ಕಣ್ಣಿಗೆ ಮುದ ನೀಡುವ ಜಗತ್ತಿನ 25 ಮನೋಹರ ರೈಲು ಮಾರ್ಗಗಳು

By Nagaraja

ರೈಲ್ವೇ ಹಳಿಯಲ್ಲಿ ನಕ್ಸಲ್ ಸ್ಫೋಟ, ಹಳಿ ತಪ್ಪಿದ ರೈಲು, ರೈಲು ಪರಸ್ಪರ ಮುಖಾಮುಖಿ ಹೀಗೆ ನಮ್ಮ ದೈನಂದಿನ ಜೀವನದಲ್ಲಿ ಹತ್ತು ಹಲವಾರು ರೈಲು ದುರಂತಗಳ ಬಗ್ಗೆ ಸುದ್ದಿಯನ್ನು ಕೇಳುತ್ತಿರುತ್ತೇವೆ. ನಿಜಕ್ಕೂ ರೈಲು ಯಾತ್ರೆ ಸುರಕ್ಷಿತವೇ? ಇದು ಚಿಂತನೆ ಮಾಡಬೇಕಾಗಿರುವ ವಿಷಯವೇ ಸರಿ.

ಘಾಟಿ ಪ್ರದೇಶದಲ್ಲಿ ಸುರಕ್ಷಿತ ವಾಹನ ಚಾಲನೆ ಹೇಗೆ?

ಒಂದೆರಡು ದಿನಗಳ ದೀರ್ಘ ಪಯಣದ ವೇಳೆ ಸುರಕ್ಷಿತ ಪಯಣದ ಬಗ್ಗೆ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಜಗತ್ತಿನ ಅತಿದೊಡ್ಡ ಹಾಗೆಯೇ ಅತಿ ಪುರಾತನ ರೈಲ್ವೇ ಜಾಲ ಹೊಂದಿರುವ ಹೊರತಾಗಿಯೂ ಭಾರತದಲ್ಲಿ ರೈಲ್ವೇ ಯಾತ್ರಿಕರ ಸುರಕ್ಷತೆ ಯಕ್ಷ ಪ್ರಶ್ನೇಯಾಗಿಯೇ ಉಳಿದಿದೆ. ಅದೇ ಏನೇ ಇರಲಿ, ಭಾರತದಲ್ಲಿ ನಯನ ಮನೋಹರವಾದ ಹಲವಾರು ರೈಲು ಮಾರ್ಗಗಳಿವೆ (ಭಾರತದ ನಯನ ಮನೋಹರವಾದ 26 ರೈಲು ಮಾರ್ಗಗಳು).

ಈ ಬೇಸಿಗೆಯಲ್ಲಿ ನಿಮ್ಮನ್ನು ತಂಪಾಗಿರಿಸಲು 10 ಕಾರು ಆಕ್ಸೆಸರಿಗಳು

ಇದು ನೋಡುಗರ ಜೊತೆಗೆ ಪ್ರಯಾಣಿಕರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ಕೇವಲ ಭಾರತದಲ್ಲಷ್ಟೇ ಅಲ್ಲ; ವಿದೇಶಗಳಲ್ಲೂ ಇಂತಹ ವರ್ಣಮಯ ರೈಲ್ವೇ ಮಾರ್ಗಗಳು ಹಾದು ಹೋಗುತ್ತಿದೆ. ಇವೆಲ್ಲವನ್ನು ಒಂದುಗೂಡಿಸಿರುವ ನಿಮ್ಮ ಡ್ರೈವ್ ಸ್ಪಾರ್ಕ್ ತಂಡವು ಕಣ್ಣಿಗೆ ಹಬ್ಬ ನೀಡುವಂತಹ ಜಗತ್ತಿನ 25 ಮನೋಹರ ರೈಲು ಮಾರ್ಗಗಳ ಬಗ್ಗೆ ಚಿತ್ರ ಸಮೇತ ವಿವರಣೆ ನೀಡುವ ಪ್ರಯತ್ನ ಮಾಡಲಿದ್ದೇವೆ.

