ದೇಶದ ಜೀವನಾಡಿಯಾದ 10 ಅತಿ ದೂರದ ರೈಲು ಸೇವೆಗಳು

By Nagaraja

ಭಾರತೀಯ ರೈಲ್ವೆ ಪ್ರಪಂಚದ ಅತಿ ದೊಡ್ಡ ಹಾಗೂ ಅತಿ ಚಟುವಟಿಕೆಯ ರೈಲು ಜಾಲಗಳಲ್ಲಿ ಒಂದಾಗಿದೆ. ದೇಶದ ಮೂಲೆ ಮೂಲೆಗೆ ಹರಡಿರುವ ಭಾರತೀಯ ರೈಲ್ವೆ ಆಡಳಿತಾತ್ಮಕ ದೃಷ್ಟಿಯಿಂದ ಅನೇಕ ವಲಯಗಳಾಗಿ ವಿಂಗಡಿಸಲಾಗಿದೆ.

ಹೀಗೆ ಹಲವು ಪ್ರಥಮಗಳಿಗೆ ಅರ್ಹವಾಗಿರುವ ಭಾರತೀಯ ರೈಲ್ವೆಯು ಅನೇಕ ಅತಿ ದೂರದ ರೈಲು ಸೇವೆಗಳನ್ನು ಹಂಚಿಕೊಳ್ಳುತ್ತಿದೆ. ಪ್ರಸ್ತುತ ಲೇಖನದಲ್ಲಿ ದೇಶದ ಜೀವನಾಡಿಯಾದ 10 ಅತಿ ಉದ್ದದ ರೈಲ್ವೆ ಹಾದಿಗಳನ್ನು ಪರಿಚಯಿಸಲಿದ್ದೇವೆ.

10. ಗುವಾಹಟಿ ಎರ್ನಾಕುಳಂ ಎಕ್ಸ್ ಪ್ರೆಸ್

10. ಗುವಾಹಟಿ ಎರ್ನಾಕುಳಂ ಎಕ್ಸ್ ಪ್ರೆಸ್

ದೂರ: 3337 ಕೀ.ಮೀ.

ಕೇರಳದ ಎರ್ನಾಕುಳಂದಿಂದ ಅಸ್ಸಾಂನ ಗುಹಾಹಟಿ ವರೆಗೆ ಒಟ್ಟು 3337 ಕೀ.ಮೀ. ದೂರ ಕ್ರಮಿಸುವ ಗುವಾಹಟಿ ಎರ್ನಾಕುಳಂ ಎಕ್ಸ್ ಪ್ರೆಸ್ 10ನೇ ಸ್ಥಾನದಲ್ಲಿದೆ. 43 ನಿಲ್ದಾಣಗಳಲ್ಲಿ ನಿಲುಗಡೆಗೊಳಿಸುವ ಈ ಎಕ್ಸ್ ಪ್ರೆಸ್ ಒಟ್ಟು 59 ತಾಸು ಮತ್ತು 45 ನಿಮಿಷಗಳ ಪ್ರಯಾಣ ಅವಧಿಯನ್ನು ಹೊಂದಿರಲಿದೆ.

09. ಕೇರಳ ಸಂಪರ್ಕ್ ಕ್ರಾಂತಿ ಎಕ್ಸ್ ಪ್ರೆಸ್

09. ಕೇರಳ ಸಂಪರ್ಕ್ ಕ್ರಾಂತಿ ಎಕ್ಸ್ ಪ್ರೆಸ್

ದೂರ: 3415 ಕೀ.ಮೀ.

ಒಂಬತ್ತನೇ ಸ್ಥಾನದಲ್ಲಿರುವ ಕೇರಳ ಸಂಪರ್ಕ್ ಕ್ರಾಂತಿ ಎಕ್ಸ್ ಪ್ರೆಸ್ ಚಂಡೀಗಡದಿಂದ ಕೇರಳದ ತಿರುವನಂತಪುರದಲ್ಲಿರುವ ಕೊಚ್ಚುವೇಳಿ ಸ್ಟೇಷನ್ ವರೆಗೆ ಪಯಣಿಸುತ್ತದೆ. ತನ್ನ ಪಯಣದೆಡೆ 70 ಸ್ಟಾಪ್ ಗಳಲ್ಲಿ ನಿಲುಗಡೆ ಹೊಂದಿರುವ ಈ ಎಕ್ಸ್ ಪ್ರೆಸ್ ಒಟ್ಟು 57 ತಾಸು ಮತ್ತು 35 ನಿಮಿಷಗಳ ವರೆಗಿನ ಯಾತ್ರೆಯನ್ನು ಹೊಂದಿದೆ.

08. ರಪ್ತಿಸಾಗರ್ ಎಕ್ಸ್ ಪ್ರೆಸ್

08. ರಪ್ತಿಸಾಗರ್ ಎಕ್ಸ್ ಪ್ರೆಸ್

ದೂರ: 3441 ಕೀ.ಮೀ.

