ವಿಶ್ವದ ವಿಸ್ಮಯ ವಿಂಟೇಜ್ ಕಾರು ಶೋ

By Nagaraja

ಕಾಲಚಕ್ರ ತಿರುಗಿದಂತೆ ಪ್ರತಿಯೊಂದು ವಸ್ತು ಸಹ ಹಳೆಯದಾಗಿಬಿಡುತ್ತದೆ. ಇದು ಪ್ರಕೃತಿ ನಿಯಮ. ಆದರೆ ಹಳೆಯ ಐಕಾನಿಕ್ ವಸ್ತುಗಳು ವರ್ಷಗಳು ಉರುಳಿದಂತೆ ತನ್ನ ಬೇಡಿಕೆಯನ್ನು ಕಾಯ್ದುಕೊಳ್ಳುತ್ತದೆ. ಇದಕ್ಕೊಂದು ಉತ್ತಮ ಉದಾಹರಣೆ ಹಳೆಯ ಕಾರು ಅಥವಾ ಬೈಕ್‌ಗಳು.

ವಾಹನ ಜಗತ್ತಿನಲ್ಲಿ ಹಳೆಯ ವಾಹನಗಳಿಗೆ ಅತಿ ಹೆಚ್ಚಿನ ಬೇಡಿಕೆಯಿದೆ. ಜಗತ್ತಿನೆಲ್ಲೆಡೆಯ ಇತಿಹಾಸ ಹಾಗೂ ಸಂಸ್ಕೃತಿ ಪ್ರತಿಬಿಂಬವಾಗಿರುವ ಇಂತಹ ವಿಂಟೇಜ್ ಹಾಗೂ ಕ್ಲಾಸಿಕ್ ಕಾರುಗಳು ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದಕ್ಕಾಗಿ ವಿಶೇಷ ರಾಲಿಗಳನ್ನು ಏರ್ಪಡಿಸಲಾಗುತ್ತದೆ. ಈ ಮೂಲಕ ಹಳೆಯ ಪರಂಪರೆಯನ್ನು ಆಧುನಿಕ ಜಗತ್ತಿಗೆ ಬಿಂಬಿಸುವ ಪ್ರಯತ್ನ ಮಾಡಲಾಗುತ್ತದೆ.

ವಿಶ್ವದ ವಿಸ್ಮಯ ವಿಂಟೇಜ್ ಕಾರು ಶೋ

ಇತ್ತೀಚೆಗಿನ ಕೆಲವು ವರ್ಷಗಳಿಂದ ಭಾರತದಲ್ಲೂ ವಿಂಟೇಜ್ ಕಾರು ರಾಲಿ ಹೆಚ್ಚಿನ ಜನಪ್ರಿಯತೆ ಗಿಟ್ಟಿಸಿಕೊಳ್ಳುತ್ತಿದೆ. ಇಂದಿನ ಲೇಖನದಲ್ಲಿ ಜಗತ್ತಿನ ಪ್ರಮುಖ ವಿಂಟೇಜ್ ಕಾರುಗಳ ಬಗ್ಗೆ ವಿವರಣೆ ನೀಡುವ ಪ್ರಯತ್ನ ಮಾಡಲಿದ್ದೇವೆ. ಇದರಲ್ಲಿ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಭಾರತದ ಪ್ರತಿಷ್ಠಿತ ವಿಂಟೇಜ್ ಕಾರು ರಾಲಿಯೊಂದು ಸ್ಥಾನ ಪಡೆದುಕೊಂಡಿದೆ. ಅದು ಯಾವುದೇ ಅಂತೀರಾ? ಮುಂದಕ್ಕೆ ಕ್ಲಿಕ್ಕಿಸಿ...

