ಬೀರು-ಬಾರು-ಕಾರು; ಇದು ಮಲ್ಯ ಲೈಫ್‌ಸ್ಟೈಲ್

ದೇಶದ ಪ್ರಖ್ಯಾತ ಉದ್ಯಮಿ ಹಾಗೂ ರಾಜ್ಯಸಭಾ ಸದಸ್ಯರೂ ಕೂಡಾ ಆಗಿರುವ ಮದ್ಯದೊರೆ ವಿಜಯ್ ಮಲ್ಯ (18 ಡಿಸೆಂಬರ್ 1955) ಯುಬಿ ಗ್ರೂಪ್‌ನ (ಯುನೈಟೆಡ್ ಬ್ರಿವರೇಸ್) ಚೇಯರ್‌ಮೆನ್ ಕೂಡಾ ಹೌದು. 1983ನೇ ಇಸವಿಯಲ್ಲಿ ತಂದೆಯವರ ಅಕಾಲಿಕ ಮರಣದ ಬಳಿಕ ಜವಾಬ್ದಾರಿಯನ್ನು ಮಲ್ಯ ತಮ್ಮ ಹೆಗಲ ಮೇಲೆರಿಸಿದ್ದರು.

ಆದರೆ ಖಾಸಗಿ ವ್ಯೋಮಯಾನ ಸಂಸ್ಥೆ ಕಿಂಗ್‌ಫಿಶರ್ ಏರ್‌ಲೈನ್ಸ್ ಸಂಸ್ಥೆ ಭಾರಿ ಸಾಲದ ಕೂಪಕ್ಕೆ ಬಿದ್ದಿರುವುದು 57ರ ಹರೆಯದ ಮಲ್ಯ ಹಿನ್ನಡೆಗೆ ಕಾರಣವಾಗಿತ್ತು. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಲಿಕರೂ ಆಗಿರುವ ಮಲ್ಯ ಫೋರ್ಸ್ ಇಂಡಿಯಾ ಫಾರ್ಮುಲಾ ಒನ್ (ಎಫ್1) ತಂಡವನ್ನು ಹೊಂದಿದ್ದಾರೆ.

ಅಂದ ಹಾಗೆ ಮದ್ಯದೊರೆ ಮಲ್ಯ ಕಾರುಗಳ ಬಗ್ಗೆಯೂ ಅತೀವ ಕ್ರೇಜ್ ಹೊಂದಿದ್ದಾರೆ. ಹರಾಜಿನಲ್ಲಿ ಎಷ್ಟೇ ದುಡ್ಡು ಖರ್ಚು ಮಾಡಿಯಾದರೂ ವಿಂಟೇಜ್ ಕಾರುಗಳನ್ನು ತಮ್ಮದಾಗಿಸಿಕೊಳ್ಳುವುದರಲ್ಲಿ ನಿಸ್ಸೀಮರೆನಿಸಿದ್ದಾರೆ. ಇನ್ನು ವಿಜಯ್ ಮಲ್ಯ ಬಳಿ 260ಕ್ಕೂ ಹೆಚ್ಚು ಕಾರುಗಳಿವೆ ಎಂದು ಹೇಳಿದರೆ ಖಂಡಿತ ನೀವು ನಂಬಲಾರರು. ಇವುಗಳಲ್ಲಿ ರೇಸ್ ಕಾರು, ವಿಂಟೇಜ್ ಕಾರು ಎಲ್ಲವೂ ಸೇರಿದೆ.

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಖಾಸಗಿ ಸಂಗ್ರಹಾಲಯದಲ್ಲಿ ವಿಜಯ್ ಮಲ್ಯ ಕಾರುಗಳನ್ನು ಸಂರಕ್ಷಿಸಲಾಗುತ್ತಿದೆ. 1913ನೇ ಇಸವಿಯಿಂದ ಹಿಡಿದು ಇಂದಿನ ಆಧುನಿಕ ಯುಗದ ಅತಿ ದುಬಾರಿ ಕಾರಿನ ವರೆಗೂ ಮಲ್ಯ ಕಾರು ಕ್ರೇಜ್ ಹರಡಿದೆ. ಇದಕ್ಕಾಗಿ 1992ನೇ ಇಸವಿಯಲ್ಲಿ ಸ್ಪೆಷಲ್ ಮ್ಯಾನೇಜರ್ ಕೂಡಾ ನೇಮಕಗೊಳಿಸಿದ್ದರು.

