ಪರ್ವತ ಶಿಖರವನ್ನು ಚುಂಬಿಸಿದ ವಿಶ್ವದ 10 ಎತ್ತರದ ಸೇತುವೆಗಳು

By Nagaraja

ಸೇತುವೆಗಳ ನಿರ್ಮಾಣ ಒಂದು ರೀತಿಯ ಕಲೆಯಾಗಿದೆ. ಭೂಮಿಯ ನೈಸರ್ಗಿಕ ಆಕಾರಕ್ಕೆ ಯಾವುದೇ ಕುತ್ತು ಸಂಭವಿಸದ ರೀತಿಯಲ್ಲಿ ನದಿಗಳಿಂದ ಬೇರ್ಪಡಿಸಿದ ಪರ್ವತ ಕಣಿವೆಗಳನ್ನು ಜೋಡಿಸುವ ಸಲುವಾಗಿ ಸೇತುವೆಗಳನ್ನು ನಿರ್ಮಿಸಲಾಗುತ್ತದೆ. ಪ್ರಮುಖವಾಗಿಯೂ ಸಾರಿಗೆ ಸಂಚಾರಕ್ಕಾಗಿ ಬೃಹತ್ ಸೇತುವೆಗಳ ರೂಪುರೇಷೆಗಳನ್ನು ನೀಡಲಾಗುತ್ತದೆ.

ಅಷ್ಟಕ್ಕೂ ಕಣಿವೆಗಳನ್ನು ಚುಂಬಿಸುವ ವಿಶ್ವದ ಅತಿ ಎತ್ತರದ ಸೇತುವೆಗಳು ಯಾವ ರಾಷ್ಟ್ರದಲ್ಲಿದೆ? ಅವುಗಳ ಎತ್ತರವೆಷ್ಟು ಎಂಬುದನ್ನು ಯಾವತ್ತಾದರೂ ಚಿಂತಿಸಿ ನೋಡಿರುವೀರಾ? ಪ್ರಸ್ತುತ ಲೇಖನದಲ್ಲಿ ಈ ಬಗ್ಗೆ ವಿವರಣೆಯನ್ನು ಕೊಡಲಿದ್ದೇವೆ.

10. ಬೀಪನ್ ರಿವರ್ ಹುಕುನ್ ಎಕ್ಸ್ ಪ್ರೆಸ್ ವೇ ಬ್ರಿಡ್ಜ್

10. ಬೀಪನ್ ರಿವರ್ ಹುಕುನ್ ಎಕ್ಸ್ ಪ್ರೆಸ್ ವೇ ಬ್ರಿಡ್ಜ್

ಎಲ್ಲಿದೆ: ಚೀನಾ

ಎತ್ತರ: 318 ಮೀಟರ್

2009ನೇ ಇಸವಿಯಲ್ಲಿ ನಿರ್ಮಿಸಿರುವ ಬೀಪನ್ ರಿವರ್ ಹುಕುನ್ ಎಕ್ಸ್ ಪ್ರೆಸ್ ವೇ ಬ್ರಿಡ್ಜ್ ಚೀನಾದ ಗ್ಯುಝೋವು ಗಡಿಯಲ್ಲಿ ಸ್ಥಿತಗೊಂಡಿದೆ. ಜಿ60 ಶಾಂಘೈ-ಕುನ್ಮಿಂಗ್ ಎಕ್ಸ್ ಪ್ರೆಸ್ ವೇ ಭಾಗವಾಗಿರುವ ಈ ತೂಗು ಸೇತುವೆ 318 ಮೀಟರ್ ಗಳಷ್ಟು ಎತ್ತರವನ್ನು ಹೊಂದಿದೆ.

09. ಲಿಶೂಯಿ ರಿವರ್ ಬ್ರಿಡ್ಜ್

09. ಲಿಶೂಯಿ ರಿವರ್ ಬ್ರಿಡ್ಜ್

ಎಲ್ಲಿದೆ: ಚೀನಾ

ಎತ್ತರ: 330 ಮೀಟರ್

2013ನೇ ಇಸವಿಯಲ್ಲಿ ನಿರ್ಮಿಸಿರುವ ಲಿಶೂಯಿ ಸೇತುವೆ ಸಹ ಚೀನಾದಲ್ಲಿದ್ದು, ಯಾಂಗ್ ಡಿಂಗ್ ನಿಂದ ಯಾಂಗ್ ಶುನ್ ನಗರವನ್ನು ಬಂಧಿಸುತ್ತದೆ. ಪ್ರಸ್ತುತ 330 ಮೀಟರ್ ಎತ್ತರದ ತೂಗು ಸೇತುವೆ ನಿರ್ಮಾಣದಿಂದ ಪ್ರಯಾಣ ಅವಧಿ ಅರ್ಧದಷ್ಟು ಕಡಿಮೆಯಾಗಿದೆ.

