ಕಾರು ಟ್ಯೂನಿಂಗ್ ಶೋದಲ್ಲಿ 'ಮಿಸ್' ಟ್ಯೂನಿಂಗ್

By Nagaraja

ವಾಹನ ಜಗತ್ತಿನಲ್ಲಿ ಕಾರುಗಳಿಗೂ ಮಾಡೆಲ್ ಗಳಿಗೂ ಎಲ್ಲಿಲ್ಲದ ನಂಟು. ಇವೆರಡೂ ಅತಿ ಹೆಚ್ಚು ಮಾದಕತೆಗೆ ಸಾಕ್ಷಿಯಾಗಿದೆ. ಬಹುಶ: ಇದೇ ಕಾರಣಕ್ಕಾಗಿ ಆಗಿರಬಹುದು ಪ್ರತಿಯೊಂದು ವಾಹನ ಪ್ರದರ್ಶನ ಮೇಳದಲ್ಲೂ ನೂತನ ಕಾನ್ಸೆಪ್ಟ್ ಅಥವಾ ಹೊಚ್ಚ ಹೊಸ ಮಾದರಿಗಳ ಪ್ರಚಾರಕ್ಕಾಗಿ ಮಾಡೆಲ್ ಗಳನ್ನು ಬಳಕೆ ಮಾಡುತ್ತಿರುತ್ತಾರೆ.

ಅತ್ತ ವಾಹನ ಜಗತ್ತಿನ ಆಗು ಹೋಗುಗಳಲ್ಲಿ ಜರ್ಮನಿಯ ಪಾತ್ರ ಮಹತ್ತರವಾಗಿದೆ. ಇಡೀ ಜಗತ್ತಿನ ವಾಹನೋದ್ಯಮದ ನಿಯಂತ್ರಣ ಜರ್ಮನಿಯಲ್ಲಿದೆ ಅಂದರೆ ತಪ್ಪಾಗಲಾರದು. ಕಳೆದ ಹಲವಾರು ವರ್ಷಗಳಿಂದ ನಡೆಯುತ್ತಿರುವ ಬೆಳವಣಿಗೆಗಳು ಇದಕ್ಕೆ ಪುಷ್ಠಿ ನೀಡುತ್ತದೆ.

ಕಾರು ಟ್ಯೂನಿಂಗ್ ಶೋದಲ್ಲಿ 'ಮಿಸ್' ಟ್ಯೂನಿಂಗ್

ವಿಶ್ವದ ಪ್ರಮುಖ ವಾಹನ ತಯಾರಕ ಸಂಸ್ಥೆಗಳು ಜರ್ಮನಿ ತಲೆಯೆತ್ತಿ ನಿಂತಿದೆ. ಇದೇ ಕಾರಣಕ್ಕಾಗಿ ಏನೇ ಬೆಳವಣಿಗೆ ನಡೆದರೂ ಜರ್ಮನಿಯ ವಾಹನ ಸಂಸ್ಥೆಗಳು ಪಾತ್ರ ಮಹತ್ತರವಾಗಿರುತ್ತದೆ.

ಕಾರು ಟ್ಯೂನಿಂಗ್ ಶೋದಲ್ಲಿ 'ಮಿಸ್' ಟ್ಯೂನಿಂಗ್

ಅಂತಹ ಜರ್ಮನಿಯಲ್ಲಿ Tuning World Bodensee ಎಂಬ ಅಂತರಾಷ್ಟ್ರೀಯ ಕಾರು ಟ್ಯೂನಿಂಗ್ ಹಬ್ಬ ಪ್ರತಿ ವರ್ಷವೂ ನಡೆದು ಬರುತ್ತದೆ.

