ಎಲ್ಲಾ ವಿಮಾನಗಳ ಬಣ್ಣ 'ಬಿಳಿ' ಯಾಕಪ್ಪ ಇರುತ್ತೆ ಅಂದ್ರೆ..?

ಸಾಮಾನ್ಯವಾಗಿ ಪ್ರಪಂಚದಲ್ಲಿರುವ ಹೆಚ್ಚಿನ ವಿಮಾನಗಳು ಬಿಳಿ ಬಣ್ಣದಿಂದ ಕೂಡಿರುತ್ತವೆ, ಏಕೆ ಹೀಗೆ ಎಂದು ನೀವು ಖಂಡಿತ ನಿಮ್ಮ ಮನದಲ್ಲೇ ಪ್ರೆಶ್ನೆ ಹಾಕಿಕೊಂಡಿರುತ್ತೀರಿ.

By Girish

ಆಕಾಶದಲ್ಲಿ ವಿಮಾನ ಹಾದು ಹೋಗುವ ಸಂದರ್ಭದಲ್ಲಿ, ವಿಮಾನ ಏರುವ ಸಂದರ್ಭದಲ್ಲಿ ಅಥವಾ ಚಿತ್ರಗಳಲ್ಲಿ ನೀವು ಯಾವಾಗಲಾದರೂ ಈ ವಿಮಾನದ ಬಣ್ಣದ ಬಗ್ಗೆ ಗಮನಿಸಿದ್ದರೆ ಖಂಡಿತ ನಿಮ್ಮ ಮನದಲ್ಲಿ ಈ ಪ್ರಶ್ನೆ ಮೂಡದೆ ಇರಲಾರದು.

ಎಲ್ಲಾ ವಿಮಾನಗಳ ಬಣ್ಣ 'ಬಿಳಿ' ಯಾಕಪ್ಪ ಇರುತ್ತೆ ಅಂದ್ರೆ..?

ವಿಮಾನದ ವಿನ್ಯಾಸದ ಬಣ್ಣ, ಎಳೆಗಳ ಬಣ್ಣ, ಅಲಂಕಾರಗಳ ಬಣ್ಣ, ವಿಮಾನದ ಹೆಸರನ್ನು ಬರೆಯಲು ಬಳಸಿದ ಬಣ್ಣ ಏನೇ ಇದ್ದರೂ ವಿಮಾನದ ಮೂಲ ಬಣ್ಣ ಬಿಳುಪು ಹೊಂದಿರಲಿದೆ.ವಿಮಾನಕ್ಕೆ ಬಿಳಿ ಬಣ್ಣ ಬಳಿದಿರುವ ಹಿಂದೆ ಹಲವು ತಾಂತ್ರಿಕ ವಿಚಾರಗಳು ಅಡಗಿದ್ದು, ಅವುಗಳ ಬಗ್ಗೆ ನಿಮಗೆ ತಿಳಿಸುವ ಚಿಕ್ಕ ಪ್ರಯತ್ನ ಇಲ್ಲಿದೆ.

ಎಲ್ಲಾ ವಿಮಾನಗಳ ಬಣ್ಣ 'ಬಿಳಿ' ಯಾಕಪ್ಪ ಇರುತ್ತೆ ಅಂದ್ರೆ..?

ಇದಕ್ಕೆ ಕಾರಣ ಏನು ಗೊತ್ತೇ ? ಬೇರೆ ಬಣ್ಣಗಳಿಗೆ ಹೋಲಿಸಿದರೆ ಬಿಳಿ ಬಣ್ಣ ಸೂರ್ಯನಿಂದ ಬರುವ ಕಿರಣಗಳನ್ನು ಅಥವಾ ಬೇರೆ ಯಾವುದೇ ಬೆಳಕನ್ನು ತನ್ನ ಒಡಲಲ್ಲಿ ಇಟ್ಟುಕೊಳ್ಳದೆ ಹೊರ ಹಾಕುವ ವಿಶೇಷತೆ ಹೊಂದಿದೆ.

ಎಲ್ಲಾ ವಿಮಾನಗಳ ಬಣ್ಣ 'ಬಿಳಿ' ಯಾಕಪ್ಪ ಇರುತ್ತೆ ಅಂದ್ರೆ..?