ಪೆಬ್ಬಲ್ ಬೀಚ್ ಕಾನ್‌ಕರ್ ಡಿ ಎಲೆಗನ್ಸ್

ಪೆಬ್ಬಲ್ ಬೀಚ್ ಕಾನ್‌ಕರ್ ಡಿ ಎಲೆಗನ್ಸ್

ಜಗತ್ತಿನ ಮುಂಚೂಣಿಯ ವಿಂಟೇಜ್ ಶೋಗಳಲ್ಲಿ ಪೆಬ್ಬಲ್ ಬೀಚ್ ಕಾನ್‌ಕರ್ ಡಿ ಎಲೆಗನ್ಸ್ (Pebble Beach Concours d'Elegance) ಪ್ರಮುಖವಾಗಿದೆ. ಕ್ಯಾಲಿಫೋರ್ನಿಯಾದ ಪೆಬ್ಬಲ್ ಬೀಚ್‌ ಗಾಲ್ಫ್ ಲಿಂಕ್‌ನಲ್ಲಿ ಆಯೋಜನೆಯಾಗುತ್ತಿರುವ ಈ ಅತಿ ಪ್ರತಿಷ್ಠಿತ ವಿಂಟೇಜ್ ಕಾರು ಶೋ ಇದೇ ಹೆಸರಿನಿಂದಲೇ ಜನಪ್ರಿಯವಾಗಿದೆ. ಇದು ಆಗಸ್ಟ್ ತಿಂಗಳಲ್ಲಿ ಆಯೋಜನೆಯಾಗುವ ಮಾಂಟೆರಿ ಕಾರು ವೀಕ್‌ನ ಕೊನೆಯ ಭಾನುವಾರದಂದು ಆಯೋಜನೆಯಾಗುತ್ತಿದ್ದು, 15,000ದಷ್ಟು ಕಾರು ಅಭಿಮಾನಿಗಳನ್ನು ಸೆಳೆಯುತ್ತಿದೆ.

ಮೋಟಾರ್‌ಕ್ಲಾಸಿಕಾ

ಮೋಟಾರ್‌ಕ್ಲಾಸಿಕಾ

ಆಸ್ಟ್ರೇಲಿಯಾದ ಅಂತರಾಷ್ಟ್ರೀಯ ಕಾನ್‌ಕರ್ ಡಿ ಎಲೆಗನ್ಸ್ ಆಂಡ್ ಕ್ಲಾಸಿಕ್ ಮೋಟಾರು ಶೋ ಆಗಿರುವ ಮೋಟಾರುಕ್ಲಾಸಿಕಾ ವರ್ಷಂಪ್ರತಿ ಮೆಲ್ಪರ್ನ್‌ನಲ್ಲಿ ಆಯೋಜನೆಯಾಗುತ್ತದೆ. ಇಲ್ಲಿನ ಹಳೆಯ ಸುಂದರಿಯನ್ನು ನೋಡಲು ವರ್ಷಂಪ್ರತಿ 20,000 ಪ್ರೇಕ್ಷಕರು ಆಗಮಿಸುತ್ತಿರುವುದೇ ಪ್ರಮುಖ ಆಕರ್ಷಣೆಗೆ ಕಾರಣವಾಗಿದೆ.

ಸಿಲ್ವರ್ ಸ್ಟೋನ್ ಕ್ಲಾಸಿಕ್ ಕಾರು ಶೋ

ಸಿಲ್ವರ್ ಸ್ಟೋನ್ ಕ್ಲಾಸಿಕ್ ಕಾರು ಶೋ

ನೀವು ರೇಸ್ ಕಾರು ಪ್ರಿಯರಾದ್ದಲ್ಲಿ ಖಂಡಿತವಾಗಿಯೂ ಸಿಲ್ವರ್ ಸ್ಟೋನ್ ಕ್ಲಾಸಿಕ್ ಕಾರು ಶೋ ನಿಮ್ಮ ಫೇವರಿಟ್ ಎನಿಸಿಕೊಳ್ಳಲಿದೆ. ಬ್ರಿಟನ್‌ನ ಸಿಲ್ವರ್ ಸ್ಟೋನ್ ಸರ್ಕ್ಯೂಟ್‌ನಲ್ಲಿ ಮೂರು ದಿನಗಳ ಪರ್ಯಂತ ಸಾಗುವ ಈ ರೇಸ್‌ನಲ್ಲಿ ಐತಿಹಾಸಿಕ ಕಾರುಗಳು ರೇಸ್‌ನಲ್ಲಿ ಭಾಗವಹಿಸುತ್ತದೆ. ನಿಮಗಿದು ಗೊತ್ತೇ? 2013ನೇ ಸಾಲಿನಲ್ಲಿ ಸಿಲ್ವರ್ ಸ್ಟೋನ್‌ನಲ್ಲಿ ಸರಿ ಸುಮಾರು 9,000 ಕಾರುಗಳು ಭಾಗವಹಿಸಿತ್ತಲ್ಲದೆ 94,000 ವಾಹನ ಪ್ರೇಮಿಗಳನ್ನು ತನ್ನತ್ತ ಸೆಳೆದಿತ್ತು. ಇದಕ್ಕೆ ಫಲಶ್ರುತಿಯೆಂಬಂತೆ ಇಂಟರ್ ನ್ಯಾಷನಲ್ ಹಿಸ್ಟೋರಿಕ್ ಮೋಟರಿಂಗ್ ಅವಾರ್ಡ್ಸ್‌ನಿಂದ (ಐಎಚ್‌ಎಂಎ) 'ಮೋಟಾರುಸ್ಪೋರ್ಟ್ ಈವೆಂಟ್ ಆಫ್ ದಿ ಇಯರ್' ಪ್ರಶಸ್ತಿಗೂ ಭಾಜನವಾಗಿತ್ತು.