ಸಂಪೂರ್ಣ ಸುದ್ದಿಗಾಗಿ ಫೋಟೊ ಫೀಚರ್‌ನತ್ತ ಮುಂದುವರಿಯಿರಿ:

ಕಣ್ಣಿಗೆ ಹಬ್ಬ; ಜಗತ್ತಿನ 25 ಮನೋಹರ ರೈಲು ಮಾರ್ಗಗಳು

ಯಾವುದೇ ಮಾರ್ಗದ ಸಂಚಾರವನ್ನು ಗಮನಿಸಿದರೂ ರೈಲು ಯಾನವು ಎಲ್ಲದಕ್ಕಿಂತಲೂ ಮಿಗಿಲಾದ ಆರಾಮದಾಯಕ ಪಯಣವನ್ನು ಒದಗಿಸುತ್ತದೆ. ಇದು ಒತ್ತಡ ರಹಿತ ಪಯಣದ ಜತೆಗೆ ಅಡ್ಡಿ ಆಂತಕಗಳಿಲ್ಲದೆ ನಿಮ್ಮ ಪಯಣವನ್ನು ಸುಖಕರವಾಗಿಸುತ್ತದೆ. ಮುಂದಿನ ಒಂದೊಂದೇ ಚಿತ್ರಗಳನ್ನು ಕ್ಲಿಕ್ಕಿಸುತ್ತಾ ಜಗತ್ತಿನ 25 ಮನೋಹರ ರೈಲು ಮಾರ್ಗಗಳ ಬಗ್ಗೆ ತಿಳಿದುಕೊಳ್ಳಿರಿ...

 1. ಗ್ಲೇಸಿಯರ್ ಎಕ್ಸ್‌ಪ್ರೆಸ್ - ಜೆರ್‌ಮ್ಯಾಟ್‌ನಿಂದ ಸೈಂಟ್ ಮೊರಿಟ್ಜ್

1. ಗ್ಲೇಸಿಯರ್ ಎಕ್ಸ್‌ಪ್ರೆಸ್ - ಜೆರ್‌ಮ್ಯಾಟ್‌ನಿಂದ ಸೈಂಟ್ ಮೊರಿಟ್ಜ್

ಎಲ್ಲಿದೆ? ಸ್ವಿಜರ್ಲೆಂಡ್

ಸ್ವಿಜರ್ಲೆಂಡ್ ತನ್ನ ರೈಲ್ವೇ ಹಾದಿಯನ್ನು ಸಾಕಷ್ಟು ಅಭಿವೃದ್ಧಿಪಡಿಸಿದೆ. ರೈಲು ಗುಣಮಟ್ಟ ಹಾಗೂ ಸಮಯಪಾಲನೆ ಅಲ್ಲಿನ ರೈಲುಗಳ ವಿಶೇಷತೆಯಾಗಿದೆ. ಅಂದ ಹಾಗೆ ಪರ್ವತ ರಾಶಿಗಳ ನಡುವಣ ಹಸಿರು ತೋರಣದಲ್ಲಿ ಹಾದು ಹೋಗುವಾಗ ಗ್ಲೇಸಿಯರ್ ಎಕ್ಸ್‌ಪ್ರೆಸ್ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ಇಲ್ಲಿ ವಿಶೇಷವೆಂದರೆ ಪ್ರಸ್ತುತ ರೈಲು, ತನ್ನ ಏಳು ಗಂಟೆಯ ಪಯಣದಲ್ಲಿ 91 ಸುರಂಗ ಮಾರ್ಗ ಹಾಗೂ 291 ಸೇತುವೆಗಳನ್ನು ಹಾದು ಹೋಗುತ್ತಿದೆ.