08. ಏಝಾಯ್ ಬ್ರಿಡ್ಜ್

08. ಏಝಾಯ್ ಬ್ರಿಡ್ಜ್

ಎಲ್ಲಿದೆ: ಚೀನಾ

ಎತ್ತರ: 336 ಮೀಟರ್

ಚೀನಾದ ಚಾಂಗ್ ಕ್ವಿಂಗ್ ನಿಂದ ಚಾಂಗ್ ಷಾ ನಗರವನ್ನು ಬಂಧಿಸುವ ಏಜಾಯ್ ಬ್ರಿಡ್ಜ್, ವಿಶ್ವದ ಅತಿ ಎತ್ತರದ ಸೇತುವೆಗಳಲ್ಲಿ ಎಂಟನೇ ಸ್ಥಾನದಲ್ಲಿದೆ. ಇದು ವಿಶ್ವದ ಅತಿ ಎತ್ತರದ ಮತ್ತು ಉದ್ದವಾದ ಟನಲ್ ಟು ಟನಲ್ ಸೇತುವೆಯೆಂಬ ಖ್ಯಾತಿಗೂ ಪಾತ್ರವಾಗಿದೆ.

07. ಲಿಯೂ ಚಾಂಗ್ ರಿವರ್ ಬ್ರಿಡ್ಜ್

07. ಲಿಯೂ ಚಾಂಗ್ ರಿವರ್ ಬ್ರಿಡ್ಜ್

ಎಲ್ಲಿದೆ: ಚೀನಾ

ಎತ್ತರ: 340 ಮೀಟರ್

ವಿಶ್ವದ ಅತಿ ಎತ್ತರದ ಸೇತುವೆ ನಿರ್ಮಾಣದಲ್ಲಿ ಚೀನಾ ತನ್ನ ಅಧಿಪತ್ಯವನ್ನು ಮುಂದುವರಿಸಿದೆ. 2013ನೇ ಇಸವಿಯಲ್ಲಿ ನಿರ್ಮಿತ ಲಿಯೂ ಚಾಂಗ್ ರಿವರ್ ಬ್ರಿಡ್ಜ್, ಚೀನಾ ಎಂಜಿನಿಯರ್ ಗಳ ಕೌಶಲ್ಯವನ್ನು ತೋರ್ಪಡಿಸುತ್ತಿದ್ದು, 340 ಮೀಟರ್ ಗಳಷ್ಟು ಎತ್ತರದಲ್ಲಿದೆ.

06. ಬೀಪನ್ ರಿವರ್ ಗುವನ್ ಕ್ಸಿಂಗ್ ಹೈವೇ ಬ್ರಿಡ್ಜ್

06. ಬೀಪನ್ ರಿವರ್ ಗುವನ್ ಕ್ಸಿಂಗ್ ಹೈವೇ ಬ್ರಿಡ್ಜ್

ಎಲ್ಲಿದೆ: ಚೀನಾ

ಎತ್ತರ: 366 ಮೀಟರ್

ಚೀನಾದಲ್ಲಿರುವ ವಿಶ್ವದ ಆರನೇ ಎತ್ತರದ ಸೇತುವೆ, 2003ನೇ ಇಸವಿಯಲ್ಲಿ ನಿರ್ಮಾಣಗೊಂಡಾಗ ಜಗತ್ತಿನ ಎತಿ ಎತ್ತರದ ಸೇತುವೆ ಎಂಬ ಗೌರವಕ್ಕೆ ಪಾತ್ರವಾಗಿತ್ತು.

05. ಬಾಲಿಂಗ್ ರಿವರ್ ಬ್ರಿಡ್ಜ್

05. ಬಾಲಿಂಗ್ ರಿವರ್ ಬ್ರಿಡ್ಜ್

ಎಲ್ಲಿದೆ: ಚೀನಾ

ಎತ್ತರ: 370 ಮೀಟರ್

ಜಿ60 ಶಾಂಘೈ-ಕುನ್ಮಿಂಗ್ ಎಕ್ಸ್ ಪ್ರೆಸ್ ವೇ ಭಾಗವಾಗಿರುವ ಬಾಲಿಂಗ್ ರಿವರ್ ಬ್ರಿಡ್ಜ್ 370 ಮೀಟರ್ ಎತ್ತರದಲ್ಲಿದೆ. 2009ರಲ್ಲಿ ನಿರ್ಮಿತ ಈ ಸೇತುವೆಯಿಂದಾಗಿ ಎರಡು ಪ್ರದೇಶಗಳ ನಡುವಣ ಅಂತರವು ಒಂದು ತಾಸಿನಿಂದ ಕೇವಲ ನಾಲ್ಕು ನಿಮಿಷಗಳಿಗೆ ಇಳಿಕೆಯಾಗಿದೆ.

