23 ಕಾರನ್ನು ಸಾಗಿಸುತ್ತಿದ್ದ ಟ್ರಕ್ ಸೇತುವೆ ಮೇಲಿಂದ ಪವಾಡ ಸದೃಶ ಪಾರು

By Nagaraja

ದಕ್ಷಿಣ ಚೀನಾದ ಮೋಟಾರುವೇ ಹೆದ್ದಾರಿಯ ಸೇತುವೆಯೊಂದರಲ್ಲಿ ನಡೆದ ಅಪಘಾತ ಪ್ರಕರಣವೊಂದರಲ್ಲಿ 23 ಕಾರುಗಳೊಂದಿಗೆ ಸಂಚರಿಸುತ್ತಿದ್ದ ಟ್ರಕ್ ವೊಂದು ಪವಾಡ ಸದೃಶ ಪಾರಾಗಿರುವ ಘಟನೆಯು ಬೆಳಕಿಗೆ ಬಂದಿದೆ.

ಸೇತುವೆಯ ಮೇಲ್ಬಾಗದಲ್ಲಿ ತೂಗುಯ್ಯಾಲೆಯಂತೆ ನೇತಾಡುತ್ತಿದ್ದ ಟ್ರಕ್ ದೃಶ್ಯ ಎಂಥವರನ್ನು ಬೆಚ್ಚಿ ಬೀಳಿಸುತ್ತಿತ್ತು. ಈ ಸಂಬಂಧ ರೋಚಕ ವಿಡಿಯೋವನ್ನು ಬಿತ್ತರಗೊಳಿಸಲಾಗಿದೆ.

23 ಕಾರನ್ನು ಸಾಗಿಸುತ್ತಿದ್ದ ಟ್ರಕ್ ಸೇತುವೆ ಮೇಲಿಂದ ಪವಾಡ ಸದೃಶ ಪಾರು

ಗುವಾಂಗ್ ಡಾಂಗ್ ಪ್ರಾಂತ್ಯದ ಖಿಂಗ್ ಯುವಾನ್ ಟ್ರಾಫಿಕ್ ಲಿಂಕ್ ಹೆದ್ದಾರಿ ಸೇತುವೆಯಲ್ಲಿ ಎರಡು ಡಜನ್ ಗಳಷ್ಟು ಕಾರುಗಳನ್ನು ತುಂಬಿಕೊಂಡು ಟ್ರಕ್ ಸಂಚರಿಸುತ್ತಿತ್ತು.

23 ಕಾರನ್ನು ಸಾಗಿಸುತ್ತಿದ್ದ ಟ್ರಕ್ ಸೇತುವೆ ಮೇಲಿಂದ ಪವಾಡ ಸದೃಶ ಪಾರು

ನೆಲದಿಂದ 150 ಮೀಟರ್ ಎತ್ತರದಲ್ಲಿ ಸೇತುವೆಯನ್ನು ಕಟ್ಟಲಾಗಿದೆ. ಇದರ ಸುತ್ತಲೂ ಕಣಿವೆಗಳಿಂದ ಸುತ್ತುವರಿದುಕೊಂಡಿದೆ.

23 ಕಾರನ್ನು ಸಾಗಿಸುತ್ತಿದ್ದ ಟ್ರಕ್ ಸೇತುವೆ ಮೇಲಿಂದ ಪವಾಡ ಸದೃಶ ಪಾರು

ಚಾಲಕನ ನಿಯಂತ್ರಣ ತಪ್ಪಿರುವುದೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಅದೃಷ್ಟವಶಾತ್ ಇಬ್ಬರು ಚಾಲಕರು ಸಣ್ಣ ಪುಟ್ಟ ಗಾಯಗಳಿಂದ ಅವಘಡದಿಂದ ಪಾರಾಗಿದ್ದಾರೆ.

23 ಕಾರನ್ನು ಸಾಗಿಸುತ್ತಿದ್ದ ಟ್ರಕ್ ಸೇತುವೆ ಮೇಲಿಂದ ಪವಾಡ ಸದೃಶ ಪಾರು

ಟ್ರಕ್ ಮುಂಭಾಗವು ಸೇತುವೆಯಿಂದ ಪೂರ್ಣವಾಗಿಯೂ ಹೊರದಬ್ಬಲ್ಟಟ್ಟರೂ ಹಿಂಬದಿಯಲ್ಲಿ ತುಂಬಿಸಲಾಗಿದ್ದ ಕಾರುಗಳ ಭಾರದ ಬಲದಿಂದಾಗಿ ದೊಡ್ಡ ದುರಂತದಿಂದ ಪಾರಾಗುವಂತಾಗಿದೆ.

23 ಕಾರನ್ನು ಸಾಗಿಸುತ್ತಿದ್ದ ಟ್ರಕ್ ಸೇತುವೆ ಮೇಲಿಂದ ಪವಾಡ ಸದೃಶ ಪಾರು

ಟ್ರಕ್ ನಲ್ಲಿ ಒಟ್ಟು 23 ಹೊಸ ಕಾರುಗಳನ್ನು ಸಾಗಿಸಲಾಗುತ್ತಿತ್ತು. ಎಮರ್ಜನ್ಸಿ ಬ್ರೇಕ್ ಸಹ ಕೆಟ್ಟು ಹೋಗಿರುವುದು ಮಹಾ ದುರಂತವನ್ನೇ ಆಹ್ವಾನಿಸುವಂತಾಗಿತ್ತು.

23 ಕಾರನ್ನು ಸಾಗಿಸುತ್ತಿದ್ದ ಟ್ರಕ್ ಸೇತುವೆ ಮೇಲಿಂದ ಪವಾಡ ಸದೃಶ ಪಾರು

ಬಳಿಕ ಟ್ರಾಫಿಕ್ ಅಧಿಕಾರಿಗಳಿಗೆ ಟ್ರಕ್ ತೆರಳುಗೊಳಿಸಲು 1.5 ತಾಸುಗಳಷ್ಟು ಸಮಯ ಬೇಕಾಯಿತು. ಇದರಿಂದ ಇತ್ತ ಸಂಚರಿಸುವ ವಾಹನಗಳ ಸುಗಮ ಸಂಚಾರಕ್ಕೆ ತೊಡಕುಂಟಾಗಿತ್ತು.

ರೋಚಕ ವಿಡಿಯೋ ವೀಕ್ಷಿಸಿ

Most Read Articles

Kannada
Read more on ಅಪಘಾತ accident
English summary
Hanging On For Dear Life — Truck Dangles Off A 500-Foot Tall Bridge
Story first published: Monday, September 19, 2016, 13:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X