ಗಾಜುಗಳೇ ಇಲ್ಲದ ವಿಸ್ಮಯಕಾರಿ ವಿಮಾನ

By Nagaraja

ಅಬ್ಬಬ್ಬಾ, ಇದೇನಿದು ತಂತ್ರಜ್ಞಾನ ಇಷ್ಟೊಂದು ಮುಂದುವರಿದಿದೆಯೇ? ವಿಮಾನಗಳಲ್ಲಿ ಪಯಣಿಸುವುದೆಂದರೆ ಹೃದಯದಲ್ಲಿ ಢವ ಢವ ಎನ್ನುತ್ತಿದೆ. ಹಾಗಿರುವಾಗ ವಿಮಾನಗಳಿಗೆ ಕಿಟಕಿ ಗಾಜುಗಳೇ ಇಲ್ಲದಿದ್ದರೆ ಹೇಗಪ್ಪಾ? ನಿಮ್ಮಿಂದ ಊಹಿಸಲು ಸಾಧ್ಯವೇ?

ಹೌದು, ಬ್ರಿಟನ್ ಮೂಲದ ಸಂಸ್ಥೆಯೊಂದು ಕಿಟಕಿ ಗಾಜುಗಳೇ ಇಲ್ಲದ ವಾಣಿಜ್ಯ ವಿಮಾನಗಳನ್ನು ಅಭಿವೃದ್ಧಿಪಡಿಸುತ್ತಿದೆ. ಅಷ್ಟಕ್ಕೂ ಈ ವಿಮಾನ ಸಾಹಸ ಪ್ರಿಯರನ್ನು ಕೈ ಬೀಸಿ ಕರೆಯಲು ಕಾರಣಗಳೇನು ಬಲ್ಲೀರಾ? ಮುಂದಕ್ಕೆ ಓದಿ...

ಗಾಜುಗಳೇ ಇಲ್ಲದ ವಿಸ್ಮಯಕಾರಿ ವಿಮಾನ

ವಿಮಾನ ಪ್ರಯಾಣ ಅತ್ಯಂತ ರೋಚಕತೆಯಿಂದ ಕೂಡಿರುತ್ತದೆ. ಬಾನೆತ್ತರದಲ್ಲಿ ಬೆಳ್ಳಕ್ಕಿಯಂತೆ ಹಾರುವ ವಿಮಾನ ಪಯಣದ ವೇಳೆ ಇಡೀ ವಿಶ್ವದ ದರ್ಶನವಾಗುತ್ತಿದೆ. ಇದೇ ಪರಿಕಲ್ಪನೆಯನ್ನು ಮುಂದಿಟ್ಟುಕೊಂಡು ಬ್ರಿಟನ್ ಮೂಲದ ಸಂಶೋಧನಾ ಸಂಸ್ಥೆಯಾಗಿರುವ ಸೆಂಟರ್ ಫಾರ್ ಪ್ರೊಸೆಸ್ ಇನ್ನೋವೇಷನ್ (ಸಿಪಿಐ) ವಿಂಡೋಲೆಸ್ ವಿಮಾನದ ಮೊದಲ ಮಾದರಿಯನ್ನು ವಿನ್ಯಾಸಗೊಳಿಸಿದೆ.

ಗಾಜುಗಳೇ ಇಲ್ಲವೆಂದರೆ ಹೇಗಪ್ಪಾ?

ಗಾಜುಗಳೇ ಇಲ್ಲವೆಂದರೆ ಹೇಗಪ್ಪಾ?

ಇದಕ್ಕೂ ಇಲ್ಲಿದೆ ಪರಿಹಾರ. ಈ ವಿಮಾನವು ಸಾಂಪ್ರಾದಾಯಿಕ ಗಾಜುಗಳ ಬದಲು ಹೈ-ಡೆಫಿನಿಷನ್ ಹೊಂದಿಕೆಯಾಗುವ ಸ್ಕ್ರೀನ್‌ಗಳನ್ನು ಪಡೆದುಕೊಂಡಿದೆ. ಇದರ ಮುಖಾಂತರ ಹೊರಂಗಣ ಪ್ರದೇಶದ ದಿವ್ಯ ದರ್ಶನವಾಗಲಿದೆ.

