ಗಿನ್ನೆಸ್ ಪುಟ ಸೇರ್ಪಡೆಯಾದ ಜಗತ್ತಿನ ಅತಿ ಚಿಕ್ಕ ಕಾರು

ಮೊದಲ ನೋಟದಲ್ಲೇ 'ವಾವ್ಹ್ ಗ್ರೇಟ್' ಅನಿಸುತ್ತಿಲ್ಲವೇ? ಇದೇನು ಮಕ್ಕಳ ಆಟಿಕೆ ವಸ್ತುಗಳಲ್ಲ. ಆಟಿಕೆ ತರಹನೇ ಕಾಣಿಸಿದ್ದರೂ ಈ ಚೊಕ್ಕದಾದ ಕಾರನ್ನು ಇತರ ಕಾರುಗಳಂತೆ ರಸ್ತೆಗಳಲ್ಲಿ ಸರಾಗವಾಗಿ ಓಡಿಸಬಹುದಾಗಿದೆ.

ಒಂದೇ ಒಂದು ಸಮಸ್ಯೆ ಏನೆಂದರೆ ಇದನ್ನು ಡ್ರೈವಿಂಗ್ ಮಾಡಲು ಸ್ವಲ್ಪ ಕಷ್ಟವಾಗಬಹುದು ಅಷ್ಟೇ! ಆದರೆ ಬ್ರಿಟಿಷ್ ನಿರ್ಮಾತ ಹಾಗೂ ಕಾರಿನ ಮಾಲಿಕ ಪೆರ್ರಿ ವಾಟ್ಕಿನ್ಸ್‌ ಅವರಿಗೆ ಇಂದೊಂದು ದೊಡ್ಡ ಸಮಸ್ಯೆಯೇ ಆಗಿಲ್ಲ. ಕೆಳಗಡೆ ಕೊಡಲಾಗಿರುವ ಚಿತ್ರದಲ್ಲಿರುವಂತೆಯೇ ಆರಾಮವಾಗಿ ರಸ್ತೆಗಳಲ್ಲಿ ಡ್ರೈವಿಂಗ್ ಮಾಡುತ್ತಾರೆ.

ಈಗಾಗಲೇ ಗಿನ್ನೆಸ್ ಪುಟ ಸೇರ್ಪಡೆಯಾಗಿರುವ ಈ ಕಾರಿನ ಹೆಸರು 'ವಿಂಡ್ ಅಪ್' (Wind-Up) ಆಗಿದ್ದು, 104.14 ಸೆಂಟಿಮೀಟರ್ ಎತ್ತರ, 66.04 ಸೆಂಟಿಮೀಟರ್ ಅಗಲ ಹಾಗೂ 132.08 ಸೆಂಟಿಮೀಟರ್ ಉದ್ದವನ್ನು ಹೊಂದಿದೆ. ಅಂದ ಹಾಗೆ ಕಾರಿನ ಗಾತ್ರ ಸಣ್ಣದಾಗಿರುವುದರಿಂದ ಯಾವತ್ತೂ ಪಾರ್ಕಿಂಗ್ ಒಂದು ಸಮಸ್ಯೆಯೇ ಆಗಲಾರದು. ಹಾಗಿದ್ದರೆ ಬನ್ನಿ ಜಗತ್ತಿನ ಅತಿ ಚಿಕ್ಕ ಕಾರಿನಲ್ಲಿ ಏನೆಲ್ಲ ವೈಶಿಷ್ಟ್ಯಗಳಿವೆ ಎಂಬುದನ್ನು ಫೋಟೊ ಫೀಚರ್ ಮೂಲಕ ತಿಳಿಯೋಣ ಬನ್ನಿ...

ಗಿನ್ನೆಸ್ ಪುಟ ಸೇರ್ಪಡೆಯಾದ ಜಗತ್ತಿನ ಅತಿ ಚಿಕ್ಕ ಕಾರು

ರಸ್ತೆಯಲ್ಲಿ ಚಲಿಸುವುದಕ್ಕೆ ಮಾನ್ಯತೆ ಪಡೆದುಕೊಂಡಿರುವ ಜಗತ್ತಿನ ಅತಿ ಚಿಕ್ಕ ಕಾರಿನಲ್ಲಿ ಒಂದು ಸಾಮಾನ್ಯ ಕಾರಿನಲ್ಲಿರುವ ಎಲ್ಲ ಫೀಚರ್ಸ್‌ಗಳಿವೆ. ಸುರಕ್ಷತೆಗಾಗಿ ಸೇಫ್ಟಿ ಬೆಲ್ಟ್ ಕೂಡಾ ಲಗತ್ತಿಸಲಾಗಿದೆ.

ಗಿನ್ನೆಸ್ ಪುಟ ಸೇರ್ಪಡೆಯಾದ ಜಗತ್ತಿನ ಅತಿ ಚಿಕ್ಕ ಕಾರು

ಉಳಿದಂತೆ ಇದರಲ್ಲಿ ವಿಂಡ್ ಶೀಲ್ಡ್ ವೈಪರ್, ಉಪಯುಕ್ತ ಲೈಟ್, ಸಿಗ್ನಲ್, ಇಂಟಿಕೇಟರ್, ಮಿರರ್ ಹಾಗೂ ಸ್ಪೋರ್ಟಿ ಪ್ಲೇಮ್ ಬಾಡಿ ಗ್ರಾಫಿಕ್ಸ್ ಎಲ್ಲವೂ ಸೇರಿಕೊಂಡಿದೆ.