ಫೋಟೊ ಕೃಪೆ: ವಿಕಿ ಕಾಮನ್ಸ್
2. ಡ್ಯುರಂಗೊ ಆಂಡ್ ಸಿಲ್ವರ್‌ಟನ್ ನ್ಯಾರೋ ಗೇಜ್ ರೈಲ್‌ರೋಡ್

2. ಡ್ಯುರಂಗೊ ಆಂಡ್ ಸಿಲ್ವರ್‌ಟನ್ ನ್ಯಾರೋ ಗೇಜ್ ರೈಲ್‌ರೋಡ್

ಎಲ್ಲಿದೆ? ಕೊಲರಾಡೊ

ಅಮೆರಿಕದ ಕೊಲರಾಡೊ ಪ್ರಾಂತ್ಯದ ನೈಋತ್ಯ ದಿಕ್ಕಿನಲ್ಲಿ ಡ್ಯುರಂಗೊದಿಂದ ಸಿಲ್ವರ್‌ಟನ್‌ಗೆ ಹಾದು ಹೋಗುತ್ತಿರುವ ರೈಲು ಹಾದಿಯು ನಿಮ್ಮನ್ನು 130 ವರ್ಷಗಳ ಹಿಂದಕ್ಕೆ ಕೊಂಡೊಯ್ಯಲಿದೆ. 3000 ಅಡಿ ಎತ್ತರದಲ್ಲಿ ಪರ್ವತ ಕಣಿವೆಗಳ ನಡುವಣ ಈ ಹಳೆಯ (ಸಿರ್ಕಾ 1881) ಕಲ್ಲಿದ್ದಲು ಉಗಿ ಚಾಲಿತ ರೈಲು ಗಂಟೆಗೆ 18 ಮೈಲ್ ವೇಗದಲ್ಲಿ ಚಲಿಸುತ್ತದೆ.

ಫೋಟೊ ಕೃಪೆ: ಫೇಸ್‌ಬುಕ್
3. ಹಿರಾಮ್ ಬಿಂಘಂ ಓರಿಯಂಟ್ ಎಕ್ಸ್‌ಪ್ರೆಸ್ - ಕುಸ್ಕೋದಿಂದ ಮ್ಯಾಚು ಪಿಚ್ಚು

3. ಹಿರಾಮ್ ಬಿಂಘಂ ಓರಿಯಂಟ್ ಎಕ್ಸ್‌ಪ್ರೆಸ್ - ಕುಸ್ಕೋದಿಂದ ಮ್ಯಾಚು ಪಿಚ್ಚು

ಎಲ್ಲಿದೆ? ಪೆರು

ಹಗಲು ವೇಳೆಯ ಹಿರಾಮ್-ಬಿಂಘಮ್ ಯಾತ್ರೆ ನಿಮಲ್ಲಿ ಉಲ್ಲಾಸವನ್ನುಂಟು ಮಾಡಲಿದೆ. ಇಲ್ಲಿನ ಉರುಬಾಂಬ ನದಿ ಕಣಿವೆ ಯಾತ್ರೆಯು ರಸದೌತಣವಾಗಲಿದೆ.

ಫೋಟೊ ಕೃಪೆ: ಹಿರಾಮ್ ಬಿಂಘಂ
4. ಟ್ರಾನ್ಜ್‌ಆಲ್ಫಿನ್ - ಕ್ರಿಸ್ಟ್‌ಚರ್ಚ್‌ನಿಂದ ಗ್ರೇಮೌತ್

4. ಟ್ರಾನ್ಜ್‌ಆಲ್ಫಿನ್ - ಕ್ರಿಸ್ಟ್‌ಚರ್ಚ್‌ನಿಂದ ಗ್ರೇಮೌತ್

ಎಲ್ಲಿದೆ? ನ್ಯೂಜಿಲೆಂಡ್

ಗಾರ್ಡನ್ ಸಿಟಿ ಕ್ರಿಸ್ಟ್‌ಚರ್ಚ್‌ನಿಂದ ಕಡಿದಾದ ಕಾಡು ಪ್ರದೇಶ ಗ್ರೇಮೌತ್ ಮಾರ್ಗವಾಗಿ ಹಾದು ಹೋಗುತ್ತಿರುವ ಟ್ರಾನ್ಸ್‌ಆಲ್ಫಿನ್ ಇನ್ನೊಂದು ಸುಂದರ ಪಯಣವನ್ನು ಖಾತ್ರಿಪಡಿಸುತ್ತದೆ.

ಫೋಟೊ ಕೃಪೆ: ವಿಕಿ ಕಾಮನ್ಸ್
5. ಟ್ಯಾಲಿನ್ ರೈಲ್ವೇ

5. ಟ್ಯಾಲಿನ್ ರೈಲ್ವೇ

ಎಲ್ಲಿದೆ? ವೇಲ್ಸ್

ಕಲ್ಲಿದ್ದಲಿನಿಂದ ಚಲಿಸುವ ಕಿರಿದಾದ ಟ್ಯಾಲಿನ್ ರೈಲ್ವೇ ಹಾದಿಯು, ಐತಿಹಾಸಿಕ ರೈಲು ಮಾರ್ಗಗಳಲ್ಲಿ ಒಂದಾಗಿದೆ. ಇದನ್ನು ಪ್ರಮುಖವಾಗಿಯೂ ಹಿಂದಿನ ಕಾಲದಲ್ಲಿ ಗಣಿಕಾರಿಗೆಗಾಗಿ ಬಳಸಿಕೊಳ್ಳಲಾಗಿತ್ತು.

