'ಸಾವಿನ ರಸ್ತೆ' - ಇದುವೇ ವಿಶ್ವದ ಅತ್ಯಂತ ಅಪಾಯಕಾರಿ ರಸ್ತೆ!

By Nagaraja

ಹೌದು, ಇದು ವಿಶ್ವದ ಅತ್ಯಂತ ಅಪಾಯಕಾರಿ ರಸ್ತೆಗಳಲ್ಲಿ ಒಂದಾಗಿದೆ. ಅಕ್ಷರಶ: ಸಾವನ್ನು ಕೈ ಬೀಸಿ ಕರೆಯುತ್ತಿರುವ ಈ ರಸ್ತೆ ಬೊಲಿವಿಯಾದ ಯಂಗಾಸ್ (Yungas) ಪ್ರದೇಶದಲ್ಲಿ ಸ್ಥಿತಗೊಂಡಿದೆ.

ಮೈ ಜುಮ್ ಅನ್ನಿಸುವ ಟಾಪ್ 26 ರಸ್ತೆ ಸೇತುವೆಗಳು ನೋಡಿದ್ರಾ?

'ದಿ ಡೆಥ್ ರೋಡ್' ಅಥವಾ 'ಸಾವಿನ ರಸ್ತೆ' ಎಂದೇ ಅಪಖ್ಯಾತಿ ಪಡೆದಿರುವ ಬೊಲಿವಿಯಾದ ಈ ರಸ್ತೆ 61ರಿಂದ 69 ಕೀ.ಮೀ. ದೂರದ ತನಕ ಹರಡಿದೆ. ಈ ಪವರ್ತ ಕಣಿವೆಯ ರಸ್ತೆ ಲಾ ಪಾಝ್‌ನಿಂದ ಕೊರೈಕೊ ತನಕ ಹಾದು ಹೋಗುತ್ತಿದೆ.

'ಸಾವಿನ ರಸ್ತೆ' - ಇದುವೇ ವಿಶ್ವದ ಅತ್ಯಂತ ಅಪಾಯಕಾರಿ ರಸ್ತೆ!

ಸುಮ್ ಸುಮ್ನೆ ಚಿತ್ರ ಸೆರೆ ಹಿಡಿದ ಮಾತ್ರಕ್ಕೆ ಬೊಲಿವಿಯಾದ ಈ ರಸ್ತೆ ಅಪಾಯಕಾರಿ ರಸ್ತೆ ಎಂದೆನಿಸಿಕೊಂಡಿಲ್ಲ. ಬದಲಾಗಿ ಅಪಘಾತಗಳ ಅಂಕಿ ಅಂಶಗಳು ಇದಕ್ಕೆ ಪುಷ್ಠಿ ನೀಡುತ್ತದೆ.

'ಸಾವಿನ ರಸ್ತೆ' - ಇದುವೇ ವಿಶ್ವದ ಅತ್ಯಂತ ಅಪಾಯಕಾರಿ ರಸ್ತೆ!

ಇಂಟರ್ ಅಮೆರಿಕನ್ ಡೆವಲಪ್‌ಮೆಂಟ್ ಬ್ಯಾಂಕ್ ವರದಿ ಪ್ರಕಾರ, ಈ ಡೆಥ್ ರೋಡ್‌ನಲ್ಲಿ ವರ್ಷಂಪ್ರತಿ 200ರಿಂದ 300 ಮಂದಿ ಸಾವಿಗೆ ಶರಣಾಗುತ್ತಿದ್ದಾರೆ.

'ಸಾವಿನ ರಸ್ತೆ' - ಇದುವೇ ವಿಶ್ವದ ಅತ್ಯಂತ ಅಪಾಯಕಾರಿ ರಸ್ತೆ!