 ರೆಟ್ರೊಮೊಬೈಲ್

ರೆಟ್ರೊಮೊಬೈಲ್

ಫ್ರಾನ್ಸ್‌ನ ಪ್ಯಾರಿಸ್‌‍ನಲ್ಲಿ ಆಯೋಜನೆಯಾಗುತ್ತಿರುವ ಮಗದೊಂದು ವಾರ್ಷಿಕ ಕ್ಲಾಸಿಕ್ ಕಾರು ಶೋ ಆಗಿರುವ ರೆಟ್ರೊಮೊಬೈಲ್ ಇಡೀ ಯುರೋಪ್‌ ರಾಷ್ಟ್ರಗಳ ಪ್ರತಿಷ್ಠೆಯ ಸಂಕೇತವಾಗಿದೆ. ಇಲ್ಲಿ ಅತಿ ಪುರಾತನ ಕಾರುಗಳ ಪ್ರದರ್ಶನವಾಗುತ್ತಿದೆ. ಅಂದ ಹಾಗೆ ಈ ಬಾರಿ ಫೆಬ್ರವರಿ 4ರಿಂದ 8ರ ವರೆಗೆ ಕ್ಲಾಸಿಕ್ ಕಾರು ಶೋ ಆಯೋಜನೆಯಾಗಲಿದೆ.

21 ಗನ್ ಸೆಲ್ಯೂಟ್ ವಿಂಟೇಜ್ ಕಾರು ರಾಲಿ

21 ಗನ್ ಸೆಲ್ಯೂಟ್ ವಿಂಟೇಜ್ ಕಾರು ರಾಲಿ

ವಿಂಟೇಜ್ ಕಾರು ಪಟ್ಟಿಯಿಂದ ಭಾರತವನ್ನು ಹೇಗೆ ಕೈಬಿಡಲು ಸಾಧ್ಯ? ಹೌದು, ದೇಶದ ವಿಂಟೇಜ್ ಕಾರುಗಳ ಪ್ರತಿಷ್ಠೆಯ ಸಂಕೇತವಾಗಿರುವ 21 ಗನ್ ಸೆಲ್ಯೂಟ್ ವಿಂಟೇಜ್ ಕಾರು ರಾಲಿ ಇದೇ ಮುಂಬರುವ ಫೆಬ್ರವರಿ 21 ಹಾಗೂ 22ರಂದು ಆಯೋಜನೆಯಾಗಲಿದೆ. ವಿದೇಶ ವಿಂಟೇಜ್ ಕಾರುಗಳ ಶೋಗಿಂತಲೂ ವಿಭಿನ್ನವಾಗಿ ಇಲ್ಲಿ ರಾಯಲ್ ಕುಟುಂಬದ ಮಹಾರಾಜ ಕಾರುಗಳ ವಿಶೇಷ ಪ್ರದರ್ಶನವೂ ನಡೆಯಲಿದೆ. ಪ್ರಸ್ತುತ ರಾಲಿಯು ದೆಹಲಿಯ ರೆಡ್ ಫೋರ್ಟ್‌ನಿಂದ ಗುರ್ಗಾಂವ್‌ನ ಲೆಶುವರ್ ವ್ಯಾಲಿ ಪಾರ್ಕ್‌ನತ್ತ ಸಂಚರಿಸಲಿದ್ದು, 201ರಷ್ಟು ಹಳೆಯ ವಿಂಟೇಜ್ ಸುಂದರಿಯರು ಹಾಗೂ 51 ಮಹಾರಾಜ ಕಾರುಗಳ ಜೊತೆಗೆ ಅಂತರಾಷ್ಟ್ರೀಯ ಮಟ್ಟದ ಹಳೆಯ ಕಾರುಗಳ ಪ್ರಮುಖ ಆಕರ್ಷಣೆಯಾಗಲಿದೆ. ನಮ್ಮ ಪ್ರತಿನಿಧಿಗಳು ಸಹ 21 ಗನ್ ಸೆಲ್ಯೂಟ್ ಇಂಟರ್ ನ್ಯಾಷನಲ್ ಕಾರು ರಾಲಿ ಮತ್ತು ಆಟೋ ಶೋದಲ್ಲಿ ಪಾಲ್ಗೊಳ್ಳಲಿದ್ದು, ಸಂಪೂರ್ಣ ವಿವರವನ್ನು ಓದುಗರ ಮುಂದಿಡಲಿದ್ದೇವೆ. ಇದಕ್ಕಾಗಿ ಓದುತ್ತಿರುವ ಡ್ರೈವ್‌ಸ್ಪಾರ್ಕ್!

Most Read Articles

Kannada
English summary
Let's take a look at some famous vintage car shows around the world, and something very special happening soon in India too.
Story first published: Thursday, January 29, 2015, 11:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X