ನೀವೇನಾದರೂ ಬಿಳಿ ಬಣ್ಣ ಉಪಯೋಗಿಸದೆ ಬೇರೆ ಬಣ್ಣ ಬಳಸಿದರೆ ವಿಮಾನವು ಸೂರ್ಯನಿಂದ ಬರುವ ಕಿರಣಗಳನ್ನು ಹೀರಿಕೊಂಡು ವಿಮಾನದ ಶಾಖ ಹೆಚ್ಚಿಗೆಯಾಗಲಿದೆ.

ಎಲ್ಲಾ ವಿಮಾನಗಳ ಬಣ್ಣ 'ಬಿಳಿ' ಯಾಕಪ್ಪ ಇರುತ್ತೆ ಅಂದ್ರೆ..?

ವಿಮಾನಕ್ಕೆ ಬಿಳಿ ಬಣ್ಣ ಬಳಿಯುವುದರಿಂದ ಹೆಚ್ಚು ದಿನಗಳ ನಂತರ ಕಾಣಿಸುವ ಬಿರುಕುಗಳನ್ನು ಬೇಗ ಪತ್ತೆ ಹಚ್ಚಬಹುದಾಗಿದೆ.

ಎಲ್ಲಾ ವಿಮಾನಗಳ ಬಣ್ಣ 'ಬಿಳಿ' ಯಾಕಪ್ಪ ಇರುತ್ತೆ ಅಂದ್ರೆ..?

ಬಿಳಿ ಬಣ್ಣದ ಇನ್ನೊಂದು ವಿಶೇಷತೆ ಏನೆಂದರೆ, ಬೇಸಿಗೆ ಕಾಲದಲ್ಲಿ ಈ ಬಣ್ಣ ಹೊಂದಿರುವ ವಿಮಾನ ಏರ್‌ಪೋರ್ಟ್‌ನಲ್ಲಿ ನಿಲ್ಲಿಸಿರುವ ಸಂದರ್ಭದಲ್ಲಿ ಅತಿ ಕಡಿಮೆ ಸಮಯದಲ್ಲಿ ತಣ್ಣಗಾಗುವುದಲ್ಲದೆ, ವಿಮಾನ ಪ್ರಯಾಣಿಕರಿಗೆ ಹೆಚ್ಚು ತಂಪು ಉಂಟು ಮಾಡಲಿದೆ.

ಎಲ್ಲಾ ವಿಮಾನಗಳ ಬಣ್ಣ 'ಬಿಳಿ' ಯಾಕಪ್ಪ ಇರುತ್ತೆ ಅಂದ್ರೆ..?

ಬಿರುಕುಗಳಲ್ಲದೆ, ವಿಮಾನದಲ್ಲಿ ಸಾಮಾನ್ಯವಾಗಿ ಆಗುವಂತಹ ಸಣ್ಣ ಪುಟ್ಟ ಹಾನಿಗಳನ್ನು ಬಿಳಿ ಬಣ್ಣ ಬೇಗ ಬಿಟ್ಟು ಕೊಡುವುದರಿಂದ ಹೆಚ್ಚಿನ ಅನಾಹುತಗಳನ್ನು ತಪ್ಪಿಸಬಹುದು ಎನ್ನಲಾಗಿದೆ.

ಎಲ್ಲಾ ವಿಮಾನಗಳ ಬಣ್ಣ 'ಬಿಳಿ' ಯಾಕಪ್ಪ ಇರುತ್ತೆ ಅಂದ್ರೆ..?

ವಿಮಾನಕ್ಕೆ ಬಳಸುವ ಉಕ್ಕು ದಿನಕಳೆದಂತೆ ತುಕ್ಕು ಹಿಡಿಯುವುದು ಸರ್ವೇಸಾಮಾನ್ಯ, ಈ ರೀತಿಯ ತುಕ್ಕು ಹಿಡಿದಿರುವ ಸ್ಥಳವನ್ನು ಗುರುತಿಸುವಲ್ಲಿ ಬಿಳಿ ಬಣ್ಣ ಸಹಾಯ ಮಾಡಲಿದೆ.

ಎಲ್ಲಾ ವಿಮಾನಗಳ ಬಣ್ಣ 'ಬಿಳಿ' ಯಾಕಪ್ಪ ಇರುತ್ತೆ ಅಂದ್ರೆ..?