ಬಿಹಾರದ ಬರೌನಿಯಿಂದ ಕೇರಳದ ಎರ್ನಾಕುಳಂ ವರೆಗೆ ಸೇವೆಯಲ್ಲಿರುವ ರಪ್ತಿಸಾಗರ್ ಎಕ್ಸ್ ಪ್ರೆಸ್ ಒಟ್ಟು 3441 ಕೀ.ಮೀ. ಹಾದಿಯನ್ನು ಕ್ರಮಿಸುತ್ತದೆ. ತನ್ನ ಮಾರ್ಗ ಮಧ್ಯೆ 61 ಕಡೆ ನಿಲುಗಡೆ ಹೊಂದಿರುವ ರಪ್ತಿಸಾಗರ್ ಎಕ್ಸ್ ಪ್ರೆಸ್ ಒಟ್ಟು 62 ತಾಸಿನ ಪಯಣವನ್ನು ಹೊಂದಿದೆ.

07. ಡೆಹ್ರಾಡೂನ್ ಕೊಚ್ಚುವೇಳಿ ಸೂಪರ್ ಎಕ್ಸ್ ಪ್ರೆಸ್

07. ಡೆಹ್ರಾಡೂನ್ ಕೊಚ್ಚುವೇಳಿ ಸೂಪರ್ ಎಕ್ಸ್ ಪ್ರೆಸ್

ದೂರ: 3,465 ಕೀ.ಮೀ.

ಡೆಹ್ರಾಡೂನ್ ಮತ್ತು ತಿರುವನಂತಪುರ ನಡುವಣ ಕೊಚ್ಚುವೇಳಿ ಎಕ್ಸ್ ಪ್ರೆಸ್ ಒಟ್ಟು 3465 ಕೀ.ಮೀ. ದೂರವನ್ನು ಕ್ರಮಿಸುತ್ತದೆ. ಕೇವಲ 25 ತಂಗುದಾಣಗಳನ್ನು ಹೊಂದಿರುವ ಈ ಸೂಪರ್ ಎಕ್ಸ್ ಪ್ರೆಸ್ 61 ತಾಸಿನ ಪಯಣವನ್ನು ಹೊಂದಿರಲಿದೆ.

 06. ದಿಬ್ರುಘಡ್ ಎಕ್ಸ್ ಪ್ರೆಸ್

06. ದಿಬ್ರುಘಡ್ ಎಕ್ಸ್ ಪ್ರೆಸ್

ದೂರ: 3547 ಕೀ.ಮೀ.

ಬೆಂಗಳೂರಿನ ಯಶವಂತಪುರದಿಂದ ಆರಂಭವಾಗುವ ದಿಬ್ರುಘಡ್ ಎಕ್ಸ್ ಪ್ರೆಸ್ 3547 ಕೀ.ಮೀ. ದೂರ ಕ್ರಮಿಸಿ ಅಸ್ಸಾಂನ ದಿಬ್ರುಘಡ್ ನಲ್ಲಿ ಕೊನೆಗೊಳ್ಳುತ್ತದೆ. 68 ತಾಸಿನ ಅವಧಿಯ ಈ ಪಯಣದಲ್ಲಿ 33 ಕಡೆ ನಿಲುಗಡೆಗೊಳಿಸುತ್ತದೆ.

05. ಗುವಾಹಟಿ ಎಕ್ಸ್ ಪ್ರೆಸ್

05. ಗುವಾಹಟಿ ಎಕ್ಸ್ ಪ್ರೆಸ್

ದೂರ: 3559 ಕೀ.ಮೀ.

ಕೇರಳದ ತಿರುವನಂತಪುರದಿಂದ ಆರಂಭವಾಗುವ ಗುವಾಹಟಿ ಎಕ್ಸ್ ಪ್ರೆಸ್ ಐದನೇ ಸ್ಥಾನದಲ್ಲಿದ್ದು, ಒಟ್ಟು 3559 ಕೀ.ಮೀ. ದೂರವನ್ನು ಕ್ರಮಿಸುತ್ತದೆ. 49 ಕಡೆ ತಂಗುವ ಗುವಾಹಟಿ ಎಕ್ಸ್ ಪ್ರೆಸ್ ಒಟ್ಟು ಪ್ರಯಾಣ ಅವಧಿ 65 ತಾಸುಗಳಾಗಿವೆ.

04. ಟೆನ್ ಜಮ್ಮು ಎಕ್ಸ್ ಪ್ರೆಸ್

04. ಟೆನ್ ಜಮ್ಮು ಎಕ್ಸ್ ಪ್ರೆಸ್

ದೂರ: 3561 ಕೀ.ಮೀ.