ಕಾರು ಟ್ಯೂನಿಂಗ್ ಶೋದಲ್ಲಿ 'ಮಿಸ್' ಟ್ಯೂನಿಂಗ್

ಇಲ್ಲಿ ಜಗತ್ತಿನ ಎಲ್ಲ ವಾಹನ ತಯಾರಿಕ ಸಂಸ್ಥೆಗಳಿಗೂ ತಮ್ಮ ಜೀವನಶೈಲಿ ಅಥವಾ ಕಾರು ಟ್ಯೂನಿಂಗ್ ಪ್ರದರ್ಶಿಸಲು ಅವಕಾಶ ದೊರಕುತ್ತದೆ.

ಕಾರು ಟ್ಯೂನಿಂಗ್ ಶೋದಲ್ಲಿ 'ಮಿಸ್' ಟ್ಯೂನಿಂಗ್

2003ನೇ ಇಸವಿಯಲ್ಲಿ ಆರಂಭವಾದ ಈ Tuning World Bodensee ಕಾರ್ಯಕ್ರಮವು ಬರ ಬರುತ್ತಾ ಭಾರಿ ಪ್ರಚಾರವನ್ನು ಗಿಟ್ಟಿಸತೊಡಗಿದೆ.

ಕಾರು ಟ್ಯೂನಿಂಗ್ ಶೋದಲ್ಲಿ 'ಮಿಸ್' ಟ್ಯೂನಿಂಗ್

ಜರ್ಮನಿಯಲ್ಲಿ ಆಯೋಜನೆಯಾಗುವ ಯುರೋಪ್ ನ ಈ ಅತಿ ದೊಡ್ಡ ಕಾರು ಟ್ಯೂನಿಂಗ್ ಶೋದಲ್ಲಿ ಅನೇಕ ಸಂಸ್ಥೆಗಳ ಜೊತೆಗೆ ಕ್ಲಬ್ ಗಳು ನೂತನ ಅವಿಷ್ಕಾರದೊಂದಿಗೆ ಮುಂದೆ ಬರುತ್ತದೆ.

ಕಾರು ಟ್ಯೂನಿಂಗ್ ಶೋದಲ್ಲಿ 'ಮಿಸ್' ಟ್ಯೂನಿಂಗ್

ವಿಶೇಷವಾಗಿ ಮಾರ್ಪಾಡುಗೊಳಿಸಲಾದ ಕಾರುಗಳು ಪ್ರಮುಖ ಆಕರ್ಷಣೆಯಾಗಿರುತ್ತದೆ. ಇದಕ್ಕೆ ವಿಶಿಷ್ಟ ಮೈಬಣ್ಣವನ್ನು ಬಳಿಯಲಾಗುತ್ತದೆ.

ಕಾರು ಟ್ಯೂನಿಂಗ್ ಶೋದಲ್ಲಿ 'ಮಿಸ್' ಟ್ಯೂನಿಂಗ್

ಕಾರಿನೊಳಗೆ ವೈವಿಧ್ಯತೆಯನ್ನುಂಟು ಮಾಡುವ ಸೌಂಡ್ ಸಿಸ್ಟಂ ಆಳವಡಿಸಲಾಗುತ್ತದೆ.

ಕಾರು ಟ್ಯೂನಿಂಗ್ ಶೋದಲ್ಲಿ 'ಮಿಸ್' ಟ್ಯೂನಿಂಗ್

ಒಟ್ಟಿನಲ್ಲಿ ಒಂದು ಕಾರಿಗೆ ವಿಭಿನ್ನತೆಯನ್ನು ಹೇಗೆ ತರಬಹುದು ಎಂಬುದಕ್ಕೆ ಈ ಟ್ಯೂನಿಂಗ್ ಮೇಳದಲ್ಲಿ ಉತ್ತರ ದೊರಕುತ್ತದೆ.