ಆಂಡಿಸ್ ಪರ್ವತದಿಂದ ಬೀಸುತ್ತಿರುವ ಗಾಳಿಯು ಈ ಸಾವಿನ ರಸ್ತೆಯನ್ನು ಇನ್ನಷ್ಟು ಭೀಕರ ಸ್ವರೂಪ ತಾಳುವಂತೆ ಮಾಡುತ್ತಿದೆ.

'ಸಾವಿನ ರಸ್ತೆ' - ಇದುವೇ ವಿಶ್ವದ ಅತ್ಯಂತ ಅಪಾಯಕಾರಿ ರಸ್ತೆ!

ಇಲ್ಲಿನ ರಸ್ತೆ ಪ್ರತಿ ಪರ್ವತದ ಸುತ್ತ ಅನೇಕ ವಕ್ರಾಕೃತಿ ಪಡೆದ ತಿರುವುಗಳನ್ನು ಪಡೆದುಕೊಂಡಿದ್ದು, ಎದುರುಗಡೆಯಿಂದ ಬರುವ ವಾಹನಗಳನ್ನು ಗುರುತಿಸಿವುದು ತುಂಬಾನೇ ಕಷ್ಟಕರವೆನಿಸುತ್ತದೆ.

'ಸಾವಿನ ರಸ್ತೆ' - ಇದುವೇ ವಿಶ್ವದ ಅತ್ಯಂತ ಅಪಾಯಕಾರಿ ರಸ್ತೆ!

ವಿಚಿತ್ರವೆಂದರೆ ಕೆಲವು ಚಾಲಕರು ಧೈರ್ಯ ತೋರಿ ರಾತ್ರಿ ವೇಳೆಯಲ್ಲೂ ಈ ಡೆಥ್ ರೋಡ್‌ನಲ್ಲಿ ಪಯಣಿಸುವ ದುಸ್ಸಾಹಸಕ್ಕೆ ಮುಂದಾಗುತ್ತಾರೆ.

'ಸಾವಿನ ರಸ್ತೆ' - ಇದುವೇ ವಿಶ್ವದ ಅತ್ಯಂತ ಅಪಾಯಕಾರಿ ರಸ್ತೆ!

ಈ ಎಲ್ಲ ವಿಚಾರಗಳನ್ನು ಕೇಳಿದಾಗ ಈ ಸಾವಿನ ರಸ್ತೆಯನ್ನು ಮುಚ್ಚುಗಡೆಗೊಳಿಸದೇ ಯಾತಕ್ಕಾಗಿ ಸಾರ್ವಜನಿಕ ಪ್ರಯಾಣಕ್ಕೆ ತೆರೆದಿಟ್ಟುಕೊಳ್ಳಲಾಗಿದೆ ಎಂಬ ಪ್ರಶ್ನೆ ಸಹಜವಾಗಿಯೇ ನಿಮ್ಮ ಮನದಲ್ಲಿ ಮೂಡಬಹುದಾಗಿದೆ. ಇದಕ್ಕೆ ಬಹುಶ: ಅಧಿಕಾರಿಗಳೇ ಸೂಕ್ತ ಉತ್ತರ ನೀಡಬಹುದಾಗಿದೆ.

'ಸಾವಿನ ರಸ್ತೆ' - ಇದುವೇ ವಿಶ್ವದ ಅತ್ಯಂತ ಅಪಾಯಕಾರಿ ರಸ್ತೆ!

ಇವೆಲ್ಲದರ ನಡುವೆ ಬೊಲಿವಿಯಾದ ಈ ರಸ್ತೆ ಸದ್ಯ ಪ್ರವಾಸಿ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಇಲ್ಲಿ ವಿವಿಧ ಸಂಸ್ಥೆಗಳು 'ಮೌಂಟೆನ್ ಬೈಕಿಂಗ್' ಕ್ರೀಡೆಯನ್ನು ಪ್ರೋತ್ಸಾಹಿಸುತ್ತಿದೆ.