ತಮಿಳುನಾಡಿನ ತಿರುನಲ್ ವೇಳಿಯಿಂದ ಜಮ್ಮು ವರೆಗಿನ ದೇಶದ ನಾಲ್ಕನೇ ಅತಿ ದೂರದ ವರೆಗೆ ಸಂಚರಿಸುವ ಟೆನ್ ಜಮ್ಮು ಎಕ್ಸ್ ಪ್ರೆಸ್ ಒಟ್ಟು 3561 ಕೀ.ಮೀ. ದೂರವನ್ನು ಕ್ರಮಿಸುತ್ತದೆ. ಪ್ರಸ್ತುತ ರೈಲು ತನ್ನ ಗುರಿ ಮುಟ್ಟಲು 70 ತಾಸುಗಳಷ್ಟು ಸಂಚರಿಸಬೇಕಾಗಿದೆ. ಈ ಸಂದರ್ಭದಲ್ಲಿ 70 ಕಡೆ ನಿಲುಗಡೆಗೊಳಿಸುತ್ತದೆ.

03. ನವಯುಗ್ ಎಕ್ಸ್ ಪ್ರೆಸ್

03. ನವಯುಗ್ ಎಕ್ಸ್ ಪ್ರೆಸ್

ದೂರ: 3685 ಕೀ.ಮೀ.

ಮೂರನೇ ಸ್ಥಾನದಲ್ಲಿರುವ ನವಯುಗ್ ಎಕ್ಸ್ ಪ್ರೆಸ್ ಕರ್ನಾಟಕದ ಮಂಗಳೂರಿನಿಂದ ಜಮ್ಮು ಮತ್ತು ಕಾಶ್ಮೀರದತ್ತ ಪಯಣಿಸುತ್ತದೆ. ನವಯುಗ್ ಎಕ್ಸ್ ಪ್ರೆಸ್ ಗೆ ತನ್ನ ಗಮ್ಯಸ್ಥಾನ ತಲುಪಲು 68 ತಾಸು ಮತ್ತು 20 ನಿಮಿಷಗಳ ಯಾತ್ರೆ ಬೇಕಾಗುವುದು. ಈ ನುಡವೆ 61 ಕಡೆಗಳಲ್ಲಿ ನಿಲುಗಡೆಗೊಳಿಸುತ್ತದೆ.

02. ಹಿಮಸಾಗರ್ ಎಕ್ಸ್ ಪ್ರೆಸ್

02. ಹಿಮಸಾಗರ್ ಎಕ್ಸ್ ಪ್ರೆಸ್

ದೂರ: 3787 ಕೀ.ಮೀ.

ದೇಶದ ಎರಡನೇ ಅತಿ ದೂರದ ವರೆಗೆ ಸಂಚರಿಸುವ ರೈಲಾಗಿರುವ ಹಿಮಸಾಗರ್ ಎಕ್ಸ್ ಪ್ರೆಸ್ ಉತ್ತರದ ಜಮ್ಮುವಿನಿಂದ ದಕ್ಷಿಣದ ಕನ್ಯಕುಮಾರಿ ವರೆಗೆ ಸಂಚರಿಸುತ್ತದೆ. ಈ 71 ಗಂಟೆ 35 ನಿಮಿಷಗಳ ಪಯಣದಲ್ಲಿ ಒಟ್ಟು 72 ನಿಲ್ದಾಣಗಳಲ್ಲಿ ನಿಲುಗಡೆಗೊಳಿಸುತ್ತದೆ.

01. ವಿವೇಕ್ ಎಕ್ಸ್ ಪ್ರೆಸ್

01. ವಿವೇಕ್ ಎಕ್ಸ್ ಪ್ರೆಸ್

ದೂರ: 4273 ಕೀ.ಮೀ.

ಬರೋಬ್ಬರಿ 4273 ಕೀ.ಮೀ. ದೂರವನ್ನು ಕ್ರಮಿಸುವ ವಿವೇಕ್ ಎಕ್ಸ್ ಪ್ರೆಸ್ ದೇಶದ ಅತಿ ದೂರದ ವರೆಗೆ ಸಂಚರಿಸುವ ರೈಲು ಎಂಬ ಖ್ಯಾತಿಗೆ ಪಾತ್ರವಾಗಿದೆ. ಕನ್ಯಾಕುಮಾರಿಯಿಂದ ದಿಬ್ರುಘಡ್ ವರೆಗೆ ಸಂಚರಿಸುವ ವಿವೇಕ್ ಎಕ್ಸ್ ಪ್ರೆಸ್ 80 ತಾಸು ಮತ್ತು 15 ನಿಮಿಷಗಳ ವರೆಗೆ ಸಂಚರಿಸುತ್ತದೆ. ಈ ನಡುವೆ 56 ನಿಲ್ದಾಣಗಳಲ್ಲಿ ನಿಲುಗಡೆಗೊಳಿಸುತ್ತದೆ.

Most Read Articles

Kannada
Read more on ಟಾಪ್ 10 top 10
English summary
Top 10 Longest Railway Routes And Connecting Trains In India
Story first published: Monday, May 2, 2016, 15:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X