ಕಾರು ಟ್ಯೂನಿಂಗ್ ಶೋದಲ್ಲಿ 'ಮಿಸ್' ಟ್ಯೂನಿಂಗ್

ಇದು ಶ್ರೀಮಂತ ಜೀವನ ಶೈಲಿಯ ಭಾಗವೂ ಆಗಿದೆ. ಐಷಾರಾಮಿ ಕಾರುಗಳನ್ನು ಹೊಂದಿರುವವರು ಇದಕ್ಕಾಗಿ ಕೋಟಿ ಗಟ್ಟಲೆ ರುಪಾಯಿ ವ್ಯಯ ಮಾಡುತ್ತಾರೆ.

ಕಾರು ಟ್ಯೂನಿಂಗ್ ಶೋದಲ್ಲಿ 'ಮಿಸ್' ಟ್ಯೂನಿಂಗ್

ಇದರಂತೆ ಆಯೋಜಕರು ವರ್ಷಂಪ್ರತಿ ಮಿಸ್ ಟ್ಯೂನಿಂಗ್ ಕ್ಯಾಲೆಂಡರ್ ರೂಪಿಸುತ್ತಾರೆ.

ಕಾರು ಟ್ಯೂನಿಂಗ್ ಶೋದಲ್ಲಿ 'ಮಿಸ್' ಟ್ಯೂನಿಂಗ್

ಕಾರುಗಳಲ್ಲಿ ವಿವಿಧ ಭಂಗಿಗಳೊಂದಿಗೆ ಪ್ರದರ್ಶನ ನೀಡುವ ಮಾಡೆಲ್ ಗಳು ತಮ್ಮ ಮೈಮಾಟವನ್ನು ಪ್ರದರ್ಶಿಸುತ್ತಾರೆ.

ಕಾರು ಟ್ಯೂನಿಂಗ್ ಶೋದಲ್ಲಿ 'ಮಿಸ್' ಟ್ಯೂನಿಂಗ್

ಇದಕ್ಕಾಗಿ ವಿಶೇಷ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತದೆ. ಬಳಿಕ ಮಿಸ್ ಟ್ಯೂನಿಂಗ್ ಪಟ್ಟವೆಂಬ ಗೌರವವನ್ನು ನೀಡಲಾಗುತ್ತದೆ.

ಕಾರು ಟ್ಯೂನಿಂಗ್ ಶೋದಲ್ಲಿ 'ಮಿಸ್' ಟ್ಯೂನಿಂಗ್

2003ನೇ ಇಸವಿಯಲ್ಲಿ ನಡೆದ ಮೊದಲ ಟ್ಯೂನಿಂಗ್ ಶೋದಲ್ಲೇ 150ಕ್ಕೂ ಹೆಚ್ಚು ಪ್ರದರ್ಶಕರು, 80 ಕ್ಲಬ್ ಹಾಗೂ ಸಾವಿರಕ್ಕೂ ಹೆಚ್ಚು ವಾಹನಗಳು ಭಾಗವಹಿಸಿರುವುದು ಭಾರಿ ಯಶಸ್ಸಿಗೆ ಕಾರಣವಾಗಿತ್ತು.

ಕಾರು ಟ್ಯೂನಿಂಗ್ ಶೋದಲ್ಲಿ 'ಮಿಸ್' ಟ್ಯೂನಿಂಗ್

ಅಂತೆಯೇ 2005ರ ವೇಳೆಯಾಗುವಾಗ ಒಂದು ಲಕ್ಷದಷ್ಟು ಮಂದಿ ವಾಹನ ಪ್ರೇಮಿಗಳು ಟ್ಯೂನಿಂಗ್ ಶೋಗೆ ಭೇಟಿಯನ್ನಿತ್ತಿದ್ದರು.

ಕಾರು ಟ್ಯೂನಿಂಗ್ ಶೋದಲ್ಲಿ 'ಮಿಸ್' ಟ್ಯೂನಿಂಗ್

2006ರಲ್ಲಿ ಭಾಗವಹಿಸಿದ ಕ್ಲಬ್ ಗಳ ಸಂಖ್ಯೆ 150ಕ್ಕೆ ಏರಿಕೆಯಾಗಿತ್ತು. ಅಂತೆಯೇ 256ರಷ್ಟು ಅಂತರಾಷ್ಟ್ರೀಯ ಪ್ರದರ್ಶಕರು ಭಾಗವಹಿಸಿದ್ದರು.

