್ಟೇಷನ್ ಹೆಸರು ಓಡಿಸ್ಸಾದಲ್ಲಿದೆ. ಅದುವೇ IB

14.

14.

ಪದೇ ಪದೇ ಸಮಯಕ್ಕೆ ಸರಿಯಾಗಿ ತಲುಪುವಲ್ಲಿ ಎಡವುತ್ತಿರುವ ಗುವಾಹಟಿ-ತಿರುವನಂತಪುರ ಎಕ್ಸ್ ಪ್ರೆಸ್ ವಿಶ್ವಾಸಾರ್ಹವಲ್ಲದ ರೈಲು ಎಂಬ ಅಪಖ್ಯಾತಿಗೆ ಒಳಾಗಾಗಿದೆ.

13.

13.

ದೇಶದ ಅತಿ ಉದ್ದದ ರೈಲು ಸೂರಂಗ ಮಾರ್ಗವು ಜಮ್ಮು ಮತ್ತು ಕಾಶ್ಮೀರದಲ್ಲಿದೆ. ಅಲ್ಲಿನ ಪಿರ್ ಪಂಜಾಲ್ ರೈಲ್ವೆ ಸೂರಂಗ ಮಾರ್ಗವು 11.2 ಕೀ.ಮೀ. ದೂರವನ್ನು ಹೊಂದಿದೆ.

12.

12.

ರೈಲ್ವೆ ಹಳಿ ಜೋಡಣೆಗಾಗಿ ಆಟೋಮ್ಯಾಟಿಕ್ ಪಾಯಿಂಟ್ ವ್ಯವಸ್ಥೆಗೂ ಮೊದಲು ನೌಕರರು ತಮ್ಮ ಕೈಯಿಂದಲೇ ಇದನ್ನು ನಿರ್ವಹಿಸುತ್ತಿದ್ದರು. ಈ ಅಪಾಯಕಾರಿ ಕೆಲಸದಿಂದಾಗಿ ನೂರಾರು ಮಂದಿ ತಮ್ಮ ಕೈ ಕಾಲುಗಳನ್ನೇ ಮುರಿದುಕೊಳ್ಳುತ್ತಾರೆ. ನೀವು ಪ್ರತಿ ಬಾರಿಯೂ ರೈಲು ವಿಳಂಬವಾಗುತ್ತಿರುವುದಕ್ಕೆ ಹಿಡಿಶಾಪ ಹಾಕುತ್ತಿರುವ ಅದೇ ವೇಳೆಯಲ್ಲಿ ರೈಲ್ವೆ ಹಳಿ ಜೋಡಣೆಗಾಗಿ ಗಾರ್ಡ್ ಗಳು ತಮ್ಮ ಕೈ ಕಾಲುಗಳನ್ನೇ ಕಳೆದುಕೊಳ್ಳುತ್ತಾರೆ.

11.

11.

ದೇಶದಲ್ಲಿ ಅತಿ ದೂರ ಸಂಚರಿಸುವ ರೈಲು ವಿವೇಕ್ ಎಕ್ಸ್ ಪ್ರೆಸ್ ಆಗಿದ್ದು, ಒಟ್ಟು 4273 ಕೀ.ಮೀ. ದೂರವನ್ನು ಕ್ರಮಿಸುತ್ತದೆ. ಇದು ದಿಬ್ರೂಘಾರ್ ನಿಂದ ಕನ್ಯಾಕುಮಾರಿಗೆ ಸಂಚರಿಸುತ್ತದೆ. ಅದೇ ರೀತಿ ಅತಿ ಕಡಿಮೆ ದೂರ ಸಂಚರಿಸುವ ರೈಲು ಕೇವಲ 3 ಕೀ.ಮೀ. ಹಾದಿಯನ್ನಷ್ಟೇ ಕ್ರಮಿಸುತ್ತದೆ. ಇದು ನಾಗ್ಪುರದಿಂದ ಮೂರು ಕೀ.ಮೀ. ದೂರದ ಅಜನಿ ಸ್ಟೇಷನ್ ತಲುಪುತ್ತದೆ.

10 .

10 .