'ಸಾವಿನ ರಸ್ತೆ' - ಇದುವೇ ವಿಶ್ವದ ಅತ್ಯಂತ ಅಪಾಯಕಾರಿ ರಸ್ತೆ!

ಅಮೇಜೋನ್ ರೈನ್ ಫಾರೆಸ್ಟ್ ಪ್ರದೇಶವನ್ನು ಸಂಪರ್ಕಿಸುವ ಈ ಸಿಂಗಲ್ ಲೇನ್ ರಸ್ತೆಯು ನವೆಂಬರ್‌ನಿಂದ ಮಾರ್ಚ್ ವರೆಗಿನ ಮಳೆಗಾಲದ ಸಂದರ್ಭದಲ್ಲಿ ಅತಿ ಹೆಚ್ಚು ಮಂಜಿನಿಂದ ಆವೃತ್ತವಾಗಿರುತ್ತದೆಯಲ್ಲದೆ ಸಾವನ್ನು ಕೈಬೀಸಿ ಕರೆಯುತ್ತದೆ.

'ಸಾವಿನ ರಸ್ತೆ' - ಇದುವೇ ವಿಶ್ವದ ಅತ್ಯಂತ ಅಪಾಯಕಾರಿ ರಸ್ತೆ!

ಇನ್ನೊಂದೆಡೆ ಬೇಸಿಗೆ ಕಾಲದಲ್ಲಂತೂ ಪರ್ವತ ಕಣಿವೆಯಲ್ಲಿ ಕಲ್ಲು ಬಂಡೆಗಳ ಕುಸಿತ ಸರ್ವೆ ಸಾಮಾನ್ಯ ದೃಶ್ಯವಾಗಿರುತ್ತದೆ.

'ಸಾವಿನ ರಸ್ತೆ' - ಇದುವೇ ವಿಶ್ವದ ಅತ್ಯಂತ ಅಪಾಯಕಾರಿ ರಸ್ತೆ!

ಇದೀಗ ನೀವು ಸಂಚರಿಸಿರುವ ಪೈಕಿ ಅತ್ಯಂತ ಅಪಾಯಕಾರಿ ರಸ್ತೆಗಳ ಬಗ್ಗೆ ಅನುಭವವನ್ನು ನಮ್ಮ ಜತೆ ಹಂಚಿಕೊಳ್ಳಲು ಮರೆಯದಿರಿ...ಸದ್ಯ ಸಾವಿನ ರಸ್ತೆ ರೋಚಕ ವೀಡಿಯೋಗಳಿಗಾಗಿ ಮುಂದಿನ ಸ್ಲೈಡರ್ ಕ್ಲಿಕ್ಕಿಸಿರಿ...

ಸಾವಿನ ರಸ್ತೆಯಲ್ಲಿ ಜಗತ್ತಿನ ಪ್ರಾಖ್ಯಾತ ಆಟೋ ಮ್ಯಾಗಜೀನ್ ಟಾಪ್ ಗೇರ್ ಹಮ್ಮಿಕೊಂಡಿರುವ ರೋಚಕ ಪಯಣ

ಸಾವಿನ ರಸ್ತೆಯಲ್ಲಿ ಮಿಟ್ಸುಬಿಸಿ ಸೆರೆಹಿಡಿದ ಜಾಹೀರಾತು

ಬೊಲಿವಿಯಾ ಸಾವಿನ ರಸ್ತೆಯಲ್ಲೊಂದು ಪಯಣ

ಮಿಸ್ ಮಾಡದಿರಿ: ಇಂದಿನ ಫೇಸ್‌ಬುಕ್ ವೀಡಿಯೋ

Post by DriveSpark.

Most Read Articles

Kannada
English summary
Meet the most dangerous road in the world, The Death Road in Bolivia. According to the Inter-American Development Bank, Every year 200 to 300 people die along a stretch of dirt road less than 50 miles. This road leads northeast from the La Paz to Coroico, in the Yungas region of Bolivia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X