ಕಾರು ಟ್ಯೂನಿಂಗ್ ಶೋದಲ್ಲಿ 'ಮಿಸ್' ಟ್ಯೂನಿಂಗ್

ಹೀಗೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಾ ಸಾಗಿರುವ ಈ ಕಾರು ಟ್ಯೂನಿಂಗ್ ಮೇಳವೂ ವಾಹನ ಜಗತ್ತಿನಲ್ಲಿ ತನ್ನದೇ ಆದ ವಿಶಿಷ್ಟತೆಯನ್ನು ಕಾಪಾಡಿಕೊಂಡಿದೆ.

ಕಾರು ಟ್ಯೂನಿಂಗ್ ಶೋದಲ್ಲಿ 'ಮಿಸ್' ಟ್ಯೂನಿಂಗ್

ಒಟ್ಟಿನಲ್ಲಿ ಕಾರುಗಳ ಜೊತೆಗೆ ಮಾಡೆಲಿಂಗ್ ನಲ್ಲಿ ವೃತ್ತಿ ಜೀವನ ತೊಡಗಿಸಲು ಬಯಸುವ ಯುವ ತಾರೆಯರಿಗೆ ಇದೊಂದು ಅತ್ಯುತ್ತಮ ವೇದಿಕೆ ಒದಗಿಸುತ್ತದೆ.

ಕಾರು ಟ್ಯೂನಿಂಗ್ ಶೋದಲ್ಲಿ 'ಮಿಸ್' ಟ್ಯೂನಿಂಗ್

ಬಳಿಕ ವಿಜೇತ ಮಾಡೆಲ್ ಜೊತೆಗೆ ಪ್ರತ್ಯೇಕ ಫೋಟೊ ಶೂಟ್ ವ್ಯವಸ್ಥೆಯನ್ನು ಏರ್ಪಡಿಸಲಾಗುತ್ತದೆ. ಇದು ಹೆಚ್ಚಿನ ಪ್ರಚಾರ ಗಿಟ್ಟಿಸಿಕೊಳ್ಳಲು ನೆರವಾಗಿದೆ.

ಕಾರು ಟ್ಯೂನಿಂಗ್ ಶೋದಲ್ಲಿ 'ಮಿಸ್' ಟ್ಯೂನಿಂಗ್

ಅಂದ ಹಾಗೆ ಇಳ್ಲಿ 2014 ಹಾಗೂ 2015ನೇ ಸಾಲಿನ ಮಿಸ್ ಟ್ಯೂನಿಂಗ್ ಕ್ಯಾಲೆಂಡರ್ ಚಿತ್ರಗಳನ್ನು ನಮ್ಮ ಜೊತೆಗೆ ಹಂಚಿಕೊಳ್ಳಲಾಗಿದೆ.

ಕಾರು ಟ್ಯೂನಿಂಗ್ ಶೋದಲ್ಲಿ 'ಮಿಸ್' ಟ್ಯೂನಿಂಗ್

ಈಗ ಇಂತಹದೊಂದು ಕಾರು ಟ್ಯೂನಿಂಗ್ ಶೋದ ಅಗತ್ಯ ಭಾರತಕ್ಕೆ ಅಗತ್ಯವಿದೆಯೇ ? ದೇಶದಲ್ಲಿ ಇದರ ಯಶಸ್ಸು ಎಷ್ಟರ ಮಟ್ಟದಲ್ಲಿರಬಹುದು? ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿರಿ.

Most Read Articles

Kannada
English summary
Tuning World Bodensee: International exhibition event for car tuning
Story first published: Wednesday, April 22, 2015, 12:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X