ಸಮೀಕ್ಷೆ; ಇತರರಿಗಿಂತ ಮಹಿಳಾ ಸವಾರರು ಹೆಚ್ಚು ಸಂತುಷ್ಟರು!

By Nagaraja

ಇತ್ತೀಚೆಗಷ್ಟೇ ಬಿಡುಗಡೆಗೊಂಡಿರುವ ಸಮೀಕ್ಷೆಯ ಪ್ರಕಾರ ಚಾಲನೆ ಗೊತ್ತಿಲ್ಲದ ಮಹಿಳೆಯರನ್ನು ಹೋಲಿಸಿದಾಗ ತಮ್ಮ ಸ್ವಂತ ವಾಹನ ಚಲಾಯಿಸುವ ಹೆಣ್ಮಕ್ಕಳು ಹೆಚ್ಚು ಸಂತೋಷವಾಗಿರುತ್ತಾರಂತೆ!

ಜಗತ್ತಿನ ಐಕಾನಿಕ್ ದ್ವಿಚಕ್ರ ತಯಾರಕ ಸಂಸ್ಥೆಯಾಗಿರುವ ಹರ್ಲಿ ಡೇವಿಡ್ಸನ್ ಬಿಡುಗಡೆ ಮಾಡಿರುವ ಸಮೀಕ್ಷೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಅಷ್ಟಕ್ಕೂ ಹರ್ಲಿ ಡೇವಿಡ್ಸನ್ ಸಮೀಕ್ಷೆಯಲ್ಲಿ ಕಂಡುಬಂದಿರುವ ಕುತೂಹಲಕಾರಿ ಮಾಹಿತಿಗಾಗಿ ಫೋಟೊ ಫೀಚರ್‌ನತ್ತ ಮುಂದುವರಿಯಿರಿ...

ಸಮೀಕ್ಷೆ; ಇತರರಿಗಿಂತ ಮಹಿಳಾ ಸವಾರರು ಹೆಚ್ಚು ಸಂತುಷ್ಟರು!

ಚಾಲನೆ ಕರಗತ ಮಾಡಿಕೊಂಡಿರುವ ಒಟ್ಟು 1,013ರಷ್ಟು ಹದಿಹರೆಯದ ಯುವತಿಯರನ್ನು ಅದೇ ರೀತಿ ಡ್ರೈವಿಂಗ್ ಗೊತ್ತಿಲ್ಲದ 1,016ರಷ್ಟು ಹೆಣ್ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.

ಸಮೀಕ್ಷೆ; ಇತರರಿಗಿಂತ ಮಹಿಳಾ ಸವಾರರು ಹೆಚ್ಚು ಸಂತುಷ್ಟರು!

ಈ ಪೈಕಿ ಅರ್ಧಕ್ಕಿಂತಲೂ ಹೆಚ್ಚು ಮಂದಿ ಯುವತಿಯರು ಚಾಲನೆಯು ತಮ್ಮ ಸಂತೋಷಕ್ಕೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅದೇ ರೀತಿ ಶೇಕಡಾ 74ರಷ್ಟು ಮಂದಿ ಮಹಿಳೆಯರು ಡ್ರೈವಿಂಗ್‌ನಿಂದಾಗಿ ತಮ್ಮ ಜೀವನ ಸುಧಾರಿಸಿದೆ ಎಂದಿದ್ದಾರೆ.

ಸಮೀಕ್ಷೆ; ಇತರರಿಗಿಂತ ಮಹಿಳಾ ಸವಾರರು ಹೆಚ್ಚು ಸಂತುಷ್ಟರು!

ಇವೆಲ್ಲದರ ಫಲಿತಾಂಶವೆಂಬಂತೆ ಡ್ರೈವಿಂಗ್ ಗೊತ್ತಿರುವ ಹುಡುಗಿರುವ ಇತರರಿಗಿಂತ ಹೆಚ್ಚು ಸಂವಹನ ಸಾಮರ್ಥ್ಯವನ್ನು ಹೊಂದಿರುತ್ತಾರೆ ಎಂಬುದು ತಿಳಿದು ಬಂದಿದೆ. ಇಂತವರು ದೈಹಿಕವಾಗಿಯೂ ಹೆಚ್ಚು ಕ್ರಿಯಾಶೀಲರಾಗಿರುವುದು ಕಂಡುಬಂದಿದೆ.

ಸಮೀಕ್ಷೆ; ಇತರರಿಗಿಂತ ಮಹಿಳಾ ಸವಾರರು ಹೆಚ್ಚು ಸಂತುಷ್ಟರು!

ಇನ್ನು ಶೇಕಡಾ 34ರಷ್ಟು ಮಹಿಳೆಯರ ಪ್ರಕಾರ ಡ್ರೈವಿಂಗ್ ಆರಂಭಿಸಿದ ಬಳಿಕ ಮಾನಸಿಕ ಒತ್ತಡ ಕಡಿಮೆಯಾಗಿರುವುದಾಗಿ ಅಭಿಪ್ರಾಯಪಟ್ಟಿದ್ದಾರೆ.

ಮುಖ್ಯಾಂಶಗಳು

ಮುಖ್ಯಾಂಶಗಳು

ಅಷ್ಟೇ ಯಾಕೆ ಶೇಕಡಾ 50ರಷ್ಟು ಮಂದಿ ತಮ್ಮ ಲೈಂಗಿಕ ಸಂಬಂಧದ ಬಗ್ಗೆಯೂ ಸಂತೋಷ ವ್ಯಕ್ತಪಡಿಸಿದ್ದಾರೆ.

ಮುಖ್ಯಾಂಶಗಳು

ಮುಖ್ಯಾಂಶಗಳು

ಯಾವಾಗಲೂ ಸಂತೋಷಪಡುವವರು - ಶೇಕಡಾ 37ರಷ್ಟು ಮಹಿಳೆಯರು

ಮಾದಕತೆ - ಶೇ. 27ರಷ್ಟು ಮಹಿಳೆಯರು

ವಿಶ್ವಾಸ ವೃದ್ಧಿ- ಶೇ. 35ರಷ್ಟು ಮಹಿಳೆಯರು

ಮೇಲೆ ತಿಳಿಸಿದ ಮೂರು ವಿಚಾರಗಳಲ್ಲಿ ಚಾಲನೆ ಗೊತ್ತಿಲ್ಲದ ಮಹಿಳೆಯರು ಅನುಕ್ರಮವಾಗಿ ಶೇ. 16, 7 ಹಾಗೂ 18 ಆಗಿದೆ.

Most Read Articles

Kannada
Story first published: Wednesday, March 5, 2014, 17:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X