04. ಬಲುಯಾರ್ಟ್ ಬ್ರಿಡ್ಜ್

04. ಬಲುಯಾರ್ಟ್ ಬ್ರಿಡ್ಜ್

ಎಲ್ಲಿದೆ: ಮೆಕ್ಸಿಕೊ

ಎತ್ತರ: 390 ಮೀಟರ್

ಚೀನಾ ಅಧಿಪತ್ಯಕ್ಕೆ ಕೊನೆ ಹಾಡಿರುವ ಮೆಕ್ಸಿಕೊ ವಿಶ್ವದ ಅತಿ ಎತ್ತರದ ಸೇತುವೆಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಕೇಬಲ್ ಶೈಲಿಯ ಈ ಸೇತುವೆ ಅಮೆರಿಕದಲ್ಲಿರುವ ಅತಿ ಎತ್ತರದ ಸೇತುವೆ ಕೂಡಾ ಹೌದು.

03. ಕ್ವಿಂಗ್ ಶೂಯಿ ರಿವರ್ ಬ್ರಿಡ್ಜ್

03. ಕ್ವಿಂಗ್ ಶೂಯಿ ರಿವರ್ ಬ್ರಿಡ್ಜ್

ಎಲ್ಲಿದೆ: ಚೀನಾ

ಎತ್ತರ: 406 ಮೀಟರ್

ವಿಶ್ವದ ಮೂರನೇ ಅತಿ ಎತ್ತರದ ಸೇತುವೆ ಕ್ವಿಂಗ್ ಶೂಯಿ ರಿವರ್ ಬ್ರಿಡ್ಜ್ ಒಟ್ಟಾರೆ 1130 ಮೀಟರ್ ಗಳಷ್ಟು ಉದ್ದದಷ್ಟು ಹರಡಿದೆ. 406 ಮೀಟರ್ ಎತ್ತರದಲ್ಲಿ ಸ್ಥಿತಗೊಂಡಿರುವ ಈ ಸೇತುವೆಯ ನಿರ್ಮಾಣದ ಬಳಿಕ ವೆಂಗ್ ಯಾನ್ ಕಂಟ್ರಿ ಮತ್ತು ಗ್ಯುಯಾಂಗ್ ನಡುವಣ ಅಂತರ 100 ಮೈಲುಗಳಿಂದ 23 ಮೈಲುಗಳಿಗೆ ಇಳಿಕೆಯಾಗಿದೆ.

02. ಪುಲಿ ಬ್ರಿಡ್ಜ್

02. ಪುಲಿ ಬ್ರಿಡ್ಜ್

ಎಲ್ಲಿದೆ: ಚೀನಾ

ಎತ್ತರ: 485 ಮೀಟರ್

ಜಿ56 ಹ್ಯಾಂಗ್ ಝೂ-ರುಯಿಲಿ ಎಕ್ಸ್ ಪ್ರೆಸ್ ವೇ ಭಾಗವಾಗಿರುವ ಪುಲಿ ಬ್ರಿಡ್ಜ್ ಕಳೆದ ವರ್ಷವಷ್ಟೇ ಲೋಕರ್ಪಣೆಯಾಗಿತ್ತು. 485 ಮೀಟರ್ ಎತ್ತರದಲ್ಲಿ ಸ್ಥಿತಗೊಂಡಿರುವ ಈ ಸೇತುವೆ ಆಕರ್ಷಕ ನೋಟವನ್ನು ಬೀರುತ್ತಿದೆ.

01. ಸಿದು ರಿವರ್ ಬ್ರಿಡ್ಜ್

01. ಸಿದು ರಿವರ್ ಬ್ರಿಡ್ಜ್

ಎಲ್ಲಿದೆ: ಚೀನಾ

ಎತ್ತರ: 496 ಮೀಟರ್

ವಿಶ್ವದ ಅತಿ ಎತ್ತರದ ಸೇತುವೆ ಎಂಬ ಕೀರ್ತಿಗೆ ಚೀನಾದಲ್ಲಿರುವ ಸಿದು ರಿವರ್ ಬ್ರಿಡ್ಜ್ ಪಾತ್ರವಾಗಿದೆ. 900 ಮೀಟರ್ ಗಳಷ್ಟು ಉದ್ದದ ಈ ತೂಗು ಸೇತುವೆಯನ್ನು 2009ರಲ್ಲಿ ಉದ್ಘಾಟನೆಗೊಳಿಸಲಾಗಿತ್ತು. ಸಿದು ನದಿ ಕಣಿವೆಯ 496 ಮೀಟರ್ ಎತ್ತರದಲ್ಲಿ ಇದನ್ನು ನಿರ್ಮಿಸಲಾಗಿದೆ.

Most Read Articles

Kannada
Read more on ಟಾಪ್ 10 top 10
English summary
Top 10 Highest Bridges In The World: How High Is The Highest?
Story first published: Monday, May 2, 2016, 13:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X