ಫೋಟೊ ಕೃಪೆ:ಫ್ಲಿಕರ್
6. ರೊಕಿ ಮೌಂಟೈನರ್ - ಬನ್ಫ್‌ದಿಂದ ವ್ಯಾಂಕೋವರ್

6. ರೊಕಿ ಮೌಂಟೈನರ್ - ಬನ್ಫ್‌ದಿಂದ ವ್ಯಾಂಕೋವರ್

ಎಲ್ಲಿದೆ? ಕೆನಡಾ

ಗಿರಿಧಾಮ ಪಟ್ಟಣ ಪ್ರದೇಶ ಬನ್ಫ್‌ನಿಂದ ವ್ಯಾಂಕೋವರ್‌ಗಿರುವ ಎರಡನೇ ದಿನಗಳ ಪಯಣವು ನಿಮ್ಮನ್ನು ದಪ್ಪವಾಗಿಸಲಿದೆ. ಹೇಗೆ ಅಂತೀರಾ? ಇಲ್ಲಿ ನಿಮಗೆ ಹಲವಾರು ಬಗೆಯ ಆಹಾರ ಪದಾರ್ಥಗಳ ರುಚಿ ನೋಡುವ ಅವಕಾಶ ದೊರಕಲಿದೆ.

ಫೋಟೊ ಕೃಪೆ:ರೊಕಿ ಮೌಂಟನೈರ್
7. ದಿ ಗ್ರಾಂಡ್ ಕ್ಯಾನ್ಯೋನ್ ರೈಲ್ವೇ

7. ದಿ ಗ್ರಾಂಡ್ ಕ್ಯಾನ್ಯೋನ್ ರೈಲ್ವೇ

ಎಲ್ಲಿದೆ? ಆ್ಯರಿಜೋನಾ

ದಿ ಗ್ರಾಂಡ್ ಕ್ಯಾನ್ಯೋನ್ ರೈಲ್ವೇ ಅತ್ಯಾದ್ಭುತ ಚಿತ್ರಮಯವಾದ ದೃಶ್ಯಗಳ ಆನಂದವನ್ನು ನೀಡುತ್ತದೆ. ಈ ಮಾರ್ಗದಲ್ಲಿ ಮೊದಲ ಬಾರಿಗೆ 1901ನೇ ಇಸವಿಯಲ್ಲಿ ರೈಲು ಪಯಣ ಆರಂಭಗೊಂಡಿತ್ತು.

ಫೋಟೊ ಕೃಪೆ:ಫ್ಲಿಕರ್
8. ದಿ ರಾಯಲ್ ಸ್ಕಾಟ್ಸ್‌ಮ್ಯಾನ್

8. ದಿ ರಾಯಲ್ ಸ್ಕಾಟ್ಸ್‌ಮ್ಯಾನ್

ಎಲ್ಲಿದೆ? ಸ್ಕಾಟ್ಲೆಂಡ್

ಹೆಸರಲ್ಲೇ ಸೂಚಿಸಿರುವಂತೆಯೇ ಈ 36 ಪ್ರಯಾಣಿಕರ ರೈಲು ನಿಜಕ್ಕೂ ರಾಯಲ್ ಪಯಣದ ಆನಂದವನ್ನು ನೀಡುತ್ತದೆ. ಇದು ಕಣಿವೆ, ಎಸ್ಟೇಟ್, ಪ್ರಾಚೀನ ಕೋಟೆ, ಹಸಿರು ಪ್ರದೇಶವನ್ನು ಹಾದು ಹೋಗುತ್ತದೆ.