ಗಾಜುಗಳೇ ಇಲ್ಲದ ವಿಸ್ಮಯಕಾರಿ ವಿಮಾನ

ಇನ್ನೊಂದು ರೀತಿಯಲ್ಲಿ ಹೇಳುವುದಾದ್ದಲ್ಲಿ ಇದು ಕಿಟಕಿ ಗಾಜು ರಹಿತ ವಿಮಾನವಾಗಿದ್ದು, ಪಾರದರ್ಶಕ ಪ್ರಯಾಣಿಕ ವಿಭಾಗವನ್ನು ಹೊಂದಿರಲಿದೆ. ಹಾಗೆಯೇ ಮುಂದಿನ 10 ವರ್ಷದೊಳಗೆ ಲೋಕರ್ಪಣೆಯಾಗಲಿದೆ.

ಗಾಜುಗಳೇ ಇಲ್ಲದ ವಿಸ್ಮಯಕಾರಿ ವಿಮಾನ

ಅಂದ ಹಾಗೆ ಇದು ಮೊದಲ ಬಾರಿಯೇನಲ್ಲ ಇಂತಹದೊಂದು ಪರಿಕಲ್ಪನೆ ಮೂಡಿ ಬರುತ್ತಿರುವುದು. ಇದಕ್ಕೂ ಮೊದಲು ಪ್ಯಾರಿಸ್ ಮೂಲದ ಸಂಸ್ಥೆಯೊಂದು ಇದಕ್ಕೆ ಸಮಾನವಾದ ಕಾನ್ಸೆಪ್ಟ್‌ನೊಂದಿಗೆ ಮುಂದೆ ಬಂದಿತ್ತು.

ಗಾಜುಗಳೇ ಇಲ್ಲದ ವಿಸ್ಮಯಕಾರಿ ವಿಮಾನ

ಇನ್ನು ವಿಶೇಷವಾದ ಸಂಗತಿ ಏನೆಂದರೆ ಪ್ರಯಾಣಿಕರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಡಿಸ್‌ಪ್ಲೇ ಸೆಟ್ಟಿಂಗ್‌ನಲ್ಲಿ ಬದಲಾವಣೆ ತರಬಹುದಾಗಿದೆ. ಇದು ಪ್ಯಾನರೋಮಿಕ್ ನೋಟ, ವಿಮಾನ ಸಮಯ ಮುಂತಾದ ವ್ಯವಸ್ಥೆಗಳನ್ನು ಹೊಂದಿರುತ್ತದೆ.

ಗಾಜುಗಳೇ ಇಲ್ಲದ ವಿಸ್ಮಯಕಾರಿ ವಿಮಾನ

ದೀರ್ಘ ಬಾಳ್ವಿಕೆಯ ನಿಟ್ಟಿನಲ್ಲಿ ಇದರಲ್ಲಿ ಒಎಲ್‌ಇಡಿ (ಹೈ ಎಂಡ್, ಥಿನ್ ಫಿಲ್ಮ್ ಡಿಸ್‌ಪ್ಲೇ ಟೆಕ್ನಾಲಜಿ) ಬಳಕೆ ಮಾಡಲಾಗಿದೆ. ಈ ಮೂಲಕ ಪ್ರಯಾಣಿಕರು ನೈಜ ಆಗು ಹೋಗುಗಳ ದರ್ಶನ ಪಡೆಯಬಹುದಾಗಿದೆ.

ಗಾಜುಗಳೇ ಇಲ್ಲದ ವಿಸ್ಮಯಕಾರಿ ವಿಮಾನ

ಸಿಪಿಐ ಪ್ರಕಾರ ಇದು ಕಡಿಮೆ ದುಬಾರಿ ಕೂಡಾ ಆಗಿದೆ ಎಂಬುದನ್ನು ತಿಳಿಸಿದೆ. ಇದು ಒಟ್ಟಾರೆ ವಿಮಾನ ಭಾರವನ್ನು ಶೇಕಡಾ 1ರಷ್ಟು ಕಡಿಮೆ ಮಾಡುವುದಲ್ಲದೆ ಶೇಕಡಾ 0.75ರಷ್ಟು ಇಂಧನ ವೆಚ್ಚ ಸಹ ಕಡಿಮೆ ಮಾಡಲಿದೆ. ಇದರೊಂದಿಗೆ ತಯಾರಕರ ಜೊತೆಗೆ ಪ್ರಯಾಣಿಕರಿಗೂ ಲಾಭವನ್ನುಂಟುಮಾಡಲಿದೆ.

ಪಾರದರ್ಶಕ ವಿಮಾನದ ಆಕರ್ಷಕ ವೀಡಿಯೋ ವೀಕ್ಷಿಸಿ


Most Read Articles

Kannada
English summary
UK based company has come up with a concept for commercial planes where windows would be replaced by full-length smart screens to show what's happening outside as the plane flies through the air. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X