ಸುಸ್ಥಿದಾರನ ಆಟಕ್ಕೆ ಸರ್ಕಾರವೇ ಸುಸ್ತು- ಮಧ್ಯಮಗಳ ಮೇಲೆ ಗದರಿದ ಮಲ್ಯಗೆ ಜನ ಛೀ.. ಥೂ..!!

ಭಾರತೀಯ ಬ್ಯಾಂಕ್‌ಗಳಲ್ಲಿ ಸಾವಿರಾರು ಕೋಟಿ ಸಾಲ ಮಾಡಿ ವಿದೇಶದಲ್ಲಿ ಏಂಜಾಯ್ ಮಾಡುತ್ತಿರುವ ಉದ್ಯಮಿ ವಿಜಯ್ ಮಲ್ಯ ಮತ್ತೆ ಮಾಧ್ಯಮಗಳ ಮೇಲೆ ಗದರಿದ್ದಾರೆ. ಹೀಗಾಗಿ ಮಲ್ಯ ಟೀಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಜನಾಕ್ರೋಶ ವ್ಯಕ್ತವಾಗುತ್ತಿದೆ.

Written By:

ಭಾರತದಲ್ಲಿ ಸಾವಿರಾರು ಕೋಟಿ ಸಾಲ ಮಾಡಿ ಬ್ಯಾಂಕ್‌ಗಳಿಗೆ ಪಂಗನಾಮ ಹಾಕಿರುವ ಉದ್ಯಮಿ ವಿಜಯ್ ಮಲ್ಯ, ಬ್ರಿಟನ್‌ನಲ್ಲಿ ಹಾಯ್ ಆಗಿ ಕಾಲಕಳೆಯುತ್ತಿದ್ದಾರೆ. ಇದಕ್ಕೆ ಸಾಕ್ಷಿಯೆಂಬತೆ ಮೊನ್ನೆಯಷ್ಟೇ ನಡೆದ ಫೋರ್ಸ್ ಇಂಡಿಯಾ ಫಾರ್ಮುಲಾ 1 ರೇಸ್ ಕಾರು ಅನಾವರಣ ಕಾರ್ಯಕ್ರಮದಲ್ಲಿ ಮಲ್ಯ ಭಾಗಿಯಾಗಿದ್ದು. ಈ ಮಧ್ಯೆ ಕೇಂದ್ರ ಸರ್ಕಾರ ಏನೇ ಕಠಿಣ ಕಾನೂನುಗಳನ್ನು ಜಾರಿಗೊಳಿಸಿದರು ಮಲ್ಯ ಮಾತ್ರ ಡೇಂಟ್‌ಕೇರ್ ಅಂತಿದ್ದಾರೆ.

ಆದ್ರೆ ಫಾರ್ಮುಲಾ 1 ರೇಸ್ ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ ಟ್ವೀಟ್ ಮಾಡಿರುವ ಮಲ್ಯ, ಫೋರ್ಸ್ ಇಂಡಿಯಾ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಂತರ ಭಾರತೀಯ ಮಾಧ್ಯಮಗಳನ್ನು ಟೀಕಿಸಿ ತಮ್ಮನ್ನು ಕೆಟ್ಟದಾಗಿ ಬಿಂಬಿಸಲಾಗುತ್ತಿದೆ ಎಂದಿದ್ದಾರೆ.

ಮಲ್ಯ ಮಾಡಿದ ಟ್ವೀಟ್‌ ನೋಡಿದ ಜನ ರೊಚ್ಚಿಗೆದ್ದಿದ್ದಾರೆ. ತಹರೇವಾರಿ ಕಮೆಂಟ್ ಮಾಡಿರುವ ಜನ, ಸಾಲ ತೀರಿಸದೇ ವಿದೇಶದಲ್ಲಿ ಏಂಜಾಯ್ ಮಾಡುತ್ತಿರುವ ಕ್ರಮಕ್ಕೆ ಛೀ ಥೂ ಎಂದಿದ್ದಾರೆ.