The King Of Good Times

The King Of Good Times

ಉದ್ಯಮದ ಲಾಂಭಾಂಶದ ಒಂದು ಭಾಗವನ್ನು ಕಾರು ಖರೀದಿಗಾಗಿ ವಿಜಯ್ ಮಲ್ಯ ವ್ಯಯ ಮಾಡಿದ್ದಾರೆ ಎಂದು ಉಲ್ಲೇಖಿಸಿದರೆ ತಪ್ಪಾಗಲಾರದು. ಹಾಗಿದ್ದರೆ ಬನ್ನಿ ನೋಡೋಣ ವಿಶ್ವದಲ್ಲೇ ಅತಿ ವಿರಳವಾಗಿ ಕಾಣಸಿಗುವ ಮಲ್ಯ ಕಾರು ಕಲೆಕ್ಷನ್ಸ್...

1913 Rolls-Royce Silver Ghost

1913 Rolls-Royce Silver Ghost

100 ವರ್ಷಗಳಷ್ಟು ಹಳೆಯದಾದ ರೋಲ್ಸ್ ರಾಯ್ಸ್‌ನ ಸಿಲ್ವರ್ ಘೋಸ್ಟ್ ಕಾರನ್ನು ವಿಜಯ್ ಮಲ್ಯ 1980ರ ದಶಕದಲ್ಲಿ ಖರೀದಿಸಿದ್ದರು.

1955 Porsche 550 RS Spyder

1955 Porsche 550 RS Spyder

550 ಆರ್‌ಎಸ್ ಸ್ಪೈಡರ್ ಪೋರ್ಷೆ ರೇಸಿಂಗ್ ಕಾರಾಗಿದೆ. 1998ನೇ ಇಸವಿಯಲ್ಲಿ ಈ ಕಾರನ್ನು ವಿಜಯ್ ಮಲ್ಯ ಅವರಿಂದ ಖರೀದಿಸಲಾಗಿತ್ತು.

1955 Mercedes-Benz SLR 300 Gull Wing

1955 Mercedes-Benz SLR 300 Gull Wing

1955ರ ಮರ್ಸಿಡಿಸ್ ಬೆಂಝ್ ಎಸ್‌ಎಲ್‌ಆರ್ 300 ಕೂಡಾ ಮಲ್ಯ ತೆಕ್ಕೆಗೆ ಸೇರ್ಪಡೆಯಾಗಿದೆ. ಇದು ಆಕರ್ಷಕ ಗುಲ್ ವಿಂಗ್ ವಿನ್ಯಾಸ ಹೊಂದಿದೆ.

1954 Jaguar D-Type

1954 Jaguar D-Type

ಇದು ಮಲ್ಯ ಅವರಿಂದ ಖರೀದಿಸಲ್ಪಟ್ಟ ರೇಸ್ ಕಾರಾಗಿದೆ. ಇದು 1950ರ ದಶಕದ ಅತಿಶ್ರೇಷ್ಠ ಸ್ಪೋರ್ಟ್ಸ್ ರೇಸಿಂಗ್ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

1957 Ford Thunderbird

1957 Ford Thunderbird

1957ರ ಫೋರ್ಡ್ ಥಂಡರ್‌ಬರ್ಡ್ ಕಾರು 300 ಬಿಎಚ್‌ಪಿ ವಿ8 ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿದೆ. 1997ನೇ ಇಸವಿಯಲ್ಲಿ ಮಲ್ಯ ಈ ಕಾರನ್ನು ಖರೀದಿಸಿದ್ದರು.