ಫೋಟೊ ಕೃಪೆ:ಫ್ಲಿಕರ್

9. ಮಹಾರಾಜಾಸ್ ಎಕ್ಸ್‌ಪ್ರೆಸ್

9. ಮಹಾರಾಜಾಸ್ ಎಕ್ಸ್‌ಪ್ರೆಸ್

ಎಲ್ಲಿದೆ? ಭಾರತ

ಇದು ಹಿಂದಿನ ಕಾಲದಲ್ಲಿ ರಾಜಮನೆತನದವರನ್ನು ಒಂದು ಪ್ರದೇಶಕ್ಕೆ ಇನ್ನೊಂದು ಪ್ರದೇಶಕ್ಕೆ ತೆರಳುವುದನ್ನು ಪ್ರತಿಬಿಂಬಿಸುತ್ತಿದೆ. ದೆಹಲಿಯಿಂದ ಮುಂಬೈ ವರೆಗಿನ ಈ ಪಯಣವು, ರಾಜಸ್ತಾನದ ಜೈಪುರ, ಆಗ್ರಾ (ತಾಜ್‌ಮಹಲ್), ಉದೈಯ್‌ಪುರ್ ಮುಂತಾದ ಆಕರ್ಷಕ ಪ್ರದೇಶಗಳನ್ನು ಸುತ್ತುವರಿಯುತ್ತದೆ. ಇದು 2010ರಲ್ಲಿ ಸಂಚಾರ ಆರಂಭಿಸಿತ್ತು.

ಫೋಟೊ ಕೃಪೆ:ಫ್ಲಿಕರ್
10. ಡ್ಯುರೊ ಲೈನ್

10. ಡ್ಯುರೊ ಲೈನ್

ಎಲ್ಲಿದೆ? ಪೋರ್ಚುಗಲ್

ಪೋರ್ಚುಗಲ್‌ನ ಸೊಗಸಾದ ಕಣಿವೆ ಪ್ರದೇಶವನ್ನು ಆನಂದಿಸಬೇಕಾದ್ದಲ್ಲಿ ಡ್ಯೂರೊ ಲೈನ್‌ನಲ್ಲಿ ಒಮ್ಮೆ ಸಂಚರಿಸಿದರೆ ಸಾಕು. ಮಾರ್ಚ್ ತಿಂಗಳ ಅವಧಿಯಲ್ಲಿ ಅಲ್ಮಾಂಡ್ ಮರಗಳು ಅರಳಿದಾಗ ಪ್ರವಾಸಿಗರಿಗೆ ಉತ್ತಮ ಅನುಭವ ನೀಡುತ್ತದೆ. ಇದು 30 ಸೇತುವೆ ಹಾಗೂ 26 ಸುರಂಗ ಮಾರ್ಗಗಳನ್ನು ದಾಟಿ ಸಂಚರಿಸುತ್ತದೆ.

ಫೋಟೊ ಕೃಪೆ:ಫ್ಲಿಕರ್
11. ದಿ ಘಾನ್ - ಆಡಿಲೇಡ್‌ನಿಂದ ಡಾರ್ವಿನ್

11. ದಿ ಘಾನ್ - ಆಡಿಲೇಡ್‌ನಿಂದ ಡಾರ್ವಿನ್

ಎಲ್ಲಿದೆ? ಆಸ್ಟ್ರೇಲಿಯಾ

ಹೌದು, ಇಂದೊಂದು ದೀರ್ಘ ಪ್ರಯಾಣ. ಇದು ಮೂರು ಹಗಲು ಹಾಗೂ ಎರಡು ರಾತ್ರಿಗಳನ್ನು (1845 ಮೈಲ್) ಕ್ರಮಿಸಬೇಕಾದರೂ ಇಲ್ಲಿನ ಪ್ರಕೃತಿ ಸೌಂದರ್ಯವು ಯಾತ್ರಿಕರಿಗೆ ದಣಿವನ್ನುಂಟು ಮಾಡುವುದಿಲ್ಲ.

ಫೋಟೊ ಕೃಪೆ:ಫ್ಲಿಕರ್
12. ಡೆನಾಲಿ ಸ್ಟಾರ್ - ಆಂಕರೇಜ್‌ನಿಂದ ಫೈರ್‌ಬ್ಯಾಂಕ್ಸ್

12. ಡೆನಾಲಿ ಸ್ಟಾರ್ - ಆಂಕರೇಜ್‌ನಿಂದ ಫೈರ್‌ಬ್ಯಾಂಕ್ಸ್

ಎಲ್ಲಿದೆ? ಅಲಂಸ್ಕಾ

ಈ ಮಾರ್ಗದಲ್ಲಿನ ರೈಲು ಪಯಣ ಇನ್ನಷ್ಟು ಆಕರ್ಷಕವಾಗಿದ್ದು, ಅರಣ್ಯ ಹಾದಿ ಪಯಣವು ವನ್ಯ ಜೀವಿಗಳ ಘೋರ ಆರ್ತನಾದವನ್ನು ಕೇಳಬಹುದಾಗಿದೆ.