ವಿಮಾನದಲ್ಲಿ ಉಂಟಾಗುವ ಬಿರುಕು ಹೆಚ್ಚು ಗಾಢ ಬಣ್ಣ ಹೊಂದಿದ್ದು, ಈ ರೀತಿಯ ಬಿರುಕುಗಳು ಕೇವಲ ಬಿಳಿ ಬಣ್ಣದಲ್ಲಿ ಮಾತ್ರ ಹೆಚ್ಚು ಗೋಚರಿಸುವುದು ಕೂಡ ಬಿಳಿ ಬಣ್ಣವನ್ನು ವಿಮಾನಕ್ಕೆ ಉಪಯೋಗಿಸಲು ಮುಖ್ಯ ಕಾರಣ ಎನ್ನಬಹುದು.

ಎಲ್ಲಾ ವಿಮಾನಗಳ ಬಣ್ಣ 'ಬಿಳಿ' ಯಾಕಪ್ಪ ಇರುತ್ತೆ ಅಂದ್ರೆ..?

ವಿಮಾನ ಅಪಘಾತವಾದ ಸಂದರ್ಭದಲ್ಲಿ ಅಥವಾ ಅವಘಡಗಳು ಸಂಭವಿಸಿದಲ್ಲಿ, ವಿಮಾನ ಬಿಳಿ ಬಣ್ಣ ಹೊಂದಿದ್ದರೆ ಪತ್ತೆ ಹಚ್ಚಲು ಸಹಾಯವಾಗುತ್ತದೆ ಎಂಬ ಕಾರಣಕ್ಕೆ ಈ ಬಣ್ಣ ಉಪಯೋಗಿಸಲಾಗುತ್ತದೆ.

ಎಲ್ಲಾ ವಿಮಾನಗಳ ಬಣ್ಣ 'ಬಿಳಿ' ಯಾಕಪ್ಪ ಇರುತ್ತೆ ಅಂದ್ರೆ..?

ಬಿಳಿ ಬಣ್ಣ ಬಹು ಬೇಗ ಕಳೆಗುಂದುವ ಲಕ್ಷಣಗಳು ಕಮ್ಮಿ ಇರುವುದರಿಂದ ಬಿಳಿ ಬಣ್ಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ.

ಎಲ್ಲಾ ವಿಮಾನಗಳ ಬಣ್ಣ 'ಬಿಳಿ' ಯಾಕಪ್ಪ ಇರುತ್ತೆ ಅಂದ್ರೆ..?

ಬಿಳಿ ಬಣ್ಣ ಬಳಿದಿರುವ ವಿಮಾನಕ್ಕೆ ಸಾಮಾನ್ಯವಾಗಿ ಹೆಚ್ಚು ಬೆಲೆ ಇದ್ದು, ಮರು ಮಾರಾಟ ಮಾಡುವ ಸಂದರ್ಭದಲ್ಲಿ ಖರೀದಿದಾರರು ಬಿಳಿ ಬಣ್ಣದ ವಿಮಾನಕ್ಕೆ ಹೆಚ್ಚು ಮನಸೋಲುವುದರಿಂದಲೂ ಕೂಡ ಬಿಳಿ ಬಣ್ಣ ಹೆಚ್ಚು ಬಳಸಲಾಗುತ್ತದೆ.

ಎಲ್ಲಾ ವಿಮಾನಗಳ ಬಣ್ಣ 'ಬಿಳಿ' ಯಾಕಪ್ಪ ಇರುತ್ತೆ ಅಂದ್ರೆ..?

ಇಷ್ಟೆಲ್ಲಾ ಅನುಕೂಲಗಳಿರುವಾಗ ವಿವಿಧ ಬಣ್ಣಗಳನ್ನು ಉಪಯೋಗಿಸಿ ವಿಮಾನ ತಯಾರಿಸುವುದು ವಿಮಾನ ತಯಾರಕ ಕಂಪನಿಗೆ ದುಂದುವೆಚ್ಚವಲ್ಲದೆ ಬೇರೇನೂ ಅಲ್ಲ.

Most Read Articles

Kannada
Read more on ವಿಮಾನ plane
English summary
[Read in kannada]when you are just about to board a flight at the airport, have you ever noticed that the vast majority of airplanes are white? what is the reason behind that
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X