1929 Ford Model A

1929 Ford Model A

ವಿಜಯ್ ಮಲ್ಯ ಕಾರು ಕಲೆಕ್ಷನ್‌ನಲ್ಲಿ ಅಮೆರಿಕ ಕಾರು ಕೂಡಾ ಸೇರ್ಪಡೆಯಾಗಿದೆ. 1928ರಿಂದ 1931 ಕಾಲಘಟ್ಟದಲ್ಲಿ ಫೋರ್ಡ್ ಮಾಡೆಲ್ ಎ ಕಾರು ತಯಾರಿಸಲ್ಪಟ್ಟಿತ್ತು.

1953 Alfa Romeo Bucci Special

1953 Alfa Romeo Bucci Special

1998ರಲ್ಲಿ ಈ ವಿಂಟೇಜ್ ಕಾರನ್ನು ಮಲ್ಯ ತಮ್ಮದಾಗಿಸಿಕೊಂಡಿದ್ದರು. ಇದು ಪ್ರತಿ ಗಂಟೆಗೆ ಗರಿಷ್ಠ 150 ಮೈಲ್ ವೇಗತೆಯಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

1972 Ferrari Dino spider

1972 Ferrari Dino spider

ಫೆರಾರಿ ಸಂಸ್ಥಾಪಕ ಎನ್ಜೊ ಫೆರಾರಿ ಪುತ್ರ ಅಲ್‌ಫ್ರೆಡಿನೊ ಫೆರಾರಿ ಸ್ಮರಣಾರ್ಥ ಫೆರಾರಿ ಡಿನೊ ಕಾರನ್ನು ತಯಾರಿಸಲಾಗಿತ್ತು. 1972ನೇ ಇಸವಿಯಲ್ಲಿ ನಿರ್ಮಾಣವಾದ ಈ ಕಾರನ್ನು ಬಳಿಕ 1999ರಲ್ಲಿ ಮಲ್ಯ ಖರೀದಿಸಿದ್ದರು.

1966 Ferrari 365 California Spider

1966 Ferrari 365 California Spider

ಇಲ್ಲಿದೆ ನೋಡಿ ಮಲ್ಯ ಕಾರು ಕಲೆಕ್ಷನ್ ಸಾಲಿಗೆ ಸೇರಿದ ಮತ್ತೊಂದು ಕ್ಲಾಸಿಕ್ ಫೆರಾರಿ 365 ಸ್ಪೈಡರ್. ಫೆರಾರಿ ಪೈಕಿ ಅತಿ ವಿರಳವಾದ ಕಾರು ಇದಾಗಿದೆ. ಯಾಕೆಂದರೆ ಕೇವಲ 14 ಮಾದರಿಯಷ್ಟೇ ಲಭ್ಯವಿದೆ.

All American Racing f5000

All American Racing f5000

1955 Allard JR

1955 Allard JR

1958 Edsel Citation convertible

1958 Edsel Citation convertible

1977 Ensign Formula 1

1977 Ensign Formula 1

1967 Ferrari 275 GTB

1967 Ferrari 275 GTB

Indy race car

Indy race car

1974 Jaguar E Type series 3 convertible

1974 Jaguar E Type series 3 convertible

1990 Jaguarsport XJR 15 race car

1990 Jaguarsport XJR 15 race car

1994 Jaguar XJ220

1994 Jaguar XJ220

1973 March 73A F5000

1973 March 73A F5000

McLaren M10 a/b F5000

McLaren M10 a/b F5000

1926 Mercedes K Type

1926 Mercedes K Type

1959 Osca tipo S Le Mans sports car

1959 Osca tipo S Le Mans sports car

1965 Shelby America Cobra 427

1965 Shelby America Cobra 427

1925 Sunbeam

1925 Sunbeam

The King Of Good Times

The King Of Good Times

ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿರಿ...

Most Read Articles

Kannada
English summary
Dr.Vijay Mallya, the Indian businessman who runs several business interests such as Kingfisher Airlines, United Breweries as well as the Sahara Force India Formula 1 race team is also a vintage car lover. He has more than 260 cars, bicycles and race cars that has now been developed in to a museum.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X