ಗಿನ್ನೆಸ್ ದಾಖಲೆ ಬರೆದ ವಿಶ್ವದ ಅತಿದೊಡ್ಡ ಸೌರಶಕ್ತಿ ಚಾಲಿತ ಬೋಟ್

By Nagaraja

'ವಿಶ್ವ ಭೂಮಿ ದಿನಾಚರಣೆ'ಯಂದು (ಎಪ್ರಿಲ್ 22, 2015) ಹತ್ತು ಹಲವಾರು ಪರಿಸರ ಸ್ನೇಹಿ ವಿಶ್ವ ದಾಖಲೆಗಳು ಸೃಷ್ಟಿಯಾಗಿದೆ. ಇದರಂತೆ ಗಿನ್ನಸ್ ಪುಟ ಸೇರಿಕೊಂಡಿರುವ ವಿಶ್ವದ ಅತಿ ದೊಡ್ಡ ಸೌರಶಕ್ತಿ ಚಾಲಿತ ಬೋಟ್ ಪರಿಚಯಿಸಲು ನಾವು ಇಚ್ಛಿಸುತ್ತಿದ್ದೇವೆ.

ಅದುವೇ ಟ್ಯುರನೊರ್ ಪ್ಲಾನೆಟ್ ಸೋಲರ್ (Tûranor PlanetSolar).ಈಗ ಇಂದಿನ ಈ ಲೇಖನದಲ್ಲಿ ವಿಶ್ವದ ಅತಿ ದೊಡ್ಡ ಸೌರಶಕ್ತಿ ಚಾಲಿತ ಬೋಟ್ ವಿಶಿಷ್ಟತೆಗಳ ಬಗ್ಗೆ ಮಾಹಿತಿಯನ್ನು ಕೊಡಲಿದ್ದೇವೆ.

ಗಿನ್ನೆಸ್ ದಾಖಲೆ ಬರೆದ ವಿಶ್ವದ ಅತಿದೊಡ್ಡ ಸೌರಶಕ್ತಿ ಚಾಲಿತ ಬೋಟ್

31 ಮೀಟರ್ ಉದ್ದವನ್ನು ಹೊಂದಿರುವ ಪ್ಲಾನೆಟ್ ಸೋಲರ್ ಬೋಟ್ ತನ್ನ ಸೋಲರ್ ರೆಕ್ಕೆಯನ್ನು ಬಿಚ್ಚಿದಾಗ 35 ಮೀಟರ್ ಗಳಷ್ಟು ಉದ್ದವನ್ನು ಪಡೆದುಕೊಳ್ಳುತ್ತದೆ.

ಗಿನ್ನೆಸ್ ದಾಖಲೆ ಬರೆದ ವಿಶ್ವದ ಅತಿದೊಡ್ಡ ಸೌರಶಕ್ತಿ ಚಾಲಿತ ಬೋಟ್

ಹಾಗೆಯೇ 15 ಮೀಟರ್ ಗಳಷ್ಟು ಅಗಲ ಹೊಂದಿರುವ ಈ ಬೋಟ್ ತನ್ನ ಸೋಲರ್ ಕವಾಟ ತೆರೆದಾಗ 23 ಮೀಟರ್ ಗಳಷ್ಟು ಅಗಲವನ್ನು ಪಡೆಯುತ್ತದೆ.

ಗಿನ್ನೆಸ್ ದಾಖಲೆ ಬರೆದ ವಿಶ್ವದ ಅತಿದೊಡ್ಡ ಸೌರಶಕ್ತಿ ಚಾಲಿತ ಬೋಟ್

ಈಗಾಗಲೇ ಬರಿ ಸೌರಶಕ್ತಿಯಲ್ಲಿ ಯಶಸ್ವಿ ವಿಶ್ವ ಪ್ರದಕ್ಷಿಣೆಗೈದಿರುವ (ಅಟ್ಲಾಂಟಿಕ್ ಸಾಗರ ಸೇರಿದಂತೆ) ಸೋಲರ್ ಪ್ಲಾನೆಟ್ ಬೋಟ್ ಈಗಾಗಲೇ ಮೆಚ್ಚುಗೆಗೆ ಪಾತ್ರವಾಗಿದೆ.