ಅದೇ ರೀತಿ ತಿರುವನಂತಪುರದಿಂದ ನಿಜಾಮುದ್ದೀನ್ ಸಾಗುವ ರಾಜಧಾನಿ ಎಕ್ಸ್ ಪ್ರೆಸ್ ನಿಲುಗಡೆಯಿಲ್ಲದೆ 528 ಕೀ.ಮೀ. ಹಾದಿಯನ್ನು ಕ್ರಮಿಸುತ್ತದೆ.

09.

09.

ಉತ್ತರಪ್ರದೇಶದ ಲಕ್ನೋ ದೇಶದ ಅತ್ಯಂತ ಬಿಡುವಿಲ್ಲದ ರೈಲ್ವೆ ನಿಲ್ಡಾಣವಾಗಿದ್ದು, ದಿನಂಪ್ರತಿ 64 ರೈಲುಗಳು ಬಂದು ಹೋಗುತ್ತದೆ.

08.

08.

ಅಷ್ಟೇ ಯಾಕೆ ಇಂಡಿಯನ್ ರೈಲ್ವೇಯಲ್ಲಿ ದೈನಂದಿನ 11,000 ರೈಲುಗಳು ಓಡಾಡುತ್ತಿರುತ್ತದೆ. ಇದು ತಮಾಷೆಯ ಮಾತಲ್ಲ!

07.

07.

ಹಾಗೆಯೇ ಭಾರತೀಯ ರೈಲ್ವೆ ದೈನಂದಿನ 2.5 ಕೋಟಿ ಪ್ರಯಾಣಿಕರನ್ನು ಸಾಗಿಸುತ್ತಿದೆ. ಈ ಪ್ರಮಾಣ ನ್ಯೂಜಿಲೆಂಡ್, ಆಸ್ಟ್ರೇಲಿಯಾ ಹಾಗೂ ತಸ್ಮಾನಿಯಾ ಒಟ್ಟು ಜನಸಂಖ್ಯೆಯಷ್ಟಾಗಿದೆ.

06

06

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ರೈಲ್ವೆ ಮ್ಯೂಸಿಯಂ ಏಷ್ಯಾದಲ್ಲೇ ಅತಿ ದೊಡ್ಡದಾಗಿದೆ.

05.

05.

ಮಗದೊಂದು ಸ್ವಾರಸ್ಯದಾಯಕ ಅಂಶವೆದರೆ ನವಪುರಾ ರೈಲ್ವೆ ನಿಲ್ದಾಣದ ತಲಾ ಅರ್ಧ ಭಾಗಗಳಷ್ಟು ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯವನ್ನು ಹಂಚಿಕೊಳ್ಳುತ್ತದೆ.

04.

04.

ಕರ್ನಾಟಕದಲ್ಲಿ ರೈಲು ಸಂಪರ್ಕವಿಲ್ಲದ ಜಿಲ್ಲೆ ಯಾವುದು?

ಕೊಡಗು

03.

03.

ಕರ್ನಾಟಕದ ಮೊದಲ ರೈಲು ಮಾರ್ಗ ಯಾವುದು?

ಬೆಂಗಳೂರು-ಜೋಲಾರ ಪೇಟೆ

02.

02.

ಒಟ್ಟು 28 ರಾಜ್ಯ ಹಾಗೂ ಮೂರು ಕೇಂದ್ರಡಾಳಿತ ಪ್ರದೇಶದಲ್ಲಿ ಹರಡಿರುವ ದೇಶದ ರೈಲು ಜಾಲ ಬಾಂಗ್ಲಾದೇಶ, ನೇಪಾಳ ಹಾಗೂ ಪಾಕಿಸ್ತಾನಕ್ಕೂ ನಿಗದಿತ ಯಾನವನ್ನು ಹೊಂದಿದೆ.

01.

01.

ಕೊನೆಗೆ ಭಾರತೀಯ ರೈಲ್ವೆಯ ಅದೃಷ್ಟ ಸಂಕೇತ ಏನೂ ಗೊತ್ತೇ?

ಬೋಲು (Bholu or Bholu the guard elephant)

Most Read Articles

Kannada
English summary
40 Top Most Interesting facts about Indian Railway
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X