ಮಾನವ ಮಲ ತ್ಯಾಜ್ಯದಿಂದ ರೂಪುಗೊಂಡ 'ಬಯೋ ಬಸ್' ಮೊದಲ ಪಯಣ

By Nagaraja

ಮನುಕುಲವು ಹೊಸ ಅನ್ವೇಷಣೆಗೆ ರೂಪು ನೀಡಿದೆ. ಅದುವೇ 'ಬಯೋ ಬಸ್'. ನಾವು ಇಂಧನಗಳಿಂದ ಓಡಾಡುವ ಬಸ್, ಬ್ಯಾಟರಿ ನಿಯಂತ್ರಿತ ಬಸ್ ಹೀಗೆ ಹಲವು ವಿಧದ ಬಸ್ಸುಗಳನ್ನು ಕೇಳಿರುತ್ತೇವೆ.

ಇದೀಗ ಬ್ರಿಟನ್‌ನಲ್ಲಿ ಹೊಸತೊಂದು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಅದುವೇ ಬಯೋ ಬಸ್ ಅಥವಾ ಆಂಗ್ಲ ಭಾಷೆಯಲ್ಲಿ ಇದನ್ನು ಪೂ ಬಸ್ ಎನ್ನುತ್ತಾರೆ. ಇಲ್ಲಿ ಮಾನವ ವಿಸರ್ಜಿಸುವ ಮಲ ತ್ಯಾಜ್ಯವನ್ನು ಮಿಥೇನ್ ಅನಿಲ ರೂಪದಲ್ಲಿ ಪರಿವರ್ತಿಸಲಾಗುತ್ತದೆ. ಅಲ್ಲದೆ ಇದರ ಯಶಸ್ವಿ ಪ್ರಯೋಗವನ್ನು ನಡೆಸಲಾಗಿದೆ.

ಮಾನವ ಮಲ ತ್ಯಾಜ್ಯದಿಂದ ರೂಪುಗೊಂಡ 'ಬಯೋ ಬಸ್' ಮೊದಲ ಪಯಣ

40 ಸೀಟು ಸಾಮರ್ಥ್ಯದ ಈ ಬಸ್ ಕೇವಲ ಮಾನವ ಮಲ ತ್ಯಾಜ್ಯ ಮಾತ್ರವಲ್ಲದೆ ಆಹಾರ ತ್ಯಾಜ್ಯದಿಂದಲೂ ಚೈತನ್ಯ ಉತ್ಪಾದಿಸುತ್ತಿದೆ.

ಮಾನವ ಮಲ ತ್ಯಾಜ್ಯದಿಂದ ರೂಪುಗೊಂಡ 'ಬಯೋ ಬಸ್' ಮೊದಲ ಪಯಣ

ಸಂಪೂರ್ಣ ಪರಿಸರ ಸ್ನೇಹಿ ಈ ಬಯೋ ಬಸ್ ಫುಲ್ ಟ್ಯಾಂಕ್‌ ಅನಿಲದಲ್ಲಿ 300 ಕೀ.ಮೀ. (186 ಮೈಲ್) ವರೆಗೆ ಓಡುವ ಸಾಮರ್ಥ್ಯ ಹೊಂದಿದೆ. ಇದು ವಾರ್ಷಿಕವಾಗಿ ಐದು ಮಂದಿ ಉತ್ಪಾದಿಸುವ ತ್ಯಾಜ್ಯಕ್ಕೆ ಸಮಾನವಾಗಿದೆ.

ಮಾನವ ಮಲ ತ್ಯಾಜ್ಯದಿಂದ ರೂಪುಗೊಂಡ 'ಬಯೋ ಬಸ್' ಮೊದಲ ಪಯಣ

ಬಾತ್ ಬಸ್ ಸಂಸ್ಥೆ ಕಾರ್ಯ ನಿರ್ವಹಿಸುತ್ತಿರುವ ಬಯೋ ಬಸ್ ಬ್ರಿಸ್ಟಾಲ್ ವಿಮಾನ ನಿಲ್ದಾಣದಿಂದ ಬಾತ್ ಸಿಟಿ ಸೆಂಟರ್‌ ವರೆಗೆ ಪಯಣ ಆರಂಭಿಸಿದೆ.

ಮಾನವ ಮಲ ತ್ಯಾಜ್ಯದಿಂದ ರೂಪುಗೊಂಡ 'ಬಯೋ ಬಸ್' ಮೊದಲ ಪಯಣ

ಅವೊನ್‌ಮೌತ್‌ನಲ್ಲಿರುವ (Avonmouth) ವೆಸ್ಸೆಕ್ಸ್ ವಾಟರ್ (Wessex Water) ಅಂಗಸಂಸ್ಥೆಯಾಗಿರುವ ಜೆನಿಕೊ (GENeco) ಕಾರ್ಯಾಚರಣೆಯಲ್ಲಿರುವ ಬ್ರಿಸ್ಟಲ್ ಸೇವೆಜ್ ಟ್ರೀಟ್‌ಮೆಂಟ್ ವರ್ಕ್ಸ್‌ನ ಬೃಹತ್ ಕೈಗಾರಿಕೆಯಲ್ಲಿ ಮಾನವ ಮಲ ಹಾಗೂ ಆಹಾರ ತ್ಯಾಜ್ಯಗಳನ್ನು ಬಯೋಮಿಥೇನ್ ಗ್ಯಾಸ್ ಆಗಿ ಪರಿವರ್ತಿಸಲಾಗುತ್ತಿದೆ.

ಮಾನವ ಮಲ ತ್ಯಾಜ್ಯದಿಂದ ರೂಪುಗೊಂಡ 'ಬಯೋ ಬಸ್' ಮೊದಲ ಪಯಣ

ಇದು ಸಾಂಪ್ರದಾಯಿಕ ಡೀಸೆಲ್ ಎಂಜಿನ್‌ಗಿಂತಲೂ ಶೇಕಡಾ 30ರಷ್ಟು ಕಡಿಮೆ ಕಾರ್ಬನ್ ಡೈಓಕ್ಸೈಡ್ ಹೊರ ಸೂಸುತ್ತಿದ್ದು, ಹೆಚ್ಚು ಪರಿಸರ ಸ್ನೇಹಿ ಎನಿಸಿಕೊಳ್ಳಲಿದೆ.



Most Read Articles

Kannada
Read more on auto news ಬಸ್
English summary
The Bio-Bus—or as it’s more affectionately known, “the poo bus”—can travel up to 186 miles on one tank of gas, which takes the annual waste of about five people to produce, the BBC reports. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X