ಗಿನ್ನೆಸ್ ದಾಖಲೆ ಬರೆದ ವಿಶ್ವದ ಅತಿದೊಡ್ಡ ಸೌರಶಕ್ತಿ ಚಾಲಿತ ಬೋಟ್

ಹಗುರ ಭಾರದ ಕಾರ್ಬನ್ ಆಕಾರವನ್ನು ಹೊಂದಿರುವ ಸೋಲರ್ ಪ್ಲಾನೆಟ್ ಬೋಟ್ ನಲ್ಲಿ 809 ಸೋಲರ್ ಪ್ಯಾನೆಲ್ ಲಗ್ಗತ್ತಿಸಲಾಗಿದ್ದು, 480 ಕೆಡಬ್ಲ್ಯುಎಚ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಗಿನ್ನೆಸ್ ದಾಖಲೆ ಬರೆದ ವಿಶ್ವದ ಅತಿದೊಡ್ಡ ಸೌರಶಕ್ತಿ ಚಾಲಿತ ಬೋಟ್

ಇದರ ಮೇಲ್ಮೆಯಲ್ಲಿ ಲಗತ್ತಿಸಲಾಗಿರುವ 809 ಸೋಲರ್ ಪ್ಯಾನೆಲ್ ಗಳು 5554 ಚದರ ಅಡಿ ಜಾಗವನ್ನು ಆವರಿಸಿಕೊಳ್ಳುತ್ತದೆ.

ಗಿನ್ನೆಸ್ ದಾಖಲೆ ಬರೆದ ವಿಶ್ವದ ಅತಿದೊಡ್ಡ ಸೌರಶಕ್ತಿ ಚಾಲಿತ ಬೋಟ್

ಅಂತೆಯೇ ಎರಡು ಎಲೆಕ್ಟ್ರಿಕ್ ಮೋಟಾರು ಹಾಗೂ 8.5 ಟನ್ ಲಿಥಿಯಂ ಇಯಾನ್ ಬ್ಯಾಟರಿಗಳನ್ನು ಬೋಟ್ ನಲ್ಲಿ ಜೋಡಣೆ ಮಾಡಲಾಗಿದೆ.

ಗಿನ್ನೆಸ್ ದಾಖಲೆ ಬರೆದ ವಿಶ್ವದ ಅತಿದೊಡ್ಡ ಸೌರಶಕ್ತಿ ಚಾಲಿತ ಬೋಟ್

ಜಿನೆವಾ ವಿಶ್ವವಿದ್ಯಾಲಯದ ವೈಜ್ಞಾನಿಕ ಸಂಶೋಧನೆ ವೇದಿಕೆಯ (UNIGE) ಪರಿಸರ ವಿಜ್ಞಾನ ಸಂಸ್ಥೆಯ ನಿರ್ದೇಶಕ ಹಾಗೂ ಪರಿಸರವಾದಿ ಪ್ರೊ. ಮಾರ್ಟಿನ್ ಬೆನಿಸ್ಟನ್ (Martin Beniston) ನೇತೃತ್ವದ ತಂಡ ಇದನ್ನು ಅಭಿವೃದ್ಧಿಪಡಿಸಿದೆ.

ಗಿನ್ನೆಸ್ ದಾಖಲೆ ಬರೆದ ವಿಶ್ವದ ಅತಿದೊಡ್ಡ ಸೌರಶಕ್ತಿ ಚಾಲಿತ ಬೋಟ್

ಫ್ಲೋರಿಡಾದಲ್ಲಿ ನಿರಂತರ ಅಧ್ಯಯನದ ಬಳಿಕ ಇದನ್ನು ಅಭಿವೃದ್ಧಿಪಡಿಸಲಾಗಿದ್ದು, ಸಾಗರ ಮತ್ತು ವಾತಾವರಣ ನಡುವಣ ತಿಳುವಳಿಕೆಯನ್ನು ಸುಧಾರಿಸುವ ಗುರಿ ಹೊಂದಿದೆ.

ಗಿನ್ನೆಸ್ ದಾಖಲೆ ಬರೆದ ವಿಶ್ವದ ಅತಿದೊಡ್ಡ ಸೌರಶಕ್ತಿ ಚಾಲಿತ ಬೋಟ್

ಪ್ಲಾನೆಟ್ ಸೋಲರ್ ಬೋಟ್ ಗಂಟೆಗೆ 26 ಕೀ.ಮಿ.ಗಳಷ್ಟು (14 ನಾಟ್) ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಗಿನ್ನೆಸ್ ದಾಖಲೆ ಬರೆದ ವಿಶ್ವದ ಅತಿದೊಡ್ಡ ಸೌರಶಕ್ತಿ ಚಾಲಿತ ಬೋಟ್

ಒಟ್ಟಾರೆಯಾಗಿ ಶೂನ್ಯ ಮಾಲಿನ್ಯದ ಇಂತಹ ಪರಿಸರ ಸ್ನೇಹಿಗಳ ಉತ್ಪಾದನೆ ಮತ್ತಷ್ಟು ಮುಂದುವರಿಯಲಿ ಎಂಬುದು ನಮ್ಮ ಆಶಯವಾಗಿದೆ.

Most Read Articles

Kannada
English summary
Tûranor PlanetSolar, orlds Largest solar-powered boat, measures 31 m (101 ft) long – or 35 m (114 ft) with flaps extended.
Story first published: Thursday, April 23, 2015, 10:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X