ಈ ವಿಡಿಯೋ ನೋಡಿದ್ರೆ ಅವ್ರು ಇವ್ರೇನಾ ಅಂತ ಆಶ್ಚರ್ಯ ಪಡ್ತೀರಾ !!

Written By:

ವಿಶಿಷ್ಟ ರೀತಿಯಲ್ಲಿ ಜನರ ಮನಸ್ಸಿಗೆ ಆಧ್ಯಾತ್ಮಿಕತೆಯ ಮನೋಭಾವ ಮೂಡಿಸುವ ಕಾರ್ಯದಲ್ಲಿ ಯಶಸ್ಸು ಸಾಧಿಸಿರುವ ಆದ್ಯಾತ್ಮಿಕ ಗುರು ಶ್ರೀ ಜಗ್ಗಿ ವಾಸುದೇವ್ ಅವರು ಟೊಯೋಟಾ ರೇಸ್ ಕಾರನ್ನು ಚಲಾಯಿಸುವ ಮೂಲಕ ತಮಗೆ ಎಲ್ಲದರಲ್ಲಿಯೂ ಆಸಕ್ತಿ ಇದೆ ಎಂದು ಸಾರಿ ಹೇಳಿದ್ದಾರೆ.

ಇತ್ತೀಚಿನ ಯುವಕರಿಂದ ಹಿಡಿದು ಹಣ್ಣು ಹಣ್ಣು ಮುದುಕರಿಗೂ ತಮ್ಮ ಆಧುನಿಕ ಆದ್ಯಾತ್ಮಿಕ ಪಠಣಗಳ ಮೂಲಕ ಚಿರಪರಿಚಿತರಾಗಿರುವ ಸದ್ಗುರು ಅವರು ಬಲಿಷ್ಠ 1000 ಅಶ್ವಶಕ್ತಿ ಹೊಂದಿರುವ ಟೊಯೋಟಾ ರೇಸ್ ಕಾರನ್ನು ವೇಗವಾಗಿ ಚಾಲನೆ ಮಾಡುವ ಮೂಲಕ ಆಧುನಿಕ ತಂತ್ರಜ್ಞಾನಕ್ಕೆ ನಾವೂ ಸಹ ಒಗ್ಗಿಕೊಳ್ಳಲಿದ್ದೇವೆ ಎಂಬುದನ್ನು ತಿಳಿ ಹೇಳಿದ್ದಾರೆ.

ಶ್ರೀ ಸದ್ಗುರು ಅವರು ಗಂಟೆಗೆ ಸರಿ ಸುಮಾರು 350 ಕಿ.ಮೀ ವೇಗದಲ್ಲಿ ಟೊಯೋಟಾ ಕಾರನ್ನು, ಚಾಂಪಿಯನ್ ಕಾರು ಚಾಲಕ ಕ್ರಿಶ್ಚಿಯನ್ ರಾಡೊ ಅವರೊಟ್ಟಿಗೆ ಕುಳಿತು ಚಾಲನೆ ಮಾಡಿದ್ದಾರೆ.

ಈ ಖುಷಿ ವಿಚಾರವನ್ನು ತಮ್ಮ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿರುವ ಸದ್ಗುರು ಅವರು ಮನಸ್ಸಿದ್ದರೆ ಪ್ರತಿಯೊಂದು ಕಾರ್ಯವೂ ಸುಲಭವಾಗಲಿದೆ ಎಂಬುದನ್ನು ತಾವೇ ಸ್ವತಃ ಪ್ರಯೋಗ ಮಾಡಿ ತೋರಿಸಿದ್ದಾರೆ.

ದೊಡ್ಡದಾದ ಟರ್ಬೊ ಚಾರ್ಜರ್ ಪಡೆದುಕೊಂಡಿರುವ ಈ ಟೊಯೋಟಾ ಕಾರಿನ ಬಗ್ಗೆ ನಿರ್ಧಿಷ್ಟವಾಗಿ ಯಾವುದೇ ರೀತಿಯ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.

'ಸದ್ಗುರು ಆನ್ ದ ರೇಸ್ ಟ್ರ್ಯಾಕ್' ಎಂಬ ಶೀರ್ಷಿಕೆಯೊಂದಿಗೆ ಅಪ್ಲೋಡ್ ಮಾಡಿರುವ ಈ ವೀಡಿಯೊವನ್ನು 1.7 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಸದ್ಗುರು ಅವರ ಅನುಯಾಯಿಗಳು ನೂರಾರು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ.

ಅವರೇ ಹೇಳಿರುವಂತೆ 'ನಿಮಗಿರುವುದು ಒಂದೇ ಜೀವನ, ಪ್ರತಿಕ್ಷಣವನ್ನೂ ಪ್ರೀತಿಯಿಂದ ಪ್ರೀತಿಸಿ' ಎಂಬ ವಾಕ್ಯವನ್ನು ತಾವೂ ಪಾಲಿಸುತ್ತಿರುವುದು ಈ ವಿಡಿಯೋ ಇಂದ ಕಂಡುಬರುತ್ತದೆ.

ಈ ನಿರ್ದಿಷ್ಟ ಸಯಾನ್ ಬೃಹತ್ 1000 ಅಶ್ವಶಕ್ತಿ ಉತ್ಪಾದಿಸುವ ರೇಸ್ ಕಾರ್ ಆಗಿದ್ದು, ಈ ಕಾರು 340 ಕಿ.ಮೀ ವರೆಗೆ ವೇಗವನ್ನು ಪಡೆದುಕೊಳ್ಳಲಿದೆ.

