ಕಾರನ್ನು ಪಾರ್ಕ್ ಮಾಡಲು ಹೋಗಿ ಕಾಂಪೌಂಡ್ ಒಳಗೆ ನುಗ್ಗಿಸಿದ ಭೂಪ !!

ವ್ಯಕ್ತಿಯೊಬ್ಬರು ಕಾರನ್ನು ಪಾರ್ಕ್ ಮಾಡಲು ಹೋಗಿ ಬೆಂಗಳೂರಿನ ಒನ್ ಇಂಡಿಯಾ ಕಚೇರಿಯ ಕಾಂಪೌಂಡ್ ಒಳಗೆ ನುಗ್ಗಿಸಿದ ಘಟನೆ ನೆಡೆದಿದೆ.

Written By:

ಆಸ್ಪತ್ರೆಗೆಂದು ಬಂದಿದ್ದ ಮಹಿಳೆಯ ಕಾರನ್ನು ಪಾರ್ಕ್ ಮಾಡಲು ಹೋದ ಆಸ್ಪತ್ರೆಯ ವ್ಯಾಲೆಟ್ ಪಾರ್ಕಿಂಗ್ ಸಿಬ್ಬಂದಿ ಮಹಿಂದ್ರಾ ರೇವಾ ಇಲೆಕ್ಟ್ರಿಕ್ ಕಾರಿನ ಬ್ರೇಕ್ ಬದಲು ಆಕ್ಸಲರೇಟರ್ ಒತ್ತಿ ಜಯನಗರದ ಕಚೇರಿಯ ಕಾಂಪೌಂಡಿನ ಒಳಗೆ ಬಿದ್ದ ಘಟನೆ ನಡೆದಿದೆ.

ಮಹಿಂದ್ರಾ ರೇವಾ ಇಲೆಕ್ಟ್ರಿಕ್ ಕಾರಿನ ಮುಂಬಾಗ ಜಖಂಗೊಂಡಿದ್ದು ಅಪೋಲೋ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದ ಮಧುಶ್ರೀ ಅವರಿಗೆ ಸೇರಿದ ವಾಹನ ಎನ್ನಲಾಗಿದೆ.ಈ ಘಟನೆಯಿಂದಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಆಸ್ಪತೆಯ ವ್ಯಾಲೆಟ್ ಪಾರ್ಕಿಂಗ್ ಸಿಬ್ಬಂದಿಯ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಈ ಘಟನೆ ನೆಡೆದ ಸ್ವಲ್ಪ ಹೊತ್ತಿನ ನಂತರ ಕಾರಿನ ಮಾಲೀಕರಿಗೆ ಈ ವಿಚಾರ ಗೊತ್ತಾಗಿದೆ.

ಘಟನೆಗೆ ಕಾರಣವಾದ ವ್ಯಕ್ತಿ ಸ್ವತಃ ತಾನೇ ಕರೆ ಮಾಡಿ ಈ ವಿಚಾರವನ್ನು ತಿಳಿಸಿದ್ದು, ಘಟನೆ ನೆಡೆದ ಸ್ಥಳಕ್ಕೆ ಬಂದು ಕಾರಿನ ಮಾಲೀಕರು ನೋಡಿದಾಗ ದಿಗ್ಬ್ರಮೆಗೊಂಡಿದ್ದಾರೆ.

ಮಹಿಂದ್ರಾ ರೇವಾ ಇಲೆಕ್ಟ್ರಿಕ್ ಕಾರು ಪಾರ್ಕಿಂಗ್ ಸ್ಥಳದಲ್ಲಿ ನೆನ್ನೆ ಸಂಜೆ 5.30ಗೆ ಶೀರ್ಷಾಸನ ಹಾಕಿದ ರೀತಿಯಲ್ಲಿ ಕಾಣಿಸಿ ಎಲ್ಲರ ಕಣ್ಣುಗಳನ್ನು ತನ್ನತ್ತ ಸೆಳೆದಿದ್ದು ಸುಳ್ಳಲ್ಲ.