ಫೋಟೊ ಕೃಪೆ:ಅಲಂಸ್ಕಾ
13. ನಾಪಾ ವ್ಯಾಲಿ ವೈನ್ ಟ್ರೈನ್ - ನಾಪಾದಿಂದ ಸೈಂಟ್ ಹಿಲೆನಾ

13. ನಾಪಾ ವ್ಯಾಲಿ ವೈನ್ ಟ್ರೈನ್ - ನಾಪಾದಿಂದ ಸೈಂಟ್ ಹಿಲೆನಾ

ಎಲ್ಲಿದೆ ? ಕ್ಯಾಲಿಫೋರ್ನಿಯಾ

ಮೂರು ತಾಸುಗಳ ಪಯಣದಲ್ಲಿ ಎಷ್ಟು ವೈವಿಧ್ಯಗಳನ್ನು ಸವಿಯಬಹುದು? ನಾಪಾದಿಂದ ಸೈಂಟ್ ಹೆಲೆನಾ ವರೆಗಿನ ಪಯಣವು ಇಂತಹದೊಂದು ಕೊರತೆಯನ್ನು ನೀಗಿಸುತ್ತದೆ. ಬೆಳಗಿನ ಜಾವದ ಪಯಣದಲ್ಲಿ ಸೂರ್ಯ ನಿಮ್ಮನ್ನು ಮುತ್ತಿಕ್ಕುವಂತಿದೆ.

ಫೋಟೊ ಕೃಪೆ:ಫ್ಲಿಕರ್
14. ರೈನ್ ವ್ಯಾಲಿ ಲೈನ್ - ಮೈನ್ಜ್‌ನಿಂದ ಕೊಬ್‌ಲೆನ್ಜ್

14. ರೈನ್ ವ್ಯಾಲಿ ಲೈನ್ - ಮೈನ್ಜ್‌ನಿಂದ ಕೊಬ್‌ಲೆನ್ಜ್

ಎಲ್ಲಿದೆ? ಜರ್ಮನಿ

ಶತಮಾನಕ್ಕೂ ಹಳೆಯದಾದ ಕೋಟೆ ಪ್ರದೇಶಗಳ ಪರಿಪೂರ್ಣ ವೀಕ್ಷಣೆಯ ಜತೆಗಿನ ಈ 62 ಮೈಲ್ ದೂರದ ಹಾದಿಯಲ್ಲಿನ ಪಿಕ್ಚರ್ಸ್‌ಕ್ಯೂ ನದಿ ಪ್ರದೇಶದ ಪಯಣ ಇನ್ನಷ್ಟು ಮನಸೆಳೆಯುವಂತಿದೆ.

15. ಡನುಬೆ ಎಕ್ಸ್‌ಪ್ರೆಸ್ - ಬುಡಾಪೆಸ್ಟ್‌ನಿಂದ ಇಸ್ತಾಂಬುಲ್

15. ಡನುಬೆ ಎಕ್ಸ್‌ಪ್ರೆಸ್ - ಬುಡಾಪೆಸ್ಟ್‌ನಿಂದ ಇಸ್ತಾಂಬುಲ್

ಎಲ್ಲಿದೆ? ಹಂಗೇರಿ ಆಂಡ್ ಟರ್ಕಿ

ಬುಡಾಪೆಸ್ಟ್ ಮತ್ತು ಇಸ್ತಾಂಬುಲ್‌ಗಳಲ್ಲಿನ ಬೆರಗುಗೊಳಿಸುವ ವಾಸ್ತುಶಿಲ್ಪ ಈ ನಾಲ್ಕು ದಿನಗಳ ಪಯಣದ ವಿಶೇಷತೆಯಾಗಿರಲಿದೆ.

ಫೋಟೊ ಕೃಪೆ: ಫ್ಲಿಕರ್
16. ದಿ ಬ್ಲೂ ಟ್ರೈನ್

16. ದಿ ಬ್ಲೂ ಟ್ರೈನ್

ಎಲ್ಲಿದೆ? ದಕ್ಷಿಣ ಆಫ್ರಿಕಾ

1600 ಕೀ.ಮೀ. ಹಾದು ಹೋಗುವ ಬ್ಲೂ ಟ್ರೈನ್‌ನಲ್ಲಿ ಐಷಾರಾಮಿ ಸೌಲಭ್ಯಗಳು ಲಭ್ಯವಿರುವುದು ವಿಶೇಷತೆಯಾಗಿರಲಿದೆ.