ಪ್ರತೀದಿನವೂ ತಮ್ಮ ವಿಶಿಷ್ಟ ಹೇಳಿಕೆಗಳಿಂದ ಆಧ್ಯಾತ್ಮಿಕ ಚಿಂತನೆಯನ್ನು ಎಲ್ಲೆಡೆ ಪಸರಿಸುತ್ತಿರುವ ಸದ್ಗುರು ಅವರು ವೃತ್ತಿನಿರತ ರೇಸಿಂಗ್ ಚಾಲಕನೊಂದಿಗೆ ರೇಸ್ ಟ್ರ್ಯಾಕ್ ಮೇಲೆ ಕಾಣಸಿಗುವುದು ಅತ್ಯಂತ ವಿರಳ ಎನ್ನಬಹುದು.

ಸದ್ಗುರು ಬಗ್ಗೆ ತಿಳಿದುಕೊಳ್ಳಿ :

ಶ್ರೀಮತಿ ಸುಶೀಲ ಮತ್ತು ಡಾ. ವಾಸುದೇವ್ ಎಂಬ ದಂಪತಿಗೆ ಮೈಸೂರಿನಲ್ಲಿ ಜನಿಸಿದ ಸದ್ಗುರು ಅವರು 11ನೇ ವರ್ಷದಲ್ಲಿ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳ ಪರಿಚಯವಾಗಿ, ಅವರಲ್ಲಿ ಪ್ರಾರಂಭಿಕ ಯೋಗಾಸನಗಳನ್ನು ಕಲಿತು ದಿನವೂ ಅಭ್ಯಾಸ ಮಾಡುತ್ತಿದ್ದರು.

 

ಕಾಲೇಜು ದಿನಗಳಲ್ಲೇ ಇವರಿಗೆ ಪ್ರವಾಸ ಮತ್ತು ಮೋಟರ್‌ಬೈಕ್‌ಗಳೆಂದರೆ ಅತೀವ ಆಸಕ್ತಿ ಹೊಂದಿದ್ದ ಸದ್ಗುರು ಅವರು ಪದವಿ ಪಡೆದ ನಂತರ ಕೋಳಿ ಸಾಕಣೆ, ಇಟ್ಟಿಗೆ ಕಾರ್ಖಾನೆ, ಕಟ್ಟಡ ನಿರ್ಮಾಣ ಮುಂತಾದ ಹಲವು ಉದ್ಯೋಗಗಳಲ್ಲಿ ತೊಡಗಿಕೊಂಡು ಯಶಸ್ವಿಯಾದರು.

ಮೈಸೂರಿನಲ್ಲಿ ಏಳು ಜನರಿಗಾಗಿ ಯೋಗದ ಮೊದಲ ತರಗತಿಯನ್ನು ಶುರು ಮಾಡಿದ ಸದ್ಗುರು ಅವರು ಕ್ರಮೇಣ, ಕರ್ಣಾಟಕದ ವಿವಿಧ ನಗರಗಳಲ್ಲಿ ಮತ್ತು ಹೈದರಾಬಾದ್‌ನಲ್ಲಿ ಯೋಗವನ್ನು ಹೇಳಿಕೊಡುವುದಕ್ಕಾಗಿ ಸದ್ಗುರು ಅವರು ಮೋಟಾರ್‌ಬೈಕ್‌ನಲ್ಲಿ ಊರಿಂದೂರಿಗೆ ಪ್ರಯಾಣ ಮಾಡುತ್ತಿದ್ದರು.

ಯೋಗ ಮತ್ತು ಇತರ ಸಾಮಾಜಿಕ ಚಟುವಟಿಕೆ ಕಾರ್ಯಗಳನ್ನು ನೆಡೆಸಿಕೊಂಡು ಬರುತ್ತಿರುವ 'ಇಶಾ ಫೌಂಡೇಶನ್' ಗ್ರೂಪ್‌ನ ಸ್ಥಾಪಕರಾದ ಸದ್ಗುರು ಅವರು ಹೆಚ್ಚು ಕಡಿಮೆ ನ್ಯೂಯಾರ್ಕ್ ಟೈಮ್ಸ್ ಜನಪ್ರಿಯ ಲೇಖಕ ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ.

ಸದ್ಗುರು ಜಗ್ಗಿ ವಾಸುದೇವ್ ಅವರು ಲಾಭೋದ್ದೇಶವಿಲ್ಲದ ಸಂಘಟನೆಯನ್ನು ನೆಡೆಸಿ ವಿಶ್ವದಾದ್ಯಂತ ಜನಪ್ರಿಯ ಹೆಸರು ಪಡೆದುಕೊಂಡಿದ್ದಾರೆ.

ಮುಂಬರುವ ಸೆಪ್ಟೆಂಬರ್ ತಿಂಗಳಿನಲ್ಲಿ 60 ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಿರುವ ಸದ್ಗುರು ಅವರು ಈ ಇಳಿ ವಯಸ್ಸಿನಲ್ಲಿ ಈ ರೀತಿ ಸಾಧನೆ ಎಲ್ಲರಿಗೂ ಸ್ಪೂತಿಯೇ ಸರಿ.

Click to compare, buy, and renew Car Insurance online

Buy InsuranceBuy Now

Read more on ರೇಸ್ race
Story first published: Friday, April 28, 2017, 11:46 [IST]
English summary
Read in Kannada about Sadguru driving a 1,000bhp Toyota Scion around a race track. Know more about sadguru, history, about race and more...
Please Wait while comments are loading...

Latest Photos