ಅಷ್ಟೇಲ್ಲಾ ಸಾಲ ಇದ್ರೂ ವಿಜಯ್ ಮಲ್ಯ ಮಾತ್ರ ಬ್ರಿಟನ್‌ನಲ್ಲಿ ಹಾಯ್ ಆಗಿದ್ದಾರೆ. ಇದೇ ಕಾರಣಕ್ಕೆ ಆಕ್ರೋಶಗೊಂಡಿರುವ ಜನತೆ, ಸಾಲ ಮರುಪಾವತಿ ಮಾಡದೇ ಇರುವುದಕ್ಕೆ ಕೆಂಡಾಮಂಡಲರಾಗಿದ್ದಾರೆ.

ಈ ನಡುವೆ ಭಾರತಕ್ಕೆ ಮಲ್ಯ ಹಸ್ತಾಂತರಿಸುವಂತೆ ಬ್ರಿಟನ್ ಸರ್ಕಾರಕ್ಕೆ ಮನವಿ ಮಾಡಲು ಮುಂದಾಗಿದ್ದ ಕೇಂದ್ರದ ಕ್ರಮಕ್ಕೂ ಮಲ್ಯ ಸಿಡಿಮಿಡಿಗೊಂಡಿದ್ದರು. ಯಾವುದೇ ಕಾರಣಕ್ಕೂ ನನ್ನನ್ನು ಹಸ್ತಾಂತರಿಸುವಂತೆ ಕೇಂದ್ರ ಸರ್ಕಾರ ಕೇಳುವಂತಿಲ್ಲ ಎಂದಿದ್ದ ಮಲ್ಯ, ನಾನಿಲ್ಲಿ ಸುರಕ್ಷಿತವಾಗಿದ್ದೇನೆ ಎನ್ನುವ ಮೂಲಕ ಬಡಾಯಿಕೊಚ್ಚಿಕೊಂಡಿದ್ರು.

ಆದ್ರೆ ಮಾಧ್ಯಮಗಳ ಮೇಲಿನ ಟೀಕೆಗೆ ಕೆಂಡಾಮಂಡಲಾಗಿರುವ ಜನತೆ ಮಾತ್ರ ಮಲ್ಯ ವಿರುದ್ಧ ಟೀಕಾ ಪ್ರಹಾರವನ್ನೇ ನಡೆಸಿದ್ದಾರೆ. ಮೊದಲು ನೀವು ಮಾಡಿದ ಸಾಲವನ್ನು ಮರುಪಾವತಿ ಮಾಡಿ, ನಂತರ ಬೇರೆ ವಿಚಾರಗಳ ಬಗೆಗೆ ಮಾತನಾಡಿ ಎಂಬಂತೆ ಚಾಟಿ ಬೀಸಿದ್ದಾರೆ.

ಆದ್ರೆ ಅದು ಏನೇ ಇರಲಿ ಈ ನಡುವೆ ಮಲ್ಯ ವರ್ತನೆ ಮಿತಿಮೀರುತ್ತಿದ್ದು, ತಮ್ಮ ವಿರುದ್ಧ ಭಾರತ ಸರ್ಕಾರ ಏನು ಮಾಡಲು ಸಾಧ್ಯವಿಲ್ಲವೆಂಬ ವರ್ತನೆ ತೊರುತ್ತಿದ್ದಾರೆ. ಹೀಗಾಗಿ ಕೂಡಲೇ ಕಠಿಣ ಕಾನೂನು ಕ್ರಮಗಳನ್ನು ಜಾರಿಗೊಳಿಸುವ ಮೂಲಕ ಸಾವಿರ ಕೋಟಿ ಸಾಲವನ್ನು ಮರುಪಾವತಿ ಮಾಡುವಂತೆ ಕ್ರಮಕೈಗೊಳ್ಳಬೇಕಿದೆ.

ಬೈಕ್ ರೇಸ್ ಪ್ರಿಯರಾಗಿದ್ದರೆ ಡಾಕರ್ ರ‍್ಯಾಲಿ ಚಿತ್ರಗಳ ವಿಕ್ಷಣೆಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Click to compare, buy, and renew Car Insurance online

Buy InsuranceBuy Now

English summary
Vijay Mallya took to twitter this morning to claim that Indian media was busy lambasting him.
Please Wait while comments are loading...

Latest Photos