ಜಯನಗರದಲ್ಲಿರುವ ಒನ್ ಇಂಡಿಯಾ ಕಂಪನಿಯ ನಾರ್ತ್ ಬ್ಲಾಕ್ ಕಚೇರಿಯಲ್ಲಿ ಈ ಘಟನೆ ನೆಡೆದ ತಿಳಿದ ನಂತರ ಕೆಲವೇ ಗಂಟೆಗಳಲ್ಲಿ ಆಗಮಿಸಿದ ವ್ಯಾಲಿ ಪಾರ್ಕಿಂಗ್ ತಂಡ, ಕಾಂಪೌಂಡ್ ಗೋಡೆಗೆ ಅಂಟಿಕೊಂಡಂತಿದ್ದ ಕಾರನ್ನು ತೆಗೆದು ಪಕ್ಕಕ್ಕೆ ಜರುಗಿಸಿದ್ದಾರೆ.

ಇನ್ನು ಕಾರಿನ ಬಗ್ಗೆ ಹೇಳುವುದಾದರೆ ಮುಂಭಾಗದಲ್ಲಿ ಸ್ಕಾರ್ಪಿಯೊಗೆ ಹೋಲುವಂತಹ ಫ್ರಂಟ್ ಗ್ರಿಲ್ ಹೊಂದಿದ್ದು, ಜಿಪಿಎಸ್ ಸಂಪರ್ಕಿತ ನೇವಿಗೇಷನ್ ಸಿಸ್ಟಂ, ಚಾಲನೆ ವ್ಯಾಪ್ತಿಯನ್ನು ಎಚ್ಚರಿಸಿರುವ ಆನ್ ಬೋರ್ಡ್ ಕಂಪ್ಯೂಟರ್, ಟಚ್ ಸ್ಕ್ರೀನ್ ಮಾನಿಟರ್ ಸೇರಿದಂತೆ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ.

ಮಹೀಂದ್ರ ಇ2ಒ ಪ್ಲಸ್ ಎಲೆಕ್ಟ್ರಿಕ್ ಕಾರಿನಲ್ಲಿ ರಿವೈವ್ ಎಂಬ ಎಸ್ ಒಎಸ್ ವೈಶಿಷ್ಟ್ಯವನ್ನು ಪಡೆದಿದ್ದು, ಬ್ಯಾಟರಿ ಶೇಕಡಾ 10ಕ್ಕಿಂತಲೂ ಕೆಳಗೆ ಬಂದಾಗಲೂ 7ರಿಂದ 10 ಕೀ.ಮೀ. ವರೆಗೆ ಹೆಚ್ಚುವರಿ ವ್ಯಾಪ್ತಿಯ ವರೆಗೆ ಸಂಚರಿಸಬಹುದಾಗಿದೆ.

ಮಹೀಂದ್ರ ಇ2ಒ ಪ್ಲಸ್ ಸಂಪೂರ್ಣ ಚಾರ್ಜ್ ಮಾಡಿಸಲು ಒಂಬತ್ತು ತಾಸು ಸಮಯ ತಗುಲಲಿದೆ. ಇನ್ನು ಟು ಡೋರ್ ಮಾದರಿಗೆ ಸಮಾನವಾದ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ಹೊಸ ಮಹೀಂದ್ರಾ ಟಿಯುವಿ300 ಕಾರಿನ ಚಿತ್ರಗಳನ್ನು ಕೆಳಗೆ ಗ್ಯಾಲರಿಯಲ್ಲಿ ಕಾಣಬಹುದು.

Click to compare, buy, and renew Car Insurance online

Buy InsuranceBuy Now

Story first published: Saturday, March 4, 2017, 12:59 [IST]
English summary
In Bangalore, the hospital's wallet Parking staff drove Mahindra e2o car met with an accident. View details.
Please Wait while comments are loading...

Latest Photos