ಫೋಟೊ ಕೃಪೆ: ಫ್ಲಿಕರ್
17. ಟ್ರಾನ್ಸ್ ಸೈಬೇರಿಯಾ

17. ಟ್ರಾನ್ಸ್ ಸೈಬೇರಿಯಾ

ಎಲ್ಲಿದೆ ? ರಷ್ಯಾ

ಸಂಸ್ಕೃತಿಗಳ ವಿವಿಧ ದೃಶ್ಯಗಳು ಹಾಗೂ ಪ್ರಕೃತಿ ಸೌಂದರ್ಯವನ್ನು ಈ 9000 ಕೀ.ಮೀ. ದೂರದ ಪಯಣದಲ್ಲಿ ಸವಿಯಬಹುದಾಗಿದೆ.

ಫೋಟೊ ಕೃಪೆ:ಫ್ಲಿಕರ್
18. ಸಿಂಪ್ಲನ್ ಓರಿಯಂಟ್ ಎಕ್ಸ್‌ಪ್ರೆಸ್

18. ಸಿಂಪ್ಲನ್ ಓರಿಯಂಟ್ ಎಕ್ಸ್‌ಪ್ರೆಸ್

ಎಲ್ಲಿದೆ? ಯುರೋಪ್

ರಾತ್ರಿ ವೇಳೆಯಲ್ಲಿ ಕಂಗೊಳಿಸುತ್ತಿರುವ ಪಯಣದ ಜತೆಗೆ ನಿಮ್ಮನ್ನು ಯುರೋಪ್‌ನ ಹಿಂದಿನ ಕಾಲಕ್ಕೆ ಕೊಂಡೊಯ್ಯಲಿದೆ. ಮನಮೋಹಕ ರೈಲು, ರುಚಿಕರವಾದ ತಿನಿಸು, ಮತ್ತು ವೈಯಕ್ತಿಕ ಸೇವೆ ನಿಮ್ಮ ನೆನಪನ್ನು ಶಾಶ್ವತವಾಗಿಸಲಿದೆ.

ಫೋಟೊ ಕೃಪೆ:ಫ್ಲಿಕರ್
19. ಅಲ್ ಅಂಡಲಸ್ ಎಕ್ಸ್‌ಪ್ರೆಸ್

19. ಅಲ್ ಅಂಡಲಸ್ ಎಕ್ಸ್‌ಪ್ರೆಸ್

ಎಲ್ಲಿದೆ? ಸ್ಪೇನ್

ದಕ್ಷಿಣ ಸ್ಪೇನ್‌ನ ಪ್ರಶಾಂತವಾದ ವಾತಾವರಣದ ಸೊಗಸನ್ನು ಸವಿಯಬಹುದಾಗಿದೆ. ಈ ಏಳು ದಿನಗಳ ಸುರ್ದೀರ್ಘ ಪಯಣದಲ್ಲಿ ಹಲವಾರು ವಿರಾಮಗಳು ದೊರಕಲಿದ್ದು, ಐತಿಹಾಸಿಕ ಸಾಂಸ್ಕೃತಿಕ ಪ್ರದೇಶಗಳಿಗೆ ಭೇಟಿ ಕೊಡಬಹುದಾಗಿದೆ.

ಫೋಟೊ ಕೃಪೆ: ಫ್ಲಿಕರ್
20. ರಾಯಲ್ ಕೆನೆಡಿಯನ್ ಫೆಸಿಫಿಕ್

20. ರಾಯಲ್ ಕೆನೆಡಿಯನ್ ಫೆಸಿಫಿಕ್

ಎಲ್ಲಿದೆ? ಉತ್ತರ ಅಮೆರಿಕ

2000ನೇ ಇಸವಿಯಲ್ಲಿ ಪರಿಯಚವಾಗಿದ್ದ ರಾಯಲ್ ಕೆನೆಡಿಯನ್, ಉತ್ತರ ಅಮೆರಿಕದ ಆಕರ್ಷಕ ರೈಲು ಯಾನಗಳಲ್ಲಿ ಒಂದಾಗಿದೆ. ಇದು 1,015 ಕೀ.ಮೀ. ಹಾದಿಯನ್ನು ಹೊಂದಿದ್ದು. ರಾಷ್ಟ್ರೀಯ ಉದ್ಯಾವನ ಜತೆಗೆ ಅನೇಕ ಪ್ರದೇಶಗಳ ದೃಶ್ಯ ಸವಿಯಬಹುದಾಗಿದೆ.