ಗಿನ್ನೆಸ್ ಪುಟ ಸೇರ್ಪಡೆಯಾದ ಜಗತ್ತಿನ ಅತಿ ಚಿಕ್ಕ ಕಾರು

ಈ ಸ್ಮಾಲ್ ಕಾರು 150ಸಿಸಿ ಫೋರ್ ಸ್ಟ್ರೋಕ್ ಎಂಜಿನ್ ಹೊಂದಿದೆ. ದೊಡ್ಡವರಿಗೆ ಇದರ ವೇಗತೆ ತುಂಬಾ ನಿಧಾನವಾಗಿ ಅನಿಸಿದರೂ ಮಕ್ಕಳಿಗೆ ಪಾಲಿಗೆ ಹೆಚ್ಚು ಹೊಂದಿಕೆಯಾಗಲಿದೆ.

ಗಿನ್ನೆಸ್ ಪುಟ ಸೇರ್ಪಡೆಯಾದ ಜಗತ್ತಿನ ಅತಿ ಚಿಕ್ಕ ಕಾರು

ಮತ್ತೊಂದು ಆಕರ್ಷಕ ವೈಶಿಷ್ಟ್ಯ ಏನೆಂದರೆ ಮಕ್ಕಳ ಆಟಿಕೆ ವಸ್ತುಗಳಲ್ಲಿ 'ಕಿ' ಕೊಡುವುದನ್ನು ನೆನಪಿಸುವ ರೀತಿಯಲ್ಲಿ ಕಾರಿನ ಹಿಂಭಾಗದಲ್ಲಿ ವಿಂಡ್ ಅಪ್ ಕಿ ಲಗತ್ತಿಸಲಾಗಿದೆ. ಇದೇ ಕಾರಣಕ್ಕಾಗಿ ಕಾರಿಗೆ 'ವಿಂಡ್ ಅಪ್' ಎಂದು ಹೆಸರಿಸಲಾಗಿದೆ. ಆದರೆ ಇದರಲ್ಲಿರುವ 'ಕಿ' ಮಾತ್ರ ಕಾರ್ಯ ಸಮರ್ಥವಾಗಿಲ್ಲ.

ಗಿನ್ನೆಸ್ ಪುಟ ಸೇರ್ಪಡೆಯಾದ ಜಗತ್ತಿನ ಅತಿ ಚಿಕ್ಕ ಕಾರು

ಕಾರಿನೊಳಗೆ ಪ್ರವೇಶಿಸಲು ಚಿತ್ರದಲ್ಲಿ ಕೊಟ್ಟಿರುವ ಹಾಗೆ ಹೊರಕವಚವನ್ನು ಮೇಲೆತ್ತಿ ಕುಳಿತುಕೊಳ್ಳಬಹುದಾಗಿದೆ.

ಗಿನ್ನೆಸ್ ಪುಟ ಸೇರ್ಪಡೆಯಾದ ಜಗತ್ತಿನ ಅತಿ ಚಿಕ್ಕ ಕಾರು

ದುಬಾರಿ ಜಾಗ್ವಾರ್ ಹಾಗೂ ವಿಂಡ್ ಅಪ್ ಕಾರಿನ ಜತೆಗೆ ನಿರ್ಮಾತ ಪೆರ್ರಿ ವಾಟ್ಕಿನ್ಸ್.

ಗಿನ್ನೆಸ್ ಪುಟ ಸೇರ್ಪಡೆಯಾದ ಜಗತ್ತಿನ ಅತಿ ಚಿಕ್ಕ ಕಾರು

ಮಕ್ಕಳ ಟಿ.ವಿ ಕಾರ್ಯಕ್ರಮದಲ್ಲಿರುವ ಪೋಸ್ಟ್‌ಮ್ಯಾನ್ ಪ್ಯಾಟ್ ಕಾರಿನಿಂದ ಸ್ಫೂರ್ತಿ ಪಡೆದು ವಿಂಡ್ ಅಪ್ ಕಾರನ್ನು ರಚಿಸಲಾಗಿದೆ.

ಗಿನ್ನೆಸ್ ಪುಟ ಸೇರ್ಪಡೆಯಾದ ಜಗತ್ತಿನ ಅತಿ ಚಿಕ್ಕ ಕಾರು

ಅಂದ ಹಾಗೆ ಈ ಕಾರಿನಲ್ಲಿ ಒಬ್ಬನಿಗೆ ಮಾತ್ರ ಅಂದರೆ ಡ್ರೈವರ್‌ಗೆ ಮಾತ್ರ ಪಯಣಿಸಲು ಸಾಧ್ಯವಿದೆ.

ಗಿನ್ನೆಸ್ ಪುಟ ಸೇರ್ಪಡೆಯಾದ ಜಗತ್ತಿನ ಅತಿ ಚಿಕ್ಕ ಕಾರು
ಗಿನ್ನೆಸ್ ಪುಟ ಸೇರ್ಪಡೆಯಾದ ಜಗತ್ತಿನ ಅತಿ ಚಿಕ್ಕ ಕಾರು

Most Read Articles

Kannada
English summary
World's smallest road legal car is actually inspired and built using a children's television character, Postman Pat's car. The car, called Wind-Up, is the work of Perry Watkins from the United Kingdom
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X