ಫೋಟೊ ಕೃಪೆ: ಫ್ಲಿಕರ್
21. ಜೈಪುರ

21. ಜೈಪುರ

(ಮುಂದಿನ ಐದು ರೈಲು ಮಾರ್ಗಗಳು ಭಾರತಕ್ಕೆ ಮೀಸಲು)

ಮರುಭೂಮಿ ನಡುವಣ ಜೈಪುರ-ಜೈಸಲ್ಮರ್ ಪಯಣವು ನಿಮಗೆ ನಿಜಕ್ಕೂ ಸವಾಲೊಡ್ಡಲಿದೆ.

22. ನೀಲಗಿರಿ

22. ನೀಲಗಿರಿ

ಮೆಟ್ಟುಪಾಲಯಂದಿಂದ ಉದಯಂಮಂಡಲಂ ವರೆಗಿನ ಕಣಿವೆ ಪ್ರದೇಶದ ಪಯಣವು ನೀಲಗಿರಿ ಬೆಟ್ಟದ ಪ್ರಕೃತಿ ರಮಣೀಯ ದೃಶ್ಯಗಳನ್ನು ಸವಿಯಬಹುದಾಗಿದೆ.

23. ಜಮ್ಮು ಕಾಶ್ಮೀರ

23. ಜಮ್ಮು ಕಾಶ್ಮೀರ

ಹಿಮಾಲಯದಲ್ಲಿ ಹಾದು ಹೋಗುತ್ತಿರುವ ಕ್ವಾಸಿಘಾಂದ್ ಶ್ರೀನಗರ ಹಾಗೂ ಬರಮುಲ್ಲಾ ಯಾತ್ರೆಯು ಹಿಮದಿಂದ ಆವೃತ್ತವಾಗಿರುತ್ತದೆ. ಚಳಿಗಾಲದಲ್ಲಂತೂ ಕೊರೆಯುವ ಚಳಿ ನಿಮ್ಮನ್ನು ತಬ್ಬಿಕೊಳ್ಳಲಿದೆ.

24. ರಾಮೇಶ್ವರ

24. ರಾಮೇಶ್ವರ

ಮಂಡಪಂ, ಪಂಬನ್ ಹಾದಿಯಲ್ಲಿನ ರಾಮೇಶ್ವರಂ ಪಯಣದ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಈ ಪಂಬನ್ ಸೇತುವೆಯಲ್ಲಿ ಜೀವನದಲ್ಲಿ ಒಮ್ಮೆಯಾದರೂ ಪಯಣದ ಆನಂದ ಪಡೆಯಿರಿ.

25. ಕೊಂಕಣ ರೈಲು

25. ಕೊಂಕಣ ರೈಲು

ಲಾಸ್ಟ್ ಬಟ್ ನಾಟ್ ಲೀಸ್ಟ್ ಎಂಬಂತೆ ಕೊಂಕಣ ತೀರದಲ್ಲಿ ಹಾದು ಹೋಗುವ ಈ 723 ಕೀ.ಮೀ. ದೂರದ ಹಾದಿಯು ಪಶ್ಛಿಮ ಘಟ್ಟದ ರಮನೀಯ ಸೌಂದರ್ಯವನ್ನು ಸವಿಯಬಹುದಾಗಿದೆ.

ಕಣ್ಣಿಗೆ ಹಬ್ಬ; ಜಗತ್ತಿನ 25 ಮನೋಹರ ರೈಲು ಮಾರ್ಗಗಳು

ನಮ್ಮ ಈ ಲೇಖನ ನಿಮಗೆ ಇಷ್ಟವಾಯಿತೇ? ಇದರಲ್ಲಿ ಯಾವುದಾದರೂ ರೈಲು ಮಾರ್ಗವನ್ನು ಉಲ್ಲೇಖಿಸಲು ಮರೆತು ಬಿಟ್ಟಿದ್ದೇವಾ? ಈ ಸಂಬಂಧ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯದಿರಿ.


Most Read Articles

Kannada
English summary
If you thought ships or planes were the best way to travel... why not checkout these train rides, which are considered to be the world's most scenic train routes. After reading this do let us know if you have changed your mind or not?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X